Asianet Suvarna News Asianet Suvarna News

ಎಪ್ರಿಲ್ ತಿಂಗಳ ಸಖತ್ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಕಾರ್ ಖರೀದಿ ಮೇಲೆ 1 ಲಕ್ಷ ರೂ.ವರೆಗೆ ಲಾಭ

ಯುಗಾದಿ ಹಬ್ಬಕ್ಕೆ ನೀವು ರೆನೋ ಕಂಪನಿಯ ಕಾರುಗಳ್ನು ಖರೀದಿಗೆ ಮುಂದಾಗಿದ್ದರೆ ಸಖತ್ ಆಫರ್‌ಗಳಿವೆ. ಕಂಪನಿಯ ಕ್ವಿಡ್, ಟ್ರೈಬರ್ ಮತ್ತು ಡಸ್ಟರ್‌ನ ಆಯ್ದ ಕೆಲವು ವೆರಿಯೆಂಟ್‌ಗಳ ಮೇಲೆ ಬಂಪರ್ ರಿಯಾಯ್ತಿ ನೀಡುತ್ತಿದೆ. ಡಸ್ಟರ್‌ನ ಆಯ್ದ ವೆರಿಯೆಂಟ್‌ ಮೇಲೆ ನಿಮಗೆ 1 ಲಕ್ಷ ರೂ.ವರೆಗೂ ಲಾಭ ಸಿಗಲಿದೆ. ಹಾಗೆಯೇ ಕ್ವಿಡ್‌ ಖರೀದಿ ಮೇಲೂ 60 ಸಾವಿರ ರೂ.ವರೆಗೂ ರಿಯಾಯ್ತಿ ಪಡೆಯಬಹುದು.

Renault offering up to RS 1 lakh on its selected car and check details
Author
Bengaluru, First Published Apr 8, 2021, 4:29 PM IST

ಭಾರತೀಯ ಆಟೊಮೊಬೈಲ್ ಕ್ಷೇತ್ರದಲ್ಲಿ ರೆನೋ ಕಾರುಗಳು ತಮ್ಮ ಪ್ರದರ್ಶನ ಹಾಗೂ ಬಜೆಟ್‌ ಕಾರಣಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಎಂಟ್ರಿ ಲೇವಲ್ ಕಾರ್ ಕ್ವಿಡ್ ಮತ್ತು ಎಸ್‌ಯುವಿ ಡಸ್ಟರ್ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದ್ದ ರೆನೋ, ಕೈಗರ್ ಸಬ್ ಕಾಂಪಾಕ್ಟ್ ಬಿಡುಗಡೆ ಮಾಡಿ, ಈ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. 

ಇದೇ ವೇಳೆ, ತನ್ನ ಕಾರುಗಳನ್ನು ಹೆಚ್ಚಿನ ಜನರಿಗ ತಲುಪಿಸುವ ನಿಟ್ಟಿನಲ್ಲಿ ಕಂಪನಿ ಏಪ್ರಿಲ್ ತಿಂಗಳಲ್ಲಿ ವಿಶೇಷ ರಿಯಾಯ್ತಿಗಳನ್ನು ಘೋಷಿಸಿದೆ. ನೀವು ರೆನೋ ಕಾರುಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ ಕಾರು ಖರೀದಿಸಲು ಇದು ಸಕಾಲ. ಯಾಕೆಂದರೆ, ಕಂಪನಿಯು ಆಯ್ದ ಕೆಲವು ಮಾಡೆಲ್‌ ಕಾರುಗಳ ಮೇಲೆ ಸುಮಾರು 1 ಲಕ್ಷ ರೂಪಾಯಿವರೆಗೂ ಆಫರ್ ನೀಡುತ್ತಿದೆ. ಆದರೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಕೈಗರ್ ಮೇಲೆ ಯಾವುದೇ ಆಫರ್ ಅನ್ನು ಕಂಪನಿ ಘೋಷಿಸಿಲ್ಲ. 

ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ ಮಂಡ್ಯ ಕಲಾವಿದ

ಕಂಪನಿಯ ಎಂಟ್ರಿ ಲೇವಲ್ ಕಾರ್ ಆಗಿರುವ ಕ್ವಿಡ್ ಖರೀದಿ ಮೇಲೆ ನೀವು ಸುಮಾರು 60 ಸಾವಿರ ರೂಪಾಯಿವರೆಗೂ ಲಾಭವನ್ನು ಮಾಡಿಕೊಳ್ಳಬಹುದು. ಈ ಆಫರ್ ಕೂಡ ಕ್ವಿಡ್‌ನ ಕೆಲವು ಆಯ್ದ ವೆರಿಯೆಂಟ್‌ಗಳ ಮೇಲೆ ದೊರೆಯಲಿದೆ. 60 ಸಾವಿರ ರೂಪಾಯಿಯಲ್ಲಿ ನಿಮಗೆ 20 ಸಾವಿರ ನಗದು ರಿಯಾಯ್ತಿ ಇದ್ದರೆ, ಎಕ್ಸ್‌ಚೇಂಜ್ ಬೆನೆಫಿಟ್ 20 ಸಾವಿರ ರೂಪಾಯಿವರೆಗೂ ಸಿಗಲಿದೆ. ಜೊತೆಗೆ 10 ಸಾವಿರ ರೂಪಾಯಿವರೆಗೂ ಲಾಯಲ್ಟಿ ಆಫರ್ ಹಾಗೂ ಹೆಚ್ಚುವರಿಯಾಗಿ 10 ಸಾವಿರ ರೂಪಾಯಿವರೆಗೂ ಕಾರ್ಪೊರೇಟ್ ಡಿಸ್ಕೌಂಟ್ ಕೂಡಾ ಸಿಗಲಿದೆ. 

ನೀವೇನಾದರೂ ಟ್ರೈಬರ್ ಎಂಪಿವಿ ಖರೀದಿಗೆ ಯೋಜಿಸಿದ್ದರೆ ನಿಮಗೆ 65 ಸಾವಿರ ರೂಪಾಯಿವರೆಗೂ ಲಾಭ ದೊರೆಯಲಿದೆ. 2020ರ ಮಾಡೆಲ್ ಟ್ರೈಬರ್ ಖರೀದಿ ಮೇಲೆ ನಿಮೆಗ 25 ಸಾವಿರ ರೂಪಾಯಿ ನಗದು ರಿಯಾಯ್ತಿ ದೊರೆತರೆ, ಎಕ್ಸೆಚೇಂಜ್ ಬೆನೆಫಿಟ್ ಆಗಿ ನಿಮಗೆ 20 ಸಾವಿರ ಲಾಭ ದೊರೆಯಲಿದೆ. ಹಾಗೆಯೇ 10 ಸಾವಿರ ರೂಪಾಯಿವರೆಗೆ ಲಾಯಲ್ಟಿ ಪ್ರಯೋಜನ ಸಿಗುವುದು. ಆದರೆ, ಇದು ಆಯ್ದ ಕೆಲವು ವೆರಿಯೆಂಟ್‌ಗಳಿಗೆ ಮಾತ್ರವೇ ಅನ್ವಯವಾಗಲಿದೆ. 

ಇದೇ ವೇಳೆ, 2021ರ ಮಾಡೆಲ್ ಟ್ರೈಬರ್ ಖರೀದಿಸಿದರೆ ಒಟ್ಟು 30 ಸಾವಿರ ರೂಪಾಯಿ ಬೆನೆಫಿಟ್ಸ್ ಸಿಗಲಿದೆ. ಇದರಲ್ಲಿ 20 ಸಾವಿರ ರೂಪಾಯಿವರೆಗೆ ನಗದು ರಿಯಾಯ್ತಿ ಮತ್ತು ಎಕ್ಸ್‌ಚೇಂಜ್ ಲಾಭ 20 ಸಾವಿರ ರೂ.ವರೆಗೆ ಸಿಗಲಿದೆ. ಹಾಗೆಯೇ ಆಯ್ದ ಕೆಲವು ವೆರಿಯೆಂಟ್‌ಗಳ ಮೇಲೆ ನಿಮಗೆ 20 ಸಾವಿರ ರೂಪಾಯಿವರೆಗೂ ಲಾಯಲ್ಟಿ ಬೆನೆಫಿಟ್ಸ್ ಸಿಗಬಹುದು. 

ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ!

ಇನ್ನು  ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ರೆನೋ ಡಸ್ಟರ್ ಖರೀದಿ ಮೇಲೆ ನಿಮಗೆ 1.05 ಲಕ್ಷ ರೂ.ವರೆಗೂ ಲಾಭ ಸಿಗಲಿದೆ. 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಎಂಜಿನ್ ಡಸ್ಟರ್‌ಗೂ ಈ ಆಫರ್ ಅನ್ವಯವಾಗಲಿದೆ. 

1.3 ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಡಸ್ಟರ್ ಖರೀದಿ ಮೇಲೆ ನಿಮಗೆ ದೊರೆಯಲಿರುವ 1.05 ಲಕ್ಷ ರೂಪಾಯಿ ರಿಯಾಯ್ತಿಯಲ್ಲಿ ಎಕ್ಸ್‌ಚೇಂಜ್ 30 ಸಾವಿರ ರೂ.ವರೆಗೂ(ಆರ್‌ಎಕ್ಸ್‌ಜೆಡ್ ಮತ್ತು ಆರ್‌ಎಕ್ಸ್‌ಎಸ್ ವೆರಿಯೆಂಟ್ಸ್‌ಗೆ ಮಾತ್ರ) ಸಿಕ್ಕರೆ, ಲಾಯಲ್ಟಿ ಬೆನೆಫಿಟ್ಸ್ 15 ಸಾವಿರ ರೂ.ವರೆಗೆ ಮತ್ತು ನಗದು ರಿಯಾಯ್ತಿ 30 ಸಾವಿರ ರೂ.ವರೆಗೆ ಸಿಗಲಿದೆ. ಆದರೆ, ಈ ಡಿಸ್ಕೌಂಟ್ ನಿಮಗೆ ಆರ್‌ಎಕ್ಸ್‌ಎಸ್ ಸಿವಿಟಿ ಮತ್ತು ಎಂಟಿ ಮೇಲೆ ಮಾತ್ರ ದೊರೆಯಲಿದೆ. ಇದರ ಜೊತೆಗೆ ಕಾರ್ಪೊರೇಟ್ ಡಿಸ್ಕೌಂಟ್ ಕೂಡ 30 ಸಾವಿರ ರೂ.ವರೆಗೂ ಸಿಗಲಿದೆ.

ಇನ್ನು 1.5 ಪೆಟ್ರೋಲ್ ಎಂಜಿನ್ ಡಸ್ಟರ್ ಖರೀದಿ ಮೇಲೂ ಡಿಸ್ಕೌಂಟ್ ನೀಡಲಾಗುತ್ತಿದೆ. ಒಟ್ಟು 75 ಸಾವಿರ ರೂ.ವರೆಗೂ ಬೆನೆಫಿಟ್ಸ್ ಸಿಗಬಹುದು. ಇದರಲ್ಲಿ 30 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್ ಬೆನೆಫಿಟ್ಸ್ ಆಯ್ದ ವೆರಿಯೆಂಟ್‌ಗಳಿಗೆ ದೊರೆಯಲಿದೆ. ಇದರ ಜೊತೆಗೆ ಲಾಯಲ್ಟಿ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಕ್ರಮವಾಗಿ 15 ಸಾವಿರ ಮತ್ತು 30 ಸಾವಿರ ರೂಪಾಯಿವರೆಗೂ ಸಿಗಲಿದೆ.

ಸ್ವಿಫ್ಟ್ ನಾಗಾಲೋಟ ತಡೆಯೋರಿಲ್ಲ; ಟಾಪ್‌ 10 ಪಟ್ಟಿಯಲ್ಲಿ ಮಾರುತಿಯದ್ದೇ ಕಾರ್‌ಬಾರು

ರೆನೋ ಕಂಪನಿ ನೀಡುತ್ತಿರುವ ಈ ಆಫರ್‌ಗಳನ್ನು ಗಮನಿಸಿದರೆ ಗ್ರಾಹಕರಿಗೆ ಹೆಚ್ಚಿನ ಲಾಭ ಸಿಗುವಂತೆ ಕಾಣುತ್ತಿದೆ. ಯುಗಾದಿ ಹಬ್ಬಕ್ಕೆ ರೆನೋ ವಾಹನಗಳನ್ನು ಖರೀದಿಸಲು ಮುಂದಾಗಿದ್ದರೆ ಸಖತ್ ರಿಯಾಯ್ತಿಗಳೊಂದಿಗೆ ಕಾರನ್ ಮನೆಗೆ ಕೊಂಡೊಯ್ಯಬಹುದು. ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Follow Us:
Download App:
  • android
  • ios