ಮಾರುತಿ ಸುಜುಕಿಯಿಂದ ಹೊಸ ಕ್ರಾಂತಿ, ಶೀಘ್ರದಲ್ಲೇ 35 ಕಿ.ಮಿ ಮೈಲೇಜ್‌ನ ಸ್ವಿಫ್ಟ್, ಡಿಸೈರ್ ಕಾರು!
ಪೆಟ್ರೋಲ್ ಬೆಲೆಯಿಂದ ವಾಹನ ನಿರ್ವಹಣೆ ದುಬಾರಿಯಾಗಿದೆ. ಹೀಗಾಗಿ ವಾಹನಗಳ ಮೈಲೇಜ್ ಇದೀಗ ಪ್ರಮುಖ ಆದ್ಯತೆಗಳಲ್ಲೊಂದು. ಗ್ರಾಹಕರ ಬೇಡಿಕೆಗೆ ಸ್ಪಂದಿಸಿರುವ ಮಾರುತಿ ಸುಜುಕಿ ಇದೀಗ 1 ಲೀಟರ್ ಪೆಟ್ರೋಲ್‌ಗೆ 35 ಕಿ.ಮೀ ಮೈಲೇಜ್ ನೀಡಬಲ್ಲ ಸ್ವಿಫ್ಟ್ ಹಾಗೂ ಡಿಸೈರ್ ಕಾರು ಬಿಡುಗಡೆಗೆ ಸಜ್ಜಾಗಿದೆ.
ನವದೆಹಲಿ(ಆ.14) ಮಾರುತಿ ಸುಜುಕಿ ದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಕಾರು ನೀಡುತ್ತಿದೆ. ದೇಶದ ಕೋಟ್ಯಾಂತರ ಜನರ ಕಾರು ಕನಸು ನನಸಾಗಿಸಿದ ಹೆಗ್ಗಳಿಕೆಗೆ ಮಾರುತಿ ಸುಜುಕಿಗೆ ಸಲ್ಲಲಿದೆ. ಇದೀಗ ಮಾರುತಿ ಸುಜುಕಿ ಕೈಗೆಟುವ ಬೆಲೆಯಲ್ಲೇ ಗರಿಷ್ಠ ಮೈಲೇಜ್ ನೀಡಬಲ್ಲ ಕಾರು ಬಿಡುಗಡೆ ಮುಂದಾಗಿದೆ. ಒಂದು ಲೀಟರ್ ಪೆಟ್ರೋಲ್‌ಗೆ 35 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಸೈರ್ ಕಾರುಗಳನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಹೌದು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಹಾಗೂ ಡಿಸೈರ್ ಹೈಬ್ರಿಡ್ ಕಾರು ಬಿಡುಗಡೆಗೆ ತಯಾರಿ ನಡೆಯುತ್ತಿದೆ.
ಮಾರುತಿ ಸುಜುಕಿ ಬ್ರೆಜ್ಜಾ ಹೈಬ್ರಿಡ್, ಗ್ರ್ಯಾಂಡ್ ವಿಟಾರ ಹೈಬ್ರಿಡ್, ಸಿಯಾಜ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಇದೇ ಮಾದರಿಯಲ್ಲಿ ಸ್ವಿಫ್ಟ್ ಹಾಗೂ ಡಿಸೈರ್ ಕಾರು ಬಿಡುಗಡೆ ಮಾಡುತ್ತಿದೆ. 1.2 ಲೀಟರ್, 3 ಸಿಲಿಂಡರ್ ಎಂಜಿನ್ ಸಾಮರ್ಥ್ಯ ಈ ಕಾರು ಪರ್ಫಾಮೆನ್ಸ್ ಹಾಗೂ ಮೈಲೇಜ್ ಎರಡು ಉತ್ತಮವಾಗಿರಲಿದೆ.
ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಕಾಲಿಡಬಾರದು ಯಾಕೆ? ಇಲ್ಲಿದೆ 4 ಕಾರಣ!
ಸದ್ಯ ಮಾರುಕಟ್ಟೆಯಲ್ಲಿರುವ ಸ್ಪಿಫ್ಟ್ ಕಾರು ಪ್ರತಿ ಲೀಟರ್‌ಗೆ 22 ಕಿಲೋಮೀಟರ್ ಮೈಲೇಜ್ ಹಾಗೂ ಡಿಸೈರ್ 24 ಕಿಲೋಮೀಟರ್ ಮೈಲೇಜ್(ARAI ಸರ್ಟಿಫಿಕೇಶನ್) ನೀಡುತ್ತಿದೆ. ಇದೇ ಕಾರುಗಳನ್ನು ಹೈಬ್ರಿಡ್ ಮಾದಿರಿಯಲ್ಲಿ ಬಿಡುಗಡೆ ಮಾಡಿದರೆ ಮೈಲೇಜ್ 35 ರಿಂದ 40 ಕಿಲೋಮೀಟರ್‌ಗೆ ಏರಿಕೆಯಾಗಲಿದೆ. ಇನ್ನು ಬೆಲೆಯಲ್ಲಿ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ.
ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಮಾರುತಿ ಸುಜುಕಿ ಕೈಗೆಟುವ ಬೆಲೆಯಲ್ಲಿ ಹೈಬ್ರಿಡ್ ಕಾರು ಬಿಡುಗಡೆ ಮುಂದಾಗಿದೆ. ಈಗಾಗಲೇ ಮಾರುತಿ ಸ್ವಿಫ್ಟ್ ಬಾರಿ ಬೇಡಿಕೆ ಕಾರಾಗಿದೆ. ಇದೀಗ ಹೈಬ್ರಿಡ್ ಮಾಡೆಲ್‌ನಿಂದ ಸ್ವಿಫ್ಟ್ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ.
ಬ್ರೆಜ್ಜಾ ಬೆನ್ನಲ್ಲೇ ವ್ಯಾಗನ್ಆರ್ ಕಾರಿನಿಂದಲೂ ಈ ಫೀಚರ್ಸ್ ತೆಗೆದ ಮಾರುತಿ ಸುಜುಕಿ!
ಇತ್ತೀಚೆಗೆ ಮಾರುತಿ ಸುಜುಕಿ ಭಾರತದಲ್ಲಿ ಅತೀ ದುಬಾರಿ ಕಾರು ಬಿಡುಗಡೆ ಮಾಡಿತ್ತು. ಇದೇ ಮೊದಲ ಬಾರಿ 20 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಕಾರು ಪರಿಚಯಿಸಿದೆ. ಇನ್‌ವಿಕ್ಟೋ ಎಂಬ ಹೊಸ ಕಾರನ್ನು ಅದು 3 ಮಾದರಿಗಳಲ್ಲಿ ಬಿಡುಗಡೆ ಮಾಡಿದ್ದು, ಆರಂಭಿಕ 24.8 ಲಕ್ಷ ರು.ನಿಂದ ಹಿಡಿದು ಗರಿಷ್ಠ 28.4 ಲಕ್ಷ ರು.ವರೆಗೆ ದರ ನಿಗದಿ ಮಾಡಲಾಗಿದೆ. ಇನ್‌ವಿಕ್ಟೋ ಬಿಡುಗಡೆ ಮೂಲಕ ಮಾರುತಿ ಇದೇ ಮೊದಲ ಬಾರಿಗೆ 20 ಲಕ್ಷ ರು.ಗಿಂತ ಮೇಲ್ಪಟ್ಟದರದ ಪ್ರೀಮಿಯಂ ವಲಯವನ್ನೂ ಪ್ರವೇಶಿಸಿದಂತಾಗಿದೆ. ಇದು ಟೊಯೋಟಾ ಇನ್ನೋವಾ ಹೈ ಕ್ರಾಸ್ ಮಲ್ಟಿಪರ್ಪಸ್ ವೆಹಿಕಲ್‌ನ ರೂಪಾಂತರವಾಗಿದೆ. ಇನ್‌ವಿಕ್ಟೋ ಝೆಟಾ ಪ್ಲಸ್ (7 ಸೀಟು), ಝೆಟಾ ಪ್ಲಸ್ (8 ಸೀಟು) ಮತ್ತು ಆಲ್ಫಾ (7 ಸೀಟು) ಎಂಬ ಮೂರು ಮಾದರಿ ಹೊಂದಿದ್ದು, ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರುಗಳು ನೆಕ್ಸಾ ಪ್ರೀಮಿಯಂ ರಿಟೇಲ್ ನೆಟ್‌ವರ್ಕ್ನಲ್ಲಿ ಲಭ್ಯವಿರಲಿವೆ.