ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರಿಗೆ ಭಾರಿ ಬೇಡಿಕೆ, ಬೆಂಗಳೂರಲ್ಲಿ 200 ಕೋಟಿ ರೂ ಆದಾಯ ನಿರೀಕ್ಷೆ!
ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೈಗೆಟುಕುವ ದರದಲ್ಲಿ ಬೆಂಜ್, ಆಡಿ, ರೋಲ್ಸ್ ರಾಯ್ಸ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಖರೀದಿಸಲು ಸಾಧ್ಯ. ಇದೀಗ ಬೆಂಗಳೂರಲ್ಲಿ 5ನೇ ಬಿಗ್ ಬಾಯ್ ಟಾಯ್ಸ್ ಶೋ ರೂಂ ಆರಂಭಗೊಂಡಿದೆ. ಬರೋಬ್ಬರಿ 200 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.
ಬೆಂಗಳೂರು(ಫೆ.14) ಪ್ರೀ ಒನ್ಡ್ ಲಕ್ಷುರಿ ಕಾರುಗಳತ್ತ ಜನ ವಾಲುತ್ತಿದ್ದಾರೆ. ಕೈಗೆಟುಕುವ ದರದಲ್ಲಿ ಐಷಾರಾಮಿ ಕಾರುಗಳು ಲಭ್ಯವಾಗುತ್ತಿದೆ. ಇದೀಗ ಪ್ರಿ-ಓನ್ಡ್ ಲಕ್ಷುರಿ ಕಾರು ವಲಯದ ಬಿಗ್ ಬಾಯ್ ಟಾಯ್ಜ್ ಬೆಂಗಳೂರಿನಲ್ಲಿ 5ನೇ ಶೋ ರೂಂ ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದಲ್ಲಿ 200 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ನೂತನ ಶೂ ರೂಂ ರಿಚ್ಮಂಡ್ ವೃತ್ತದ ಬಳಿ ಆರಂಭಗೊಂಡಿದೆ.
ಆಡಿ, ಬಿಎಂಡಬ್ಲ್ಯೂ, ಮರ್ಸಿಡಿಸ್-ಬೆಂಜ್, ಬೆಂಟ್ಲೀ, ರೋಲ್ಸ್-ರಾಯ್ಸ ಪೋರ್ಷೆ ಕಾರು ಸೇರಿದಂತೆ ಐಷಾರಾಮಿ ಪ್ರೀ ಒನ್ಡ್ ಕಾರುಗಳ ಅತೀ ದೊಡ್ಡ ಸಂಗ್ರಹವಿದೆ. ಕರ್ನಾಟಕದಲ್ಲಿ 100 ಕೋಟಿ ರೂಪಾಯಿ ಮೈಲಿಗಲ್ಲು ಸಾಧನೆ ಮಾಡಿರುವ ಬಿಗ್ ಬಾಯ್ಸ್ ಟಾಯ್ಸ್, ಡಿಜಿಟಲ್ ವ್ಯವಾಹರಕ್ಕೆ ಹೆಚ್ಚಿನ ಒತ್ತು ನೀಡಿದೆ. ಐಷಾರಾಮಿ ಕಾರು ಪ್ರಿಯರು ತಡೆರಹಿತ ವಹಿವಾಟುಗಳಿಗೆ ಬ್ರಾಂಡ್ ನ ಡಿಜಿಟಲ್ ಪ್ಲಾಟ್ ಅತೀ ಸೂಕ್ತವಾಗಿದೆ. ಸಾಂಪ್ರದಾಯಿಕವಾಗಿ ಅಸಂಘಟಿತವಾಗಿರುವ ಬೆಂಗಳೂರಿನ ಐಷಾರಾಮಿ ಕಾರು ವಲಯವು ಬಿಗ್ ಬಾಯ್ ಟಾಯ್ಜ್ ಗೆ ಚಿನ್ನದ ಗಣಿಯಾಗಿ ಹೊರಹೊಮ್ಮಿದ್ದು ಅಪಾರ ಪ್ರಗತಿ ಕಂಡಿದೆ.
Used Cars ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿ ಬೆಂಗಳೂರು ಮಹಿಳೆಯರೇ ನಂಬರ್ 1
ಕರ್ನಾಟಕದಿಂದಲೇ 2025ರ ಹಣಕಾಸು ವರ್ಷದಲ್ಲಿ 200 ಕೋಟಿ ರೂಪಾಯಿ ಮೈಲಿಗಲ್ಲು ದಾಟುವ ಗುರಿ ಹೊಂದಿದೆ. ಜೊತೆಗೆ ಗ್ರಾಹಕರಿಗೆ ಅತ್ಯುತ್ತಮ ಕಾರುಗಳನ್ನು ನೀಡುವ ಮೂಲಕ ಸೇವೆ ಒದಗಿಸಲಿದೆ. ಬಳಸಿದ ಕಾರುಗಳ ಸಂಪೂರ್ಣ ಚೆಕ್ ಅಪ್, ಎಂಜಿನ್‌ನಿಂದ ಹಿಡಿದು ಕಾರಿನ ಪ್ರತಿಯೊಂದು ವಿಚಾರವನ್ನು ಕೂಲಂಕುಷವಾಗಿ ಪರೀಶಿಲನೆ ನಡೆಸಿ ಗ್ರಾಹಕರಿಗೆ ನೀಡಲಾಗುತ್ತದೆ.
“ಬೆಂಗಳೂರಿನಲ್ಲಿ ನಮ್ಮ ಭೌತಿಕ ವ್ಯಾಪ್ತಿ ವಿಸ್ತರಿಸಲು ಬಹಳ ಸಂತೋಷ ಹೊಂದಿದ್ದೇವೆ. ಗ್ರಾಹಕ-ಕೇಂದ್ರಿತ ಪ್ರಿ-ಓನ್ಡ್ ಐಷಾರಾಮಿ ಕಾರು ಬ್ರಾಂಡ್ ಆಗಿ ನಾವು ನಮ್ಮ ಪ್ರಮುಖ ಮೌಲ್ಯಗಳು ಮತ್ತು ಬಾಂಧವ್ಯ ಆಧರಿಸಿದ ವಹಿವಾಟುಗಳು ಉನ್ನತ ಗುಣಮಟ್ಟದ ಭರವಸೆ ಹೊಂದಿವೆ ಎಂದು ಬಿಗ್ ಬಾಯ್ ಟಾಯ್ಜ್ ಸಂಸ್ಥಾಪಕ ಜತಿನ್ ಅಹುಜಾ ಹೇಳಿದ್ದಾರೆ. ಇದು ಭಾರತದಲ್ಲಿ ನಮ್ಮ ಐದನೇ ಮಳಿಗೆಯಾಗಿದೆ ಮತ್ತು ಕಾರು ಪ್ರಿಯರಿಗೆ 30 ವಿಶೇಷ ಬ್ರಾಂಡ್ ಗಳ ಮೂಲಕ ಅತ್ಯುತ್ತಮ ಐಷಾರಾಮಿ ಕಾರು ಅನುಭವ ನೀಡುವ ನಿರೀಕ್ಷೆಯಲ್ಲಿದ್ದೇವೆ. ವಿಸ್ತರಣೆಯು ಪರಿಪೂರ್ಣವಾಗಿ ಪ್ರಸ್ತುತದ ಉದ್ಯಮದ ಕ್ಷೇತ್ರಕ್ಕೂ ಪೂರಕವಾಗಿದೆ. ನಾವು ನಮ್ಮ ಸದೃಢ ತಳಹದಿಯನ್ನು ಹಾಗೂ ಕರ್ನಾಟಕದಿಂದಲೇ 2025ರಲ್ಲಿ 200 ಕೋಟಿ ರೂ.ಗಳ ಆದಾಯದ ಮೈಲಿಗಲ್ಲು ಸಾಧಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.
Used Cars sales ದೇಶದ ಸಣ್ಣ ನಗರ, ಪಟ್ಟಣಗಳಲ್ಲಿ ಬಳಸಿದ ಲಕ್ಷುರಿ ಕಾರುಗಳಿಗೆ ಭಾರಿ ಬೇಡಿಕೆ!