Asianet Suvarna News Asianet Suvarna News

Maruti Baleno Car ಹೊಸ ರೂಪ, ಹೊಸ ಎಂಜಿನ್, ಫೆಬ್ರವರಿಯಲ್ಲಿ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ!

  • ಬಿಡುಗಡೆಗೆ ಸಜ್ಜಾಗಿದ ನೂತನ ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರು
  • ಡ್ಯುಯೆಲ್ ಜೆಟ್ VVT ಎಂಜಿನ್, ವಿನ್ಯಾಸದಲ್ಲೂ ಕೆಲ ಬದಲಾವಣೆ
  • ಹೊಸ ವರ್ಷದಲ್ಲಿ ನೂತನ ಫೇಸ್‌ಲಿಫ್ಟ್ ಕಾರು ಬಿಡುಗಡೆ
Maruti Suzuki set to launch upgraded Baleno facelift car in New year 2022 ckm
Author
Bengaluru, First Published Dec 29, 2021, 7:28 PM IST

ನವದೆಹಲಿ(ಡಿ.29):  ಮಾರುತಿ ಬಲೆನೋ(Maruti Suzuki Baleno) ಕಾರು ಇದೀಗ ಹೊಚ್ಚ ಹೊಸದಾಗಿ, ಹೊಸ ರೂಪದಲ್ಲಿ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲು ಸಜ್ಜಾಗಿದೆ. ಹೊಸ ವರ್ಷದಲ್ಲಿ ಮಾರುತಿ ನೂತನ ಕಾರು ಭಾರತದ ಮಾರುಕಟ್ಟೆಗೆ(Indian Car Market) ಬಿಡುಗಡೆ ಮಾಡುತ್ತಿದೆ. 2015ರಲ್ಲಿ ಮಾರುತಿ ತನ್ನ ರೆಟ್ರೋ ಸೆಡಾನ್ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿತ್ತು. ಅತ್ಯಂತ ಯಶಸ್ವಿ ಕಾರನ್ನು ಇದೀಗ 2022ರಲ್ಲಿ(New Year 2022) ಹೊಸ ರೂಪದಲ್ಲಿ ಮಾರುತಿ ಬಿಡುಗಡೆ ಮಾಡುತ್ತಿದೆ. ಫೆಬ್ರವರಿಯಲ್ಲಿ ನೂತನ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

ನೂತನ ಮಾರುತಿ ಬಲೆನೋ ಡ್ಯುಯೆಲ್ ಜೆಟ್ VVT ಎಂಜಿನ್ ಹೊಂದಿದೆ. ಹೊಸ ವಿನ್ಯಾಸದಲ್ಲಿ ಕಾರು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಬಲೆನೋ ಮುಂಭಾಗದ ಗ್ರಿಲ್ ಹಾಗೂ ಬಂಪರ್ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಹೈಡ್‌ಲೈಟ್, ಫಾಗ್ ಲೈಟ್, ಹಿಂಭಾಗದಲ್ಲಿ ಟೈಲ್ ಲೈಟ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. 

ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!

ಮಾರುತಿ ಬಲೆನೋ ಫೇಸ್‌ಲಿಫ್ಟ್(Maruti Suzuki Baleno facelift) ಕಾರಿನ ಒಳಾಂಗಣದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸದಾದ ಎಸಿ ಕಂಟ್ರೋಲ್ ಪ್ಯಾನೆಲ್, ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಬಲೆನೋ ಕಾರು 7 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಆದರೆ ನೂತನ ಕಾರು ಅದಕ್ಕಿಂತ ದೊಡ್ಡದಾದ ಟಚ್ ಸ್ಕ್ರೀನ್ ಹೊಂದಿರಲಿದೆ.  ಒಳಾಂಗಣ ವಿನ್ಯಾಸವನ್ನು ಮತ್ತಷ್ಟು ಆಕರ್ಷ ಮಾಡಲಾಗಿದೆ. ರೇರ್ ಎಸಿ ಸೇರಿದಂತೆ ಹಲವು ಸಣ್ಣ ಬದಲಾವಣೆಗಳನ್ನು ಇಲ್ಲಿ ಕಾಣಬಹುದು.

ಎಂಜಿನ್‌ನಲ್ಲಿ ಡ್ಯುಯೆಲ್ ಜೆಟ್ VVT ಎಂಜಿನ್ ಬಳಸುವ ಸಾಧ್ಯತೆ ಇದೆ. ಸದ್ಯ ಲಭ್ಯವಿರುವ ಮಾರುತಿ ಸುಜುಕಿ ಬಲೆನೋ ಕಾರು1.2 ಲೀಟರ್ , 4 ಸಿಲಿಂಡರ್ ಎಂಜಿನ್ ಹೊಂದಿದೆ. ಈ ಕಾರು  88 bhp ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ  CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.

ಲಾಕ್‌ಡೌನ್ ಅಂತ್ಯದಲ್ಲಿ ದಾಖಲೆ ಬರೆದ ಮಾರುತಿ ಬಲೆನೊ!

ಇತ್ತೀಚಗೆ ಹಲವು ಬಾರಿ ನೂತನ ಮಾರುತಿ ಬಲೆನೋ ಕಾರು ರೋಡ್ ಟೆಸ್ಟ್ ವೇಳೆ ಕಾಣಿಸಿಕೊಂಡಿದೆ. ಇದೀಗ ನೂತನ ಬಲೆನೋಗಾಗಿ ಗ್ರಾಹಕರು ಕಾಯುತ್ತಿದ್ದಾರೆ. ಹೆಚ್ಚುವರಿ ಫೀಚರ್ಸ್ ಹಾಗೂ ಮತ್ತಷ್ಟು ಆಕರ್ಷಕ ಲುಕ್‌ನೊಂದಿಗೆ ನೂತನ ಬಲೆನೋ ಕಾರು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ 2022ರ ಜನವರಿ ಅಥವಾ ಫೆ್ಬ್ರವರಿಯಲ್ಲಿ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಇತಿಹಾಸ ರಚಿಸಿದ ಬಲೆನೋ ಕಾರು
ಮಾರುತಿ ಬಲೆನೋ ಕಾರು ದಶಕಗಳ ಹಿಂದೆ ಸೆಡಾನ್ ಕಾರಾಗಿ ಭಾರತದಲ್ಲಿ ಮಿಂಚಿತ್ತು. ಬಳಿಕ ಇದೇ ಕಾರನ್ನು 2015ರಲ್ಲಿ ಹೊಸ ರೂಪದಲ್ಲಿ ಹ್ಯಾಚ್‌ಬ್ಯಾಕ್ ಕಾರಾಗಿ ಬಿಡುಗಡೆ ಮಾಡಿತ್ತು. ಆಕರ್ಷಕ ಹ್ಯಾಚ್‌ಬ್ಯಾಕ್ ಕಾರು ಭಾರತದಲ್ಲಿ ಸಂಚಲನ ಮೂಡಿಸಿತು. ಅತೀ ಕಡಿಮೆ ಅವಧಿಯಲ್ಲಿ ದೇಶದಲ್ಲಿ ಗರಿಷ್ಠ ಮಾರಾಟ ದಾಖಲೆ ಬರೆಯಿತು. ಕಳೆದ 6 ವರ್ಷಗಳಲ್ಲಿ ಮಾರುತಿ ಸುಜುಕಿ ಬಲೆನೋ ಕಾರು 10 ಲಕ್ಷ ಮಾರಾಟ ಕಂಡಿದೆ. ಅಕ್ಟೋಬರ್ ತಿಂಗಳಿಗೆ ಮಾರುತಿ ಬಲೆನೋ ಭಾರತದಲ್ಲಿ 10,02,082 ಕಾರುಗಳು ಮಾರಾಟವಾಗಿತ್ತು. ಇಷ್ಟೇ ಕಳೆದ 6 ವರ್ಷಗಳಲ್ಲಿ ಮಾರುತಿ ಬಲೆನೋ ಗರಿಷ್ಟ ಮಾರಾಟವಾದ  ಟಾಪ್ 10  ಪ್ಯಾಸೆಂಜರ್ ವಾಹನಗಳಲ್ಲಿ ಸದಾ ಸ್ಥಾನ ಪಡೆದಿದೆ. 

2015ರಲ್ಲಿ ಬಿಡುಗಡೆಯಾದ ಮಾರುತಿ ಬಲೆನೋ 2019ರಲ್ಲಿ ಅಪ್‌ಗ್ರೇಡ್ ಕಂಡಿತ್ತು. ಈ ಮೂಲಕ 2020ರ ಎಪ್ರಿಲ್ ತಿಂಗಳ ಮೊದಲೇ ಮಾರುತಿ ಬಲೆನೋ ಕಾರು BS VI ಎಮಿಶನ್ ಎಂಜಿನ್ ಮೂಲಕ ಅಪ್‌ಗ್ರೇಡ್ ಆಗಿತ್ತು. ಮಾರುತಿ ಬಲೆನೋ ಕಾರು ಹ್ಯುಂಡೈ ಐ20, ಟಾಟಾ ಅಲ್ಟ್ರೋಜ್ ಸೇರಿದಂತೆ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. 

Follow Us:
Download App:
  • android
  • ios