ನಿಸ್ಸಾನ್ ಮ್ಯಾಗ್ನೈಟ್ ಕಾರಿಗೆ ಗಣರಾಜ್ಯೋತ್ಸವ ಆಫರ್, ಭಾರಿ ರಿಯಾಯಿತಿ ಘೋಷಣೆ

ಗಣರಾಜ್ಯೋತ್ಸವ ಸಮೀಪಿಸುತ್ತಿದೆ. ಇದರ ಹಿನ್ನಲೆಯಲ್ಲಿ ನಿಸ್ಸಾನ್ ತನ್ನ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಬೋಲ್ಡ್ ಫಾರ್ ದಿ ಬ್ರೇವ್ ಅಡಿಯಲ್ಲಿ ಹೊಸ ಆಫರ್ ಘೋಷಿಸಲಾಗಿದೆ. ಎಷ್ಟು ಡಿಸ್ಕೌಂಟ್ ನೀಡಲಾಗಿದೆ, ಯಾರಿಗೆಲ್ಲಾ ಈ ಆಫರ್ ಸಿಗಲಿದೆ? 

Nissan announces discounts offers to Indian Army Police personal on Magnite car

ನವದೆಹಲಿ(ಜ.14) ನಿಸ್ಸಾನ್ ಇಂಡಿಯಾ ಭಾರತದಲ್ಲಿ ಮ್ಯಾಗ್ನೈಟ್ ಸೇರಿದಂತೆ ಹಲವು ಕಾರುಗಳ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ನಿಸ್ಸಾನ್ ಗಣರಾಜ್ಯೋತ್ಸವದ ಪ್ರಯುಕ್ತ ಡಿಸ್ಕೌಂಟ್ ಆಫರ್ ಘೋಷಿಸಿದೆ. ರಕ್ಷಣಾ ಪಡೆ (ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ), ಕೇಂದ್ರ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವದ ಪ್ರಯುಕ್ತ 'ಬೋಲ್ಡ್ ಫಾರ್ ದಿ ಬ್ರೇವ್ ಅಭಿಯಾನದಡಿ ಭಾರಿ ಡಿಸ್ಕೌಂಟ್ ನೀಡಿದೆ. ಗರಿಷ್ಠ ಮಾರಾಟವಾಗುತ್ತಿರುವ ಮ್ಯಾಗ್ನೈಟ್ ಮೇಲೆ ಅತೀ ಹೆಚ್ಚು ರಿಯಾಯಿತಿ ನೀಡಲಾಗಿದೆ. 

ಸಿಎಸ್‌ಡಿ ಎಎಫ್‌ಡಿ ಪೋರ್ಟಲ್ (www.afd.csdindia.gov.in) ಮೂಲಕ ಎಸ್‌ಯುವಿ ಅನ್ನು ಬುಕ್ ಮಾಡಬಹುದಾಗಿದ್ದು, ಈ ವೇಳೆ ಸಿಎಸ್‌ಡಿ ಲಭ್ಯವಿರುವ ಲಾಭಾಂಶ ಮತ್ತು ತೆರಿಗೆ ಪ್ರಯೋಜನವನ್ನು ಪಡೆಯಬಹುದು. ನಿಸ್ಸಾನ್ ಭಾರತದಾದ್ಯಂತ ಇರುವ ಕೇಂದ್ರ ಅರೆಸೈನಿಕ ಮತ್ತು ರಾಜ್ಯ ಪೊಲೀಸ್ ಪಡೆಗಳ ಎಲ್ಲಾ ಸಿಬ್ಬಂದಿಗೆ ಈ ಪ್ರಯೋಜನಗಳನ್ನು ಒದಗಿಸುತ್ತಿದೆ.

ಮಕರ ಸಂಕ್ರಾಂತಿ ಸ್ಪರ್ಧೆಯಲ್ಲಿ ಮಹೀಂದ್ರ ಥಾರ್, ಎನ್‌ಫೀಲ್ಡ್ ಬೈಕ್ ಗೆಲ್ಲುವ ಅವಕಾಶ

2020ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ನಿಸ್ಸಾನ್ ಮ್ಯಾಗ್ನೈಟ್ ನ ಒಟ್ಟು 1.5 ಲಕ್ಷ ಯುನಿಟ್‌ ಗಳು ಮಾರಾಟವಾಗಿದ್ದು ಭಾರಿ ಜನಪ್ರಿಯತೆ ಗಳಿಸಿದೆ. 2024ರ ಅಕ್ಟೋಬರ್ ನಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆ ಆದಾಗಿನಿಂದ 10,000ಕ್ಕೂ ಹೆಚ್ಚು ಬುಕಿಂಗ್‌ ಆಗಿರುವುದು ವಿಶೇಷವಾಗಿದೆ.

ನಿಸಾನ್ ಮ್ಯಾಗ್ನೈಟ್ ಕಾರಿನ ಎಕ್ಸ್ ಶೋ ರೂಂ ಬೆಲೆ
ಎಂಟಿ ವಿಸಿಯಾ: 5,99,400 ರೂಪಾಯಿ
ಎಂಟಿ ಅಸೆಂಟಾ: 7,14,000 ರೂಪಾಯಿ
ಎಂಟಿ ಎನ್- ಕನೆಕ್ಟಾ: 7,86,000ರೂಪಾಯಿ 
ಎಂಟಿ ಟೆಕ್ನಾ: 8,75,000ರೂಪಾಯಿ

ಕೇವಲ 5.99 ಲಕ್ಷ ರೂಗೆ ಕಾರು ಕನಸು ನನಸಾಗಿಸಿ, ಹೊಸ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಬಿಡುಗಡೆ

ಭಾರತೀಯ ಸಶಸ್ತ್ರ ಪಡೆಗಳಿಗಾಗಿ ನಿಗದಿಗೊಳಿಸಿರುವ ಸಿಎಸ್‌ಡಿ ಎಕ್ಸ್-ಶೋರೂಂ ಬೆಲೆ ಹೀಗಿವೆ:
ಎಂಟಿ ವಿಸಿಯಾ: 5,27,244 ರೂಪಾಯಿ
ಎಂಟಿ ಅಸೆಂಟಾ:  6,29,072 ರೂಪಾಯಿ
ಎಂಟಿ ಎನ್- ಕನೆಕ್ಟಾ:  6,93,776 ರೂಪಾಯಿ
ಎಂಟಿ ಟೆಕ್ನಾ : 7,73,667 ರೂಪಾಯಿ

ಕೇಂದ್ರ ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ಎಕ್ಸ್ ಶೋರೂಂ ಬೆಲೆ ಹೀಗಿವೆ:
ಎಂಟಿ ವಿಸಿಯಾ: 5,88,100ರೂಪಾಯಿ
ಎಂಟಿ ಅಸೆಂಟಾ:  6,94,500ರೂಪಾಯಿ
ಎಂಟಿ ಎನ್- ಕನೆಕ್ಟಾ: 7,63,000  ರೂಪಾಯಿ 
ಎಂಟಿ ಟೆಕ್ನಾ:   8,52,000 ರೂಪಾಯಿ

ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳು, ಕೇಂದ್ರ ಅರೆಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ಭಾರಿ ರಿಯಾಯಿತಿ ದರದಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಒದಗಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು  ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸಾ ಹೇಳಿದ್ದಾರೆ. ರಾಷ್ಟ್ರವನ್ನು ರಕ್ಷಿಸುವ ಯೋಧರ ಬದ್ಧತೆ, ದೇಶಪ್ರೇಮ ಮತ್ತು ತ್ಯಾಗಕ್ಕೆ ಇದು ನಾವು ಸಲ್ಲಿಸುತ್ತಿರುವ ಗೌರವ ಮತ್ತು ಕೃತಜ್ಞತೆ ಎಂದಿದ್ದಾರೆ.
 

Latest Videos
Follow Us:
Download App:
  • android
  • ios