ಟಾಟಾ ಮೋಟಾರ್ಸ್ ₹33,000-₹35,000 ಕೋಟಿ ಹೂಡಿಕೆ ಮಾಡಲಿದೆ. ಈ ಹೂಡಿಕೆಯು 30 ಹೊಸ ಉತ್ಪನ್ನಗಳನ್ನು ಒಳಗೊಂಡಿದೆ, ಜೊತೆಗೆ EV ಗಳ ಮೇಲೆ ಗಮನ ಹರಿಸಲಾಗಿದೆ. ಕಂಪನಿಯು FY27 ರ ವೇಳೆಗೆ ಪಿವಿ ಮಾರುಕಟ್ಟೆಯಲ್ಲಿ 16% ಪಾಲನ್ನು ಮತ್ತು EV ಮಾರಾಟದಲ್ಲಿ 20% ಪಾಲನ್ನು ಗುರಿಯಾಗಿಸಿಕೊಂಡಿದೆ.
ಭಾರತದ ನಂಬಿಕಸ್ಠ ಕಂಪೆನಿ ಎಂದು ಹೆಗ್ಗಳಿಕೆ ಪಡೆದಿರುವ, ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್, 2026ರಿಂದ 2030ರವರೆಗೆ ತನ್ನ ಉತ್ಪನ್ನ ಪೋರ್ಟ್ಫೋಲಿಯೊ ವಿಸ್ತರಣೆಗೆ ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಬರೋಬ್ಬರಿ ₹33,000 ರಿಂದ ₹35,000 ಕೋಟಿಯಷ್ಟು ಬೃಹತ್ ಹೂಡಿಕೆ ಮಾಡಲು ಚಿಂತನೆ ನಡೆಸಿದೆ. ಮುಂಬೈನಲ್ಲಿ ಕೇಂದ್ರ ಕಛೇರಿ ಹೊಂದಿರುವ ಹೊಂದಿರುವ ಈ ಕಂಪನಿ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಯಾಣಿಕ ವಾಹನ (ಪಿವಿ) ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಟಾಟಾ ಮೋಟಾರ್ಸ್ ಮುಂದಿನ ಐದು ವರ್ಷಗಳಲ್ಲಿ 30 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸಿದ್ದು, ಇದರಲ್ಲಿ 7 ಹೊಸ ಮಾದರಿಗಳು ಮತ್ತು 23 ಹಳೆಯ ಮಾದರಿಗಳ ನವೀಕರಣ ಮಾಡಲು ಮುಂದಾಗಿದೆ. FY27ರೊಳಗೆ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು (EV) ಒಳಗೊಂಡಂತೆ ಪಿವಿ ಮಾರುಕಟ್ಟೆಯಲ್ಲಿ ಕನಿಷ್ಠ 16% ಪಾಲನ್ನು ಪಡೆದಿರಬೇಕೆಂಬ ಗುರಿ ಹೊಂದಿದೆ. ಈ ಪಾಲು ಮುಂದಿನ ವರ್ಷಗಳಲ್ಲಿ 18-20% ಕ್ಕೆ ಏರುವ ನಿರೀಕ್ಷೆಯಿದೆ. ಕಂಪನಿಯ ಪ್ರಕಾರ, 2030ರ ವೇಳೆಗೆ ಭಾರತದಲ್ಲಿ ಪಿವಿ ಮಾರಾಟದ ಅಂಕೆ 60 ಲಕ್ಷ ಯೂನಿಟ್‌ಗಳನ್ನು ತಲುಪಲಿದೆ. ಈ ಬೃಹತ್ ಪ್ರಮಾಣದ ತಯಾರಿಗಾಗಿ ಟಾಟಾ ಮೋಟಾರ್ಸ್ ತನ್ನ ಉತ್ಪಾದನಾ ಶಕ್ತಿಯನ್ನು ಮತ್ತು ಪೋರ್ಟ್ಫೋಲಿಯೊವನ್ನು ತಯಾರಿಸುತ್ತಿದೆ.
ನೂತನ ತಂತ್ರಜ್ಞಾನ, EV ಅಭಿವೃದ್ಧಿ ಮತ್ತು ಸೇವಾ ಜಾಲ ವಿಸ್ತರಣೆ
ಹೂಡಿಕೆಯು ಕೇವಲ ಹೊಸ ವಾಹನಗಳಿಗೆ ಮಾತ್ರ ಸೀಮಿತವಲ್ಲ; ಬದಲಾಗಿ, ಕಂಪನಿಯು ಮುಂದಿನ ತಲೆಮಾರಿಗೆ ಸೇರಿದ ತಂತ್ರಜ್ಞಾನಗಳು, ಪವರ್‌ಟ್ರೈನ್ ಅಪ್‌ಗ್ರೇಡ್‌ಗಳು ಮತ್ತು ಸಾಫ್ಟ್‌ವೇರ್ ಚಾಲಿತ ವಾಹನಗಳ (SDV) ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಕಂಪನಿ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಸಹ ನಿರಂತರವಾಗಿ ವಿಸ್ತರಿಸುತ್ತಿದೆ.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದ್ದು, FY27ರ ವೇಳೆಗೆ EV ಗಳು ಕಂಪನಿಯ ಒಟ್ಟು ಪಿವಿ ಮಾರಾಟದ ಕನಿಷ್ಠ 20% ರಷ್ಟನ್ನು ಹೊಂದಲಿವೆ, ಮತ್ತು FY30ರ ವೇಳೆಗೆ ಈ ಅಂಕೆ 30% ಕ್ಕೆ ಏರುವ ನಿರೀಕ್ಷೆಯಿದೆ. Harrier.ev ಮತ್ತು Sierra.ev ಮಾದರಿಗಳು EV ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಲಿವೆ.ಕಂಪನಿ ಸಣ್ಣ ನಗರಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸಲು ಯೋಜಿಸಿದ್ದು, ಖರೀದಿದಾರರ ಆತಂಕಗಳನ್ನು ನಿವಾರಿಸಲು ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಸಲಹೆ ನೀಡಲಾಗಿದೆ, ಮುಖ್ಯವಾಗಿ CNG ಆಧಾರಿತ ವ್ಯವಹಾರಗಳಿಗಾಗಿ ಹೆಚ್ಚು ಒತ್ತು ನೀಡಲಿದೆ.
ಮಾರುಕಟ್ಟೆ ನುಗ್ಗುವಿಕೆ ಮತ್ತು ಮಾರುಕಟ್ಟೆ ಪ್ರವೃತ್ತಿಗಳ ವಿಶ್ಲೇಷಣೆ
ಟಾಟಾ ಮೋಟಾರ್ಸ್ ಪ್ರಕಾರ, ವಿಶಾಲವಾದ ಕೈಗಾರಿಕಾ ರಂಗದಲ್ಲಿ ದೇಶದ GDP ಬೆಳವಣಿಗೆ, ಉಪಯೋಗದ ಮಟ್ಟದ ಏರಿಕೆ ಮತ್ತು ಶೀಘ್ರ ಬದಲಿ ಚಕ್ರಗಳು ಕಂಪನಿಗೆ ಬೆಂಬಲ ನೀಡಲಿವೆ. ದೇಶೀಯ ಮಾರುಕಟ್ಟೆಯಲ್ಲಿ ಎಂಪಿವಿ ವಿಭಾಗವು ತೀವ್ರ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದ್ದರೆ, ಎಸ್‌ಯುವಿಗಳು ಪ್ರಾಬಲ್ಯ ಮುಂದುವರಿಸುತ್ತವೆ. ಎಸ್‌ಯುವಿ ವಿಭಾಗವು ಮುಂದುವರಿದ ಪ್ರಾಬಲ್ಯ ಹೊಂದಿರುವತ್ತ ಇರಲಿದ್ದು, ಎಂಪಿವಿ ವಿಭಾಗವೂ ಗಂಭೀರ ಬೆಳವಣಿಗೆಯನ್ನು ಕಾಣಲಿದೆಯೆಂದು ಕಂಪನಿ ಭರವಸೆ ವ್ಯಕ್ತಪಡಿಸಿದೆ. ಆದರೆ ಹ್ಯಾಚ್‌ಬ್ಯಾಕ್‌ಗಳ ವಿಭಾಗದಲ್ಲಿ ಹೊಸ ಮಾದರಿಗಳ ಕೊರತೆ ಮತ್ತು ಪ್ರಾರಂಭಿಕ ಬೆಲೆಯ ಏರಿಕೆಯ ಕಾರಣದಿಂದ ಮಾರಾಟ ಕುಸಿತವಿದೆ ಎಂದು ತಿಳಿಸಲಾಗಿದೆ. EV ವಿಭಾಗದಲ್ಲಿ FY26ರೊಳಗೆ EBITDA ಬ್ರೇಕ್‌ಈವನ್ ತಲುಪುವುದನ್ನು ಟಾಟಾ ಮೋಟಾರ್ಸ್ ಉದ್ದೇಶಿಸಿದ್ದು, ಈ ಗುರಿ ಸಾಧನೆಯೊಂದಿಗೆ ದೀರ್ಘಕಾಲಿಕ ಲಾಭದಾಯಕತೆಗೆ ದಾರಿಯಾಗಲಿದೆ.