Renault Car Discount ಜನವರಿ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದ ರೆನಾಲ್ಟ್, ಕಾರು ಖರೀದಿ ಈಗ ಸುಲಭ!
- ರೆನಾಲ್ಟ್ 4 ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ
- ನಗದು ಡಿಸ್ಕೌಂಟ್ ಹಾಗೂ ಇತರ ಬೋನಸ್ ಡಿಸ್ಕೌಂಟ್ ಪ್ರಕ
- ರೆನಾಲ್ಟ್ ಕ್ವಿಡ್, ಡಸ್ಟರ್ ಸೇರಿ ಎಲ್ಲಾ ರೆನಾಲ್ಟ್ ಕಾರುಗಳ ಮೇಲೆ ಡಿಸ್ಕೌಂಟ್
ನವದೆಹಲಿ(ಜ.10): ಕೊರೋನಾ ವೈರಸ್, ಆರ್ಥಿಕ ಹೊಡೆತ ಸೇರಿದಂತೆ ಹಲವು ಅಡೆತಡೆಗಳ ನಡುವೆ ರೆನಾಲ್ಟ್ ಇಂಡಿಯಾ ಕಳೆದ ವರ್ಷ ಉತ್ತಮ ಮಾರಾಟ ದಾಖಲೆ ಮಾಡಿದೆ. 2021ರ ಡಿಸೆಂಬರ್ ತಿಂಗಳಲ್ಲಿ ರೆನಾಲ್ಟ್ 6,130 ಕಾರುಗಳನ್ನು ಮಾರಾಟ ಮಾಡಿತ್ತು. ಇದೀಗ ಹೊಸ ವರ್ಷದಲ್ಲಿ ಮಾರಾಟ ದಾಖಲೆ(Car sales) ಉತ್ತಮಪಡಿಸಿಕೊಳ್ಳಲು ರೆನಾಲ್ಟ್ ಮುಂದಾಗಿದೆ. ಇದೀಗ ರೆನಾಲ್ಟ್ ಇಂಡಿಯಾ ಜನವರಿ 2022ರ ಡಿಸ್ಕೌಂಟ್ ಆಫರ್ ಘೋಷಿಸಿದೆ. ಭಾರತದಲ್ಲಿ ಲಭ್ಯವಿರುವ ಎಲ್ಲಾ ರೆನಾಲ್ಟ್ ಕಾರಿನ ಮೇಲೆ ಡಿಸ್ಕೌಂಟ್(Renault Car Discount offer) ನೀಡಲಾಗಿದೆ.
ಭಾರತದಲ್ಲಿ ರೆನಾಲ್ಟ್ 4 ಕಾರುಗಳು ಲಭ್ಯವಿದೆ. ರೆನಾಲ್ಟ್ ಡಸ್ಟರ್, ಟ್ರೈಬರ್, ಕ್ವಿಡ್ ಹಾಗೂ ಕಿಗರ್ ಕಾರುಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ನೆಟ್‌ವರ್ಕ್ ಬೆಳೆಸಿಕೊಂಡಿದೆ. ಇದೀಗ 4 ಕಾರಗಳ ಮೇಲೆ ಡಿಸ್ಕೌಂಡ್ ನೀಡಲಾಗಿದೆ. ಹೀಗಾಗಿ ಈ ತಿಂಗಳು ಕಾರು ಖರೀದಿ ಮತ್ತಷ್ಟು ಸುಲಭವಾಗಿದೆ.
Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?
ರೆನಾಲ್ಟ್ ಕ್ವಿಡ್:
ಭಾರತದಲ್ಲಿ ಸಣ್ಣ ಕಾರಿನ ಮೂಲಕ ರೆನಾಲ್ಟ್ ಕ್ವಿಡ್(Renault Kwid) ಭಾರಿ ಸಂಚಲನ ಮೂಡಿಸಿದೆ. ಮಾರುತಿ ಆಲ್ಟೋ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಕ್ವಿಡ್ ಕಾರು ಜನರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಇದೀಗ ರೆನಾಲ್ಟ್ ಕ್ವಿಡ್ ಕಾರಿಗೆ ಒಟ್ಟು 35,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್ ಹಾಗೂ ವಿಶೇಷ ರಿಯಾಯಿತಿ ಕೂಡ ಸೇರಿದೆ. ರೈತರ ಕ್ವಿಡ್ ಕಾರು ಖರೀದಿಸಲು ಮುಂದಾದರೆ ಅವರಿಗೆ ವಿಶೇಷ ರಿಯಾಯಿತಿ ಕೂಡ ಸಿಗಲಿದೆ. ರೆನಾಲ್ಟ್ ಕ್ವಿಡ್ ಕಾರಿನ ಬೆಲೆ 4.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಕ್ವಿಡ್ 21 ರಿಂದ 22 ಕಿಲೋಮೀಟರ್ ಮೈಲೇಜ್ ನೀಡಲಿದೆ.
ರೆನೋಗೆ 10 ವರ್ಷ: ಹೊಸ 2021 ಕ್ವಿಡ್ ಲಾಂಚ್, ವಿಶೇಷ ಆಫರ್ಸ್!
ರೆನಾಲ್ಡ್ ಕಿಗರ್:
ರೆನಾಲ್ಟ್ ಕಿಗರ್(Renault Kiger) ಕಾರಿಗೆ ಒಟ್ಟು 20,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಲಾಯಲ್ಟಿ ಬೋನಸ್ 10,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 10,000 ರೂಪಾಯಿ ಒಳಗೊಂಡಿದೆ. ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪೈಪೋಟಿ ನೀಡಲು ರೆನಾಲ್ಟ್ ಇತ್ತೀಚೆಗೆ ಕಿಗರ್ ಕಾರು ಬಿಡುಗಡೆ ಮಾಡಿದೆ. ರೆನಾಲ್ಟ್ ಕಾರುಗಳ ಪೈಕಿ ಕಳೆದ ತಿಂಗಳು ಕಿಗರ್ 2ನೇ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರೆನಾಲ್ಟ್ ಕಿಗರ್ ಕಾರಿನ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಕಿಗರ್ ಕಾರು ಬುಕ್ ಮಾಡಿದರೆ ಕಾಯುವಿಕೆ ಸಮಯ 6 ತಿಂಗಳಿಗೆ ಏರಿಕೆಯಾಗಿದೆ. 5.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಕಿಗರ್ ಆರಂಭಗೊಳ್ಳುತ್ತಿದೆ. ಕಡಿಮೆ ಬೆಲೆಯಲ್ಲಿ ಸಬ್ ಕಾಂಪಾಕ್ಟ್ SUV ಕಾರು ಖರೀದಿಸುವ ಅವಕಾಶ ಇದೀಗ ಈ ತಿಂಗಳು ಲಭ್ಯವಿದೆ.
ರೆನಾಲ್ಟ್ ಟ್ರೈಬರ್:
ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ MPV ಕಾರು ಅನ್ನೋ ಹೆಗ್ಗಳಿಕೆಗೆ ರೆನಾಲ್ಟ್ ಟ್ರೈಬರ್(Renault Triber) ಪಾತ್ರವಾಗಿದೆ. ರಾನಾಲ್ಟ್ ಟ್ರೈಬರ್ ಕಾರಿನ ಮೇಲೆ 40,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರಲ್ಲಿ ನಗದು ಡಿಸ್ಕೌಂಟ್, ಕಾರ್ಪೋರೇಟ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಸೇರಿವೆ. ರೈತರು ಟ್ರೈಬರ್ ಕಾರು ಖರೀದಿಸುವುದಾದದರೆ ವಿಶೇಷ ರಿಯಾಯಿತಿ ಸಿಗಲಿದೆ. ಇನ್ನು VIN 2021 ಮಾಡೆಲ್ ಟ್ರೈಬರ್ ಖರೀದಿಸಿದರೆ ಡಿಸ್ಕೌಂಟ್ ಆಫರ್ 30,000 ರೂಪಾಯಿ ನೀಡಲಾಗಿದೆ. ರೆನಾಲ್ಟ್ ಟ್ರೈಬರ್ 1.0 ಲೀಟರ್ ಎಂಜಿನ್ ಕಾರಿಗಿದೆ. ಇದರ ಬೆಲೆ 5.67 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತದೆ. ಒಂದು ಲೀಟರ್ ಪೆಟ್ರೋಲ್‌ಗೆ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟ್ರೈಬರ್ ಕಾರು ಮಾರುತಿ ಎರ್ಟಿಗಾ ಸೇರಿದಂತೆ ಸ್ಮಾಲ್ ಸೆಗ್ಮೆಂಟ್ MPV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ರೆನಾಲ್ಟ್ ಡಸ್ಟರ್:
ಭಾರತದಲ್ಲಿ ರೆನಾಲ್ಟ್ ಹೊಸ ಅಧ್ಯಾಯ ಆರಂಭವಾಗಿದ್ದು ರೆನಾಲ್ಟ್ ಡಸ್ಟರ್(renault Duster) ಕಾರಿನ ಮೂಲಕ. SUV ಕಾರಿಗೆ ಹೊಸ ರೂಪ ನೀಡಿದ ಡಸ್ಟರ್ ಭಾರತೀಯರ ಅಚ್ಚುಮೆಚ್ಚಿನ ಕಾರಾಗಿ ಹೊರಹೊಮ್ಮಿತ್ತು. ಡಸ್ಟರ್ ಕಾರಿಗೆ ಗರಿಷ್ಠ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಡಸ್ಟರ್ ಕಾರಿಗೆ 1.10 ಲಕ್ಷ ರೂಪಾಯಿ ರಿಯಾಯಾತಿ ನೀಡಲಾಗಿದೆ. ಇದು ಕ್ಯಾಶ್ ಡಿ್ಕೌಂಟ್, ಕಾರ್ಪೋರೇಟ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ ಇತರ ರಿಯಾಯಿತಿ ಒಳಗೊಂಡಿದೆ. ರೆನಾಲ್ಟ್ ಡಸ್ಟರ್ ಕಾರಿನ ಬೆಲೆ 9.86 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ.
ಸೂಚನೆ: ಕಾರಿನ ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯ, ನಗರ, ಪಟ್ಟಣಗಳಲ್ಲಿ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಬಳಿ ಸಂಪರ್ಕಿಸಿ ಖಚಿತಪಡಿಸಿ