ಎಂಜಿ ಮೋಟಾರ್ಸ್‌, ಜೆಎಸ್‌ಡಬ್ಲ್ಯೂನ ಹೊಸ ಎಲೆಕ್ಟ್ರಿಕ್‌ ಕಾರು ಬಿಡುಗಡೆ

ಎಂಜಿ ಮೋಟಾರ್, ಜೆಎಸ್‌ಡಬ್ಲ್ಯೂ ಗ್ರೂಪ್ ಜಂಟಿಯಾಗಿ ಜೆಎಸ್‌ಡಬ್ಲ್ಯೂ ಎಂಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಪ್ರಾರಂಭಿಸಿದ್ದು,  ಸೈಬರ್‌ ಸ್ಟಾರ್‌ ಕಾರು ಅನಾವರಣ. 2030ಕ್ಕೆ 1 ಮಿಲಿಯನ್ ಇವಿ ವಾಹನ ಗುರಿ. ಭಾರತದಲ್ಲಿ ಪರಿಸರ ಸ್ನೇಹಿ ಇವಿ ವಾಹನಗಳ ಹೆಚ್ಚಳದ ಗುರಿ

MG Motor, JSW unveil electric sports car Cyberster gow

ಗೋಪಾಲ ಪುರುಷೋತ್ತಮ

ಮುಂಬೈ (ಮಾ.22): ಎಂಜಿ ಮೋಟಾರ್, ಜೆಎಸ್‌ಡಬ್ಲ್ಯೂ ಗ್ರೂಪ್ ಜಂಟಿಯಾಗಿ ಜೆಎಸ್‌ಡಬ್ಲ್ಯೂ ಎಂಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಪ್ರಾರಂಭಿಸಿದ್ದು, ಭಾರತದಲ್ಲಿ 2030ರ ವೇಳೆಗೆ 1 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದೇವೆ ಎಂದು ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಧ್ಯಕ್ಷ ಸಜ್ಜನ್ ಜಿಂದಾಲ್ ತಿಳಿಸಿದ್ದಾರೆ.

ಇಲ್ಲಿನ ವರ್ಲಿಯಲ್ಲಿ ಆಯೋಜಿಸಿದ್ದ ಡ್ರೈವ್ ಫ್ಯೂಚರ್ ಕಾರ್ಯಕ್ರಮದಲ್ಲಿ ಎಂಜಿ ಮೋಟಾರ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ ಜಂಟಿಯಾಗಿ ತಯಾರಿಸಿ ತಮ್ಮ ಮೊದಲ ಇವಿ ಸ್ಪೋರ್ಟ್ಸ್ ಕಾರ್ ‘ಸೈಬರ್ ಸ್ಟಾರ್’ ಅನ್ನು ಅನಾವರಣಗೊಳಿಸಿ ಮಾತನಾಡಿದರು.

ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು, ಪಿಕ್‌ಅಪ್ ಬಿಡುಗಡೆ ಸಜ್ಜಾದ ಫೋರ್ಡ್!

ನಾವು ಎಂಜಿ ಮತ್ತು ಚೀನಾದ ಎಸ್ಎಐಸಿಯೊಂದಿಗೆ ಜೊತೆಯಾಗಿದ್ದು, ಪ್ರಪಂಚದ ಹೊಸ ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿ, ಕಡಿಮೆ ತೂಕ ಹೊಂದಿರುವ ಕಾರುಗಳನ್ನು ತಯಾರಿಸಲಿದ್ದೇವೆ. ಭಾರತದಲ್ಲಿ ಇವಿ ವಲಯವನ್ನು ಹೆಚ್ಚಿಸಲು ಇದು ನಮ್ಮ ಮೊದಲ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿ ಅವರ ಆತ್ಮನಿರ್ಭಾರ ಭಾರತ ಕನಸು ನನಸು ಮಾಡಲು ಇದರಿಂದ ಸಾಧ್ಯವಾಗುತ್ತದೆ. ಇದರಿಂದ ಹೆಚ್ಚಿನ ಕೌಶಲ್ಯಭರಿತ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದರು.

ಮಾರುತಿ ಸುಜುಕಿ ಹೇಗೆ 40 ವರ್ಷದಿಂದ ಕಡಿಮೆ ದರದಲ್ಲಿ ಗ್ರಾಹಕರಿಗೆ ಕಾರುಗಳನ್ನು ನೀಡುತ್ತಿದೆಯೋ ಅದೇ ತರ ನಮ್ಮ ಕಂಪನಿಯ ಕಾರುಗಳನ್ನು ತಯಾರಿಸಲಿದ್ದೇವೆ ಎಂದರು.

ಅನಿಲ್ ಅಂಬಾನಿ ದಿವಾಳಿಯಾದ್ರೂ, ಕಿರಿಯ ಮಗನ ಕಾರು ಶೋಕಿಗೇನು ಕಮ್ಮಿ ಇಲ್ಲ!

ಭಾರತದ ಎಂಜಿ ಮೋಟಾರ್‌ನ‌ ನಿರ್ದೇಶಕ ರಾಜೀವ್ ಚಾಬಾ ಮಾತನಾಡಿ, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು 5000 ಕೋಟಿ ರು.ಗಳನ್ನು ಹೂಡಿಕೆ ಮಾಡುತ್ತಿದೆ. ಪ್ರತಿ 3-6 ತಿಂಗಳಿಗೆ ಹೊಸ ರೀತಿಯ ಒಂದೊಂದು ಕಾರನ್ನು ಲಾಂಚ್ ಮಾಡುತ್ತೇವೆ. ಇದರಿಂದ ಎಂಜಿ 2.0 ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದ್ದೇವೆ ಎಂದರು.

ಈ ಕಂಪನಿಯನ್ನು ಗುಜರಾತಿನ ಹಲೋಲ್‌ನಲ್ಲಿ ಪ್ರಾರಂಭಿಸಲಿದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸಲಿದೆ. ಉತ್ಪಾದನಾ ಸಾಮರ್ಥ್ಯ ಪ್ರಸ್ತುತ 1 ಲಕ್ಷವಿದ್ದು, ವಾರ್ಷಿಕವಾಗಿ 3 ಲಕ್ಷಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

ಎಂಜಿ 2.0 ಅಧ್ಯಾಯ

- ಎಂಜಿ ಮೋಟರ್‌ ಕಂಪನಿಯೊಂದಿಗೆ ಜೆಎಸ್‌ಡಬ್ಲ್ಯೂ ಗ್ರೂಪ್‌ ಜೊತೆ

- ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ

- ಭಾರತದಲ್ಲಿ ಇವಿ ವೆಹಿಕಲ್‌ ತಯಾರಿಕೆ

- ಅತ್ಯುನ್ನತ ತಂತ್ರಜ್ಞಾನ ಬಳಕೆ

- 5000 ಕೋಟಿ ಬಂಡವಾಳ ಹೂಡಿಕೆ

- ವರ್ಷಕ್ಕೆ 1 ಲಕ್ಷದಿಂದ 3 ಲಕ್ಷದ ವರೆಗೆ ಉತ್ಪಾದನಾ ಪ್ರಮಾಣ ಏರಿಕೆ

ಮುಂಬೈನ ವರ್ಲಿಯಲ್ಲಿ ನಡೆದ ಡ್ರೈವ್‌ ಪ್ಯೂಚರ್‌ ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಕಂಪನಿ ತಯಾರಿಸಿದ ಸೈಬರ್‌ಸ್ಟಾರ್‌ ಎಂಬ ಹೊಸ ಸ್ಪೋರ್ಟ್‌ ಕಾರನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಎಂಜಿ ಮೋಟಾರ್‌ನ‌ ನಿರ್ದೇಶಕ ರಾಜೀವ್ ಚಾಬಾ, ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಧ್ಯಕ್ಷ ಸಜ್ಜನ್ ಜಿಂದಾಲ್, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದ ಸ್ಟೀರಿಂಗ್‌ ಸಮಿತಿ ಸದಸ್ಯ ಪಾರ್ಥ್‌ ಜಿಂದಾಲ್‌ ಇದ್ದರು.

ನಮ್ಮ ಕಂಪನಿಯಲ್ಲಿ ಪ್ರಾಥಮಿಕವಾಗಿ ಪ್ರೀಮಿಯಮ್‌ ಪ್ಯಾಸೆಂಜರ್‌ಗಳಿಗೆ ಇವಿ ಕಾರುಗಳನ್ನು ತಯಾರಿಸುವ ಯೋಜನೆಗಳಿದ್ದು, ಮುಂದೆ ಮಧ್ಯಮ ವರ್ಗದ ಗ್ರಾಹಕರಿಗೆ ಹಾಗೂ ವಾಣಿಜ್ಯ ವಾಹನಗಳ ತಯಾರಿಕೆಗೆ ಯೋಜನೆ ರೂಪಿಸಲಿದ್ದೇವೆ ಎಂದು ಹೇಳಿದರು.

ಜೆಎಸ್‌ಡಬ್ಲ್ಯೂ- ಎಂಜಿ ಮೋಟಾರ್ ಇಂಡಿಯಾದ ಸಮನ್ವಯ ಸಮಿತಿ ಸದಸ್ಯ ಪಾರ್ಥ್‌ ಜಿಂದಾಲ್‌ ಮಾತನಾಡಿ, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಉದ್ಯಮವು ಒಂದು ಮಹತ್ವದ ಜಂಟಿ ಉದ್ಯಮವಾಗಿದೆ. ನಾವು ಜಪಾನ್‌, ಚೀನಾ ಕೊರಿಯಾ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿ ನ್ಯೂ ಎನರ್ಜಿ ವೆಹಿಕಲ್‌ (ಎನ್‌ಇವಿ) ತಯಾರು ಮಾಡಲಿದ್ದೇವೆ. ಇದರಿಂದ ವಿಶ್ವದರ್ಜೆಯ ಕಾರುಗಳನ್ನು ನೀಡಲು ನಮಗೆ ಸಾಧ್ಯವಾಗುತ್ತದೆ ಎಂದರು.

Latest Videos
Follow Us:
Download App:
  • android
  • ios