ಬಹುಶಃ ಭಾರತದಲ್ಲಿ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಝುಕಿ ಏರಿರುವ ಮಟ್ಟವನ್ನು ಬೇರೆ ಯಾವುದೇ ಕಂಪನಿ ಏರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ ಕಂಪನಿ. ಭಾರತದ ವಾಹನ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಮಾರುತಿ ಸುಝುಕಿ ಇದೀಗ ಮತ್ತೊಂದು ಮೈಲುಗಲ್ಲು ನೆಟ್ಟಿದೆ.

ತನ್ನ ಡಿಜಿಟಲ್ ಚಾನೆಲ್‌‌ಗಳ ಮೂಲಕವೇ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಮಾರುತಿ ಸುಝುಕಿ ಇಂಡಿಯಾ ಹೇಳಿಕೊಂಡಿದೆ. ದೇಶದಲ್ಲಿ ಸಾವಿರಕ್ಕೂ ಹೆಚ್ಚು ಡೀಲರ್‌ಗಳನ್ನು ಹೊಂದಿರುವ ಕಂಪನಿ ಆನ್‌ಲೈನ್ ಮೂಲಕವೂ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಸೃಷ್ಟಿಸಿದೆ ಎಂದು ಹೇಳಬಹುದು. ಮಾರುತಿ ಸುಝುಕಿ 2017ರಿಂದ ಆನ್‌ಲೈನ್ ಮೂಲಕ ಬುಕ್ಕಿಂಗ್ ತೆಗೆದುಕೊಳ್ಳುವ ಸೇವೆಯನ್ನು ಆರಂಭಿಸಿತು. ಆ ಬಳಿಕ ನಿಧಾನವಾಗಿ ಡಿಜಿಟಲ್‌ನಲ್ಲಿ ಪ್ರಸ್ತುತೆಯನ್ನು ಪ್ರಚುರ ಪಡಿಸುತ್ತಾ ಸಾಗಿತು. ಐ-ಕ್ರಿಯೇಟ್ ಕಸ್ಟಮೈಜಷನ್ ಟೂಲ್ ಮೂಲಕ ಡಿಜಿಟಲ್ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಆರಂಭಿಸಿತು. 

ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

2019ರ ಏಪ್ರಿಲ್ ನಂತರ ಮಾರುತಿ ಸುಝುಕಿ ಕಂಪನಿ 21 ಡಿಜಿಟಲ್ ಎನ್‌ಕ್ವಾಯರಿಗಳನ್ನು ಪಡೆದುಕೊಂಡಿದ್ದು, ಒಟ್ಟು ಮಾರಾಟದಲ್ಲಿ ಶೇ.20ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಲ್ಲಿ ಡಿಜಿಟಲ್ ಎನ್‌ಕ್ವಾಯರಿಗಳಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆಯಂತೆ.

ಈ ಬಗ್ಗೆ ಮಾಹಿತಿ ನೀಡಿರುವ ಮಾರುತಿ ಸುಝುಕಿಯ ಕಾರ್ಯನಿರ್ವಾಹಕ ನಿರ್ದೇಶಕ(ಮಾರ್ಕೆಟಿಂಗ್ ಮತ್ತು ಮಾರಾಟ) ಶಸಾಂಕ ಶ್ರೀವಾತ್ಸವ್ ಅವರು, ಗೂಗಲ್ ಆಟೋ ಗೇರ್ ಶಿಫ್ಟ್ ಇಂಡಿಯ 2020 ವರದಿಯ ಪ್ರಕಾರ ಭಾರತದಲ್ಲಿ ಶೇ.95ರಷ್ಟು ಹೊಸ ಕಾರುಗಳ ಮಾರಾಟವು ಡಿಜಿಟಲ್ ಪ್ರಭಾವದಿಂದ ಕೂಡಿವೆ. ಗ್ರಾಹಕರು ಮೊದಲು ಆನ್‌ಲೈನ್‌ನಲ್ಲಿ ತಾವು ಖರೀದಿ ಮಾಡಬೇಕಿರುವ ಕಾರುಗಳ ಬಗ್ಗೆ ಸಂಶೋಧಿಸುತ್ತಾರೆ ಮತ್ತು ಡೀಲರ್‌ಶಿಫ್‌ಗಳ ಬಳಿ ಬಂದು ಖರೀದಿ ಮಾಡುತ್ತಾರೆ.

ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

ಆನ್‌ಲೈನ್ ಸಂಶೋಧಿಸುವ ಪ್ರಕ್ರಿಯೆಯು ಅವರಿಗೆ ಸಂಪೂರ್ಣವಾದ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುತ್ತದೆ. ಮತ್ತು ಕೊನೆಗೆ ತಮ್ಮ ನಂಬುಗೆಯ ಡೀಲರ್‌ಗಳಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಆಸಕ್ತಿಕರ ಸಂಗತಿ ಏನೆಂದರೆ, ನಮ್ಮ ಡಿಜಿಟಲ್ ಚಾನೆಲ್‌ಗಳ ಮೂಲಕ ಕಾರು ಖರೀದಿಯ ಬಗ್ಗೆ ಮಾಹಿತಿ ಪಡೆದುಕೊಂಡ 10 ದಿನಗಳೊಳಗಾಗಿ ಗ್ರಾಹಕರು ತಮಗೆ ಬೇಕಿರುವ ಕಾರು ಖರೀದಿಸುತ್ತಾರೆ. ಡಿಜಿಟಲ್ ಸಕ್ರಿಯಗೊಂಡಿರುವ ಮಾರಾಟ ಪಡೆಯಿಂದ ಕಾರ್ಯಗತಗೊಳಿಸಲಾದ ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗೆ ಆನ್‌ಲೈನ್ ಮೂಲಕ, ಡಿಜಿಟಲ್ ವಿಚಾರಣೆಗಳನ್ನು ಮಾರಾಟವಾಗಿ ಪರಿವರ್ತಿಸುವುದು ಸುಲಭವಾಗುತ್ತದೆ ಎಂದು ಇದು ದೃಢೀಕರಿಸುತ್ತದೆ ಎನ್ನುತ್ತಾರೆ ಅವರು.

ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ ಕಟ್ಟೋದು ಬೇಡ!

ಗ್ರಾಹಕರು ಡಿಜಿಟಲ್ ಚಾನೆಲ್‌ಗಳನ್ನು ಬಳಸುವುದು ಮಾತ್ರವಲ್ಲದೇ ಡೀಲರ್‌ಶಿಫ್‌ಗಳ ವೆಬ್‌ಸೈಟ್‌ಗಳತ್ತೂ ದೃಷ್ಟಿ ಹಾಯಿಸುತ್ತಾರೆ. ಹಾಗಾಗಿ, ಅವರ ವೆಬ್‌ಸೈಟ್‌ಗಳಲ್ಲೂ ಹೆಚ್ಚಿನ ಟ್ರಾಫಿಕ್ ಕಾಣಬಹುದಾಗಿದೆ. ಗೂಗಲ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಶೇ.72 ವಾಹನ ಖರೀದಿದಾರರು ತಮ್ಮ ಡೀಲರ್‌ಗಳ ನಂಬರ್ ಅನ್ನು ಆನ್‌ಲೈನ್‌ ಮೂಲಕ ಶೋಧಿಸುತ್ತಾರೆ. ಹಾಗಾಗಿ, ಕಂಪನಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇದನ್ನು ಹೈಪರ್‌ಲೋಕಲ್ ಮಾರ್ಕೆಟಿಂಗ್ ತಂತ್ರವೂ ಎಂದು ಹೇಳಬಹುದು ಎನ್ನುತ್ತದೆ ಕಂಪನಿ.

ಮಾರುತಿ ಸುಝುಕಿ ಡೀಲರ್‌ಗಳನ್ನು ಹುಡುಕುವುದಕ್ಕಾಗಿ ಆನ್‌ಲೈನ್‌ನಲ್ಲಿ ನೀಯರ್ ಮೀ ಸರ್ಚ್‌ನಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂಬುದನ್ನು ಶ್ರೀವಾತ್ಸ್ ಅವರು ಗುರುತಿಸುತ್ತಾರೆ. ಹೈಪರ್ ಲೋಕಲ್ ವೇದಿಕೆಯ ಮೇಲೆ ನಮ್ಮ ಹೂಡಿಕೆಯಿಂದಾಗಿ ಗ್ರಾಹಕರು ತಮ್ಮ ಸಮೀಪದ ಡೀಲರ್‌ಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿದೆ. ಈ ಉಪಕ್ರಮವು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್‌ನಲ್ಲಿ ನಾವು 3000 ಆನ್‌ಲೈನ್ ಟಚ್‌ಪಾಯಿಂಟ್ಸ್‌ಗಳನ್ನು ಸಾವಿರಕ್ಕೂ ಹೆಚ್ಚು ಡೀಲರ್‌ಶಿಫ್‌ಗಳನ್ನು ಸಂಯೋಜಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಅವರು.