Asianet Suvarna News Asianet Suvarna News

ವಯಸ್ಕರು-ಮಕ್ಕಳಿಗೆ ಗರಿಷ್ಠ ಸುರಕ್ಷತೆ, ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್‌ಗೆ 5 ಸ್ಟಾರ್!

ಭಾರತದಲ್ಲಿ ಅತ್ಯಂತ ಸುರಕ್ಷಿತ ಕಾರುಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ಹೊಚ್ಚ ಹೊಸ ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕರು ಹಾಗೂ ಮಕ್ಕಳ ರಕ್ಷಣೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. 

All new Tata Nexon ICE Scores 5 stars in GNCAP crash test rating adult occupant protection and Child ckm
Author
First Published Feb 15, 2024, 12:27 PM IST

ಬೆಂಗಳೂರು(ಫೆ.15): ವಾಹನ ಪ್ರಯಾಣದಲ್ಲಿ ಸುರಕ್ಷತೆ ಅತೀ ಮುಖ್ಯ. ಹೀಗಾಗಿ ಸುರಕ್ಷಿತ ಟಾಟಾ ಮೋಟಾರ್ಸ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಟಾಟಾ ಕಾರುಗಳು 5 ಸ್ಟಾರ್ ರೇಟಿಂಗ್ ಹೊಂದಿದೆ. ಇದೀಗ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.   ಹೆಚ್ಚು ಮಾರಾಟವಾಗುವ ಹೊಸ ನೆಕ್ಸಾನ್ (ಐಸಿಇ), ಜಾಗತಿಕ ಕಾರಿನ ಮೌಲ್ಯಮಾಪಕರಾದ ಗ್ಲೋಬಲ್ NCAPಯಿಂದ 5-ಸ್ಟಾರ್‌ ಪಡೆದಿದೆ. ವಯಸ್ಕರ ರಕ್ಷಣೆಗೆ 5 ಸ್ಟಾರ್ (32.22/34 ಅಂಕಗಳು), ಮಕ್ಕಳ ರಕ್ಷಣೆಯಲ್ಲಿಯೂ 5 ಸ್ಟಾರ್(44.52/49 ಅಂಕಗಳು) ರೇಟಿಂಗ್ ಪಡೆದಿದೆ. ಈ ಮೂಲಕ ಟಾಟಾ ಎಸ್‌ಯುವಿಗಳ ಸಂಪೂರ್ಣ ಶ್ರೇಣಿಯು ಅತಿ ಸುರಕ್ಷಿತ ಕಾರುಗಳು ಎಂಬ ಹೆಗ್ಗಳಿಕೆ ಪಡೆದಂತಾಗಿದೆ.

ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಉತ್ಕೃಷ್ಟತೆಯ ಸಂಕೇತವಾಗಿದೆ. 6 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಮೆಚ್ಚುಗೆಯನ್ನು ಗಳಿಸಿದೆ. ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್‌ನೊಂದಿಗೆ ತನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಿದ ಕಂಪ್ಲೀಟ್ ಪ್ಯಾಕೇಜ್ ಕಾರಿಗಿದೆ.

ಟಾಟಾ ನೆಕ್ಸಾನ್, ಟಿಯಾಗೋ ಇವಿ ಕಾರಿನ ಬೆಲೆ 1.2 ಲಕ್ಷ ರೂ ಕಡಿತ, ಕೇವಲ 7.99 ಲಕ್ಷ ರೂನಲ್ಲಿ ಲಭ್ಯ!

ಹೊಸ ನೆಕ್ಸಾನ್‌ನ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು:
• ಆರು ಏರ್ ಬ್ಯಾಗ್ ಗಳು
• ತ್ರೀ ಪಾಯಿಂಟ್ ಸೀಟ್‌ಬೆಲ್ಟ್‌ಗಳು
• ಐಸೋಫಿಕ್ಸ್ ರಿಸ್ಟ್ರೈನ್ಟ್ಸ್
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇ ಎಸ್ ಪಿ)
• ಎಮರ್ಜೆನ್ಸಿ (ಇ-ಕಾಲ್) ಅಸಿಸ್ಟೆನ್ಸ್
• ಬ್ರೇಕ್‌ಡೌನ್ (ಬಿ-ಕಾಲ್) ಅಸಿಸ್ಟೆನ್ಸ್
• 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್
• ಬ್ಲೈಂಡ್ ವ್ಯೂ ಮಾನಿಟರಿಂಗ್
• ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು
• ಅಟೋ ಡಿಮ್ಮಿಂಗ್ ಐ ಆರ್ ವಿ ಎಂ
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್
• ಕಾರ್ನರಿಂಗ್ ಫಂಕ್ಷನ್ ಜೊತೆಗೆ ಫ್ರಂಟ್ ಫಾಗ್ ಲ್ಯಾಂಪ್
• ರೇರ್ ವ್ಯೂ ಕ್ಯಾಮೆರಾ

ಭಾರತದ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಟಾಟಾ ಟಿಯಾಗೋ, ಟಿಗೋರ್ ಕಾರು ಬಿಡುಗಡೆ!

ಸುರಕ್ಷತೆ ನಮ್ಮ ಡಿಎನ್‌ಎಯಲ್ಲಿಯೇ ಬೇರೂರಿದೆ. ಹೊಸ ನೆಕ್ಸಾನ್‌, ಗ್ಲೋಬಲ್ ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಗಳಿಸಿರುವುದು ನಮಗೆ ಹೆಮ್ಮೆ ತಂದಿದೆ. ನೆಕ್ಸಾನ್ 2018ರಲ್ಲಿ ಜಿಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು ಆಗಿದೆ ಟಾಟಾ ಮೋಟಾರ್ಸ್ ಅಧಿಕಾರಿ ಮೋಹನ್ ಸಾವರ್ಕರ್ ಹೇಳಿದ್ದಾರೆ. ಈಗಿನ ಹೊಸ ಸಾಧನೆ ಟಾಟಾ ಸುರಕ್ಷತೆಯ ಪರಂಪರೆಯ ಮುಂದುವರಿಕೆಯಾಗಿದೆ. ಈ ಸಾಧನೆಯೊಂದಿಗೆ, ನಮ್ಮ ಎಲ್ಲಾ ಹೊಸ ಎಸ್‌ಯುವಿಗಳು ಈಗ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದಂತಾಗಿದೆ. ನಾವು ನಿರೀಕ್ಷೆಗಳನ್ನು ಮೀರಿಸುವಂತಹ ವಾಹನಗಳನ್ನು ತಲುಪಿಸಲು ಬದ್ಧರಾಗಿದ್ದೇವೆ ಮತ್ತು ರಸ್ತೆಯಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ.  
 

Follow Us:
Download App:
  • android
  • ios