Upcoming Car ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿ, ಶೀಘ್ರದಲ್ಲಿ MG ZS ಫೇಸ್‌ಲಿಫ್ಟ್ ಇವಿ ಬಿಡುಗಡೆ!

  • ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ ಟಾಟಾ ನೆಕ್ಸಾನ್ ಇವಿ
  • ನೆಕ್ಸಾನ್ ಪ್ರತಿಸ್ಪರ್ಧಿಯಾಗಿ ಎಂಜಿ ಮೋಟಾರ್ ಎಲೆಕ್ಟ್ರಿಕ್ ಕಾರು
  • ಸದ್ಯ ಮಾರುಕಟ್ಟೆಯಲ್ಲಿರುವ MG ZS ಕಾರಿನ ಮಿನಿ  ವರ್ಶನ್
MG Motors plan to launch ZS Facelift EV rival of Tata Nexon Electric car ckm

ನವದೆಹಲಿ(ಜ.15);  ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Car) ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಸದ್ಯ ಕೈಗೆಟುಕುವ ಬೆಲೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು(Tata Electric Cars) ಲಭ್ಯವಿದೆ. ಟಾಟಾ ನೆಕ್ಸಾನ್ ಇವಿ ಅತೀ ಹೆಚ್ಚು ಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಸದ್ಯ ನೆಕ್ಸಾನ್ ಇವಿ ಕಾರಿಗೆ ಭಾರತದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಲ್ಲಿ. ಈಗಾಗಲೇ ಎಂಜಿ ಮೋಟಾರ್ಸ್ ಘೋಷಿಸಿದ ಪ್ರಕಾರ ಎಂಜಿ ZS ಫೆಸ್‌ಲಿಫ್ಟ್(MG ZS Facelift EV) ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಟಾಟಾ ನೆಕ್ಸಾನ್‌ಗೆ ಪೈಪೋಟಿ ನೀಡಲು ರೆಡಿಯಾಗಿದೆ.

ಎಂಜಿ ಮೋಟಾರ್ಸ್(MG Motors) 2020ರಿಂದ ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರು ಮಾರಾಟ ಮಾಡುತ್ತಿದೆ. 2020ರಲ್ಲಿ ಬಿಡುಗಡೆಯಾದ ZS ಎಲೆಕ್ಟ್ರಿಕ್ ಕಾರು ಹ್ಯುಂಡೈ ಕೋನಾಗೆ(hyundai Kona) ಪ್ರತಿಸ್ಪರ್ಧಿಯಾಗಿದೆ. ಮಾರುಕಟ್ಟೆಯಲ್ಲಿರುವ ZS ಎಲೆಕ್ಟ್ರಿಕ್ ಕಾರಿನ ಬೆಲೆ 21.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಆದರೆ ದುಬಾರಿ ಬೆಲೆ ಕಾರಣ ZS ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹೀಗಾಗಿ ಇದೀಗ ಇದೇ ZS ಎಲೆಕ್ಟ್ರಿಕ್ ಕಾರಿನ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಲು ಎಂಜಿ ಮೋಟಾರ್ಸ್ ರೆಡಿಯಾಗಿದೆ. ಈ ಕಾರು ಟಾಟಾ ನೆಕ್ಸಾನ್‌ಗೆ (Tata Nexon EV)ನೇರ ಪ್ರತಿಸ್ಪರ್ಧಿ ಅನ್ನೋ ಮಾತುಗಳು ಕೇಳಿಬಂದಿದೆ.

Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!

ಎಂಜಿ ಮೋಟಾರ್ಸ್ ZS ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟ್(Road Test) ವೇಳೆ ಕಾಣಿಸಿಕೊಂಡಿದೆ. 2021ರಲ್ಲಿ ಎಂಜಿ ಮೋಟಾ್ರ್ಸ್ 10 ಲಕ್ಷ ರೂಪಾಯಿ ಒಳಗಿನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ ಎಂಜಿ ZS ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ಕಾರು 15 ರಿಂದ 18 ಲಕ್ಷ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಭಾರತದ ಮಾರುಕಟ್ಟೆಗೆ(Indin Market) ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. 

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಟಾಟಾ ಮೋಟಾರ್ಸ್(Tata Motors) ಆಳುತ್ತಿದೆ. ಇದೀಗ ಹ್ಯುಂಡೈ, ಎಂಜಿ ಮೋಟಾರ್ಸ್ ಸೇರಿದಂತೆ ಇತರ ಆಟೋ ಕಂಪನಿಗಳು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿದೆ. ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆಗೆ ಮುಂದಾಗಿದೆ. ಎಂಜಿ ಮೋಟಾರ್ಸ್ 10 ಲಕ್ಷ ರೂಪಾಯಿ ಎಲೆಕ್ಟ್ರಿಕ್ ಕಾರುಗಳು 2022ರ ಅಂತ್ಯ ಅಥವಾ 2023ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಮುಂದುವರಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಟಾಟಾ ನೆಕ್ಸಾನ್ 400 ಪ್ಲಸ್ ಮೈಲೇಜ್ ರೇಂಜ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ನೀಡಲಿದೆ. ಇದೇ ನೆಕ್ಸಾನ್ ಕಾರನ್ನು 400ಕ್ಕಿಂತ ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರಾಗಿ ಅಭಿವೃದ್ಧಿಪಡಿಸಲಾಗಿದೆ. 

ಬರುತ್ತಿದೆ ಕಿಯಾ ಸೋಲ್ ಎಲೆಕ್ಟ್ರಿಕ್ ಕಾರು: ಹ್ಯುಂಡೈ ಕೋನಾ, MG Zs ಕಾರಿಗೆ ಪೈಪೋಟಿ!

ಇದರ ಜೊತೆಗೆ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಇದು ದೇಶದ ಮೊದಲ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು 400 ಕ್ಕಿಂತ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ಟಾಟಾ ಹೇಳಿದೆ. ಇಷ್ಟೇ ಅಲ್ಲ ಇದರ ಬೆಲೆ 10 ಲಕ್ಷ ರೂಪಾಯಿ ಅಂದಾಜು ಎಂದು ಹೇಳಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ನೀಡುವ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿ 12 ರಿಂದ 15 ಲಕ್ಷ ರೂಪಾಯಿ ಒಳಗಡೆ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಭ್ಯವಿದೆ.

Latest Videos
Follow Us:
Download App:
  • android
  • ios