ಸಾನಿಯಾ ಮಿರ್ಜಾ ಐಷಾರಾಮಿ ಕಾರುಗಳ ಸಂಗ್ರಹದ ಬಗ್ಗೆ ಎಲ್ಲಿಲ್ಲದ ಚರ್ಚೆ!
ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬಳಿ BMW ನಿಂದ Range Rover ವರೆಗಿನ ಐಷಾರಾಮಿ ಕಾರುಗಳಿವೆ. ಅವರ ಒಟ್ಟು ಆಸ್ತಿ 214 ರಿಂದ 240 ಕೋಟಿ ರೂಪಾಯಿಗಳಷ್ಟಿದೆ.
ಮಾಜಿ ಟೆನಿಸ್ ತಾರೆ, ಡಬಲ್ಸ್ ನಲ್ಲಿ ವಿಶ್ವದ ನಂಬರ್ 1 ಸ್ಥಾನದಲ್ಲಿದ್ದ ಸಾನಿಯಾ ಮಿರ್ಜಾ ಅವರ ಐಷಾರಾಮಿ ಕಾರುಗಳ ಸಂಗ್ರಹ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿದೆ. ಕೋಟಿಗಟ್ಟಲೆ ಆಸ್ತಿಯ ಮಾಲೀಕರಾದ ಸಾನಿಯಾ ಅವರ ಬಳಿ BMW ನಿಂದ Range Rover ವರೆಗಿನ ಕಾರುಗಳಿವೆ.
ಭಾರತೀಯ ಮಹಿಳಾ ಟೆನಿಸ್ ಸೂಪರ್‌ಸ್ಟಾರ್ ಸಾನಿಯಾ ಮಿರ್ಜಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಜನರಲ್ಲಿ ಅವರು ಚರ್ಚೆಯ ವಿಷಯವಾಗಿದ್ದಾರೆ.
Fact Check: ಮೊಹಮದ್ ಶಮಿ-ಸಾನಿಯಾ ಮಿರ್ಜಾ ದುಬೈ ಟ್ರಿಪ್, ವೈರಲ್ ಆಯ್ತು ಎಐ ಫೋಟೋಸ್!
ಸಾನಿಯಾ ಮಿರ್ಜಾ ತಮ್ಮ Instagram ಖಾತೆಯಲ್ಲಿ ಆಗಾಗ್ಗೆ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಪೋಸ್ಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.
ಗಳಿಕೆಯ ವಿಷಯದಲ್ಲೂ ಸಾನಿಯಾ ಮಿರ್ಜಾ ಯಾರದ್ದಕ್ಕೂ ಕಡಿಮೆಯಿಲ್ಲ. ವರದಿಯ ಪ್ರಕಾರ, ಅವರ ಬಳಿ 214 ರಿಂದ 240 ಕೋಟಿ ರೂಪಾಯಿಗಳಷ್ಟು ಆಸ್ತಿ ಇದೆ.
ಸಾನಿಯಾ ಮಿರ್ಜಾ ಐಷಾರಾಮಿ ಕಾರುಗಳಲ್ಲಿ ಓಡಾಡುವ ಹವ್ಯಾಸ ಹೊಂದಿದ್ದಾರೆ. ಅವರ ಬಳಿ ದುಬಾರಿ ಕಾರುಗಳ ಸಂಗ್ರಹವಿದೆ, ಇದರ ಬೆಲೆ ಕೋಟಿಗಟ್ಟಲೆಗೂ ಹೆಚ್ಚಿದೆ.
ಎರಡನೇ ಮದುವೆ ಸುದ್ದಿ ಬೆನ್ನಲ್ಲೇ ಟರ್ಕಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಸಾನಿಯಾ, ಜತೆಯಲ್ಲಿರೋರು ಯಾರು?
ಅಂದಾಜು ರೂ 1.70 ಕೋಟಿ ಮೌಲ್ಯದ BMW 7-ಸರಣಿ, ರೂ 72.09 ಲಕ್ಷ ಬೆಲೆಯ ರೇಂಜ್ ರೋವರ್ ಇವೊಕ್ ಮತ್ತು ರೂ 46.64 ಲಕ್ಷ ಮೌಲ್ಯದ ಜಾಗ್ವಾರ್ ಎಕ್ಸ್‌ಇ ಒಳಗೊಂಡಿದೆ. ಈ ಕಾರಿನಲ್ಲಿಯೂ ಅವರು ಓಡಾಡುತ್ತಾರೆ. ಇದರ ಜೊತೆಗೆ Mercedes-Benz, Porsche, ಮತ್ತು Audi ನಂತಹ ಹೆಚ್ಚುವರಿ ಉನ್ನತ-ಮಟ್ಟದ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ .
ಇಷ್ಟು ಮಾತ್ರವಲ್ಲ ಮಿರ್ಜಾ ದುಬೈನಲ್ಲಿ ವಿಸ್ತಾರವಾದ ಮನೆಯನ್ನು ಹೊಂದಿದ್ದಾಳೆ. ಗ್ರೀಕ್ ವಿನ್ಯಾಸದಿಂದ ಐಶಾರಾಮಿಯಾಗಿ ಇದನ್ನು ಮಾಡಲಾಗಿದೆ. ಹೈದರಾಬಾದ್‌ನಲ್ಲಿ 13 ಕೋಟಿ ಮೌಲ್ಯದ ಐಷಾರಾಮಿ ಮನೆ ಎನ್ನಲಾಗಿದೆ.
ಇದರ ಜೊತೆಗೆ ಸಾನಿಯಾ ಮಿರ್ಜಾ ಅವರು ಗಣನೀಯ ಗಳಿಕೆಗಳು ಲಾಭದಾಯಕ ಬ್ರ್ಯಾಂಡ್ ಅನುಮೋದನೆಗಳು, ವೈಯಕ್ತಿಕ ಹೂಡಿಕೆಗಳು ಮತ್ತು ವ್ಯಾಪಾರ ವ್ಯವಹಾರಗಳು, ಟೆನ್ನಿಸ್ ಅಕಾಡೆಮಿ ಮೂಲದಿಂದ ಬರುತ್ತಿದೆ. ಅನೇಕ ಬ್ರ್ಯಾಂಡ್‌ಗಳಲ್ಲಿ ಜಾಹೀರಾತು ಪಾರ್ಟನರ್ ಆಗಿದ್ದಾರೆ. ಏಷ್ಯನ್ ಪೇಂಟ್ಸ್ , ಲ್ಯಾಕ್ಮೆ, ಡ್ಯಾನ್ಯೂಬ್ ಪ್ರಾಪರ್ಟೀಸ್, ಹರ್ಷೆಸ್ ಮತ್ತು ಇತರವುಗಳಾಗಿವೆ. ತನ್ನ ಅಥ್ಲೆಟಿಕ್ ಅನ್ವೇಷಣೆಗಳ ಜೊತೆಗೆ, ಮಿರ್ಜಾ ಭಾರತ ಮತ್ತು ದುಬೈ ಎರಡರಲ್ಲೂ ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. Instagram ನಲ್ಲಿ ಸಾನಿಯಾ ಮಿರ್ಜಾ ಅವರ ಅಭಿಮಾನಿಗಳ ಸಂಖ್ಯೆ ಅತ್ಯಂತ ದೊಡ್ಡದಾಗಿದೆ. ಅವರ ಅಧಿಕೃತ ಖಾತೆಯಲ್ಲಿ 4.2 ಮಿಲಿಯನ್ ಜನರು ಅವರನ್ನು ಅನುಸರಿಸುತ್ತಾರೆ.