Asianet Suvarna News Asianet Suvarna News

ಬಿರ್ಲಾ ಕುಟುಂಬ ಅಲ್ಲ, ಭಾರತದಲ್ಲಿ ಮೊದಲು ಕಾರು ಕಾರ್ಖಾನೆ ಸ್ಥಾಪಿಸಿದ್ದು ಇವರೇ ನೋಡಿ!

ಇವರು ಅಪ್ಪಟ ಭಾರತೀಯ ಪ್ರತಿಭೆ ಮತ್ತು ಕೈಗಾರಿಕೋದ್ಯಮಿ . ಇವರು ಭಾರತದ ಮೊದಲ ಕಾರು ಕಾರ್ಖಾನೆಯನ್ನು ಸ್ಥಾಪಿಸಿದರು. ಭಾರತದ ಸಾರಿಗೆಯ ಪಿತಾಮಹ ಎಂದೇ ಕರೆಯುತ್ತಾರೆ

Meet Indian genius Walchand Hirachand Doshi who built first car factory in India gow
Author
First Published Jun 29, 2024, 6:03 PM IST

ಕುಟುಂಬ ವ್ಯವಹಾರವನ್ನು ಬಿಟ್ಟು ಬೇರೆ ದಾರಿಯನ್ನು ಆರಿಸಿಕೊಂಡ  ಹಲವಾರು ಶ್ರೇಷ್ಠ ವ್ಯಕ್ತಿಗಳನ್ನು ಭಾರತ ಕಂಡಿದೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬ ಭಾರತೀಯ ಪ್ರತಿಭೆ ಮತ್ತು ಕೈಗಾರಿಕೋದ್ಯಮಿ ವಾಲ್‌ಚಂದ್ ಹಿರಾಚಂದ್ ದೋಷಿ ಕೂಡ ಒಬ್ಬರು. ಇವರು ಭಾರತದ ಮೊದಲ ಕಾರು ಕಾರ್ಖಾನೆಯನ್ನು ಸ್ಥಾಪಿಸಿದರು.  ಭಾರತದ ಮೊದಲ ಆಧುನಿಕ ಹಡಗುಕಟ್ಟೆ , ಮೊದಲ ವಿಮಾನ ಕಾರ್ಖಾನೆ. ಕಬ್ಬಿನ ತೋಟಗಳು, ಸಕ್ಕರೆ ಕಾರ್ಖಾನೆಗಳು, ಮಿಠಾಯಿಗಳು, ಎಂಜಿನಿಯರಿಂಗ್ ಕಂಪನಿಗಳು ಮತ್ತು ಇತರ ಅನೇಕ ವ್ಯವಹಾರಗಳನ್ನು ಇವರು ಸ್ಥಾಪಿಸಿದ್ದು, ಅವರು ವಾಲ್‌ಚಂದ್ ಗ್ರೂಪ್‌ನ ಸ್ಥಾಪಕರಾಗಿದ್ದರು. ಇವರನ್ನು 'ಭಾರತದ ಸಾರಿಗೆಯ ಪಿತಾಮಹ' ಎಂದು ಕರೆಯಲಾಗುತ್ತದೆ.

1882 ರಲ್ಲಿ  ಮಹಾರಾಷ್ಟ್ರ ಶೋಲಾಪುರದಲ್ಲಿ  ಪ್ರಸಿದ್ಧ ಕುಟುಂಬದಲ್ಲಿ ಜನಿಸಿದ ಹೀರಾಚಂದ್ ಆರಂಭದಲ್ಲಿ ಹತ್ತಿ ವ್ಯಾಪಾರ ಮತ್ತು ಬಡ್ಡಿ ವ್ಯವಹಾರ ನಡೆಸುತ್ತಿದ್ದರು. 1899 ರಲ್ಲಿ ಸೊಲ್ಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್, ಮುಂಬೈ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದರು.

ಹಾಲಿವುಡ್ ನಲ್ಲಿ ಭೀಕರ ಹತ್ಯೆ, 8 ತಿಂಗಳ ಗರ್ಭಿಣಿ ನಟಿಯನ್ನು 16 ಬಾರಿ ಇರಿದು, ನೇತು ಹಾಕಿದ ಹಂತಕರು!

ಕುಟುಂಬ ವ್ಯವಹಾರದಲ್ಲಿ ತೊಡಗಿದ್ದ ಅವರು ಬಳಿಕ ತನ್ನ ಕುಟುಂಬದ ವ್ಯವಹಾರ ಸರಿಹೊಂದುತ್ತಿಲ್ಲ ಎಂದು ತ್ಯಜಿಸಿ. ಮಾಜಿ ರೈಲ್ವೇ ಕ್ಲರ್ಕ್ ಸಹಭಾಗಿತ್ವದಲ್ಲಿ  ರೈಲ್ವೆ ಗುತ್ತಿಗೆದಾರರಾದರು. ಅಂದಿನ ಕಾಲದ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು. ಸಕ್ಕರೆ ಮತ್ತು ಜವಳಿ ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು ಮತ್ತು ರಾಸಾಯನಿಕ ಸ್ಥಾವರಗಳಂತಹ ಹಲವಾರು ಇತರ ಕೈಗಾರಿಕಾ ಯೋಜನೆಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಭಾರತದ ಮೊದಲ ವಿಮಾನ ತಯಾರಿಕಾ ಕಂಪನಿ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್ (HAL) ಅನ್ನು ಸ್ಥಾಪಿಸಿದರು.

1939 ರಲ್ಲಿ, ವಾಲ್‌ಚಂದ್ ಭಾರತದಲ್ಲಿ ಕಾರ್ ಕಾರ್ಖಾನೆಯನ್ನು ಸ್ಥಾಪಿಸಲು ಆಸಕ್ತಿ ಹೊಂದಿದ್ದರು. ಬಿರ್ಲಾ ಕುಟುಂಬ ಕೂಡ ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು. ಹಲವು ಅಡೆತಡೆಗಳ ನಂತರ 1945 ರಲ್ಲಿ, ಅವರು ಮುಂಬೈ ಬಳಿ ಪ್ರೀಮಿಯರ್ ಆಟೋಮೊಬೈಲ್ಸ್ (premier automobiles limited) ಅನ್ನು ಸ್ಥಾಪಿಸಿದರು. (ಈಗ ಇದು ಪ್ರೀಮಿಯರ್ ಲಿಮಿಟೆಡ್ ಆಗಿದೆ) ಹಲವು ಪಾಲುದಾರರ ಜೊತೆಗೆ 1949 ರಲ್ಲಿ ಮೊದಲ ಕಾರು ಕಾರ್ಖಾನೆಯಿಂದ ಹೊರಬಂದಿತು. ಹೀಗಾಗಿ ಬಿರ್ಲಾ ಅವರ ಹಿಂದೂಸ್ತಾನ್ ಮೋಟಾರ್ಸ್ (Hindustan Motors Limited ) ಸಾಹಸವನ್ನು ಹಿಂದಿಕ್ಕಿದರು. 1955 ರಲ್ಲಿ, ಇದು ಫಿಯೆಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು ಮತ್ತು ಭಾರತದಲ್ಲಿ ಎಂಜಿನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. 1956 ರ ಹೊತ್ತಿಗೆ, ಚಾಸಿಸ್ನ ಭಾಗಗಳನ್ನು ಸ್ಥಳೀಯವಾಗಿ ತಯಾರಿಸುವ ಮಟ್ಟಕ್ಕೆ ಬೆಳೆಯಿತು.

ಕ್ರಿಕೆಟಿಗ ಶಮಿ ಜೊತೆ ಮದುವೆ ಎಂಬ ಸುದ್ದಿ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಸಾನಿಯಾ!

1947 ರ ಹೊತ್ತಿಗೆ, ವಾಲ್‌ಚಂದ್ ಗ್ರೂಪ್ ಆಫ್ ಕಂಪನಿಗಳು ದೇಶದ 10 ದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿತ್ತು. ಅವರು 1949 ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ಅವರು 1950 ರಲ್ಲಿ ವ್ಯಾಪಾರದಿಂದ ನಿವೃತ್ತರಾದರು ಮತ್ತು ಅವರ ಕೊನೆಯ ವರ್ಷಗಳಲ್ಲಿ ಅವರ ಎರಡನೇ ಪತ್ನಿ ಕಸ್ತೂರ್ ಮೆಹ್ತಾ ಅವರು ಉದ್ಯಮಿಯನ್ನು ನೋಡಿಕೊಳ್ಳುತ್ತಿದ್ದರು. 1900 ರಲ್ಲಿ ಮೊದಲ ಪತ್ನಿಯ ಕೈಹಿಡಿದರು. ಚತುರ್ ಎಂಬ ಮಗಳನ್ನು ಹೊಂದಿ  ಹೆರಿಗೆಯಲ್ಲಿ ನಿಧನರಾದರು. 1913 ರಲ್ಲಿ ಕುಟುಂಬದವರ ಒತ್ತಾಯಕ್ಕೆ ಕಸ್ತೂರ್ ಮೆಹ್ತಾ ಅವರನ್ನು ವಿವಾಹವಾದರು. ಎರಡನೇ ಮದುವೆಯಿಂದ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದರು.  ಆದರೆ ಇಬ್ಬರೂ ಶೈಶವಾವಸ್ಥೆಯಲ್ಲಿ ನಿಧನರಾದರು.   ಹೀರಾಚಂದ್ 8 ಏಪ್ರಿಲ್ 1953 ರಂದು ಗುಜರಾತ್‌ನ ಸಿದ್ಧಪುರದಲ್ಲಿ ನಿಧನರಾದರು.

ವಾಲ್‌ಚಂದ್ ಹೀರಾಚಂದ್ ಯಾವುದೇ ವಾರಸುದಾರರಿಲ್ಲದೆ ಮರಣಹೊಂದಿದ್ದರಿಂದ, ಅವರ ವ್ಯವಹಾರವನ್ನು ಈಗ ಅವರ ಸಹೋದರರಾದ ಗುಲಾಬ್‌ಚಂದ್ ಹೀರಾಚಂದ್ , ಲಾಲ್‌ಚಂದ್ ಹೀರಾಚಂದ್ , ರತನ್‌ಚಂದ್ ಹಿರಾಚಂದ್ ಮುಂತಾದವರ ವಂಶಸ್ಥರು ನಡೆಸುತ್ತಿದ್ದಾರೆ , ಅವರು ಜೀವಂತವಾಗಿರದವರೆಗೂ ಒಟ್ಟಿಗೆ ಕೆಲಸ ಮಾಡಿದರು.

Latest Videos
Follow Us:
Download App:
  • android
  • ios