Asianet Suvarna News Asianet Suvarna News

Global NCAPನಿಂದ ಹ್ಯುಂಡೈ ಕ್ರೇಟಾ, ಐ20ಗೆ 3 ಸ್ಟಾರ್ಗಳ ಸುರಕ್ಷತಾ ರೇಟಿಂಗ್

ಗ್ಲೋಬಲ್ NCAP (Global NCAP) ಇತ್ತೀಚೆಗೆ ಮೂರು ಹೊಸ ಮೇಡ್-ಇನ್-ಇಂಡಿಯಾ ಕಾರುಗಳ ಸುರಕ್ಷತಾ ಕ್ರಮಗಳನ್ನು ಪರೀಕ್ಷಿಸಿದೆ. ಈ ಪೈಕಿ ಹುಂಡೈ ಕ್ರೇಟಾ  (Hyundai Creta) ಮತ್ತು ಹ್ಯುಂಡೈ i20 (Hyundai i20) 3-ಸ್ಟಾರ್ ರೇಟಿಂಗ್ಗಳನ್ನು ಗಳಿಸಿವೆ

Hyundai Creta i20 gets 3 star in NCAP rating
Author
Bangalore, First Published Apr 13, 2022, 6:22 PM IST

ಗ್ಲೋಬಲ್ NCAP (Global NCAP) ಇತ್ತೀಚೆಗೆ ಮೂರು ಹೊಸ ಮೇಡ್-ಇನ್-ಇಂಡಿಯಾ ಕಾರುಗಳ ಸುರಕ್ಷತಾ ಕ್ರಮಗಳನ್ನು ಪರೀಕ್ಷಿಸಿದೆ. ಈ ಪೈಕಿ ಹುಂಡೈ ಕ್ರೇಟಾ  (Hyundai Creta) ಮತ್ತು ಹ್ಯುಂಡೈ i20 (Hyundai i20) 3-ಸ್ಟಾರ್ ರೇಟಿಂಗ್‌ಗಳನ್ನು ಗಳಿಸಿವೆ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೀಝಾವನ್ನು  (Maruti Suzuki Vitara Breeza) ಆಧರಿಸಿದ ಟೊಯೊಟಾ ಅರ್ಬನ್ ಕ್ರೂಸರ್ (Toyoto Urban Cruiser) ನಾಲ್ಕು-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ .

ಗ್ಲೋಬಲ್‌ ಎನ್‌ಕ್ಯಾಪ್‌ ಇದೇ ಮೊದಲ ಬಾರಿಗೆ, ಹೊಸ ಕ್ರೆಟಾ ಮತ್ತು ಎಲ್ಲಾ-ಹೊಸ i20 ಅನ್ನು ಪರೀಕ್ಷಿಸಿರುವುದು ಇದೇ ಮೊದಲು. ಈ ಏಜೆನ್ಸಿಯು, ಕ್ರ್ಯಾಶ್ ಟೆಸ್ಟ್‌ಗಾಗಿ ಈ ಕಾರುಗಳ ಮೂಲ ವೇರಿಯಂಟ್‌ ಅನ್ನು ಆಯ್ಕೆ ಮಾಡಿತ್ತು. ಹ್ಯುಂಡೈ ಕ್ರೇಟಾ ಮತ್ತು ಹುಂಡೈ i20 ನ ಮೂಲ ವೇರಿಯಂಟ್‌ಗಳು ಎರಡೂ ಮುಂಭಾಗದ ಏರ್‌ಬ್ಯಾಗ್‌ಗಳು ಮತ್ತು ಎಬಿಎಸ್‌ (ABS) ಅನ್ನು ಒಳಗೊಂಡಿದೆ.

ಆಲ್‌-ನ್ಯೂ ಹುಂಡೈ ಕ್ರೇಟಾವನ್ನು ಮುಂಭಾಗದ ಆಫ್‌ಸೆಟ್ ಕ್ರ್ಯಾಶ್‌ ಪರೀಕ್ಷೆಗಾಗಿ 64 ಕಿಮೀ ವೇಗದಲ್ಲಿ ಚಲಾಯಿಸಲಾಯಿತು. ಕ್ರೇಟಾ ಒಟ್ಟು 17 ರಲ್ಲಿ 8 ಅಂಕಗಳನ್ನು ಗಳಿಸಿದೆ. ಈ ಪರೀಕ್ಷೆಯಲ್ಲಿ, ಕಾರಿನ ಹೊರಭಾಗ ಅಸ್ಥಿರವಾಗಿದೆ ಮತ್ತು ಹೆಚ್ಚಿನ ಲೋಡ್ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಕಾರಿನ ಫೂಟ್‌ರೆಸ್ಟ್ ಪ್ರದೇಶವನ್ನು ಸಹ ಸಮರ್ಪಕವಾಗಿಲ್ಲ ಎಂದು ವರದಿ ನಿಡಿದೆ.

ಆದರೆ, ಇದರಲ್ಲಿನ ಚಾಲಕನ ತಲೆಯ ರಕ್ಷಣಾ ವ್ಯವಸ್ಥೆ ಸಮರ್ಪಕವಾಗಿದೆ. ಚಾಲಕ ಮತ್ತು ಸಹ-ಚಾಲಕ ಇಬ್ಬರೂ ಕುತ್ತಿಗೆಗೆ ಉತ್ತಮ ರಕ್ಷಣೆಯನ್ನು ಪಡೆಯುತ್ತಾರೆ ಎಂದು ತಿಳಿಸಿದೆ.

ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ ಕೂಡ ಕ್ರೇಟಾ ಮೂರು-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಒಟ್ಟು 49ರಲ್ಲಿ ಕ್ರೆಟಾ 28.29 ಅಂಕ ಗಳಿಸಿದೆ. ಗ್ಲೋಬಲ್  ಎನ್‌ಕ್ಯಾಪ್, ಇದರಲ್ಲಿನ ಸೀಟ್‌ ಬೆಲ್ಟ್‌ ಮಗುವಿನ ತಲೆ ಹೆಚ್ಚು ಚಲಿಸುವಿಕೆಯನ್ನು ತಡೆಯುವುದಿಲ್ಲ. ಆದರೆ, ಹಿಂಭಾಗದ ಸೀಟಿನಲ್ಲಿ ಮಗುವಿಗೆ ಉತ್ತಮ ರಕ್ಷಣೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಕ್ರೇಟಾ ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್ ಅನ್ನು ಪಡೆದಿಲ್ಲ. ಅಲ್ಲದೆ, ಮಧ್ಯಮ ಗಾತ್ರದ ಈ SUV ಪ್ರಮಾಣಿತ ISOFIX  ಚೈಲ್ಡ್ ಸೀಟ್ ಹೊಂದಿಲ್ಲ ಎಂದಿದೆ. ಹ್ಯುಂಡೈ SX ಎಕ್ಸಿಕ್ಯುಟಿವ್ ಟ್ರಿಮ್‌ನಿಂದ ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ನೀಡುತ್ತದೆ.

ಇದನ್ನೂ ಓದಿ: ಮದುವೆಯ ನಂತರವೂ ಒಂಟಿತನ ಕಾಡ್ತಿದ್ತಾ ? ಕಾರಣವೇನು ತಿಳ್ಕೊಳ್ಳಿ

2020 ನವೆಂಬರ್‌ನಲ್ಲಿ ಹ್ಯುಂಡೈ  ಆಲ್‌ ನ್ಯೂ i20 ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಟಾಟಾ ಆಲ್ಟ್ರೊಜ್ಮ್, ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾನ್ಜಾ ಗಳಿಗೆ ಸ್ಪರ್ಧೆ ನೀಡುತ್ತದೆ. ಈ  ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಯಸ್ಕರ ಆಕ್ಯುಪೆನ್ಸಿಯಲ್ಲಿ ಒಟ್ಟು 17 ರಲ್ಲಿ 8.84 ಸ್ಕೋರ್ ಮಾಡಿದೆ. ಇದು ಮೂರು-ಸ್ಟಾರ್ ರೇಟಿಂಗ್ ಆಗಿದೆ.

ಇದು ಹೆಚ್ಚಿನ ಹೊರೆ ತೆಗೆದುಕೊಳ್ಳುವುದಿಲ್ಲ. ಜೊತೆಗೆ, ಚಾಲಕನ ಎದೆ ಭಾಗಕ್ಕೆ ಉತ್ತಮ ರಕ್ಷಣೆ ನೀಢುತ್ತಿಲ್ಲ. ಜೊತೆಗೆ, ಲಕ ಮತ್ತು ಪ್ರಯಾಣಿಕರ ಮೊಣಕಾಲುಗಳಿಗೆ ಒದಗಿಸಿರುವ ಕನಿಷ್ಠ ರಕ್ಷಣೆಯಿಂದಾಗಿ ಐ20 ತನ್ನ ಅಂಕಗಳನ್ನು ಕಳೆದುಕೊಂಡಿದೆ ಎಂದು ವರದಿ ಸೂಚಿಸುತ್ತದೆ. ಆದರೆ ತಲೆ ಮತ್ತು ಕುತ್ತಿಗೆಗೆ ಸಾಕಷ್ಟು ರಕ್ಷಣೆ ಇದೆ ಎಂದು ಕೂಡ ವರದಿ ಉಲ್ಲೇಖಿಸುತ್ತದೆ.

ಇದನ್ನೂ ಓದಿ: Relationship Tips : ಭಾವನೆಗಳಿಲ್ಲದ ಪತಿ…ಮೈದುನನಿಗೆ ಮುತ್ತಿಟ್ಟ ಅತ್ತಿಗೆ

ಮಕ್ಕಳ ರಕ್ಷಣೆಗಾಗಿ ಹ್ಯುಂಡೈ i20 49 ರಲ್ಲಿ 26.89 ಅಂಕಗಳನ್ನು ಗಳಿಸಿದೆ. i20 ಮಕ್ಕಳ ಆಸನಗಳಿಗೆ ISOFIX ಆಧಾರಗಳನ್ನು ಒಳಗೊಂಡಿದೆ. ಮಕ್ಕಳ ಸಂಯಮ ವ್ಯವಸ್ಥೆ (CRS) ಕೂಡ ಇದೆ. ಹಿಂಭಾಗದ ಪ್ರಯಾಣಿಕರಿಗೆ ಮಧ್ಯದ ಸೀಟ್‌ನಲ್ಲಿ ಲ್ಯಾಪ್ ಬೆಲ್ಟ್ ಸೀಟ್ ಬೆಲ್ಟ್ ಅನ್ನು ಮಾತ್ರ ಪಡೆಯುತ್ತಾರೆ.

Follow Us:
Download App:
  • android
  • ios