ಕರ್ನಾಟಕದಲ್ಲಿ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, 8.69 ಲಕ್ಷ ರೂಗೆ ಲಭ್ಯ!

ಟಾಟಾ ಟಿಯಾಗೋ ಇವಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಆರಂಭಿಕೆ ಎಕ್ಸ್ ಶೋ ರೂ ಬೆಲೆ 8.69 ಲಕ್ಷ ರೂಪಾಯಿ ಮಾತ್ರ. ಇದೀಗ ಕರ್ನಾಟಕದಲ್ಲಿ ಟಿಯಾಗೋ ಇವಿ ಕಾರಿಗೆ ಬಾರಿ ಬೇಡಿಕೆ ವ್ಯಕ್ತವಾಗಿದೆ.
 

Tata Motors hyperlocal strategy continues to script success for the Tiago ev in Karnataka ckm

ಬೆಂಗಳೂರು(ಅ.28): ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಗರಿಷ್ಠ ಮಾರಾಟ ದಾಖಲೆ ಹೊಂದಿದೆ.   ಮಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ತುಮಕೂರು ಮೊದಲಾದ ನಗರಗಳಲ್ಲಿ ಕಂಡ ಗರಿಷ್ಟ ಮಾರಾಟವು, ರಾಜ್ಯದ 2 ಮತ್ತು 3ನೆ ಸ್ತರದ ನಗರಗಳಲ್ಲಿ ಇವಿಗಳ ಅಳವಡಿಕೆಯಲ್ಲಿ ಮುಖ್ಯ ಕೊಡುಗೆ ಏರ್ಪಡುವುದಕ್ಕೆ ಕಾರಣವಾಗಿವೆ. ಈ ಭಿನ್ನ ಶೇಕಡಾವಾರು, ಇವಿ ಮಾರುಕಟ್ಟೆಯು ಬೆಳೆಯುತ್ತಿರುವಂತಹ ಸಂದರ್ಭದಲ್ಲಿ, ಒಂದು ಉತ್ಪನ್ನವಾಗಿ Tiago.evದ ಅಭೂತಪೂರ್ವ ಯಶಸ್ಸಿಗೆ ಪುರಾವೆಯಾಗಿದ್ದು ವಿವಿಧ ಭೌಗೋಳಿಕ ಪ್ರದೇಶಗಳ ಜನರು ಈ ವಿದ್ಯುತ್ ಹ್ಯಾಚ್‌ಬ್ಯಾಕ್‌ನಲ್ಲಿ ವಿಶ್ವಾಸವಿರಿಸುತ್ತಿದ್ದಾರೆ. ಒಟ್ಟಾರೆ ಇವಿ ಮಾರಾಟಗಳ 12%ಗೆ ಕರ್ನಾಟಕ ಕಾರಣವಾಗಿದೆ. 

ಟಾಟಾ ಮೋಟರ್ಸ್ ಅವರ ಪ್ರಪ್ರಥಮ ವಿದ್ಯುತ್ ಹ್ಯಾಚ್‌ಬ್ಯಾಕ್ ಆದ Tiago.ev, ಭಾರತದಲ್ಲಿ ದೀರ್ಘಕಾಲ ಇರುವಂತಹ ಹಾಗೂ ಪರಿಸರ ಸ್ನೇಹಿ ಸಾರಿಗೆಯ ಚಿಹ್ನೆಯಾಗಿದೆ. ಕೈಗೆಟುಕುವ ಇದರ ಬೆಲೆ, ಮನಸೆಳೆಯುವ ಶ್ರೇಣಿ ಮತ್ತು ಅತ್ಯಾಧುನಿಕ ಗುಣಾಂಶಗಳಿಂದಾಗಿ ಇದು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಗ್ರಾಹಕರ ಇಚ್ಛೆಯ ಆಯ್ಕೆಯಾಗಿದ್ದು ವಿದ್ಯುತ್ ಸಂಚಾರವು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆಸಕ್ತಿಕರ ವಿಷಯವೆಂದರೆ, Tiago.ev ದ 24% ಖರೀದಿದಾರರು ಮಹಿಳೆಯರಾಗಿದ್ದಾರೆ ಎಂಬುದು. ಇದು, ನಾಲ್ಕು ಚಕ್ರಗಳ ವಾಹನಗಳಿಗೆ ಇರುವ ಉದ್ಯಮದ ಸರಾಸರಿ ಪ್ರಮಾಣದ ದ್ವಿಗುಣಪ್ರಮಾಣವಾಗಿದೆ. ಇವಿ ಒದಗಿಸುವ ಆಧುನಿಕ ಅಂಶಗಳು ಹಾಗೂ ವರ್ಧಿತ ಆರಾಮದಿಂದಾಗಿ ಈ ಪ್ರವೃತ್ತಿಯು ಇನ್ನಷ್ಟು ಬಲವಾಗಿ ನಿರ್ಮಾಣಗೊಂಡು, ಇದನ್ನು ಅತಿಬೇಡಿಕೆಯ ಮೌಲ್ಯ ಕೊಡುಗೆಯನ್ನಾಗಿ ಮಾಡಿದೆ. 

ಎಕ್ಸ್‌ಯುವಿ 300 to ಫ್ರಾಂಕ್ಸ್; ಭಾರತದಲ್ಲಿ ಲಭ್ಯವಿದೆ ಕಡಿಮೆ ಬೆಲೆಯ ಟರ್ಬೋ ಪೆಟ್ರೋಲ್ ಕಾರು!

Tiago.ev ದ ಯಶಸ್ಸಿನ ಹಿಂದಿರುವ ಕೆಲವು ಮುಖ್ಯಾಂಶಗಳು:

1.    ಮನಸೆಳೆಯುವ ಶ್ರೇಣಿ: 315 ಕಿ.ಮೀ.ಗಳ MIDC ಶ್ರೇಣಿ ಹೊಂದಿರುವ Tiago.ev, ವಿದ್ಯುತ್ ವಾಹನಗಳ ಸೀಮಿತ ಶ್ರೇಣಿಯ ಬಗ್ಗೆ ಇದ್ದ ಆತಂಕಗಳನ್ನು ನಿವಾರಿಸಿ ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವ ದೂರಪ್ರಯಾಣಗಳಿಗೆ ಸೂಕ್ತವಾಗಿರುವಂತೆ ಮಾಡಿದೆ. 
2.    ಪರಿಸರ ಸ್ನೇಹಿ ಉಪಕ್ರಮ: Tiago.ev, ಪರಿಶುದ್ಧವಾದ ಸಾರಿಗೆ ಹಾಗೂ ಕಡಿಮೆಗೊಂಡ ಇಂಗಾಲ ಉಗುಳುವಿಕೆ ಇರಬೇಕೆಂಬ ಸರ್ಕಾರದ ಆಶಯಕ್ಕೆ ಪೂರಕವಾಗಿದೆ. 2 ಮತ್ತು 3ನೆ ಸ್ತರದ ಮಾರುಕಟ್ಟೆಗಳು ಪರಿಸರ ಸಂರಕ್ಷಣೆಗೆ ಪ್ರಬಲವಾದ ಬದ್ಧತೆ ಪ್ರದರ್ಶಿಸುತ್ತಿವೆ. 
3.    ಸುಲಭವಾಗಿ ಚಲಾಯಿಸಬಹುದು: ಕಾರು ಎರಡು ಚಾಲನಾ ಮೋಡ್‌ಗಳಲ್ಲಿ ಬರುತ್ತದೆ-ಸಿಟಿ ಮತ್ತು ಸ್ಪೋರ್ಟ್. ಪ್ರತಿಯೊಂದು ಡ್ರೈವ್ ಮೋಡ್‌ನಲ್ಲಿಯೂ ನಾಲ್ಕು ಮಟ್ಟಗಳ ರೀಜೆನ್ ಸೆಟ್ಟಿಂಗ್ ಇದೆ. ಇದು, ಗ್ರಾಹಕರ ಚಾಲನಾ ಶೈಲಿಗಳಿಗೆ ಅನುಗುಣವಾಗಿ ಅಂತಿಮ ವೈಯಕ್ತೀಕರಣ ಒದಗಿಸುತ್ತದೆ. ಮಟ್ಟ 3 ರೀಜೆನ್ ಸೆಟ್ಟಿಂಗ್‌ನೊಂದಿಗೆ ಅದು ಒಂದು ಪೆಡಲ್‌ನಂತಹ ಚಾಲನಾ ಅನುಭವ ಒದಗಿಸುತ್ತದೆ. 
4.    ಕೈಗೆಟುಕುವ ಬೆಲೆ: Tiago.evದ ಸ್ಪರ್ಧಾತ್ಮಕ ದರನಿಗದಿಯಿಂದಾಗಿ ಅದನ್ನು 2 ಮತ್ತು 3ನೆ ಸ್ತರದ ಮಾರುಕಟ್ಟೆಗಳು ಸ್ವೀಕರಿಸಿವೆ. ವಿದ್ಯುತ್ ಸಾರಿಗೆಯು ವಿಶಾಲ ಶ್ರೇಣಿಯ ಗ್ರಾಹಕರಿಗೆ ತಲುಪುವುದನ್ನು TATA.ev ಖಾತರಿಪಡಿಸಿದೆ. 

ಸಂಪೂರ್ಣ ಹೊಸತನ, 8.09 ಲಕ್ಷ ರೂಗೆ ಟಾಟಾ ನೆಕ್ಸಾನ್ ಕಾರು ಬಿಡುಗಡೆ!
5.    ವಿಕಸನಶೀಲ ಚಾರ್ಜಿಂಗ್ ಮೂಲಸೌಕರ್ಯ: ಈ ಮಾರುಕಟ್ಟೆಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯದ ವಿಸ್ತರಣೆಯು, ಇವಿ ಮಾಲೀಕತ್ವವನ್ನು ವಾಸ್ತವ ಹಾಗೂ ಸುಲಭವಾದ ಆಯ್ಕೆಯನ್ನಾಗಿ ಮಾಡಿದೆ. ಪ್ರಮುಖ ಪ್ರದೇಶಗಳಲ್ಲಿ ಚಾರ್ಜಿಂಗ್ ಕೇಂದ್ರಗಳಿದ್ದು, ಚಾಲಕರು ತಮ್ಮ ವಾಹನಗಳನ್ನು ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳುವುದನ್ನು ಖಾತರಿಪಡಿಸುತ್ತವೆ. 
6.    ಶೈಕ್ಷಣಿಕ ಉಪಕ್ರಮಗಳು: ವಿದ್ಯುತ್ ವಾಹನಗಳ ಪ್ರಯೋಜನಗಳ ಕುರಿತು ಗ್ರಾಹಕರಿ ಅರಿವು ಮೂಡಿಸಿ, ಸರ್ಕಾರೀ ಪ್ರೋತ್ಸಾಹನಗಳ ಕುರಿತು ಮಾಹಿತಿ ಒದಗಿಸಲು TATA.ev ಕ್ರಮಗಳನ್ನು ಕೈಗೊಂಡಿರುವುದರಿಂದ, 2 ಮತ್ತು 3ನೆ ಸ್ತರದ ಮಾರುಕಟ್ಟೆಗಳು ಸುಲಭವಾದ ವಿದ್ಯು ಸಾರಿಗೆಗೆ ಪರಿವರ್ತನೆಗೊಳ್ಳುವುದು ಸಾಧ್ಯವಾಗುತ್ತಿದೆ.

Latest Videos
Follow Us:
Download App:
  • android
  • ios