ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಕಾರು ಖರೀದಿಸಿದವರೆಷ್ಟು? ದಾಖಲೆ ಬರೆದ ಟಾಟಾ, ಮಾರುತಿ!

ಹೊಸ ಕಾರು ಖರೀದಿ ಮಾಡುವವರು ದೀಪಾವಳಿ  ಧನ್‌ತೆರಸ್ ಹಬ್ಬದ ಶುಭಮೂಹೂರ್ತದಲ್ಲಿ ಖರೀದಿಸುತ್ತಾರೆ. ಈ ಬಾರಿಯ ಧನ್‌ತೆರಸ್ ಹಬ್ಬಕ್ಕೆ ಭಾರತದಲ್ಲಿ ಕಾರು ಖರೀದಿಸಿದವರೆಷ್ಟು? ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಬರೆದ ದಾಖಲೆ ಏನು?

Diwali dhanteras help auto sector to push car sales on October month ckm

ನವದೆಹಲಿ(ನ.01) ಶುಭ ಮುಹೂರ್ತದಲ್ಲಿ ವಾಹನ ಖರೀದಿಸಲು ಭಾರತೀಯರು ಬಯಸುತ್ತಾರೆ. ಹೀಗಾಗಿ ದೀಪಾವಳಿ ಧನ್‌ತೆರಸ್ ವೇಳೆ ಹೆಚ್ಚಿನ ವಾಹನ ಮಾರಾಟವಾಗತ್ತದೆ. ಈ ಪೈಕಿ ಕಾರು ಮಾರಾಟದಲ್ಲಿ ಕಳೆದ ಮೇ ತಿಂಗಳಿನಿಂದ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಸೊರಗಿತ್ತು. ಆದರೆ ಈ ಬಾರಿಯ ದೀಪಾವಳಿ ಧನ್‌ತೆರಸ್ ದಿನ ದಾಖಲೆ ಪ್ರಮಾಣದಲ್ಲಿ ಕಾರುಗಳು ಮಾರಾಟವಾಗಿದೆ. ಹೀಗಾಗಿ  ಸೊರಗಿದ್ದ ಕಾರು ಮಾರಾಟಕ್ಕೆ ಹೊಸ ಉತ್ಸಾಹ ಬಂದಿದೆ. ದೀಪಾವಳಿ ಕಾರಣದಿಂದ ಅಕ್ಟೋಬರ್‌ನಲ್ಲಿ 4.5 ಲಕ್ಷ ಕಾರುಗಳು ಮಾರಾಟವಾಗಿದೆ.

ಈ ಬಾರಿಯ ದೀಪಾವಳಿಗೆ ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ದಾಖಲೆ ಬರೆದಿದೆ.  ದೀಪಾವಳಿ ಕಾರಣದಿಂದ ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿ 2.5 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ದೀಪಾವಳ ತಿಂಗಳಲ್ಲಿ ಮಾರುತಿ ಸುಜುಕಿ 1,91,476 ಕಾರುಗಳನ್ನು ಮಾರಾಟ ಮಾಡಿ ದಾಖಲೆ ಬರೆದಿತ್ತು. 2020-21ರ ಸಾಲಿನಲ್ಲಿ ಈ ದಾಖಲೆಯನ್ನು ಮಾರುತಿ ಸುಜುಕಿ ಮಾಡಿತ್ತು. ಆದರೆ ಈ ಬಾರಿ 2.5 ಲಕ್ಷ ಕಾರು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ಭಾರತದಲ್ಲಿ ಆದ ಮಹತ್ವದ ಬದಲಾವಣೆಗೆ ಕಂಗಾಲಾದ ಮಾರುತಿ ಸುಜುಕಿ ಕಂಪನಿ!

ಧನ್‌ತೆರಸ್ ದಿನವಾದ ಬುಧವಾರ ಒಂದೇ ದಿನ 32,000 ಮಾರುತಿ ಸುಜುಕಿ ಕಾರುಗಳು ಮಾರಾಟವಾಗಿದೆ. ಗುರುವಾರ 10,000 ಕಾರುಗಳು ಮಾರಾಟವಾಗಿದೆ. ಎರಡು ದಿನದಲ್ಲಿ 43,000 ಕಾರುಗಳು ಮಾರಾಟಗೊಂಡಿದೆ. ದೀಪಾವಳಿ ಹಬ್ಬ ನವೆಂಬರ್ ಆರಂಭಿಕ ದಿನಗಳಲ್ಲೂ ಇರುವ ಕಾರಣ ಮಾರಾಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾರುತಿ ಸುಜುಕಿ ಮಾರ್ಕೆಟಿಂಗ್ ಆಫೀಸರ್ ಪಾರ್ಥೋ ಬ್ಯಾನರ್ಜಿ ಹೇಳಿದ್ದಾರೆ. ಕಳೆದ ವರ್ಷ ಧನತೇರಸ್ ದಿನ 23,000 ಮಾರುತಿ ಕಾರುಗಳು ಮಾರಾಟವಾಗಿತ್ತು ಎಂದಿದ್ದಾರೆ. 

ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ಒಟ್ಟು 4.5 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಈ ಪೈಕಿ ಮಾರುತಿ ಸುಜುಕಿ ಒಂದೇ ಬ್ರ್ಯಾಂಡ್ 2.5 ಲಕ್ಷ ಕಾರುಗಳು ಮಾರಾಟವಾಗಿದೆ. ಈ ಮೂಲಕ ಮಾರುತಿ ಹೊಸ ದಾಖಲೆ ಬರೆದಿದೆ. ಮಾರಾಟದಲ್ಲಿ ಆಗಿದ್ದ ಭಾರಿ ಕುಸಿತ ಈ ಬಾರಿಯ ದೀಪಾವಳಿ ಸಮಾಧಾನ ತರಿಸಿದೆ.

ಅಕ್ಟೋಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಶೇಕಡಾ 30 ರಷ್ಟು ಪ್ರಗತಿ ಸಾಧಿಸಿದೆ. ಧನ್‌ತೆರೆಸ್ ಒಂದೇ ದಿನ ಟಾಟಾ ಮೋಟಾರ್ಸ್ 15,000 ಕಾರುಗಳು ಮಾರಾಟಗೊಂಡಿದೆ. ಇನ್ನು ದೀಪಾವಳಿ ಹಬ್ಬ ಮಾರಾಟ ಮುಂದುವರಿದಿದೆ. ಹೀಗಾಗಿ ಈ ಬಾರಿಯ ದೀಪಾವಳಿ ಮುಗಿಯು ವೇಳೆ 50 ಸಾವಿರಕ್ಕಿಂತ ಹೆಚ್ಚಿನ ಕಾರುಗಳು ಮಾರಾಟವಾಗಲಿದೆ ಎಂದು ಟಾಟಾ ಮೋಟಾರ್ಸ್ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.

ದೀಪಾವಳಿಯ ಖರೀದಿ ಟ್ರೆಂಡ್ ಸಾಮಾನ್ಯವಾಗಿ 20 ದಿನಗಳ ಕಾಲ ಮುಂದುವರಿಯಲಿದೆ. ಹೀಗಾಗಿ ನವೆಂಬರ್ ತಿಂಗಳಲ್ಲೂ ಮಾರಾಟದಲ್ಲಿ ಏರಿಕೆಯಾಗು ಸಾಧ್ಯತೆ ಇದೆ. ಅಕ್ಟೋಬರ್ ಹಾಗೂ ನವೆಂಬರ್ 2 ತಿಂಗಳ ಮಾರಟ ಸದ್ಯ ಆಗಿರುವ ನಷ್ಟವನ್ನು ಸರಿದೂಗಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಕಾರು ಕಂಪನಿಗಳ ನಿದ್ದೆಗೆಡಿಸಿದ ಈ ಬಾರಿಯ ದೀಪಾವಳಿ, ಅಟೋಮೊಬೈಲ್ ಕ್ಷೇತ್ರದಲ್ಲಿ ಸಿಡಿಲು!

ಕೆಲ ಡೀಲರ್‌ಗಳು ದೀಪಾವಳಿಗೆ ದಾಖಲೆ ಬರೆದಿದ್ದಾರೆ. ದೆಹಲಿಯ JSW ಮೋಟಾರ್ ಡೀಲರ್ ಧನ್‌ತೇರಸ್ ದಿನ 101 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ. ರಾಯ್‌ಪುರದ ರೆನಾಲ್ಟ್ ಡೀಲರ್ ಧನ್‌ತೆರಸ್ ಒಂದೇ ದಿನ 100 ಕಾರುಗಳನ್ನು ಡೆಲಿವರಿ ಮಾಡಿ ದಾಖಲೆ ಬರೆದಿದೆ. ಈ ಪೈಕಿ 52 ರೆನಾಲ್ಟ್ ಟ್ರೈಬರ್, 30 ರೆನಾಲ್ಟ್ ಕಿಗರ್ ಹಾಗೂ 18  ರೆನಾಲ್ಟ್ ಕ್ವಿಡ್ ಕಾರುಗಳು ಸೇರಿವೆ.  ಇದೇ ರೀತಿ ಹಲವು ಡೀಲರ್ ಗರಿಷ್ಠ ಮಾರಾಟ ದಾಖಲೆ ಬರೆದಿದ್ದಾರೆ.

Latest Videos
Follow Us:
Download App:
  • android
  • ios