Asianet Suvarna News Asianet Suvarna News

Ertiga, XL6 ಬಿಡುಗಡೆ ಮೂಲಕ SUV ಪೋರ್ಟ್ಫೋಲಿಯೋ ಹೆಚ್ಚಿಸಲಿರುವ ಮಾರುತಿ ಸುಜುಕಿ

ಭಾರತೀಯ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಎಸ್‌ಯುವಿಗಳೇ (SUV) ಸದ್ದು ಮಾಡುತ್ತಿವೆಯಾದರೂ, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ  ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಮಾತ್ರ ಈ ವಲಯದಲ್ಲಿ ಹಿಂದುಳಿದಿದೆ.

Maruti Suzuki to increase SUV portfolio Ertiga XL6
Author
Bangalore, First Published Apr 15, 2022, 12:36 PM IST

ಭಾರತೀಯ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಎಸ್ಯುವಿಗಳೇ (SUV) ಸದ್ದು ಮಾಡುತ್ತಿವೆಯಾದರೂ, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ  ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಮಾತ್ರ ಈ ವಲಯದಲ್ಲಿ ಹಿಂದುಳಿದಿದೆ. ಈ ಕಂಪನಿ ಈ ತಿಂಗಳಲ್ಲಿ  ತನ್ನ ಎರ್ಟಿಗಾ (Ertiga) ಮತ್ತು XL6 ನ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುವ ಮೂಲಕ  SUV ವಿಭಾಗದಲ್ಲಿ ತನ್ನ ಪೋರ್ಟ್ಫೋಲಿಯೊ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ, ಇದುವರೆಗೆ ಕಂಪನಿಗೆ ಎಸ್ಯುವಿಯೇತರ ವಿಭಾಗದಲ್ಲಿಯೇ ಹೆಚ್ಚಿನ ಮಾರುಕಟ್ಟೆ ಪಾಲು ದೊರೆತಿದೆ.

ಹ್ಯಾಚ್ಬ್ಯಾಕ್ಗಳು (Hatch back) ಮತ್ತು MPV ಗಳ ಮಾರಾಟವು ಮಾರುತಿ ಸುಜುಕಿಗೆ (Maruti Suzuki) ಮಾರುಕಟ್ಟೆಯಲ್ಲಿ ಬಲವಾಗಿ ಉಳಿಯಲು ಸಹಾಯ ಮಾಡಿದೆ. 2022ರ ಮಾರ್ಚ್ ನಲ್ಲಿ ಕೊನೆಗೊಂಡ ಹಣಕಾಸಿನ ವರ್ಷದಲ್ಲಿ, ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇ.43.65ರಷ್ಟಿತ್ತು. ಇದು 2019ರಲ್ಲಿದ್ದ ಶೇ.51.22ಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ: Global NCAPನಿಂದ ಹ್ಯುಂಡೈ ಕ್ರೇಟಾ, ಐ20ಗೆ 3 ಸ್ಟಾರ್ಗಳ ಸುರಕ್ಷತಾ ರೇಟಿಂಗ್

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾರುತಿ ಸುಜುಕಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್, ನಮ್ಮ ಗುರಿ ಶೇ.50ರಷ್ಟಯ ಮಾರುಕಟ್ಟೆ ಪಾಲು ಪಡೆದುಕೊಳ್ಳುವುದಾಗಿದೆ. ಇದಕ್ಕಾಗಿ ನಾವು SUV ವಿಭಾಗದಲ್ಲಿ  ಕೂಡ ಹಲವು ಮಾದರಿಗಳನ್ನು ಪರಿಚಯಿಸಬೇಕಿದೆ. ಮಾರುತಿ ಬ್ರೀಝಾ, ಪ್ರವೇಶ ಮಟ್ಟದ SUV ವಿಭಾಗದಲ್ಲಿ ಹೆಚ್ಚು ಮಾರಾಟವಾಗಿದ್ದರೂ, ಇದರ ವಿಭಾಗಗಳಿಗೆ ಹೋಲಿಸಿದರೆ ಇದರ ಪಾಲು ಶೇ.21ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ.

SUV ಅಲ್ಲದ ವಿಭಾಗದಲ್ಲಿ, ಮಾರುತಿ ಸುಜುಕಿಯ ಮಾರುಕಟ್ಟೆ ಪಾಲು ಕಳೆದ ವರ್ಷ ಶೇ. 66.5 ಹಾಗೂ ಎಂಪಿವಿ (MPV )ಮಾರುಕಟ್ಟೆಯಲ್ಲಿ ಶೇ. 61ರಷ್ಟಿದೆ. ಆದರೆ, SUV ವರ್ಗದಲ್ಲಿ, ಇದು ಕೇವಲ ಎರಡು ಮಾದರಿಗಳನ್ನು ನೀಡುತ್ತದೆ- ಬ್ರೀಝಾ ಮತ್ತು S-ಕ್ರಾಸ್. ಇದರಿಂದಾಗಿ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ 46 SUV ಮಾದರಿಗಳ ನಡುವೆ, ಅದರ ಪಾಲು ಕೇವಲ ಶೇ. 12ರಷ್ಟಿದೆ. 

ಏಳು-ಆಸನಗಳ ಎರ್ಟಿಗಾ ಅನ್ನು ಮಾರುತಿ, 2012ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತು. 2019ರಲ್ಲಿ ಆರು ಆಸನಗಳ XL6 ಬಿಡುಗಡೆ ಮಾಡಲಾಯಿತು. ಎರ್ಟಿಗಾ ಗ್ಯಾಸೋಲಿನ್ ಮತ್ತು CNG ಎರಡರಲ್ಲೂ ಲಭ್ಯವಿದ್ದು,  ಅರೆನಾ ಚಿಲ್ಲರೆ ನೆಟ್ವರ್ಕ್ಗಳಲ್ಲಿ ಕೂಡ ಮಾರಾಟವಾಗುತ್ತದೆ. ಆದರೆ,  XL6  ಗ್ಯಾಸೋಲಿನ್ನಲ್ಲಿ ಮಾತ್ರ ಲಭ್ಯವಿದ್ದು,  ಪ್ರೀಮಿಯಂ ನೆಕ್ಸಾ ಔಟ್ಲೆಟ್ ಮೂಲಕ ಮಾರಾಟವಾಗುತ್ತದೆ.

ಎರ್ಟಿಗಾ 10,000 ವಾಹನಗಳು ಮತ್ತು XL6 3,500 ವಾಹನಗಳು ಮಾರಾಟದೊಂದಿಗೆ ಸುಮಾರು 13,500 ಎಂಪಿವಿ (MPV) ವಾಹನಗಳ ಒಟ್ಟು ಮಾರಾಟದೊಂದಿಗೆ ಮಾರಾಟವಾಗಿದೆ. ಒಟ್ಟಾರೆ ಎರ್ಟಿಗಾ ಮಾರಾಟದಲ್ಲಿ, CNG ಆವೃತ್ತಿಗಳ ಮಾರಾಟ ಶೇ.48ರಷ್ಟಿದೆ. 

ಇದನ್ನೂ ಓದಿ: Maruti discounts ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಮಾರುತಿ ಸುಜುಕಿ, ಕೈಗೆಟುಕುವ ದರದಲ್ಲಿ ಕಾರು ಲಭ್ಯ!

ನವೀಕರಿಸಿದ ಎರ್ಟಿಗಾವನ್ನು ಏಪ್ರಿಲ್ 15 ರಂದು ಮತ್ತು XL6 ಅನ್ನು ಏಪ್ರಿಲ್ 21 ರಂದು ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು. ಮಾರುತಿ ಸುಜು  ಕಿ, ದೇಶಾದ್ಯಂತ 2600 ಏರಿಯಾ ಔಟ್ಲೆಟ್ಗಳಿಗೆ ಹೋಲಿಸಿದರೆ ಸುಮಾರು 420 ನೆಕ್ಸಾ ಔಟ್ಲೆಟ್ಗಳನ್ನು ಹೊಂದಿದೆ.

ಕಾರು ಖರೀದಿದಾರರು ಈಗ ಹೆಚ್ಚು ಮಹತ್ವಾಕಾಂಕ್ಷೆ ಹೊಂದಿದ್ದಾರೆ ಮತ್ತು ಅವರ ಕಾರುಗಳಲ್ಲಿ ಹೆಚ್ಚಿನ ತಂತ್ರಜ್ಞಾನಗಳನ್ನು ಬಯಸುತ್ತಾರೆ.  XL6  ಗ್ರಾಹಕರ ಸರಾಸರಿ ವಯಸ್ಸು ಸುಮಾರು 40 ವರ್ಷಗಳಾಗಿದ್ದು, ಎರ್ಟಿಗಾ ಗ್ರಾಹಕರ ಸರಾಸರಿ ವಯಸ್ಸಿನ  ಸುಮಾರು 2-3 ವರ್ಷಗಳ ಹೆಚ್ಚಿದೆ ಎಂದು ಶಶಾಂಕ್ ಶ್ರೀವಾತ್ಸವ ಹೇಳಿದ್ದಾರೆ.

MPV ವಿಭಾಗದಲ್ಲಿನ ಎರ್ಟಿಗಾ, ಟೊಯೋಟಾ ಇನ್ನೋವಾ (toyoto Innova), ಮಹೀಂದ್ರಾ ಮರಾಜ್ಜೊ (Mahindra Marazzo), ರೆನಾಲ್ಟ್ ಟ್ರೈಬರ್ (Renault Triber), ಕಿಯಾ ಕ್ಯಾರೆನ್ಸ್ (Kia Carens) ಮತ್ತು ಕಾರ್ನೀವಲ್ಗಳಿಗೆ (Carnival) ಸ್ಪರ್ಧೆ ನೀಡುತ್ತದೆ.

Follow Us:
Download App:
  • android
  • ios