Asianet Suvarna News Asianet Suvarna News

ಭರ್ಜರಿ ಡಿಸ್ಕೌಂಟ್ ಆಫರ್, ಮ್ಯಾಗ್ನೈಟ್ ಕಾರಿಗೆ 82 ಸಾವಿರ ರೂ ರಿಯಾಯಿತಿ ಘೋಷಿಸಿದ ನಿಸಾನ್!

2023ರಲ್ಲಿ ಬಹುತೇಕ ಕಾರುಗಳ ಬೆಲೆ ಏರಿಕೆಯಾಗಿದೆ. ಇದರ ನಡುವೆ ನಿಸಾನ್ ತನ್ನ ಮ್ಯಾಗ್ನೈಟ್ ಕಾರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಬರೋಬ್ಬರಿ 82,000 ಬೆನಿಫಿಟ್ ಹಾಗೂ 3 ವರ್ಷದ ಗೋಲ್ಡ್ ಪ್ಯಾಕ್ ಸರ್ವೀಸ್ ಆಫರ್ ಕೂಡ ನೀಡಿದೆ. ಆಫರ್ ವಿವರ ಇಲ್ಲಿದೆ.

Nissan announces rs 82000 discount and benefit offers to Magnite SUV cars in India ckm
Author
First Published Feb 8, 2023, 9:04 PM IST

ನವದೆಹಲಿ(ಫೆ.08): ಸಬ್ ಕಾಂಪಾಕ್ಚ್ SUV ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಇದು ಕೈಗೆಟುಕವ ದರದಲ್ಲಿ ಲಭ್ಯವಿರುವ SUV ಕಾರಾಗಿದೆ. ಮ್ಯಾಗ್ನೈಟ್ ಕಾರಿನ ಬೆಲೆ 5.97 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ನಿಸಾನ್ ಮ್ಯಾಗ್ನೈಟ್ ಬರೋಬ್ಬರಿ 82,000 ರೂಪಾಯಿ ಆಫರ್ ಹಾಗೂ ಬೆನಿಫಿಟ್ ಘೋಷಿಸಿದೆ. ಇದರ ಜೊತೆಗೆ 2022ರ ಮಾಡೆಲ್ ಕಾರಿಗೆ 3 ವರ್ಷದ ಗೋಲ್ಡ್ ಪ್ಯಾಕ್ ಸರ್ವೀಸ್ ನೀಡಿದರೆ 2023ರ ಮಾಡೆಲ್ ಕಾರಿಗೆ 2  ವರ್ಷದ ಗೋಲ್ಡ್ ಪ್ಯಾಕ್ ಸರ್ವೀಸ್ ಆಫರ್ ಘೋಷಿಸಿದೆ. 

ನಿಸಾನ್ ಡಿಸ್ಕೌಂಟ್ ಹಾಗೂ ಬೆನಿಫಿಟ್ ಆಫರ್‌ನಲ್ಲಿ 20,000 ರೂಪಾಯಿ ಎಕ್ಸ್‌ಜೇಂಚ್ ಬೋನಸ್ ಒಳಗೊಂಡಿದೆ. ಇದರ ಜೊತೆಗೆ 12,000 ರೂಪಾಯಿ ಆ್ಯಕ್ಸಸರಿ ಆಫರ್, ಕಾರ್ಪೋರೇಟ್ ಉದ್ಯೋಗಿಗಳಿಗೆ 15,000 ರೂಪಾಯಿ ಹೆಚ್ಚುವರಿ ಡಿಸ್ಕೌಂಟ್ ಆಫರ್, ಇದರ ಜೊತೆಗೆ ಲಾಯಲ್ಟಿ ಬೋನಸ್ 10,000 ರೂಪಾಯಿ ಒಳಗೊಂಡಿದೆ. ಇದರ ಜೊತೆಗೆ 2 ವರ್ಷದ ಅವಧಿಗೆ ಶೇಕಡಾ 6.99ರ ಬಡ್ಡಿ ದರದಲ್ಲಿ ಕಾರು ಸಾಲ ಸೌಲಭ್ಯ ಕೂಡ ಒದಗಿಸಿದೆ.

Union Budget 2023 ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!

ಭಾರತದಲ್ಲಿ ಕಡಿಮೆ ಬೆಲೆಯ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಮೊದಲ ಸ್ಥಾನದಲ್ಲಿದೆ. ಎರಡೂ ಕಾರುಗಳು ಕೈಗೆಟುಕವ ದರದಲ್ಲಿ ಕಾರು ನೀಡುತ್ತಿದೆ. ಇದೀಗ ನಿಸಾನ್ ಮ್ಯಾಗ್ನೈಟ್ ಮತ್ತಷ್ಟು ಡಿಸ್ಕೌಂಟ್ ಆಫರ್ ನೀಡುವ ಮೂಲಕ ಹೊಸ ಅಧ್ಯಾಯ ಆರಂಭಿಸಲು ಮುಂದಾಗಿದೆ.  ಹೊಸ ವರ್ಷದಲ್ಲಿ ಕಾರು ಖರೀದಿ ಮತ್ತಷ್ಟು ಸುಲಭವಾಗಿಸಲು ನಿಸಾನ್ ಮುಂದಾಗಿದೆ. ಈ ಮೂಲಕ SUV ಮಾರಾಟದಲ್ಲಿ ಮತ್ತಷ್ಟು ವೇಗ ಕಂಡುಕೊಳ್ಳು ಪ್ಲಾನ್ ಮಾಡಿದೆ. ಈ ಆಫರ್ ಡೀಲರ್‌ನಿಂದ ಡೀಲರ್‌ಗೆ, ನಗರದಿಂದ ನಗರಕ್ಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹತ್ತಿರದ ಡೀಲರ್ ಬಳಿ ಆಫರ್ ಕುರಿತು ಖಚಿತಪಡಿಸಿಕೊಳ್ಳಿ. 

ನಿಸಾನ್ ಮ್ಯಾಗ್ನೈಟ್ ಹಲವು ಫೀಚರ್ಸ್ ಹೊಂದಿದೆ. ಎಕ್ಸ್‌-ಟ್ರಾನಿಕ್‌ ಸಿವಿಟಿ, ಕ್ರೂಸ್‌ ಕಂಟ್ರೋಲ್‌, 360 ಡಿಗ್ರಿ ಅರೌಂಡ್‌ ವ್ಯೂವ್‌ ಮಾನಿಟರ್‌ ಮತ್ತು ನಿಸಾನ್‌ ಕನೆಕ್ಟ್ ನಂತಹ ಫೀಚರ್‌ಗಳಿವೆ. ವೆಬ್‌ಸೈಟ್‌ ಮೂಲಕ ವರ್ಚುವಲ್‌ ಟೆಸ್ಟ್‌ ಡ್ರೈವ್‌ ಮಾಡುವ ಅವಕಾಶವೂ ಇದೆ. ಬೋಲ್ಡ್‌, ಬ್ಯೂಟಿಫುಲ್‌  ಲುಕ್‌ನ ಎಸ್‌ಯುವಿ  ಇದಾಗಿದೆ.  18.75 ಕಿಮೀ ಮೈಲೇಜ್‌ ನೀಡಲಿದ್ದು, 999 ಸಿಸಿ ಎಂಜಿನ್‌ ಹೊಂದಿದೆ. ಮ್ಯಾನ್ಯುವಲ್‌ ಟ್ರಾನ್ಸ್‌ಮಿಶನ್‌ನ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಈ ಕಾರಿನಲ್ಲಿ 5 ಮಂದಿ ಆರಾಮಾಗಿ ಪ್ರಯಾಣಿಸಬಹುದಾಗಿದೆ. 1.0 ಲೀಟರ್‌ ಎಂಜಿನ್‌ ಹೊಂದಿದೆ.

50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು!

ಇನ್‌ಫೋಟೇನ್‌ಮೆಂಟ್‌ 8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕಣ್ಣಿಗೂ ಬಳಕೆಗೂ ಹಿತಕರವಾಗಿದೆ. 360 ಡಿಗ್ರಿ ಕ್ಯಾಮೆರಾ ಹೊಂದಿದೆ. 1.0 ಲೀ ಸಾಮರ್ಥ್ಯದ ಟರ್ಬೋ ಇಂಜಿನ್‌ ಪರ್ಫಾಮೆನ್ಸ್ ಉತ್ತಮವಾಗಿದೆ.  ಪಿಕಪ್‌ ಉತ್ತಮವಾಗಿದೆ. 205 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿರುವ ಈ ಕಾರು ನೈಜ SUV ಡ್ರೈವ್ ಅನುಭವ ನೀಡಲಿದೆ. ಜಪಾನ್‌ನಲ್ಲಿ ಈ ಕಾರಿನ ವಿನ್ಯಾಸ ಮಾಡಲಾಗಿದೆ. 

Follow Us:
Download App:
  • android
  • ios