Asianet Suvarna News Asianet Suvarna News

ಮಳೆಗೆ ಆಸರೆ ಹುಡುಕುತ್ತಿದ್ದ ನಾಯಿಗೆ ಕೊಡೆ ಹಿಡಿದ ಉದ್ಯೋಗಿ; ಹೃದಯಸ್ಪರ್ಶಿ ಘಟನೆ ಕೊಂಡಾಡಿದ ಟಾಟಾ!

  • ತಾಜ್ ಉದ್ಯೋಗಿಗೆ ಶಹಬ್ಬಾಷ್ ಎಂದ ರತನ್ ಟಾಟಾ
  • ಮಳೆಯಿಂದ ತೊಯ್ದ ನಾಯಿಗೆ ಆಸರೆಯಾದ ಉದ್ಯೋಗಿ
  • ಮುಂಬೈ ಮಹಾ ಮಳೆಗೆ ಆಸರೆ ಹುಡುಕುತ್ತಿದ್ದ ನಾಯಿಗೆ ನೆರವು
     
Ratan Tata share picture of taj employee shielding stray dog from rain goes viral ckm
Author
Bengaluru, First Published Sep 24, 2021, 7:28 PM IST
  • Facebook
  • Twitter
  • Whatsapp

ಮುಂಬೈ(ಸೆ.24): ಮಹಾ ಮಳೆ ದೇಶದ ಹಲವು ರಾಜ್ಯಗಳಿಗೆ ತೀವ್ರ ಹೊಡೆತ ನೀಡುತ್ತಿದೆ. ಅದರಲ್ಲೂ ಮುಂಬೈನಲ್ಲಿ(Mumbai) ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.  ಬೀದಿ ನಾಯಿಗಳ(Stray Dog) ಪಾಡು ಹೇಳತೀರದು. ಈ ವೇಳೆ ಮಳೆಯಿಂದ ಒದ್ದೆಯಾಗಿ ಆಸರೆ ಹುಡುಕುತ್ತಿದ್ದ ಬೀದಿ ನಾಯಿಗೆ ಆಸರೆ ನೀಡಿದ ಟಾಟಾ ಗ್ರೂಪ್ ಒಡೆತನದ ತಾಜ್ ಉದ್ಯೋಗಿ(Taj Employee) ಫೋಟೋ ವೈರಲ್ ಆಗಿದೆ. ಇದು ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ(Ratan Tata) ಕಣ್ಣಿಗೆ ಬಿದ್ದಿದೆ. ತಕ್ಷಣವೇ ಉದ್ಯೋಗಿಯ ವಿಶಾಲ ಮನಸ್ಸನ್ನು ರತನ್ ಟಾಟಾ ಕೊಂಡಾಡಿದ್ದಾರೆ.

ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!

ರತನ್ ಟಾಟಾಗೆ ನಾಯಿ ಮೇಲೆ ಎಲ್ಲಿಲ್ಲದ ಪ್ರೀತಿ. ಅವರ ಮನೆಯಲ್ಲಿ ಹಲವು ನಾಯಿಗಳಿವೆ. ಬೀದಿ ನಾಯಿಗಳನ್ನು ತಂದು ಆರೈಕೆ ಮಾಡುವ ಪರಿಪಾಠ ಹಿಂದಿನಿಂದಲೂ ಇದೆ. ಇದಕ್ಕಾಗಿ ರತನ್ ಟಾಟಾ ವಿಶೇಷ ಸಿಬ್ಬಂದಿಗಳನ್ನೇ ನೇಮಿಸಿಕೊಂಡಿದ್ದಾರೆ. ಹೀಗೆ ನಾಯಿ ಮೇಲೆ ವಿಶೇಷ ಪ್ರೀತಿ ಹೊಂದಿರುವ ರತನ್ ಟಾಟಾಗೆ ಮುಂಬೈನ ಸುರಿದ ಮಳೆಗೆ ಬೀದಿ ನಾಯಿಗೆ ಆಶ್ರಯ ನೀಡಿದ ವ್ಯಕ್ತಿಯ ಫೋಟೋ ಕಣ್ಣಿಗೆ ಬಿದ್ದಿದೆ. 

ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದುಬಂದ ಫೋಟೋದ ಹಿನ್ನಲೆ ತಿಳಿದುಕೊಂಡಾಗ ರತನ್ ಟಾಟಾ ಮತ್ತಷ್ಟು ರೋಮಾಂಚನಗೊಂಡಿದ್ದಾರೆ. ಕಾರಣ ತನ್ನದೇ ಕಂಪನಿ ತಾಜ್ ಸಿಬ್ಬಂದಿ ನಾಯಿಗೆ ಕೊಡೆ ಹಿಡಿದು ಆಶ್ರಯ ನೀಡಿದ ವ್ಯಕ್ತಿ ಎಂಬುದು ಗೊತ್ತಾಗಿದೆ. ರತನ್ ಟಾಟಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಉದ್ದೇಶ ಪೂರ್ವಕ ಕೊಲೆಗೆ ಸಮ; ಗರ್ಭಿಣಿ ಆನೆ ಕೊಂದ ಘಟನೆ ಖಂಡಿಸಿದ ರತನ್ ಟಾಟಾ!

ಮಳೆ ಸೀಸನ್‌ನಲ್ಲಿ(monsoon) ಬೀದಿ ನಾಯಿಗೆ ಆಶ್ರಯ ನೀಡುವುದು ಮೆಚ್ಚುಗೆ ವಿಚಾರ. ಮುಂಬೈನಲ್ಲಿ ಸುರಿದ ಮಳೆ ನಡುವೆ ತಾಜ್ ಉದ್ಯೋಗಿ ತನ್ನ ಕೊಡೆಯಲ್ಲಿ ನಾಯಿಗೆ ಆಶ್ರಯ ನೀಡಿರುವುದು ಆತನ ದಯೆ ತೋರುತ್ತಿದೆ. ಮುಂಬೈನ ಗದ್ದಲದ ನಡುವೆ ಸೆರೆಹಿಡಿದ ಹೃದಯಸ್ಪರ್ಶಿ ಕ್ಷಣ. ಈ ರೀತಿಯ ದಯೆ ಬೀದಿ ನಾಯಿಗಳ ಮೇಲಿದ್ದರೆ ಉತ್ತಮ ಎಂದು ರತನ್ ಟಾಟಾ ಬರೆದುಕೊಂಡಿದ್ದಾರೆ.

ರತನ್ ಟಾಟಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಬೆನ್ನಲ್ಲೇ ಹಲವರು ಪ್ರತಿಕ್ರಿಯಿಸಿದ್ದಾರೆ. ಚಿನ್ನದ ಹೃದಯ ಹೊಂದಿದ ವ್ಯಕ್ತಿ, ಟಾಟಾ ಎಲ್ಲಾ ಉದ್ಯೋಗಿಗಳು ಗುಡ್ ಬಾಯ್ಸ್ ಎಂದು  ಪ್ರತಿಕ್ರಿಯೆ ನೀಡಿದ್ದಾರೆ. ರತನ್ ಟಾಟಾ ಹಂಚಿಕೊಂಡ ಫೋಟೋ ವೈರಲ್ ಆಗಿದೆ.

ಮಾಜಿ ಉದ್ಯೋಗಿ ಆರೋಗ್ಯ ವಿಚಾರಿಸಲು 150 ಕಿ.ಮೀ ಪ್ರಯಾಣ, ಟಾಟಾ ಕಾಳಜಿಗೆ ನೆಟ್ಟಿಗರು ಫಿದಾ!

83 ವರ್ಷದ ಉದ್ಯಮಿ ರತನ್ ಟಾಟಾ ಮನೆಯಲ್ಲಿ ಹಲವು ನಾಯಿಗಳಿವೆ. ಬೀದಿಯಲ್ಲಿ ಸಿಕ್ಕ, ಗಾಯಗೊಂಡ ಹಲವು ನಾಯಿಗಳನ್ನು ಪಡೆದು ರತನ್ ಟಾಟಾ ಆರೈಕೆ ಮಾಡಿದ್ದಾರೆ. ಮುಂಬೈನಲ್ಲಿರುವ ಮನೆಯಲ್ಲಿ ರತನ್ ಟಾಟಾ ನೆಚ್ಚಿನ ನಾಯಿಗಳೆ ತುಂಬಿಕೊಂಡಿದೆ.

ಕಪ್ಪು ಹಾಗೂ ಬಳಿ ಬಣ್ಣದ ನಾಯಿಯೊಂದಕ್ಕೆ ರತನ್ ಟಾಟಾ ಗೋವಾ(Goa) ಎಂದು ಹೆಸರಿಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಬೀದಿ ನಾಯಿ ಮರಿ ಸಹದ್ಯೋಗಿಯಿಂದ ಪಡೆದಿದ್ದೇನೆ. ಆತನ ಕಾರು ಸೇರಿಕೊಂಡ ಈ ಕಾರು ಗೋವಾದಿಂದ ಮುಂಬೈಗೆ ಆಗಮಿಸಿದೆ. ಹೀಗಾಗಿ ಗೋವಾ ಎಂದು ಹೆಸರಿಟ್ಟಿದ್ದೇನೆ ಎಂದು ಕಳೆದ ವರ್ಷ ರತನ್ ಟಾಟಾ ಹೇಳಿಕೊಂಡಿದ್ದರು.

ಬೀದಿ ನಾಯಿಗಳು  ಮಾತ್ರವಲ್ಲ, ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ರತನ್ ಟಾಟಾ ಸದಾ ಧ್ವನಿ ಎತ್ತಿದ್ದಾರೆ. ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಅಂತ್ಯಹಾಡಲು ಶಾಶ್ವತ ಪರಿಹಾರ ಹಾಡಲು ಹಲವು ಬಾರಿ ರತನ್ ಟಾಟಾ ಸರ್ಕಾರಕ್ಕೆ ಸೂಚಿಸಿದ್ದಾರೆ. 2020ರಲ್ಲಿ ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಕೊಂದ ದುರುಳರ ವಿರುದ್ಧ ರತನ್ ಟಾಟಾ ಆಕ್ರೋಶ ಹೊರಹಾಕಿದ್ದರು. ತಕ್ಕ ಶಿಕ್ಷೆಗೆ ಆಗ್ರಹಿಸಿದ್ದರು. ಇದು ಉದ್ದೇಶಪೂರ್ವಕ ಕೊಲೆಗೆ ಸಮ ಎಂದು ಘಟನೆಯನ್ನು ಖಂಡಿಸಿದ್ದರು.

ಬೀದಿ ನಾಯಿಗಳನ್ನು ರಕ್ಷಿಸಲು 27ರ ಯುವಕ ಆವಿಷ್ಕರಿಸಿದ ಕಾಲರ್ ಪಟ್ಟಿಗೆ ರತನ್ ಟಾಟಾ ಮೆಚ್ಚುಗೆ ವ್ಯಕ್ತಪಡಿಸಿ ಆತನಿಗೆ ಭರ್ಜರಿ ಉಡುಗೊರೆ ನೀಡಿದ್ದರು. ಶಾಂತನು ನಾಯ್ದು ಬೀದಿ ನಾಯಿಗಳನ್ನು ಅಪಘಾತದಿಂದ ರಕ್ಷಿಸಲು ಕಾಲರ್ ಪಟ್ಟಿ ಆವಿಷ್ಕರಿಸಿದ್ದು. ಇದು ನಾಯಿ ಎಷ್ಟೇ ದೂರದಲ್ಲಿದ್ದರು ಚಾಲಕನಿಗೆ ಕಾಣಬೇಕು. ಈ ರೀತಿಯಾದ ಪಟ್ಟಿ ಆವಿಷ್ಕರಿಸಲಾಗಿತ್ತು. ಬೀದಿ ನಾಯಿ ಕುರಿತು ಕಾಳಜಿ ತೋರಿಸಿದ್ದ ಶಾಂತನು ಆವಿಷ್ಕಾರಕ್ಕೆ ಸಂಪೂರ್ಣ ಬಂಡವಾಳವನ್ನು ರತನ್ ಟಾಟಾ ಹಾಕಿ ಪ್ರೋತ್ಸಾಹಿಸಿದ್ದರು.

Follow Us:
Download App:
  • android
  • ios