ಮಾರುತಿ ಸುಜುಕಿ ಸಂಸ್ಥೆ ತನ್ನ ಹಳೆಯ ಮಾರುತಿ ಸುಜುಕಿ 800 ಅನ್ನು ಆರಂಭಿಸಿ 39 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆ, ಮೊದಲ ಮಾಡೆಲ್‌ನ ಕಾರಿಗೆ ಇತ್ತೀಚೆಗೆ ಕಂಪನಿ ಗೌರವ ನೀಡಿದೆ. 

ಮಾರುತಿ ಸುಜುಕಿ 800ನ ಮೊದಲ ಕ್ಲಾಸಿಕ್‌ ಮಾಡೆಲ್‌ ನಿಮಗೆ ನೆನಪಿದ್ಯಾ..? ನೀವೂ ಸಹ ಈ ಕಾರನ್ನು ಖರೀದಿಸಿದ್ದರೆ ಅದನ್ನು ಕೊಟ್ಟು ಬೇರೆ ಕಾರನ್ನು ಖರೀದಿಸಿರಬಹುದು ಅಥವಾ ನೀವು ಈ ಕಾರಿನ ಪ್ರೇಮಿಯಾದರೆ ಬಹಳ ವರ್ಷಗಳ ಹಿಂದೆಯೇ ನಿಮ್ಮ ಗ್ಯಾರೇಜ್‌ನಲ್ಲಿ ಇದನ್ನು ಪಾರ್ಕ್‌ ಮಾಡಿರಲೂಬಹುದು. ಒಂದು ವೇಳೆ, ನೀವು ಈ ಕಾರನ್ನು ಖರೀದಿಸದಿದ್ದರೂ, ರಸ್ತೆಯಲ್ಲಿ ನೀವು ಈ ಕಾರನ್ನು ನೋಡಿರಲೇಬೇಕು ಅಲ್ವಾ.. 1983 ರಲ್ಲಿ ಲಾಂಚ್‌ ಆದ ಈ ಕಾರು ಇತ್ತೀಚೆಗೆ 39 ವರ್ಷಗಳನ್ನು ಪೂರ್ಣಗೊಳಿಸಿದ್ದು, ಈ ಹಿನ್ನೆಲೆ ಮಾರುತಿ ಸುಜುಕಿ ಸಂಸ್ಥೆ ತನ್ನ ಮೊದಲ ಮಾಡೆಲ್‌ನ ಈ ಹ್ಯಾಚ್‌ಬ್ಯಾಕ್‌ ಕಾರನ್ನು ತನ್ನ ಕಂಪನಿಯ ಪ್ರಧಾನ ಕಚೇರಿಯಲ್ಲಿ ಪ್ರದರ್ಶಿಸಿದೆ.

ಈ ಹಿಂದೆ ಮಾರುತಿ ಉದ್ಯೋಗ್‌ ಲಿಮಿಟೆಡ್‌ ಎಂದು ಕರೆಯಲಾಗುತ್ತಿದ್ದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌, 1983ರಲ್ಲಿ ಮೊದಲ ಹ್ಯಾಚ್‌ಬ್ಯಾಕ್ 800 ಮಾಡೆಲ್‌ ಅನ್ನು ರಸ್ತೆಗೆ ಇಳಿಸಲಾಗಿತ್ತು. ಇನ್ನು, ಹರ್ಪಾಲ್‌ ಸಿಂಗ್ ಎಂಬುವರು ಈ ಮೊದಲ ಕಾರನ್ನು ಖರೀದಿಸಿದ್ದು, ಆ ಕಾರಿನ ಕೀಯನ್ನು ಅವರಿಗೆ ಸ್ವತ: ಅಂದಿನ ಪ್ರಧಾನಿ ಇಂದಿರಾ ಗಾಂಧಿಯೇ ಹಸ್ತಾಂತರಿಸಿದ್ದರು. ಅಂದ ಹಾಗೆ, ಆ ಕಾರಿನ ರಿಜಿಸ್ಟ್ರೇಷನ್‌ ಸಂಖ್ಯೆ DIA 6479 ಆಗಿದೆ. ಇನ್ನು, 2010 ರಲ್ಲಿ ಹರ್ಪಾಲ್‌ ಸಿಂಗ್ ಮೃತಪಟ್ಟ ನಂತರ ಈ ಕಾರು ಅವರ ಮನೆಯ ಹೊರಗೇ ನಿಂತಿದ್ದು, ಅದು ಕೊಳೆಯಲು ಆರಂಭವಾಯ್ತು. ಆದರೆ, ಆ ಕಾರಿನ ಬಗ್ಗೆ ಒಲವು ಹೊಮದಿದ್ದ ಕುಟುಂಬ ಅದನ್ನು ರಿಪೇರಿ ಮಾಡಿಸಲು ನಿರ್ಧರಿಸಿತು.

ಸ್ವದೇಶಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ಯುವಕ: ಸಂಪರ್ಕಿಸಲು ಆನಂದ್ ಮಹೀಂದ್ರಾ ಸೂಚನೆ

Scroll to load tweet…

ನಂತರ, ಈ ಕಾರಿನ ಮಾಲೀಕರ ಕುಟುಂಬ ಆ ಕಾರನ್ನು ರಿಪೇರಿಗೆ ನೀಡಲು ಸರ್ವೀಸ್‌ ಸೆಂಟರ್‌ಗೆ ಕರೆದೊಯ್ದಿದ್ದು, ಈ ವೇಳೆ ಆ ಕಾರು ಮಾರುತಿ ಸುಜುಕಿಯ ಗಮನ ಸೆಳೆದಿದ್ದು, ನಂತರ ಆ ಕಾರನ್ನು ಕಂಪನಿಯೇ ಪುನಃಸ್ಥಾಪಿಸಲು ಅವರಿಗೆ ಸಹಾಯ ಮಾಡಿದೆ. ಆ ಮಾಡೆಲ್‌ನ ಎಲ್ಲಾ ಘಟಕಗಳು ಮತ್ತು ನಿಜವಾದ ಬಿಡಿ ಭಾಗಗಳೊಂದಿಗೆ ಕಾರಿಗೆ ಅದರ ಮೂಲ ರೂಪವನ್ನು ನೀಡಲಾಯಿತು. ಆದರೂ, ಕಾರನ್ನು ರಸ್ತೆಗಳಲ್ಲಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಏಕೆಂದರೆ, ಅದರ ವಯಸ್ಸಿನ ಕಾರಣದಿಂದಾಗಿ ಈ ವಾಹನವನ್ನು ಚಲಾಯಿಸಲು ಅರ್ಹವಾಗಿಲ್ಲ. ಆದ್ದರಿಂದ ಕಾರಿನ ತಯಾರಕರು ಅಂದರೆ ಮಾರುತಿ ಸುಜುಕಿ ಸಂಸ್ಥೆ, 39 ವರ್ಷಗಳನ್ನು ಪೂರ್ಣಗೊಳಿಸಿದ ಗೌರವಾರ್ಥವಾಗಿ ಪ್ರಧಾನ ಕಚೇಯಲ್ಲಿ ಅದನ್ನು ಪ್ರದರ್ಶಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಹೊಚ್ಚ ಹೊಸ ಮಾರುತಿ ಅಲ್ಟೋ ಕೆ10 ಬಿಡುಗಡೆ, 3.99 ಲಕ್ಷ ರೂಪಾಯಿ, 25 ಕಿ.ಮೀ ಮೈಲೇಜ್!

ಮಾರುತಿ ಸುಜುಕಿ 800 ನ ಮೊದಲ ಮಾಡೆಲ್ 796 cc ಮೂರು ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತಿತ್ತು ಮತ್ತು ಇದನ್ನು ಜನಪ್ರಿಯವಾಗಿ SS80 ಎಂದು ಕರೆಯಲಾಗುತ್ತಿತ್ತು. ಕಂಪನಿಯು 2014 ರವರೆಗೆ ಅದೇ ಬ್ರ್ಯಾಂಡಿಂಗ್ ಅಡಿಯಲ್ಲಿ ಹೊಸ ಮಾದರಿಗಳನ್ನು ತರುತ್ತಲೇ ಇತ್ತು ಮತ್ತು ನಂತರ ಅದನ್ನು ನಿಲ್ಲಿಸಲಾಯಿತು ಆದರೂ, ಮಾರುತಿ ಸುಜುಕಿ 800 ಮಾಡೆಲ್‌ನಲ್ಲಿ ಬಳಸಲಾದ F8D ಎಂಜಿನ್ ಅನ್ನು ಈಗಲೂ ಸಹ BS6 ಆಲ್ಟೋ 800 ನಲ್ಲಿ ಬಳಸಲಾಗುತ್ತಿದೆ. ಇನ್ನು, ಈ ಕಾರು ಎಷ್ಟು ಜನಪ್ರಿಯವಾಗಿದೆಯೆಂದರೆ, ಮಾರುಕಟ್ಟೆಯಲ್ಲಿ ಇವೆರಡೂ ಲಭ್ಯವಿದ್ದಾಗ ಮಾರಾಟದ ವಿಷಯದಲ್ಲಿ ಆಲ್ಟೋವನ್ನು ಸೋಲಿಸುತ್ತಿತ್ತು. ಅಲ್ಲದೆ, ಮಾರುತಿ ಸುಜುಕಿ 800 ಸ್ಥಗಿತಗೊಂಡ ನಂತರ, ಮಾರುತಿ ಸುಜುಕಿ ಕಂಪನಿ ತನ್ನ ಸಂಸ್ಥೆಯ ಮತ್ತೊಂದು ಪ್ರಮುಖ ಕಾರುಗಳಲ್ಲಿ ಒಂದಾದ ಆಲ್ಟೋ ಮೇಲೆ ಗಮನ ಕೇಂದ್ರೀಕರಿಸಲು ಪ್ರಾರಂಭಿಸಿತು. ಮತ್ತು ಆಲ್ಟೋ ಕಾರು, ಮೊದಲು ಮಾರುತಿ ಸುಜುಕಿ 800 ಗೆ ನೀಡಲಾಗುತ್ತಿದ್ದ ಅತ್ಯುತ್ತಮ ಮಾರಾಟವಾದ ಕಾರು ಪ್ರಶಸ್ತಿಯನ್ನು ಪಡೆಯಿತು.