ಮಾರುತಿ ಸುಜುಕಿಯಿಂದ 550ಕಿ.ಮಿ ಮೈಲೇಜ್ ಎಲೆಕ್ಟ್ರಿಕ್ ಕಾರು ಅನಾವರಣ, ಕೈಗೆಟುಕುವ ದರ!

ಸುಜುಕಿ ಇದೀಗ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಗ್ರ್ಯಾಂಡ್ ವಿಟಾರ ಕಾರನ್ನು ಹೊಸ ರೂಪ, ವಿನ್ಯಾಸದಲ್ಲಿ ಇ ವಿಟಾರಾ ಕಾರಾಗಿ ಪರಿಚಯಿಸಿದೆ. 550 ಕಿ.ಮಿ ಮೈಲೇಜ್ ನೀಡಲಿದೆ. ಇದರ ಬೆಲೆ ಎಷ್ಟು?

Suzuki unveils evitra Electric car with 550 km mileage affordable price ckm

ನವದೆಹಲಿ(ನ.05) ಮಾರುತಿ ಸುಜುಕಿ ಭಾರದಲ್ಲಿ ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುತ್ತಿದೆ. ಜಾಗತಿಕ ಮಟ್ಟದಲ್ಲೂ ಸುಜುಕಿ ಕಾರುಗಳು ಬೆಲೆಯೂ ಕಡಿಮೆ, ನಿರ್ವಹಣೆ ವೆಚ್ಚ ಕೂಡ ಕಡಿಮೆ. ಇದೀಗ ಸುಜುಕಿ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದ್ಧೂರಿಯಾಗಿ ಸುಜುಕಿ ಇ ವಿಟರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣಗೊಂಡಿದೆ.ಈ ಕಾರಿನ ಉತ್ಪಾದನೆ ಗುಜರಾತ್ ಘಟಕದಲ್ಲಿ ಆಗಲಿದೆ. ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 550 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ನಿರ್ವಹಣೆ ಕೂಡ ಅತೀ ಸುಲಭ, ಅಷ್ಟೇ ವೇಗದಲ್ಲಿ ಚಾರ್ಜಿಂಗ್ ಕೂಡ ಪೂರ್ಣಗೊಳ್ಳಲಿದೆ.

ಸುಜುಕಿ ಇ ವಿಟಾರಾ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಕಾರಾಗಿದೆ. ಗಾತ್ರದಲ್ಲಿ ದೊಡ್ಡದು, ಹೆಚ್ಚು ಸ್ಥಳವಕಾಶ, ಉತ್ತಮ ಪರ್ಫಾಮೆನ್ಸ್, ಹಲವು ಆಧುನಿಕ ಫೀಚರ್ಸ್ ಹೊಂದಿದೆ. FWD ಹಾಗೂ 4WD ಆಯ್ಕೆಗಳು ಲಭ್ಯವಿದೆ. ಸುಜುಕಿ ಹೊಸ ಕಾನ್ಸೆಪ್ಟ್ ಕಾರನ್ನು ಇಟಲಿಯಲ್ಲಿ ಅನಾವರಣ ಮಾಡಿದೆ.  ಭಾರತದಲ್ಲಿ ಇ ವಿಟಾರಾ ಕಾರು ಬಿಡುಗಡೆಗೂ ಮೊದಲು ಮಾರುತಿ ಸುಜುಕಿ ಇವಿಎಕ್ಸ್ ಕಾರು ಬಿಡುಗಡೆಯಾಗಲಿದೆ. ಇದು ಭಾರತದಲ್ಲಿ ಬಿಡುಗಡೆಯಾಗುವ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಾಗಿದೆ. 

ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಕಾರು ಖರೀದಿಸಿದವರೆಷ್ಟು? ದಾಖಲೆ ಬರೆದ ಟಾಟಾ, ಮಾರುತಿ!

2025ರಿಂದ ಸುಜುಕಿ ಇ ವಿಟಾರಾ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಗುಜರಾತ್‌ನಲ್ಲಿರುವ ಮಾರುತಿ ಸುಜುಕಿ ಘಟಕದಲ್ಲಿ ಈ ಕಾರು ಉತ್ಪಾದನೆಗೊಂಡು ಹಲವು ದೇಶಗಳಿಗೆ ರಫ್ತಾಗಲಿದೆ. ಉತ್ಪಾದನೆ ವರ್ಷದಲ್ಲೇ ಭಾರತದಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಇನ್ನು ಇದರ ಬೆಲೆ 22 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.

ಇ ವಿಟಾರ ಕಾರಿಗೆ 18 ಹಾಗೂ 19 ಇಂಚಿನ ವ್ಹೀಲ್ ಬಳಸಲಾಗಿದೆ.  4,275 mm ಉದ್ದ,1,800 mm  ಅಗಲ,  1,635 mm ಎತ್ತರ ಹಾಗೂ 2,700 mm ವ್ಹೀಲ್‌ಬೇಸ್ ಹೊಂದಿದೆ. ಹೀಗಾಗಿ ಸುಜುಕಿಯ ಎಸ್‌ಯುವಿ ಕಾರುಗಳಲ್ಲಿ ಅತೀ ಹೆಚ್ಚು ವ್ಹೀಲ್‌ಬೇಸ್ ಹೊಂದಿದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಇ ವಿಟಾರಾ ಕಾರು ಗರಿಷ್ಠ ಸ್ಥಳಾವಕಾಶ ಒದಗಿಸಲಿದೆ. ಆರಾಮಾದಾಯಕ ಪ್ರಯಾಣ ಹಾಗೂ ಡ್ರೈವಿಂಗ್‌ಗೆ ಅನುಕೂಲ ಮಾಡಿಕೊಡಲಿದೆ. 

180 mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹೀಗಾಗಿ ಹಂಪ್, ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುವಾಗ ಯಾವುದೇ ಆತಂಕವಿಲ್ಲದೆ ಸಾಗಬಹುದು. LED ಹೆಡ್‌ಲೈಟ್ಸ್ ವೈ ಶೇಪ್ ಡಿಆರ್‌ಎಲ್, ಹೊಸ ಶೈಲಿಯ ಬಂಪರ್, ಗ್ರಿಲ್ ನೀಡಲಾಗಿದೆ. ಹೀಗಾಗಿ ಹೆಚ್ಚು ಸ್ಪೋರ್ಟೀವ್ ಹಾಗೂ ರಗಡ್ ಲುಕ್ ಹೊಂದಿದೆ. ಆಟೋಮ್ಯಾಟಿಕ್ ಎಸಿ, ವೆಂಟಿಲೇಟೆಡ್ ಸೀಟು, ವೈಯರ್‌ಲೆಸ್ ಫೋನ್ ಚಾರ್ಜರ್, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ. 

ಭಾರತದಲ್ಲಿ ಆದ ಮಹತ್ವದ ಬದಲಾವಣೆಗೆ ಕಂಗಾಲಾದ ಮಾರುತಿ ಸುಜುಕಿ ಕಂಪನಿ!

ಇ ವಿಟಾರ ಕಾರು ಎಂಜಿ ಮೋಟಾರ್ಸ್ ಝೆಡ್ ಎಸ್ ಇವಿ, ಟಾಟಾ ಕರ್ವ್ ಇವಿ, ಬಹು ನಿರೀಕ್ಷಿತ ಹ್ಯುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ಮೂಲಭೂತ ಸೌಕರ್ಯಗಳ ಕೊರತೆ, ಚಾರ್ಜಿಂಗ್ ಸಮಸ್ಯೆಗಳು ಎದುರಾಗುತ್ತಿರುವುದು ಸುಳ್ಳಲ್ಲ. ಇನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಎದುರಾಗುತ್ತಿರುವ ಸಮಸ್ಯೆ, ಸ್ಫೋಟಗೊಂಡ ಘಟನೆಗಳು ಜನರ ಆತಂಕ ಹೆಚ್ಚಿಸಿದ್ದು ಸುಳ್ಳಲ್ಲ. ಈ ಸಮಸ್ಯೆಗಳಿಗೆ ಸುಜುಕಿ ಇ ವಿಟಾರಾ ಉತ್ತರವಾಗುವ ಸಾಧ್ಯತೆ ಇದೆ. ಅತೀ ವೇಗದಲ್ಲಿ ಇ ವಿಟಾರಾ ಚಾರ್ಜ್ ಆಗುವ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಇ ವಿಟಾರಾ ಈಗಾಗಲೇ ಭಾರಿ ಸಂಚನಲ ಸೃಷ್ಟಿಸಿದೆ. 

Latest Videos
Follow Us:
Download App:
  • android
  • ios