Upcoming Cars ಜ.10ಕ್ಕೆ ಬಹುನಿರೀಕ್ಷಿತ ಕೊಡಿಯಾಕ್ ಫೇಸ್‌ಲಿಫ್ಟ್ SUV ಕಾರು ಬಿಡುಗಡೆ!
*ಹೊಸ ಪೀಳಿಗೆಯ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಬಿಡುಗಡೆ
* ವರ್ಷದ ಆರಂಭದಲ್ಲೇ ಹೊಸ ಎಸ್‌ಯುವಿ ಕಾರು ಬಿಡುಗಡೆ
* ನೂತನ ಕಾರಿಗೆ 35 ಲಕ್ಷ ರೂ. ದರದ ನಿರೀಕ್ಷೆ
ನವದೆಹಲಿ(ಜ.09) ಸ್ಕೋಡಾ ಕಂಪನಿ (Scoda) ಭಾರತದಲ್ಲಿ ನಾಳೆ ಕೊಡಿಯಾಕ್ (kodiaq) ಫೇಸ್ಲಿಫ್ಟ್ SUV ಬಿಡುಗಡೆಗೊಳಿಸಲಿದೆ. BS 6 ಇಂಜಿನ್ ಮಾನದಂಡಗಳ ಕಾರಣದಿಂದಾಗಿ ಸುಮಾರು ಎರಡು ವರ್ಷಗಳ ಕೊಡಿಯಾಕ್ ಅನ್ನು ಮಾರುಕಟ್ಟೆಯಿಂದ ಹಿಂಪಡೆದುಕೊಂಡ ಕಂಪನಿ, ಈಗ ಅದರ ಸುದಾರಿತ ವೈಶಿಷ್ಟ್ಯಗಳೊಂದಿಗೆ ಮತ್ತೊಮ್ಮೆ ಮಾರುಕಟ್ಟೆಗೆ ತರುತ್ತಿದೆ.ಮುಂದೆ ಬಿಡುಗಡೆಯಾಗಲಿರುವ ಪ್ರೀಮಿಯಂ ಸೆಡಾನ್ ಸ್ಲಾವಿಯಾಕ್ಗೂ (Skoda Slavia) ಮೊದಲೇ ಸ್ಕೋಡಾ ಕಂಪನಿ, ಕೊಡಿಯಾಕ್ ಫೇಸ್ಲಿಫ್ಟ್ ಬಿಡುಗಡೆಗೊಳಿಸಲಿದೆ.
ಭಾರತದಲ್ಲಿ ಸೋಮವಾರ ಬಿಡುಗಡೆಯಾಗಲಿರುವ ಕೊಡಿಯಾಕ್ ಎಸ್ಯುವಿ (SUV) ಕಳೆದ ವರ್ಷ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸಲ್ಪಟ್ಟಿದ್ದು, ಈಗ ಹಲವು ಪರಿಷ್ಕೃತ ಅಂಶಗಳೊಂದಿಗೆ ಬರಲಿದೆ. ಹೊರಭಾಗದ ವಿನ್ಯಾಸ, ಕ್ಯಾಬಿನ್ ಒಳಗೆ ಮತ್ತು ಹುಡ್ನಲ್ಲಿ ಕೂಡ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಕಾರಿನ ಹೊರಭಾಗದಲ್ಲಿ ಪರಿಷ್ಕೃತ ಗ್ರಿಲ್, ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಸಿಗ್ನೇಚರ್ಗಳು ಮತ್ತು ಹೊಸ ಬಂಪರ್ಗಳು ಇರಲಿವೆ. ಹಿಂಭಾಗದ ಬಂಪರ್ ಜೊತೆಗೆ ಟೈಲ್ ಲ್ಯಾಂಪ್ಗಳನ್ನು ಸಹ ಟ್ವೀಕ್ ಮಾಡಲಾಗಿದೆ.
SKODA Cars ಲಾಂಚ್ ಆಗಲಿದೆ KODIAQ ಸೇರಿ 6 ಹೊಸ ಕಾರು, 2022 ಸ್ಕೋಡಾಗೆ ಸಂಭ್ರಮದ ವರ್ಷ!
ಇಂಟೀರಿಯರ್ನಲ್ಲಿ ಹೊಸ ಕೊಡಿಯಾಕ್ ದೊಡ್ಡ ಡ್ಯುಯಲ್-ಟೋನ್ ಕ್ಯಾಬಿನ್ ಹೊಂದಿದೆ. ಡ್ಯಾಶ್ಬೋರ್ಡ್ ಈಗ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ ಮತ್ತು ಇಂಟರ್ನಲ್ ನ್ಯಾವಿಗೇಷನ್ ಮತ್ತು ವೈರ್ಲೆಸ್ ಸಂಪರ್ಕದೊಂದಿಗೆ ಬರುತ್ತದೆ. ಸ್ಟೀರಿಂಗ್ ವ್ಹೀಲ್ ಮುಂದೆ ದೊಡ್ಡ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಇರಲಿದೆ. ಹೊಸ ಕೊಡಿಯಾಕ್ ವಿಶಾಲ ಸೀಟುಗಳು, ಕೂಲಿಂಗ್ ಮತ್ತು ಹೀಟಿಂಗ್ ಫಂಕ್ಷನ್ಗಳನ್ನು ಹೊಂದಿರಲಿದೆ. ಮೂರು ವಲಯಗಳ ಸ್ವಯಂಚಾಲಿತ ಎಸಿ, SUV ಪನೋರಮಿಕ್ ಸನ್ರೂಫ್, 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಇತರ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಹುಡ್ ಅಡಿಯಲ್ಲಿ, 2022 ಕೊಡಿಯಾಕ್ SUV 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಹೊಂದಿದ್ದು, ಗರಿಷ್ಠ 190 ಎಚ್ಪಿ ಮತ್ತು 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 7-ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ ಹೊಂದಿದೆ. ಡೈನಾಮಿಕ್ ಚಾಸಿಸ್ ಕಂಟ್ರೋಲ್ (ಡಿಸಿಸಿ) ವ್ಯವಸ್ಥೆ ಹೊಂದಿರುವ ಎಸ್ಯುವಿ ಶಾಕ್ ಅಬ್ಸಾರ್ಬರ್ಗಳನ್ನು ಸರಿಹೊಂದಿಸುವ ಮೂಲಕ ಡ್ಯಾಂಪಿಂಗ್ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತದೆ. ಇದು ಕಾರಿನ ಚಾಲಕ ಆಯ್ಕೆ ಮಾಡಿದ ಡ್ರೈವಿಂಗ್ ಮೋಡ್ಗೆ ತಕ್ಕಂತೆ ಇದು ಹೊಂದಿಕೊಳ್ಳುತ್ತದೆ. ಈ ಎಸ್ಯುವಿ ಇಕೋ, ನಾರ್ಮಲ್, ಸ್ಪೋರ್ಟ್ಸ್, ಸ್ನೋ ಮತ್ತು ಇಂಡಿವಿಜುವಲ್ ಎಂಬ ಐದು ಮೋಡ್ಗಳಲ್ಲಿ ಬರುತ್ತದೆ.
Auto Sales: 2021ರಲ್ಲಿ ಶೇ.130ರಷ್ಟು ಪ್ರಗತಿ ದಾಖಲಿಸಿದ ಸ್ಕೋಡಾ ಆಟೋ ಇಂಡಿಯಾ
ಸುರಕ್ಷತಾ ವಿಚಾರದಲ್ಲಿ, 2022ರ ಸ್ಕೋಡಾ ಕೊಡಿಯಾಕ್ ಎಸ್ಯುವಿ 9 ಏರ್ಬ್ಯಾಗ್ಗಳನ್ನು ಒಳಗೊಂಡಿದೆ. ಇದಲ್ಲದೇ ಇಎಸ್ಸಿ, ಎಂಸಿಬಿ, ಎಎಫ್ಸಿ, ಎಬಿಎಸ್, ಎಎಸ್ಆರ್ನಂತಹ ಸುರಕ್ಷತಾ ಫೀಚರ್ಗಳನ್ನು ಒಳಗೊಂಡಿದೆ.
ಸ್ಕೋಡಾ ಕೊಡಿಯಾಕ್ ಎಸ್ಯುವಿ ದರ 35 ಲಕ್ಷ ರೂ.ಗಳಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಹಿಂದಿನ ಮಾದರಿಯ ದರ 33 ಲಕ್ಷ ರೂ.ಗಳಷ್ಟಿತ್ತು. ಸ್ಕೋಡಾ ಕೊಡಿಯಾಕ್ ಎಸ್ಯುವಿ ಫೇಸ್ಲಿಫ್ಟ್ ವೋಕ್ಸ್ವ್ಯಾಘನ್ ಟೈಗೂನ್ (Volkswagen Taigun), ಹ್ಯುಂಡೈ ಟಕ್ಸನ್ (Hyundai tacson) ಮತ್ತು ಸಿಟೆರಾನ್ (Citeron) ಸಿ5 (C5) ಏರ್ಕ್ರಾಸ್ಗೆ ಸ್ಪರ್ಧೆ ನೀಡಲಿದೆ.
ಸ್ಕೋಡಾ ಕಂಪನಿ 2022ರಲ್ಲಿ ಆರು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಹೊಸ ವರ್ಷದಲ್ಲಿ 70 ಸಾವಿರ ಕಾರುಗಳನ್ನು ಪೂರೈಸುವ ಗುರಿ ಹೊಂದಿದೆ. ಮೊದಲ ತ್ರೈಮಾಸಿಕದಲ್ಲಿ ಸ್ಕೋಡಾ ಸ್ಲೇವಿಯಾ ಕೂಡ ಮಾರುಕಟ್ಟೆಗೆ ಬರಲಿದೆ. ಇದನ್ನು ಕಳೆದ ವರ್ಷವೇ ಕಂಪನಿ ಪರಿಚಯಿಸಿದ್ದು, ಮತ್ತು ಈಗಾಗಲೇ ಇದರ ಬುಕಿಂಗ್ ಕೂಡ ಆರಂಭಗೊಂಡಿದೆ. ಉಳಿದ ನಾಲ್ಕು ವಾಹನಗಳ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.