ಕೈಗೆಟುಕುವ ದರದಲ್ಲಿ ಟಾಟಾ ಟಿಯಾಗೊ ಎನ್‍ಆರ್‌ಜಿ CNG ಕಾರು ಬಿಡುಗಡೆ!
ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತದ್ದಂತೆ ಟಾಟಾ ಕಮಾಲ್ ಮಾಡುತ್ತಿದೆ. ಇದೀಗ ಟಿಯಾಗೊ ಎನ್‍ಆರ್‌ಜಿ ಕಾರು iCNG ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ನ.22): ಟಾಟಾ ಮೋಟಾರ್ಸ್ ಹೊಚ್ಚ ಹೊಸ iCNG ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ಟಿಯಾಗೋ ಎನ್‍ಆರ್‌ಜಿ iCNG ಹಲವು ಹೊಸತನಗಳನ್ನು ಪಡೆದುಕೊಂಡಿದೆ. ಇದು ಎಸ್‌ಯುವಿ ಪ್ರೇರಿತ ವಿನ್ಯಾಸ ಹೊಂದಿದೆ. ಆಫ್‌ರೋಡ್ ಸಾಮರ್ಥ್ಯ ಹೊಂದಿರು ಟಿಯಾಗೋ ಎನ್‍ಆರ್‌ಜಿ ಇದೀಗ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ಟಾಟಾ ಟಿಯಾಗೊ NRG iCNG, ಭಾರತದ ಪ್ರಪ್ರಥಮ ಟಫ್‍ರೋಡರ್ ಸಿಎನ್‍ಜಿ ಆಗಿದ್ದು 177 mm ಅಧಿಕ ಗ್ರೌಂಡ್ ಕ್ಲಿಯರೆನ್ಸ್ ಮತ್ತು ರೀಟ್ಯೂನ್ಡ್ ಸಸ್ಪೆನ್ಶನ್ ಹೊಂದಿದೆ. ನಾಲ್ಕು ವರ್ಣಗಳಲ್ಲಿ ಹಾಗೂ ಎರಡು ಟ್ರಿಮ್ ಆಯ್ಕೆಗಳೊಡನೆ ಲಭ್ಯವಿದೆ, ಇಂದಿನಿಂದ ಆರಂಭಿಸಿ, ಟಾಟಾ ಮೋಟರ್ಸ್‍ನ ಎಲ್ಲಾ ಅಧಿಕೃತ ಡೀಲರ್‍ಶಿಪ್‍ಗಳಲ್ಲೂ ಲಭ್ಯವಿರುತ್ತದೆ.
ಟಿಯಾಗೊ ಸಿಎನ್‌ಜಿ ವೇರಿಯೆಂಟ್ ಹಾಗೂ ಬೆಲೆ ವಿವರ:
ಟಿಯಾಗೊ XT NRG iCNG: 7,39,900 ರೂಪಾಯಿ(ಎಕ್ಸ್ ಶೋರೂಂ)
ಟಿಯಾಗೊ NRG iCNG: 7,79,900 ರೂಪಾಯಿ(ಎಕ್ಸ್ ಶೋರೂಂ)
315 ಕಿ.ಮೀ ಮೈಲೇಜ್, 21,000 ರೂಗೆ ಬುಕ್ ಮಾಡಿ ದೇಶದ ಕಡಿಮೆ ಬೆಲೆಯ ಟಾಟಾ ಟಿಯಾಗೋ ಇವಿ!
ಟಿಯಾಗೊ ಎನ್‍ಆರ್ ಜಿ ಹೆಸರು ನಮ್ಮ ಗ್ರಾಹಕರಿಂದ ಅಮೋಘ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದರ ಎಸ್‍ಯುವಿ ಪ್ರೇರಿತ ವಿನ್ಯಾಸ ಭಾಷೆ, ದೃಢ ನಿಲುವು, ಮತ್ತು ಅಧಿಕ ಗ್ರೌಂಡ್ ಕ್ಲಿಯರೆನ್ಸ್ ಮೆಚ್ಚುಗೆಗೆ ಒಳಗಾಗಿದ್ದು ಅರ್ಬನ್ ಟಫ್‍ರೋಡರ್ ಆಗಿ ಅದರ ಸ್ಥಾನವನ್ನು ಭದ್ರಪಡಿಸಿದೆ. ನಮ್ಮ ಪೋರ್ಟ್‍ಫೋಲಿಯೋವನ್ನು ನಿರಂತರವಾಗಿ ನವೀಕರಿಸುವ ನಮ್ಮ”ನ್ಯೂ ಫಾರೆವರ್” ಬ್ರ್ಯಾಂಡ್ ಸಿದ್ಧಾಂತಕ್ಕೆ ಅನುಗುಣವಾಗಿ, ಟಿಯಾಗೊ ಎನ್‍ಆರ್ ಜಿದ iCNG ಅವತಾರವನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ನಮ್ಮ ಶ್ರೇಣಿಗೆ ಮಾಡಲಾಗಿರುವ ಈ ಹೊಚ್ಚ ಹೊಸ ಸೇರ್ಪಡೆಯು ನಮ್ಮ ಗ್ರಾಹಕರಿಗೆ ಎರಡೂ ಜಗತ್ತಿನ ಅಂದರೆ, ಭಾರತೀಯ ಟೆರೇನ್‍ಗಳಿಗೆ ಅತಿನಿಖರವಾದ ಮತ್ತು ಅತ್ಯಂತ ಆರಾಮದಾಯಕವಾದ ಹಾಗೂ ಅನುಕೂಲಕರವಾದ ಚುರುಕಾದ ತಾಂತ್ರಿಕ ಅಂಶಗಳಿಂದ ಕೂಡಿರುವ ಕಾರನ್ನು ನಮ್ಮ ಗ್ರಾಹಕರಿಗೆ ಒದಗಿಸಲಿದೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಕಸ್ಟಮರ್ ಅಧ್ಯಕ್ಷ ರಾಜನ್ ಅಂಬಾ ಹೇಳಿದ್ದಾರೆ.
ಎನ್‍ಆರ್ ಜಿ iCNG, ನಮ್ಮ ಪ್ರಸ್ತುತದ ಟಿಯಾಗೋ ಎನ್‍ಆರ್ ಜಿ ಅಭಿಮಾನವನ್ನು ಹೆಚ್ಚಿಸಿ ಅದನ್ನು ಇನ್ನಷ್ಟು ಬಯಸುವಂತಹ ಪ್ಯಾಕೇಜ್‍ಅನ್ನಾಗಿ ಮಾಡಲಿದೆ ಎಂಬ ವಿಶ್ವಾಸ ನಮಗಿದೆ. ಜೀವನವನ್ನು ವಿಭಿನ್ನವಾಗಿ ಜೀವಿಸಬೇಕೆಂದಿರುವವರಿಗಾಗಿಯೇ ನಿರ್ಮಿಸಲಾಗಿರುವ ಭಾರತದ ಪ್ರಪ್ರಥಮ ಅರ್ಬನ್ ಟಫ್‍ರೋಡರ್ ಸಿಎನ್‍ಜಿ ಇದಾಗಿರಲಿದೆ. ಮೇಲಾಗಿ, ಟಾಟಾ ಮೋಟರ್ಸ್‍ನ iCNG ತಂತ್ರಜ್ಞಾನವು, ನಮ್ಮ ಟಿಯಾಗೋ ಹಾಗೂ ಟೈಗೊರ್ ಶ್ರೇಣಿಯಲ್ಲಿ ತನ್ನ ಸಾಮರ್ಥ್ಯ ಮತ್ತು ಸುಲಭ ಬಳಕೆಯನ್ನು ಸಾಬೀತುಪಡಿಸಿದ್ದು, ಈಗ ಟಿಯಾಗೋ ಎನ್‍ಆರ್ ಜಿ iCNGದೊಂದಿಗೆ, ನಾವು ನಮ್ಮ ದೊಡ್ಡ ಗ್ರಾಹಕ ಬೇಸ್‍ಗೆ ಅದರ ಅತ್ಯುತ್ಕೃಷ್ಟತೆಯನ್ನು ಇನ್ನಷ್ಟು ವರ್ಧಿಸಲಿದ್ದೇವೆ ಎಂದರು.
ಟಾಟಾ ಕಾರು ಕೊಳ್ಳಲು ಬಯಸಿದ್ದೀರಾ... ನಾಳೆಯಿಂದ ರೇಟ್ ಜಾಸ್ತಿಯಾಗುತ್ತೆ
2022ರಲ್ಲಿ ಪರಿಚಯಿಸಲಾದ ಟಾಟಾ ಮೋಟರ್ಸ್‍ನ iCNG ತಂತ್ರಜ್ಞಾನವು, ಅದ್ವಿತೀಯ ಕಾರ್ಯಕ್ಷಮತೆ, ಐತಿಹಾಸಿಕ ಸುರಕ್ಷತೆ, ಚುರುಕಾದ ತಂತ್ರಜ್ಞಾನ ಮತ್ತು ಮನಸೂರೆಗೊಳ್ಳುವ ಅಂಶಗಳ ನಾಲ್ಕು ಆಧಾರ ಸ್ತಂಭಗಳೊಂದಿಗೆ ಗ್ರಾಹಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಹೂರಾಂಗಣಗಳಲ್ಲಿ ಹೊಸ iCNG ಬ್ಯಾಡ್ಜ್‍ನೊಂದಿಗೆ ಬರುವ ಟಿಯಾಗೊ ಎನ್‍ಆರ್ ಜಿ iCNG, ಆರ್ಮರ್ಡ್ ಫ್ರಂಟ್ ಕ್ಲ್ಯಾಡಿಂಗ್, ರೂಫ್ ರೇಲ್ಸ್ ಇರುವ ಇನ್ಫಿನಿಟಿ ಬ್ಲ್ಯಾಕ್ ರೂಫ್, ದೃಢವಾದ ಟೇಲ್‍ಗೇಟ್, ಸ್ಯಾಟಿನ್ ಸ್ಕಿಡ್ ಪ್ಲೇಟ್, ಸ್ಕ್ವಿಕ್ರ್ಲ್ ವ್ಹೀಲ್ ಆರ್ಚಸ್, ಮತ್ತು 14” ಹೈಪರ್ ಸ್ಟೈಲ್ ವ್ಹೀಲ್‍ಗಳು ಮುಂತಾದ ಎಸ್‍ಯುವಿ ವಿನ್ಯಾಸ ಅಂಶಗಳೊಂದಿಗೆ ಸಜ್ಜುಗೊಂಡಿದೆ.
ಪೆಟ್ರೋಲ್, iCNG, ಮತ್ತು ಎಲೆಕ್ಟ್ರಿಕ್ ಪವರ್‍ಟ್ರೇನ್‍ಗಳನ್ನು ಒಳಗೊಂಡಿರುವ ಟಿಯಾಗೋದ ಸಮಗ್ರ ಪೋರ್ಟ್‍ಫೋಲಿಯೋ, ಟಾಟಾ ಮೋಟರ್ಸ್‍ನ “ನ್ಯೂ ಫಾರೆವರ್” ಶ್ರೇಣಿಯ ಅವಿಭಾಜ್ಯ ಅಂಗವಾಗಿದೆ. 2016ರಲ್ಲಿ ಪರಿಚಯಗೊಂಡಿರುವ ಟಿಯಾಗೋದೊಂದಿಗೆ ಟಾಟಾ ಮೋಟರ್ಸ್ ಮಹತ್ತರವಾದ ಯಶಸ್ಸು ಕಂಡಿದ್ದು ಇದರ ಆರಂಭದಿಂದಲೂ 4.4 ಲಕ್ಷಕ್ಕಿಂತ ಹೆಚ್ಚಿನ ಯೂನಿಟ್‍ಗಳನ್ನು ಮಾರಾಟ ಮಾಡಿದೆ.