ಅತ್ಯಾಕರ್ಷಕ ಕೂಪ್ ಕಾರು ಟಾಟಾ ಕರ್ವ್ ಬೆಲೆ ಘೋಷಣೆ, 6 ಬಣ್ಣದಲ್ಲಿ ಲಭ್ಯ!
ಟಾಟಾ ಮೋಟಾರ್ಸ್ ಇದೀಗ ಟಾಟಾ ಕರ್ವ್ ಕೂಪ್ ಕಾರು ಮಾರುಕಟ್ಟೆಗೆ ಪರಿಚಯಿಸಿದೆ. ಡೀಸೆಲ್, ಪೆಟ್ರೋಲ್ ಹಾಗೂ ಇವಿ ವೇರಿಯೆಂಟ್‌ನಲ್ಲಿ ಕರ್ವ್ ಲಭ್ಯವಿದೆ. ಕಾರಿನ ಬೆಲೆ ಘೋಷಣೆಯಾಗಿದೆ. 6 ಬಣ್ಣಗಳಲ್ಲಿ ಕಾರು ಲಭ್ಯವಿದೆ.
ಐಷಾರಾಮಿ ಕಾರುಗಳಲ್ಲಿ ಮಾತ್ರ ಇದ್ದ ಕೂಪ್ ಡಿಸೈನ್ ಇದೀಗ ಜನಸಾಮಾನ್ಯರಿಗೆ ಕೈಗೆಟುಕವ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಸಿಟ್ರೊಯೆನ್ ಬಸಾಲ್ಟ್ ಬಿಡುಗಡೆ ಬೆನ್ನಲ್ಲೇ ಇದೀಗ ಟಾಟಾ ಅತ್ಯಾಕರ್ಷಕ ಕೂಪ್ ಡಿಸೈನ್ ಕರ್ವ್ ಕಾರು ಬಿಡುಗಡೆ ಮಾಡಿದೆ. ಇದೀಗ ಇದರ ಬೆಲೆಯೂ ಘೋಷಣೆಯಾಗಿದೆ.
ಟಾಟಾ ಕರ್ವ್ ಕಾರಿನ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಅದ್ಭುತ ಬಾಡಿ ಸ್ಟೈಲ್ ಹೊಂದಿರುವ ಐಸಿಇ ವೇರಿಯಂಟ್ ಗಳ ಮೂಲಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಿಡ್-ಎಸ್‌ಯುವಿ ವಿಭಾಗದ ಈ ಕಾರು ಭಾರಿ ಸಂಚಲನ ಮೂಡಿಸಿದೆ. ಪೆಟ್ರೋಲ್ ಕಾರು 9.99 ಲಕ್ಷ ರೂಪಾಯಿಯಿಂದ ಆರಂಭಗೊಂಡರೆ ಡೀಸೆಲ್ ಕಾರು 11.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಆರಂಭಗೊಳ್ಳುತ್ತಿದೆ.
ಟಾಟಾ ಮೋಟಾರ್ಸ್ 3 ಎಂಜಿನ್ ಆಯ್ಕೆಗಳಲ್ಲಿ ಕರ್ವ್ ಕಾರು ಬಿಡುಗಡೆ ಮಾಡಿದೆ. ಅತ್ಯಾಧುನಿಕ ಡ್ಯುಯಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಲಭ್ಯವಿದೆ. ಹೊಸ ಶಕ್ತಿಶಾಲಿ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್, 1.2ಲೀ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಮತ್ತು ಹೊಸ 1.5ಲೀ ಕ್ರಯೋಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಕರ್ವ್ ಲಭ್ಯವಿದ್ದು, ವಿಶೇಷವಾಗಿ ಇದೇ ಮೊದಲ ಬಾರಿಗೆ ಡೀಸೆಲ್ ವಿಭಾಗದಲ್ಲಿ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಒದಗಿಸುತ್ತಿದೆ. ಈ ಮೂಲಕ ಕಂಪನಿಯು ಗ್ರಾಹಕರಿಗೆ ಅವರವರ ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡಲು ವಿವಿಧ ಮತ್ತು ಉತ್ತಮವಾದ ಆಯ್ಕೆಗಳನ್ನು ಒದಗಿಸುತ್ತಿದೆ.
ಟಾಟಾ ಮೋಟಾರ್ಸ್ ಜನಪ್ರಿಯ ಸುರಕ್ಷತೆಯ ಮಾನದಂಡಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ.ಕರ್ವ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಜೊತೆಗೆ ಸಮಗ್ರ ಐ ಎಸ್ ಪಿ ಮತ್ತು 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್ ಸೇರಿದಂತೆ 20 ಕಾರ್ಯನಿರ್ವಹಣೆಗಳನ್ನು ಹೊಂದಿರುವ ಎಡಿಎಎಸ್ ಲೆವೆಲ್ 2 ನೀಡುತ್ತದೆ. ಈ ಎಸ್‌ಯುವಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒಳಗೊಂಡಿದೆ.
ಕರ್ವ್ ನ ಒಳಭಾಗವು ಐಷಾರಾಮಿತನಕ್ಕೆ ಸಾಕ್ಷಿಯಾಗಿದೆ. ಗೆಶ್ಚರ್ ಕಂಟ್ರೋಲ್ ಜೊತೆಗೆ ವಿಭಾಗದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿರುವ ಟೈಲ್‌ಗೇಟ್, 500ಲೀ ನ ವಿಭಾಗ ಶ್ರೇಷ್ಠ ಬೂಟ್ ಸ್ಪೇಸ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು ರಿಕ್ಲೈನ್ ಆಯ್ಕೆ ಜೊತೆಗೆ 60:40 ಸ್ಪ್ಲಿಟ್ ರೇರ್ ಸೀಟ್ ಸೌಲಭ್ಯವನ್ನು ಒಳಗೊಂಡಿದೆ.
ಮೊದಲ ಬಾರಿಗೆ ಪರಿಚಯಿಸಲಾದ 31.24 ಸೆಂಮೀ (12.3") ಹರ್ಮನ್™ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 26.03 ಸೆಂಮೀನ (10.25”) ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮತ್ತು ಐ ಆರ್ ಎ ಕನೆಕ್ಟೆಡ್ ಕಾರ್ ತಂತ್ರಜ್ಞಾನ ದಂತಹ ಅತ್ಯಾಧುನಿಕ ಕಾರು ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದೆ.