ಮೂವರ ಬಳಿ ಇದೆ ವಿಶ್ವದ ದುಬಾರಿ 232 ಕೋಟಿ ರೂ ಕಾರು: ಅಂಬಾನಿ, ಅದಾನಿ, ಟಾಟಾ ಅಲ್ಲ!
ವಿಶ್ವದ ಅತ್ಯಂತ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಬೋಟ್ ಟೈಲ್ ಕಾರು ಹೊಂದಿರುವ ಮಾಲೀಕರು ಯಾರು? ಬರೋಬ್ಬರಿ 232 ಕೋಟಿ ರೂಪಾಯಿ ಬೆಲೆಯ ಈ ಕಾರು ಮುಕೇಶ್ ಅಂಬಾನಿ, ರತನ್ ಟಾಟಾ, ಅದಾನಿ ಬಳಿಯೂ ಇಲ್ಲ. ಕೇವಲ ಮೂರೇ ಮೂರು ಮಂದಿಯಲ್ಲಿ ಈ ಕಾರಿದೆ.
ನವದೆಹಲಿ(ಅ.05) ಮುಕೇಶ್ ಅಂಬಾನಿ, ರತನ್ ಟಾಟಾ ಸೇರಿದಂತೆ ಭಾರತದ ಉದ್ಯಮಿಗಳಲ್ಲಿ ಅತೀ ದುಬಾರಿ ಕಾರುಗಳಿವೆ. ಈ ಪೈಕಿ ಮುಕೇಶ್ ಅಂಬಾನಿಯ ಆ್ಯಂಟಿಲಿಯಾದಲ್ಲಿ ಒಂಂದು ಸಂಪೂರ್ಣ ಮಹಡಿ ಕಾರು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಎಲ್ಲಾ ದುಬಾರಿ ಕಾರುಗಳು ಅಂಬಾನಿ ಬಳಿ ಇದೆ. ಆದರೆ ವಿಶ್ವದ ಅತೀ ದುಬಾರಿ ರೋಲ್ಸ್ ರಾಯ್ಸ್ ಬೋಟ್ ಟೈಲ್ ಕಾರು ಕೇವಲ ಮೂವರ ಬಳಿ ಮಾತ್ರ ಇದೆ. ಈ ಕಾರಿನ ಬೆಲೆ ಬರೋಬ್ಬರಿ 232ಕೋಟಿ ರೂಪಾಯಿ. ಈ ಕಾರು ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಬಳಿ ಇಲ್ಲ. ಇಷ್ಟೇ ಅಲ್ಲ ಎಲಾನ್ ಮಸ್ಕ್ ಸೇರಿದಂತೆ ಶ್ರೀಮಂತ ಉದ್ಯಮಿಗಳಿಗೂ ಈ ಕಾರು ಖರೀದಿಸಲು ಸಾಧ್ಯವಾಗಿಲ್ಲ.
ರೋಲ್ಸ್ ರಾಯ್ಸ್ ಬೋಟ್ ಟೈಲ್ ಕಾರು ಅತ್ಯಂತ ವಿಶೇಷ ಕಾರು. ಅತ್ಯಂತ ನಾಜೂಕಾಗಿ ಈ ಕಾರು ಉತ್ಪಾದಿಸಲಾಗಿದೆ. ಇದು ಸ್ಪೆಷಲ್ ಹಾಗೂ ಅತೀ ದುಬಾರಿ ಕಾರಾಗಿರುವ ಕಾರಣ ರೋಲ್ಸ್ ರಾಯ್ಸ್ ಕಂಪನಿ ಕೇವಲ ಮೂರೇ ಮೂರು ಕಾರುಗಳನ್ನು ಉತ್ಪಾದಿಸಿದೆ. ಈ ಮೂರು ಕಾರುಗಳು ಮಾರಾಟಗೊಂಡಿದೆ. ಈ ಮೂರು ಕಾರಿನಿಂದ ರೋಲ್ಸ್ ರಾಯ್ಸ್ ಗಳಿಸಿದ್ದು 696 ಕೋಟಿ ರೂಪಾಯಿ. ವಿಶ್ವದ ದುಬಾರಿ ಕಾರು ಹೊಂದಿದ ಮೂವರ ಪೈಕಿ ಇಬ್ಬರ ಹೆಸರು ಮಾತ್ರ ಬಹಿರಂಗಪಡಿಸಾಗಿದೆ. ಮತ್ತೊಬ್ಬ ಮಾಲೀಕರ ಹೆಸರನ್ನು ರೋಲ್ಸ್ ರಾಯ್ಸ್ ಗೌಪ್ಯವಾಗಿಟ್ಟಿದೆ.
ವಿಶ್ವದ ಅತ್ಯಂತ ದುಬಾರಿ, ರೋಮ್ಯಾಂಟಿಕ್ ಕಾರು, ರೋಲ್ಸ್ ರಾಯ್ಸ್ ಅರ್ಕಾಡಿಯಾ ಅನಾವರಣ!
ಶ್ರೀಮಂತ ರ್ಯಾಪರ್ ಜೆ ಝೆಡ್ ಹಾಗೂ ಆತನ ಪತ್ನಿ ಬಿಯಾನ್ಸ್ ಈ ರೋಲ್ಸ್ ರಾಯ್ಸ್ ಬೋಟ್ ಟೈಲ್ ಕಾರು ಖರೀದಿಸಿದ್ದಾರೆ. ಇನ್ನು ಶ್ರೀಮಂತ ವಜ್ರದ ವ್ಯಾಪಾರಿಕೂಡ ಈ ಕಾರು ಖರೀದಿಸಿದ್ದಾರೆ. ಆದರೆ ಈ ವಜ್ರದ ವ್ಯಾಪಾರಿ ಯಾರು ಅನ್ನೋದನ್ನು ರೋಲ್ಸ್ ರಾಯ್ಸ್ ಬಹಿರಂಗಪಡಿಸಿಲ್ಲ. ದುಬಾರಿ ಕಾರಿನ ಮೂರನೇ ಮಾಲೀಕರು ಅರ್ಜೈಂಟೀನಾದ ಫುಟ್ಬಾಲ್ ಪಟು ಮೌರೋ ಇಕಾರ್ಡಿ. ಸದ್ಯ ಮೌರೋ ಗಲಟ್ಯಾಸರೆ ತಂಡಕ್ಕಾಗಿ ಆಡತ್ತಿದ್ದಾರೆ.
ರೋಲ್ಸ್ ರಾಯ್ಸ್ ಈ ವಿಶೇಷ ಕಾರನ್ನು 1920-30ರ ವೇಳೆ ಜನಪ್ರಿಯವಾಗಿದ್ದ ಯಾಚ್ ಜೆ ಕ್ಲಾಸ್‌ನಿಂದ ಪ್ರೇರಿತಗೊಂಡಿದೆ. ಇಷ್ಟೇ ಅಲ್ಲ 1910ರ ಕಾರು ಡಿಸೈನ್ ಮೂಲವಾಗಿಟ್ಟು ಈ ಕಾರು ವಿನ್ಯಾಸಗೊಳಿಸಲಾಗಿದೆ. ಇದು ಕನ್ವರ್ಟೇಬಲ್ ಕಾರಾಗಿದೆ. ಇದರ ಡೆಕ್ ಚಿಟ್ಟೆಯ ರೀತಿ ತೆರೆದುಕೊಳ್ಳುತ್ತದೆ. ಕಸ್ಟಮ್ ಬಿಲ್ಟ್ ರೋಲ್ಸ್ ರಾಯ್ಸ್ ಬೋಟ್ ಟೈಲ್ ಕಾರು ಪ್ರತಿಷ್ಠೆ, ಶ್ರೀಮಂತಿಕೆಯ ಪ್ರತೀಕವಾಗಿ ಉತ್ಪಾದನೆ ಮಾಡಲಾಗಿದೆ. ಹೀಗಾಗಿ ಇದು ಲಿಮಿಟೆಡ್ ಎಡಿಶನ್. ಲಿಮಿಟೆಡ್ ಅಂದರೆ ಕೇವಲ ಮೂರೇ ಮೂರು ಕಾರು ಉತ್ಪಾದನೆ ಮಾಡಲಾಗಿದೆ. ಬಿಡುಗಡೆಯಾದ ಬೆನ್ನಲ್ಲೇ ಈ ಕಾರು ಸೋಲ್ಡ್ ಔಟ್ ಆಗಿದೆ. ಹಲವು ಶ್ರೀಮಂತರು ಈ ಕಾರು ಖರೀದಿಸಲು ಉತ್ಸುಕರಾಗಿದ್ದರು. ಆದರೆ ಸಿಗಲಿಲ್ಲ. ಮತ್ತೆ ಈ ಕಾರು ಉತ್ಪಾದಿಸುವ ಕುರಿತು ರೋಲ್ಸ್ ರಾಯ್ಸ್ ಯಾವುದೇ ಸುಳಿವು ನೀಡಿಲ್ಲ. ಸದ್ಯಕ್ಕೆ ಈ ಕಾರು ಉತ್ಪಾದಿಸಿ ಮಾರುಕಟ್ಟೆಗೆ ಬಿಡುವ ಸಾಧ್ಯತೆಗಳೂ ಇಲ್ಲ.
ಒಂದು ಕಾರಿನ ಬೆಲೆ 249 ಕೋಟಿ ರೂ, ಇಲ್ಲಿದೆ ವಿಶ್ವದ ಟಾಪ್ 10 ಅತ್ಯಂತ ದುಬಾರಿ ಕಾರು!
ಈ ವಿಶೇಷ ಕಾರು ಉತ್ಪಾದನೆಗೆ ಹಲವು ವರ್ಷಗಳನ್ನು ರೋಲ್ಸ್ ರಾಯ್ಸ್ ತೆಗೆದುಕೊಂಡಿದೆ. ಹೀಗಾಗಿ ಶೀಘ್ರದಲ್ಲೇ ಅಥಾವ ಕೆಲ ವರ್ಷಗಳಲ್ಲಿ ಈ ಕಾರು ಮತ್ತೆ ಉತ್ಪಾದನೆಗೊಳ್ಳುವ ಸಾಧ್ಯತೆಗಳಿಲ್ಲ.