ಟಾಟಾದಿಂದ ಬಂಪರ್, ಇದೀಗ ನೆಕ್ಸಾನ್ ಕಾರು ಕೂಡ CNG ವೇರಿಯೆಂಟ್‌ನಲ್ಲಿ ಲಾಂಚ್!
ಟಾಚಾ ಮೋಟಾರ್ಸ್ ಇದೀಗ ಮತ್ತೊಂದು ಬಂಪರ್ ಕಾರು ಬಿಡುಗಡೆ ಮಾಡಿದೆ. ಇದು ನೆಕ್ಸಾನ್ ಸಿಎನ್‌ಜಿ ಕಾರು. ಕೈಗೆಟುಕವ ಬೆಲೆಯೊಂದಿಗೆ ಈ ಕಾರು ಬಿಡುಗಡೆಯಾಗಿದೆ.
ಮುಂಬೈ(ಸೆ.24) ಟಾಟಾ ನೆಕ್ಸಾನ್ ಕಾರು ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ನಾಲ್ಕು ವೇರಿಯೆಂಟ್‌ನಲ್ಲಿ ಲಭ್ಯವಿರುವ ಏಕೈಕ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೌದು, ಟಾಟಾ ನೆಕ್ಸಾನ್ ಇದೀಗ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 8.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಕೈಗೆಟುಕವ ಬೆಲೆ ಹಾಗೂ ಅತ್ಯಾಧುನಿಕ ಫೀಚರ್ಸ್‍ನೊಂದಿಗೆ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಿದೆ.
ಟಾಟಾ ನೆಕ್ಸಾನ್ iCNG ಕಾರು 1.2 ಲೀಟರ್ ಎಂಜಿನ್ ಹೊಂದಿದೆ. 100 ಪಿಎಸ್ ಪವರ್ ಹಾಗೂ 170 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ ಸಿಎನ್‌ಜಿ ಕಾರಾಗಿದ್ದರೂ 321 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಹೀಗಾಗಿ ಸ್ಥಳವಕಾಶದಲ್ಲಿ ಯಾವುದೇ ರಾಜಿ ಇಲ್ಲ. ಟ್ವಿನ್ ಸಿಲಿಂಡರ್ ತಂತ್ರಜ್ಞಾನದ ಕಾರು ಗರಿಷ್ಠ ಸ್ಟೋರೇಜ್ ಹೊಂದಿದೆ.
ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ SUV ಕಾರು ಯಾವುದು? ಮೊದಲೆರೆಡು ಸ್ಥಾನ ಟಾಟಾ ಪಾಲು!
ಹೊಸ iCNG ನೆಕ್ಸಾನ್ ಕಾರು ಪನೋರಮಿಕ್ ಸನ್‌ರೂಫ್ ಆಯ್ಕೆ ಹೊಂದಿದೆ. ವೆಂಟಿಲೇಟೆಡ್ ಸೀಟ್, 10.25 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲುವು ಫೀಚರ್ಸ್ ಲಭ್ಯವಿದೆ. ಇದರ ಜೊತೆಗೆ ಟಾಟಾ ಎಂದಿನಂತೆ ಗರಿಷ್ಠ ಸುರಕ್ಷತಾ ಫೀಚರ್ಸ್ ನೀಡಲಾಗಿದೆ.
ಟಾಟಾ ನೆಕ್ಸಾನ್ ಸಿಎನ್‌ಜಿ ವೇರಿಯೆಂಟ್ ಹಾಗೂ ಬೆಲೆ
ಸ್ಮಾರ್ಟ್ iCNG : 8,99,000 ರೂಪಾಯಿ(ಎಕ್ಸ್ ಶೋ ರೂಂ)
ಸ್ಮಾರ್ಟ್ ಪ್ಲಸ್iCNG :9,69,000 ರೂಪಾಯಿ(ಎಕ್ಸ್ ಶೋ ರೂಂ)
ಸ್ಮಾರ್ಟ್ ಪ್ಲಸ್ ಎಸ್ iCNG :9,99,000 ರೂಪಾಯಿ(ಎಕ್ಸ್ ಶೋ ರೂಂ)
ಪ್ಯೂರ್ iCNG :10,69,000 ರೂಪಾಯಿ(ಎಕ್ಸ್ ಶೋ ರೂಂ)
ಪ್ಯೂರ್ ಎಸ್ iCNG :10,99,000 ರೂಪಾಯಿ(ಎಕ್ಸ್ ಶೋ ರೂಂ)
ಕ್ರಿಯೇಟೀವ್ iCNG : 11,69,000 ರೂಪಾಯಿ(ಎಕ್ಸ್ ಶೋ ರೂಂ)
ಕ್ರಿಯೇಟೀವ್ ಪ್ಲಸ್ iCNG :12,99,000 ರೂಪಾಯಿ(ಎಕ್ಸ್ ಶೋ ರೂಂ)
ಫೀಯರ್‌ಲೆಸ್ ಪ್ಲಸ್ ಪಿಎಸ್ iCNG :14,59,000 ರೂಪಾಯಿ(ಎಕ್ಸ್ ಶೋ ರೂಂ)
ವಯಸ್ಕರು-ಮಕ್ಕಳಿಗೆ ಗರಿಷ್ಠ ಸುರಕ್ಷತೆ, ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್‌ಗೆ 5 ಸ್ಟಾರ್!
ಟಾಟಾ ನೆಕ್ಸಾನ್ ಇವಿ ಬೆಲೆ 13.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 350 ರಿಂದ 370 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಇನ್ನು 400 ಪ್ಲಸ್ ಮೈಲೇಜ್ ರೇಂಜ್‌ಗಾಗಿ ನೆಕ್ಸಾನ್ ಇವಿ ಮ್ಯಾಕ್ಸ್ ಆಯ್ಕೆ ಮಾಡಿಕೊಳ್ಳಬಹುದು. ಇತ್ತೀಚೆಗೆ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿಯ ಹೊಸ ವರ್ಷನ್ ನೆಕ್ಸಾನ್ ಇವಿ ಮ್ಯಾಕ್ಸ್ ಎಕ್ಸ್‌ಝಡ್ ಪ್ಲಸ್ ಎಲ್‌ಯುಎಕ್ಸ್ ಬಿಡುಗಡೆ ಮಾಡಿದೆ. ಈ ಕಾರ್‌ನ ಬೆಲೆ: 18.79 ಲಕ್ಷ ರು.ನಿಂದ ಆರಂಭ. ಹೈಟೆಕ್ ಮಾದರಿಯಲ್ಲಿ ಅಪ್‌ಗ್ರೇಡ್ ಮಾಡಲಾಗಿದ್ದು, 10.25 ಇಂಚುಗಳ ಇನ್‌ಫೋಟೇನ್‌ಮೆಂಟ್, ಹೈ ಡೆಫಿನಿಷನ್ ಡಿಸ್‌ಪ್ಲೇ, ಆರು ಭಾಷೆಗಳ ವಾಯ್ಸ್ ಅಸಿಸ್ಟೆನ್ಸ್ ಮೊದಲಾದ ಫೀಚರ್‌ಗಳಿವೆ.