ದೀಪಾವಳಿ ಹಬ್ಬಕ್ಕೆ ಟಾಟಾ ಭರ್ಜರಿ ಕೊಡುಗೆ, ಆಯ್ದ ಕಾರುಗಳಿಗೆ ಡಿಸ್ಕೌಂಟ್!

ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಇದೀಗ ಟಾಟಾ ಮೋಟಾರ್ಸ್ಆಯ್ದ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. 

Tata Motors announces discounts offers to selected model cars for Diwali festival ckm

ಮುಂಬೈ(ಅ.07): ದಸರಾ ಹಬ್ಬ ಮುಗಿದ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬಕ್ಕೆ ತಯಾರಿ ಆರಂಭಗೊಂಡಿದೆ. ಅಕ್ಟೋಬರ್ 24 ರಿಂದ 26ರ ವರೆಗೆ ದೇಶಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದೀಗ ಈ ದೀಪಾವಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಟಾಟಾ ಮೋಟಾರ್ಸ್ ಆಯ್ದ ಕಾರುಗಳಿ ಈ ಆಫರ್ ಅನ್ವಯವಾಗಲಿದೆ. MY21 ಹಾಗೂ  MY22 ಮಾಡೆಲ್ ಕಾರುಗಳಿಗೆ ಡಿಸ್ಕೌಂಟ್ ಆಫರ್ ಅನ್ವಯವಾಗಲಿದೆ.  ಟಾಟಾ ಟಿಯಾಗೋ, ಟಾಟಾ ಟಿಗೋರ್, ಟಾಟಾ ಅಲ್ಟ್ರೋಜ್, ಟಾಟಾ ಹ್ಯಾರಿಯರ್, ಟಾಟಾ ಸಫಾರಿ ಕಾರಿಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಇನ್ನು ಟಾಟಾ ಪಂಚ್ ಹಾಗೂ ಟಾಟಾ ನೆಕ್ಸಾನ್ ಕಾರಿಗೆ ಯಾವುದೇ ಡಿಸ್ಕೌಂಟ್ ಘೋಷಿಸಿಲ್ಲ. ಇಷ್ಟೇ ಅಲ್ಲ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಯಾವುದೇ ಡಿಸ್ಕೌಂಟ್ ಘೋಷಿಸಿಲ್ಲ.

ಟಾಟಾ ಮೋಟಾರ್ಸ್ ಡಿಸ್ಕೌಂಟ್ ಆಫರ್
ಟಾಟಾ ಅಲ್ಟ್ರೋಜ್ ಕಾರಿಗೆ ಒಟ್ಟ 20,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಇದರಲ್ಲಿ ಎಕ್ಸ್‌ಚೇಂಜ್ ಆಫರ್ 10,000 ರೂಪಾಯಿ ಹಾಗೂ ಡಿಸ್ಕೌಂಟ್ ಆಫರ್ 10,000 ರೂಪಾಯಿ ಒಳಗೊಂಡಿದೆ. ಟಾಟಾ ಟಿಯಾಗೋ ಪೆಟ್ರೋಲ್ ಎಎಂಟಿ ಕಾರಿಗೆ ಒಟ್ಟು 30,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 20,000 ರೂಪಾಯಿ ನಗದು ಡಿಸ್ಕೌಂಟ್ ಹಾಗೂ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ಒಳಗೊಂಡಿದೆ. ಇನ್ನು ಟಿಯಾಗೋ ಸಿಎನ್‌ಜಿ ಕಾರಿಗೆ 20,000 ರೂಪಾಯಿ ನಗದು ಡಿಸ್ಕೌಂಟ್ ಹಾಗೂ 10,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್ ಸೇರಿ ಒಟ್ಟು 30,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 

ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

ಟಿಗೋರ್ ಪೆಟ್ರೋಲ್ ಕಾರಿಗೆ 20,000 ರೂಪಾಯಿ ನಗದು ಡಿಸ್ಕೌಂಟ್, 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಸೇರಿ ಒಟ್ಟು 30,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಟಿಗೋರ್ ಸಿಎನ್‌ಜಿ ಕಾರಿಗೆ 20,000 ರೂಪಾಯಿ ನಗದು ಡಿಸ್ಕೌಂಟ್ ಹಾಗೂ 10,000 ರೂಪಾಯಿ ಎಕ್ಸ್‌ಚೇಂಜ್ ಸೇರಿದಂತೆ 30,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಹ್ಯಾರಿಯರ್ ಹಾಗೂ ಸಫಾರಿ ಕಾರಿಗೆ 40,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಘೋಷಿಸಲಾಗಿದೆ. ಇನ್ನು ಸಫಾರಿ ಹಾಗೂ ಹ್ಯಾರಿಯರ್ ಕಾಜಿರಂಗ್ ಎಡಿಶನ್ ಕಾರಿಗೆ 20,000 ರೂಪಾಯಿ ನಗದು ಡಿಸ್ಕೌಂಟ್ ಹಾಗೂ 40,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ ಒಟ್ಟು 60,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್‌ ಏಸ್‌
ಏಸ್‌ ಇವಿ ಇದು ಟಾಟಾ ಮೋಟಾರ್ಸ್‌ ಬಿಡುಗಡೆ ಮಾಡಿರುವ ಹೊಸ ಎಲೆಕ್ಟ್ರಿಕ್‌ ವಾಣಿಜ್ಯ ವಾಹನ. ಸಣ್ಣ ವಾಣಿಜ್ಯ ವಾಹನವಾಗಿದ್ದು, ಹೊಗೆ ಉಗುಳುವುದಿಲ್ಲ. ಪರಿಸರ ಸ್ನೇಹಿಯಾಗಿದೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಎವೊಜೆನ್‌ ಪವರ್‌ಟ್ರೇನ್‌ ಉದ್ದು, ಇಂಧನ ಕ್ಷಮತೆ ನೀಡುತ್ತದೆ. ಒಮ್ಮೆ ಚಾಜ್‌ರ್‍ ಮಾಡಿದರೆ 154 ಕಿಮೀ ದೂರ ಕ್ರಮಿಸಬಹುದು ಎಂದು ಕಂಪನಿ ಹೇಳಿದೆ. 130 ಎನ್‌ಎಂ ಟಾರ್ಕ್ ಹೊಂದಿದ್ದು, 27 ಕಿ.ವ್ಯಾ. ಪವರ್‌ ಉತ್ಪಾದಿಸುತ್ತದೆ. ಸರಕು ಸಾಗಣೆಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.

 

ಟಾಟಾ ಮೋಟಾರ್ಸ್ Yodha 2.0 ಬಿಡುಗಡೆ, ದೇಶಾದ್ಯಂತ 750 ವಾಹನ ವಿತರಿಸಿ ದಾಖಲೆ!
 

Latest Videos
Follow Us:
Download App:
  • android
  • ios