ಪ್ರವೈಗ್ ಎಲೆಕ್ಟ್ರಿಕ್ ಕಾರು ಇದೀಗ ವಿಶ್ವದಲ್ಲೇ ಸಂಚಲನ ಮೂಡಿಸಿದೆ. 500 ಕಿ.ಮೀ ಮೈಲೇಜ್ ರೇಂಜ್, ಟೆಸ್ಲಾ ಮಾಡೆಲ್ ಕಾರನ್ನೇ ಮೀರಿಸುವ ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿದೆ. ಇದೀಗ ಮತ್ತೊಂದು ಮಹತ್ವದ ಅಂಶವನ್ನು ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಬಹಿರಂಗ ಪಡಿಸಿದೆ.
ಬೆಂಗಳೂರು(ಡಿ.11): ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ನೆಕ್ಸಾನ್, ಹ್ಯುಂಡೋ ಕೋನಾ, ಎಂಜಿ ZS ಸೇರಿದಂತೆ ಕೆಲ ಕಾರುಗಳು ಭಾರತದಲ್ಲಿದೆ. ಇದೀಗ ಈ ಕಾರುಗಳನ್ನೇ ಮೀರಿಸುವ ಬೆಂಗಳೂರು ಮೂಲದ ಪ್ರವೈಗ್ ಎಲೆಕ್ಟ್ರಿಕ್ ಸೆಡಾನ್ ಕಾರು ಬಿಡುಗಡೆಗೆ ಸಜ್ಜಾಗಿದೆ.
500 KM ಮೈಲೇಜ್, ಸರಿಸಾಟಿ ಇಲ್ಲದ ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಅನಾವರಣ!
ಯಲಹಂಕದಲ್ಲಿರುವ ಪ್ರವೈಗ್ ಕಾರು ಕಂಪನಿ ಒಂದು ಸಂಪೂರ್ಣ ಚಾರ್ಜ್‌ಗೆ 504 ಕಿ.ಮೀ ಮೈಲೇಜ್ ನೀಡಲಿದೆ ಎಂದು ಪ್ರವೈಗ್ ಹೇಳಿದೆ. ಇದೀಗ ಮತ್ತೊಂದು ಮಹತ್ವದ ವಿಚಾರ ಬಹಿರಂಗ ಪಡಿಸಿದೆ. ಪ್ರವೈಗ್ ನೂತನ ಎಲೆಕ್ಟ್ರಿಕ್ ಕಾರು ಗರಿಷ್ಠ 5 ಸ್ಟಾರ್ ಸೇಫ್ಟಿ ನೀಡಲಿದೆ ಎಂದಿದೆ.
ಬಿಡುಗಡೆಯಾಗುತ್ತಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಕಾರು; ಟೆಸ್ಲಾಗೆ ಪೈಪೋಟಿ!...
ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಸುರಕ್ಷತೆ ವಿಚಾರದಲ್ಲಿ ನಾವು ರಾಜಿಯಾಗುವುದಿಲ್ಲ. ಗರಿಷ್ಠ ಸುರಕ್ಷತೆ 5 ಸ್ಟಾರ್ ರೇಟಿಂಗ್ ನೀಡಲಿದ್ದೇವೆ ಎಂದು ಪ್ರವೈಗ್ ಹೇಳಿದೆ. ಪ್ರವೈಗ್ ಇನ್ನೂ ಬಿಡುಗಡೆಯಾಗಿಲ್ಲ. ಗ್ಲೋಬಲ್ NCAP ಕ್ರಾಶ್ ಟೆಸ್ಟ್ ಅಧೀಕೃತವಾಗಿ ರಿಲಸ್ಟ್ ಬಿಡುಗಡೆ ಮಾಡಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 11, 2020, 7:56 PM IST