Asianet Suvarna News Asianet Suvarna News

ಹಾಲಿವುಡ್ ನಲ್ಲಿ ಭೀಕರ ಹತ್ಯೆ, 8 ತಿಂಗಳ ಗರ್ಭಿಣಿ ನಟಿಯನ್ನು 16 ಬಾರಿ ಇರಿದು, ನೇತು ಹಾಕಿದ ಹಂತಕರು!

ಹಾಲಿವುಡ್ ನಟಿ ಶರೋನ್ ಟೇಟ್ ಭೀಕರ ಹತ್ಯೆ. 8 ತಿಂಗಳ ಗರ್ಭಿಣಿಯನ್ನು 16 ಬಾರಿ ಚುಚ್ಚಿ ಕೊಂದ ಹಂತಕರು. 

Hollywood most successful actressSharon Marie Tate  was stabbed death when she pregnant gow
Author
First Published Jun 29, 2024, 3:45 PM IST

ಹಾಲಿವುಡ್ ನಟಿ ಶರೋನ್ ಟೇಟ್ ತನ್ನ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಗಸ್ಟ್ 8, 1969 ರಂದು, USನ ಲಾಸ್ ಏಂಜಲೀಸ್‌ನಲ್ಲಿ ಆಚರಿಸುತ್ತಿದ್ದರು. ಆದರೆ, ಆ ರಾತ್ರಿ ನಡೆದ ಘಟನೆ ಹಾಲಿವುಡ್ ಮಾತ್ರವಲ್ಲದೆ ಜಗತ್ತನ್ನೇ ಬೆಚ್ಚಿಬೀಳಿಸಿತು. ತಮ್ಮ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಖ್ಯಾತ ನಟಿ ಶರೋನ್ ಟೇಟ್ ಮತ್ತು ಇತರ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಕೊಲೆಯು ಎಷ್ಟು  ಭಯಾನಕವಾಗಿತ್ತೆಂದರೆ. ಹತ್ಯೆ ನಡೆದ  ಸ್ಥಳವನ್ನು ನೋಡಿದ ಎಲ್ಲರೂ ಭಯಭೀತರಾಗಿದ್ದರು. ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ರಕ್ತದೋಕುಳಿಯಾಗಿತ್ತು. ರಕ್ತ ನೀರಿನಂತೆ ಹರಿದು ಹೋಗುತ್ತಿತ್ತು. ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. 

26 ವರ್ಷದ ಶರೋನ್ ಟೇಟ್ ಆ ಸಮಯದಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯನ್ನು ದುಷ್ಕರ್ಮಿಗಳು 16 ಬಾರಿ ಇರಿದು ಅರೆ ಜೀವದಲ್ಲಿದ್ದ ಆಕೆಯನ್ನು ನೇಣಿಗೆ ಹಾಕಲಾಗಿತ್ತು.

ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡೇಟಿಂಗ್ ನೆನಪಿಸಿದ ಭಾರತೀಯರು!

ಹಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾದ ಶರೋನ್ ಟೇಟ್ ಅವರು 'ಐ ಆಫ್ ದಿ ಇವಿಲ್', 'ದಿ ಫಿಯರ್‌ಲೆಸ್ ವ್ಯಾಂಪೈರ್ ಕಿಲ್ಲರ್ಸ್' ಮತ್ತು 'ವ್ಯಾಲಿ ಆಫ್ ದಿ ಡಾಲ್ಸ್' ಮುಂತಾದ ಚಿತ್ರಗಳ ಭಾಗವಾಗಿದ್ದರು. ಅವರು 1968 ರಲ್ಲಿ ನಟ ಮತ್ತು ನಿರ್ದೇಶಕ ರೋಮನ್ ಪೋಲನ್ಸ್ಕಿ ಅವರನ್ನು ವಿವಾಹವಾದರು.  1968 ರ ಅಂತ್ಯದ ವೇಳೆಗೆ ಗರ್ಭಿಣಿಯಾದರು. ಶರೋನ್ ಟೇಟ್ ಮತ್ತು ಪೋಲನ್ಸ್ಕಿ ಶೀಘ್ರದಲ್ಲೇ ಲಾಸ್ ಏಂಜಲೀಸ್‌ನ ಬೆನೆಡಿಕ್ಟ್ ಕ್ಯಾನ್ಯನ್‌ನಲ್ಲಿರುವ 10050 ಅಡಿಯ ಸಿಯೆಲೊ ಡ್ರೈವ್‌ಗೆ ತೆರಳಿದರು, ಇದನ್ನು ಮೊದಲು ಅವರ ಸ್ನೇಹಿತರಾದ ಟೆರ್ರಿ ಮೆಲ್ಚರ್ ಮತ್ತು ಕ್ಯಾಂಡಿಸ್ ಬರ್ಗೆನ್ ಆಕ್ರಮಿಸಿಕೊಂಡಿದ್ದರು.

ಶರೋನ್ ಟೇಟ್ ಮಗು ಹೆರಲು ಡಾಕ್ಟರ್  ಆಗಸ್ಟ್ 12, 1969 ರಂದು ದಿನಾಂಕ ನೀಡಲಾಗಿತ್ತು.  ಹೀಗಾಗಿ ಹೆರಿಗೆಗೆ ಕೆಲವು ದಿನಗಳ ಮೊದಲು, ಅವಳು ತನ್ನ ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸಿದ್ದಳು, ಅಲ್ಲಿ ನಟಿ ತನ್ನ ಗರ್ಭಾವಸ್ಥೆಯಲ್ಲಿ ತನ್ನ ಗಂಡನ ಅನುಪಸ್ಥಿತಿಯಿಂದ ಹೇಗೆ ಅಸಮಾಧಾನಗೊಂಡಿದ್ದೆ ಕಷ್ಟವಾಯ್ತು ಎಂಬುದನ್ನು ಬಹಿರಂಗಪಡಿಸಿದಳು.

ಅನಂತ್-ರಾಧಿಕಾ ಅದ್ಧೂರಿ ಮದುವೆಗೂ ಮುನ್ನ ಮುಖೇಶ್ -ನೀತಾ ಅಂಬಾನಿಯಿಂದ ಮಗನಿಗೆ ಮತ್ತೊಂದು ಸಪ್ರೈಸ್!

ಅದೇ ದಿನ ಸಂಜೆ, ಆಗಸ್ಟ್ 8 ರಂದು, ಶರೋನ್ ಟೇಟ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಳು, ಆದರೆ ಮಧ್ಯರಾತ್ರಿಯ ನಂತರ, ಸೆಬ್ರಿಂಗ್, ಫ್ರೈಕೋವ್ಸ್ಕಿ, ಫೋಲ್ಗರ್ ಮತ್ತು ಟೇಟ್ ಮತ್ತು ಅವಳ ಹುಟ್ಟಲಿರುವ ಮಗುವನ್ನು ಮ್ಯಾನ್ಸನ್ ಕುಟುಂಬದ ಸದಸ್ಯರು ಕೊಲೆ ಮಾಡಿದರು. ಮೃತ ದೇಹಗಳನ್ನು ಮರುದಿನ ಬೆಳಿಗ್ಗೆ ಶರೋನ್ ಟೇಟ್ ಅವರ ಮನೆಗೆಲಸಗಾರ ವಿನಿಫ್ರೆಡ್ ಚಾಪ್ಮನ್ ನೋಡಿದ. ಪೊಲೀಸರು ಬಂದ ನಂತರ, ಮನೆಯೊಳಗಿನ ದೃಶ್ಯವು ಭಯಾನಕವಾಗಿತ್ತು. ಇದು ಯಾವುದೇ ಹಾರರ್ ಸಿನೆಮಾದ ಹೊರತಾಗಿರಲಿಲ್ಲ. 

ಶರೋನ್ ಟೇಟ್ ಮತ್ತು ಆಕೆಯ ಸ್ನೇಹಿತ ಸೆಬ್ರಿಂಗ್ ಅವರ ಕುತ್ತಿಗೆಗೆ ಉದ್ದವಾದ ಹಗ್ಗವನ್ನು ಕಟ್ಟಿಕೊಂಡು ಲಿವಿಂಗ್ ರೂಮಿನಲ್ಲಿ ಮರದ ಬೀಬ್‌ ಮೇಲೆ ನೇತಾಡುತ್ತಿರುವುದನ್ನು ಪೊಲೀಸರು ಕಂಡರು. ಮಿಕ್ಕ ಇಬ್ಬರು ಸ್ನೇಹಿತರ ಶವಗಳು ಮುಂಭಾಗದ ಹುಲ್ಲುಹಾಸಿನ ಮೇಲೆ ಕಂಡುಬಂತು. ತನಿಖೆ ವರದಿಯಲ್ಲಿ ಶರೋನ್ ಟೇಟ್ ಗೆ 16 ಬಾರಿ ಇರಿಯಲಾಗಿದ್ದು, ಐದು ಗಾಯಗಳು ಮಾರಣಾಂತಿಕವಾಗಿವೆ ಎಂದು ಬಹಿರಂಗಪಡಿಸಿತು.

ಭಯಾನಕ ಎಂದರೆ ಶರೋನ್ ಟೇಟ್  ಹಗ್ಗದಿಂದ ನೇಣಿನ ಕುಣಿಕೆಗೆ ಹಾಕುವಾಗ ಇನ್ನೂ ಜೀವಂತವಾಗಿದ್ದಳು, ಆದರೆ ಯಥೇಚ್ಚವಾದ ರಕ್ತಸ್ರಾವದಿಂದ ತಕ್ಷಣವೇ ಸತ್ತಳು. ಮನೆಯ ಪ್ರವೇಶದ್ವಾರದಲ್ಲಿ, ಮುಂಭಾಗದ ಬಾಗಿಲಿನ ಪಕ್ಕದಲ್ಲಿ, ಶರೋನ್ ಟೇಟ್ ಅವರ ರಕ್ತದಲ್ಲಿ "ಪಿಐಜಿ" ಎಂಬ ಪದವನ್ನು ಬರೆಯಲಾಗಿತ್ತು

ಸೆಪ್ಟೆಂಬರ್ 1969 ರಲ್ಲಿ, ಮ್ಯಾನ್ಸನ್  ಕುಟುಂಬದ ಸದಸ್ಯರನ್ನು ಕೊಲೆ ಕೇಸಲ್ಲಿ ಬಂಧಿಸಲಾಯಿತು. ಮ್ಯಾನ್ಸನ್  ಕುಟುಂಬವನ್ನು ಚಾರ್ಲ್ಸ್ ಮ್ಯಾನ್ಸನ್ ಎಂಬಾತ ನಡೆಸುತ್ತಿದ್ದ ಈತ ಒಬ್ಬ ಅಮೇರಿಕನ್ ಕ್ರಿಮಿನಲ್, ಆರಾಧನಾ ನಾಯಕ ಮತ್ತು ಸಂಗೀತಗಾರ, ಕುಟುಂಬವು ಕ್ಯಾಲಿಫೋರ್ನಿಯಾದಲ್ಲಿ ಆರಾಧನೆಯನ್ನು ನಡೆಸುತ್ತಿತ್ತು. 

ಹತ್ಯೆಯ ಉದ್ದೇಶವನ್ನು ವಿವರಿಸಿದ ಕೊಲೆಗಾರರು, ಬಲಿಪಶುಗಳು ಯಾರೆಂಬುದರ ಬಗ್ಗೆ ಅಲ್ಲ, ಬದಲಿಗೆ ಆ ವಿಳಾಸದಲ್ಲಿರುವ ಮನೆಯ ಬಗ್ಗೆ ಹೇಳಿದರು. ಇದನ್ನು ಹಿಂದೆ ಮ್ಯಾನ್ಸನ್‌ನ ಪರಿಚಯಸ್ಥ ರೆಕಾರ್ಡ್ ನಿರ್ಮಾಪಕ ಟೆರ್ರಿ ಮೆಲ್ಚರ್‌ಗೆ ಬಾಡಿಗೆಗೆ ನೀಡಲಾಗಿತ್ತು. ನಾವು ಜಗತ್ತನ್ನು ಬೆಚ್ಚಿಬೀಳಿಸುವ ಅಪರಾಧವನ್ನು ಮಾಡಲು ಬಯಸಿದ್ದೇವೆ, ಜಗತ್ತು ಎದ್ದುನಿಂತು ಗಮನಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು ಮ್ಯಾನ್ಸನ್ ಕುಟುಂಬ ಹೇಳಿಕೊಂಡಿತು.

Latest Videos
Follow Us:
Download App:
  • android
  • ios