ಗ್ರಾಹಕರಿಗೆ ಶಾಕ್, ಕೈಗೆಟುಕುವ ದರದ ಸ್ವಿಫ್ಟ್, ವ್ಯಾಗನಆರ್ ಸೇರಿ ಮಾರುತಿ ಸುಜುಕಿ ಕಾರು ಬೆಲೆ ಏರಿಕೆ!
ಮಾರುತಿ ಸುಜುಕಿ ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಶಾಕ್ ನೀಡಿದೆ. ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗಿದೆ. ಎಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಯಾಗಿದೆ. ಸದ್ಯ ಕಾರು ಖರೀದಿಸಿದರೆ ಎಷ್ಟು ಹಣ ಹೆಚ್ಚಿಗೆ ತೆರಬೇಕು?
ನವದೆಹಲಿ(ಏ.02): ಭಾರತದಲ್ಲಿ ಮಾರುತಿ ಸುಜುಕಿ ಕೈಗೆಟುಕುವ ದರದಲ್ಲಿ ವಾಹನ ಮಾರಾಟ ಮಾಡುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಉತ್ತಮ ಮೈಲೇಜ್, ನಿರ್ವಹಣೆ ವಿಚಾರದಲ್ಲೂ ಮಾರುತಿ ಸುಜುಕಿ ವೆಚ್ಚ ಕಡಿಮೆ. ಇದೀಗ ಮಾರುತಿ ಸುಜುಕಿ ಏಪ್ರಿಲ್ 1 ರಿಂದ ಕಾರುಗಳ ಬೆಲೆ ಏರಿಕೆ ಮಾಡಿದೆ. ಶೇಕಡಾ 0.8ರಷ್ಟು ಪ್ರತಿ ಕಾರಿನ ಬೆಲೆ ಏರಿಕೆಯಾಗಲಿದೆ. ಉತ್ಪದನಾ ವೆಚ್ಚ ಹೆಚ್ಚಾಗಿರುವ ಕಾರಣ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಮಾಡಿದೆ.
ಮಾರುತಿ ಸ್ವಿಫ್ಟ್, ಮಾರುತಿ ಡಿಸೈರ್, ಮಾರುತಿ ವ್ಯಾಗನಆರ್ ಸೇರಿದಂತೆ ಮಾರುತಿ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಒಂದೆಡೆ ಹಣದುಬ್ಬರ, ವಸ್ತುಗಳ ಬೆಲೆ ಏರಿಕೆಯಿಂದ ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಮಾರುತಿ ಸುಜುಕಿ ಕಾರಿನ ಬೆಲೆಯೂ ಏರಿಕೆಯಾಗುತ್ತಿದೆ.
ಮಧ್ಯಮ ವರ್ಗದ ನೆಚ್ಚಿನ ಕಾರು ಮಾರುತಿ ಅಲ್ಟೋ 800 ಉತ್ಪಾದನೆ ಸ್ಥಗಿತ!
ಕಳೆದ ತಿಂಗಳು ದೇಶಾದ್ಯಂತ 3.35 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಮೂಲಕ ವಾಹನ ಉತ್ಪಾದನಾ ಕಂಪನಿಗಳು ಮಾರಾಟದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11ರಷ್ಟುಹೆಚ್ಚಳವಾಗಿದೆ. ಜೊತೆಗೆ ಫೆಬ್ರವರಿ ತಿಂಗಳಲ್ಲಿ ಯಾವುದೇ ವರ್ಷವೊಂದರಲ್ಲಿ ದಾಖಲಾದ ಗರಿಷ್ಠ ಮಾರಾಟದ ಪ್ರಮಾಣವಾಗಿದೆ. ಈ ಪೈಕಿ ಮಾರುತಿ ಸುಜುಕಿ ಶೇ.11ರಷ್ಟು(1.55 ಲಕ್ಷ), ಹ್ಯುಂಡೈ ಶೇ.7ರಷ್ಟು(47001), ಮಹೀಂದ್ರ ಶೇ.10 (30358), ಕಿಯಾ ಶೇ.36 (24600), ಬಜಾಜ್ ಆಟೋ ಶೇ.36ರಷ್ಟು(1.53 ಲಕ್ಷ) ಪ್ರಗತಿ ಸಾಧಿಸಿವೆ. ಮಾರುತಿ ಸುಜುಕಿ ಕಡಿಮೆ ಬೆಲೆಗೆ ವಾಹನ ನೀಡುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲು ಹೊಂದಿದೆ. ಬೆಲೆ ಏರಿಕೆಯಿಂದ ಮಾರುತಿ ಸುಜುಕಿ ವಾಹನ ಮಾರಾಟಕ್ಕೂ ಹೊಡೆತ ಬೀಳಲಿದೆ.
ಈ ವರ್ಷದ ಆರಂಭದಲ್ಲಿ ಅಂದರೆ 2023ರ ಜನವರಿ 1 ರಂದು ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಮಾಡಲಾಗಿತ್ತು. ಮಾರುತಿ ಶೇ.1.1ರಷ್ಟುಏರಿಕೆ ಮಾಡಿತ್ತು. ಮಾರುತಿ ಸುಜುಕಿ ಕಳೆದ ಹಣಕಾಸಿನ ವರ್ಷದಲ್ಲಿ ಎರಡನೇ ಬಾರಿ ಬೆಲೆ ಏರಿಕೆ ಮಾಡಿತ್ತು. ‘ಏರುತ್ತಿರುವ ಉತ್ಪಾದನಾ ವೆಚ್ಚವನ್ನು ಸರಿದೂಗಿಸಿ ಕಾರಿನಲ್ಲಿ ಹೊಸ ಆವೃತ್ತಿಯನ್ನು ತರುವ ಕ್ರಮ ಇದಾಗಿದೆ’ ಎಂದು ಅದು ತಿಳಿಸಿದೆ. ಮಾರುತಿ ಸುಝುಕಿ, ಕಡಿಮೆ ಬೆಲೆಯ ಆಲ್ಟೊನಿಂದ ಭಾರಿ ಬೆಲೆಯ ಎಸ್‌ಯುವಿ ಗ್ರಾಂಡ್ ವಿಟಾರಾವರೆಗೆ ಕಾರುಗಳನ್ನು ಉತ್ಪಾದಿಸುತ್ತಿದೆ.
ಕೈಗೆಟುಕುವ ಬೆಲೆಯ ಹೊಚ್ಚ ಹೊಸ ಮಾರುತಿ ಬ್ರೆಜ್ಜಾ CNG ಕಾರು ಬಿಡುಗಡೆ, 26 ಕಿ.ಮೀ ಮೈಲೇಜ್!
ಭಾರತ ಖ್ಯಾತ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಜಿಮ್ನಿ ಎಸ್‌ಯುವಿಯನ್ನು ಜನರ ಅಭಿಪ್ರಾಯ ಆಧರಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ತನ್ನ ಎಸ್‌ಯುವಿ ಕ್ಷೇತ್ರವನ್ನು ಬಲಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಕಳೆದ 50 ವರ್ಷಗಳಿಂದಲೂ ಮಾರುತಿ ಜಿಮ್ನಿ ಜಾಗತಿಕ ಮಾರುಕಟ್ಟೆಯಲ್ಲಿದೆ. ಗುರುಗ್ರಾಮದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಈ ಕಾರನ್ನು ತಯಾರಿಸಿ ಮಧ್ಯ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ.