ಹೊಸ ವರ್ಷಕ್ಕೆ ಶಾಕ್ ನೀಡಿದ ಮಾರುತಿ ಸುಜುಕಿ, ಕಾರುಗಳ ಬೆಲೆ ಭಾರಿ ಏರಿಕೆ!
ಹೊಸ ವರ್ಷಕ್ಕೆ ಕಾರು ಖರೀದಿಸಲು ಮುಂದಾಗಿದ್ದೀರಾ? ಈ ಸಂಭ್ರಮಕ್ಕೆ ಮಾರುತಿ ಸುಜುಕಿ ಬ್ರೇಕ್ ಹಾಕಿದೆ. ಕಾರಣ 2025ರ ಜನವರಿಯಿಂದ ಮಾರುತಿ ಸುಜುಕಿಯ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಎಷ್ಟು ಹೆಚ್ಚಾಗಲಿದೆ?
ನವದೆಹಲಿ(ಡಿ.07) ಮಾರುತಿ ಸುಜುಕಿ ಭಾರತದಲ್ಲಿ ಅತೀ ದೊಡ್ಡ ಕಾರು ಮಾರುಕ್ಟಟೆ ಹೊಂದಿದೆ. ಕೈಗೆಟುಕುವ ಬೆಲೆ, ಗರಿಷ್ಠ ಮೈಲೇಜ್, ಕಡಿಮೆ ನಿರ್ವಹಣೆ ವೆಚ್ಚ, ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಮಾರುತಿ ಸುಜುಕಿ ಭಾರತೀಯರ ನೆಚ್ಚಿನ ಕಾರು. ಅತೀ ಕಡಿಮೆ ಬೆಲೆಯಲ್ಲಿ ಮಾರುತಿ ಸುಜುಕಿ ಕಾರುಗಳು ಲಭ್ಯವಿದೆ. ಇತ್ತೀಚೆಗೆ ಮಾರುತಿ 5 ಸ್ಟಾರು ಸುರಕ್ಷತೆ ಕಾರನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿ ಜನರ ಮನಸ್ಸು ಗೆದ್ದಿದೆ. ಹೀಗಾಗಿ ಹೊಸ ವರ್ಷಕ್ಕೆ ಮಾರುತಿ ಸುಜುಕಿ ಕಾರು ಖರೀದಿಸಲು ಮುಂದಾಗಿರುವವರಿಗೆ ಮಾರುತಿ ಸುಜುಕಿ ಶಾಕ್ ನೀಡಿದೆ. ಕಾರಣ ಜನವರಿ 2025ರಿಂದ ಮಾರುತಿ ಸುಜುಕಿಯ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ಮಾರುತಿ ಸುಜುಕಿ ತನ್ನ ಕಾರಿನ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದಿದೆ.
ಏಷ್ಟು ಏರಿಕೆಯಾಗಲಿದೆ?
ಮಾರುತಿ ಅಲ್ಟೋ ಕಾರಿನಿಂದ ಹಿಡಿದು ಮಾರತಿ ಇನ್‌ವಿಕ್ಟೋ ಕಾರಿನವರೆಗೆ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಮಾರುತಿ ಸುಜುಕಿ ಜನವರಿ 2025ರಿಂದ ಶೇಕಡಾ 4 ರಷ್ಟು ಕಾರಿನ ಬೆಲೆಯಲ್ಲಿ ಏರಿಕೆ ಮಾಡುತ್ತಿದೆ. ನೂತನ ಪರಿಷ್ಕೃತ ದರ ಜನವರಿ 1, 2025ರಿಂದ ಜಾರಿಯಾಗಲಿದೆ. ಹೀಗಾಗಿ ಹೊಸ ವರ್ಷದಿಂದ ಕಾರು ಬುಕ್ ಮಾಡುವ ಗ್ರಾಹಕರು ಶೇಕಡಾ 4 ರಷ್ಟು ಹೆಚ್ಚು ಪಾವತಿಸಬೇಕು. ಅಂದರೆ 5 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಕಾರಾಗಿದ್ದರೆ ಸರಿಸುಮಾರು 20,000 ರೂಪಾಯಿ ಹೆಚ್ಚಾಗಲಿದೆ.
ಕೈಗೆಟುಕುವ ದರದಲ್ಲಿ ಮಾರುತಿ ಸುಜುಕಿ ಬಲೆನೋ CNG ಕಾರು, 30 ಕಿ.ಮಿ ಮೈಲೇಜ್!
ಮಾರುತಿ ಸುಜುಕಿ ಯಾವತ್ತೂ ಗ್ರಾಹಕರಿಗೆ ಹೆಚ್ಚಿನ ಹೊರೆ ನೀಡಲು ಬಯಸುವುದಿಲ್ಲ. ಇದೇ ಕಾರಣಕ್ಕೆ ಗ್ರಾಹಕರು ಮಾರುತಿ ಸುಜುಕಿಯನ್ನು ಅಪ್ಪಪಿಕೊಂಡಿದ್ದಾರೆ. ಆದರೆ ಈ ಬಾರಿ ಅನಿವಾರ್ಯಾಗಿ ಶೇಕಡಾ 4ರಷ್ಟು ದರ ಹೆಚ್ಚಳ ಮಾಡಬೇಕಾಗಿದೆ. ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಕಾರಿನ ಮೇಲೆ ಶೇಕಡಾ 4ರಷ್ಟು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಮಾರುತಿ ಸುಜುಕಿ ಹೇಳಿದೆ.
ಮಾರುತಿ ಸುಜುಕಿ ಮಾತ್ರವಲ್ಲ ಹಲವು ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆ ಏರಿಕೆ ಮಾಡುತ್ತಿದೆ. ಡಿಸೆಂಬರ್ 5 ರಂದು ಹ್ಯುಂಡೈ ಮೋಟಾರ್ ಇಂಡಿಯಾ ಬೆಲೆ ಏರಿಕೆ ಘೋಷಣೆ ಮಾಡಿದೆ ಜನವರಿ 2025ರಿಂದ ಹ್ಯುಂಡೈ ಕಾರುಗಳ ಬೆಲೆ 25,000 ರೂಪಾಯಿ ಹೆಚ್ಚಾಗಲಿದೆ ಎಂದು ಘೋಷಿಸಿದೆ. ಹ್ಯುಂಡೈನ ಎಲ್ಲಾ ಕಾರುಗಳ ಮೇಲೆ 25,000 ರೂಪಾಯಿ ಹೆಚ್ಚಾಗಲಿದೆ ಎಂದಿದೆ.
ಕಚ್ಚಾ ವಸ್ತುಗಳ ಆಮದು ಸುಂಕ, ಉತ್ಪನ್ನಗಳ ಬೆಲೆ ಏರಿಕೆ, ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಕಾರು ಉತ್ಪಾದನಾ ಬೆಲೆ ಹೆಚ್ಚಾಗಿದೆ . ಹೀಗಾಗಿ ಭಾರತದ ಬಹುತೇಕ ಎಲ್ಲಾ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದೆ. ಆಡಿ ಇಂಡಿಯಾ ಇತ್ತೀಚೆಗೆಷ್ಟೇ ಕಾರಿನ ಬೆಲೆ ಏರಿಕೆ ಘೋಷಣೆ ಮಾಡಿದೆ. ಜನವರಿ 2025ರಿಂದ ಆಡಿ ಕಾರುಗಳ ಬೆಲೆ ಶೇಕಡಾ 3ರಷ್ಟು ಬೆಲೆ ಏರಿಕೆಯಾಗಲಿದೆ ಎಂದು ಹೇಳಿದೆ. ಇತ್ತ BMW ದ್ವಿಚಕ್ರ ವಾಹನ ಕಂಪನಿ ಭಾರತದಲ್ಲಿ ಈಾಗಲೇ ಬೆಲೆ ಏರಿಕೆ ಘೋಷಿಸಿದೆ. ಹೊಸ ವರ್ಷದಿಂದ BMW ಬೈಕ್‌ಗಳ ಬೆಲೆ ಏರಿಕೆಯಾಗುತ್ತಿದೆ. ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಈಗಾಗಲೇ ಏರಿಕೆ ಮಾಡಿದೆ. ಶೀಘ್ರದಲ್ಲೇ ಪ್ಯಾಸೆಂಜರ್ ವಾಹನ ಬೆಲೆಯನ್ನೂ ಏರಿಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಹೊಸ ವರ್ಷದಿಂದ ಭಾರತದಲ್ಲಿ ಕಾರುಗಳ ಬೆಲೆ ಏರಿಕೆಯಾಗಲಿದೆ.