Bharat Mobility Global Expo 2025: ಮೊಟ್ಟಮೊದಲ ಎಲೆಕ್ಟ್ರಿಕ್ ಇ-ವಿಟಾರಾ ಕಾರ್ ಅನಾವರಣ ಮಾಡಿದ ಮಾರುತಿ ಸುಜಿಕಿ
ಆಟೋ ಎಕ್ಸ್‌ಪೋ 2025ರಲ್ಲಿ ಹೊಸ ಕಾರು ಮತ್ತು ಸ್ಕೂಟರ್‌ಗಳನ್ನು ಅನಾವರಣಗೊಳಿಸಲಾಗಿದೆ. ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇ-ವಿಟಾರಾ, ಹುಂಡೈ ಕ್ರೆಟಾ ಇವಿ, ಸುಜುಕಿ ಇ-ಆಕ್ಸೆಸ್ ಸ್ಕೂಟರ್, ಮತ್ತು MG9 ಮತ್ತು ಸೈಬರ್‌ಸ್ಟರ್ ಕಾರುಗಳನ್ನು ಬಿಡುಗಡೆ ಮಾಡಿದೆ.

ನವದೆಹಲಿ (ಜ.17): ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಇಂದಿನಿಂದ ಪ್ರಾರಂಭವಾಗಿದೆ. ಮೊದಲ ದಿನವೇ ಮಾರುತಿ-ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇ-ವಿಟಾರಾವನ್ನು ಅನಾವರಣ ಮಾಡಿದೆ. ಮಾರುತಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಕಾರನ್ನು ಪರಿಚಯಿಸಿದೆ. ಇದರಲ್ಲಿ 49kWh ಮತ್ತು 61kWh ಬ್ಯಾಟರಿ ಪ್ಯಾಕ್‌ಗಳು ಸೇರಿವೆ. ಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇ ವಿಟಾರಾ 49kWh ಬ್ಯಾಟರಿ ಪ್ಯಾಕ್ ಹೊಂದಿರುವ ಮೂಲ ಮಾದರಿಗೆ 20 ಲಕ್ಷ ರೂ (ಎಕ್ಸ್-ಶೋರೂಂ) ಮತ್ತು 61kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಗೆ 25 ಲಕ್ಷ ರೂ (ಎಕ್ಸ್-ಶೋರೂಂ) ಇರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಇ-ಆಲ್‌ಗ್ರಿಪ್ ಎಡಬ್ಲ್ಯೂಡಿ ಆವೃತ್ತಿಯ ಬೆಲೆ ಎಕ್ಸ್‌ಶೋರೂಮ್‌ನಲ್ಲಿ 30 ಲಕ್ಷ ರೂಪಾಯಿ ಆಗಿರಲಿದೆ ಎಂದು ತಿಳಿಸಿದೆ.
ಈ ಎಲೆಕ್ಟ್ರಿಕ್ SUV ಫೆಬ್ರವರಿ 2025 ರಿಂದ ಸುಜುಕಿ ಮೋಟಾರ್ ಗುಜರಾತ್ ಪ್ರೈವೇಟ್ ಲಿಮಿಟೆಡ್ ಸ್ಥಾವರದಲ್ಲಿ ಪ್ರೊಡಕ್ಷನ್ ಆಗಲಿದ್ದು, ಇದು ಜೂನ್ ವೇಳೆಗೆ ಯುರೋಪ್, ಜಪಾನ್ ಮತ್ತು ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಭಾರತೀಯ ಮಾರುಕಟ್ಟೆಯಲ್ಲಿ, ಇ ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಎಂಜಿ ಝಡ್‌ಎಸ್ ಇವಿ, ಟಾಟಾ ಕರ್ವ್ ಇವಿ, ಹುಂಡೈ ಕ್ರೆಟಾ ಇವಿ ಮತ್ತು ಮಹೀಂದ್ರಾ ಬಿಇ05 ಗಳೊಂದಿಗೆ ಸ್ಪರ್ಧಿಸಲಿದೆ.
ಹುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಕ್ರೆಟಾ ಇವಿ ಬಿಡುಗಡೆ: ಹುಂಡೈ ಮೋಟಾರ್ ಇಂಡಿಯಾ ತನ್ನ ಮಧ್ಯಮ ಗಾತ್ರದ ಎಲೆಕ್ಟ್ರಿಕ್ SUV ಕ್ರೆಟಾ-EV ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ರೂ. 17.99 ಲಕ್ಷ (ಎಕ್ಸ್ ಶೋ ರೂಂ) ಇರಲಿದೆ. ಕಂಪನಿಯು ಕ್ರೆಟಾ-ಇವಿಯ 4 ಮಾದರಿಗಳನ್ನು ಬಿಡುಗಡೆ ಮಾಡಿದೆ - ಎಕ್ಸಿಕ್ಯುಟಿವ್, ಸ್ಮಾರ್ಟ್, ಸ್ಮಾರ್ಟ್ (ಒ) ಮತ್ತು ಪ್ರೀಮಿಯಂ. ಇದು ಕಂಪನಿಯ ಅತ್ಯಂತ ಅಗ್ಗದ ಇವಿ ಎನಿಸಿಕೊಂಡಿದೆ. ಕ್ರೆಟಾ-ಇವಿ ಪೂರ್ಣ ಚಾರ್ಜ್‌ನಲ್ಲಿ 473 ಕಿ.ಮೀ ವರೆಗೆ ಓಡುತ್ತದೆ ಮತ್ತು ಕೇವಲ 7.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಸಾಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.ಇದಲ್ಲದೆ, ಇದು ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೇರಿದಂತೆ 70 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇದನ್ನು 51.4kWh, 42kWh ಎನ್ನುವ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ.
ಮೊದಲ ಎಲೆಕ್ಟ್ರಿಕ್ ಸ್ಕೂಟರ್ 'ಇ-ಆಕ್ಸೆಸ್' ಅನಾವರಣ ಮಾಡಿದ ಸುಜುಕಿ: ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 'ಇ-ಆಕ್ಸೆಸ್' ಅನ್ನು ಪರಿಚಯಿಸಿದೆ. ಕಂಪನಿಯ ಪ್ರಕಾರ, ಈ ವಾಹನವು ಪೂರ್ಣ ಚಾರ್ಜ್‌ನಲ್ಲಿ 95 ಕಿಲೋಮೀಟರ್ ಓಡುತ್ತದೆ.ಆಕ್ಸೆಸ್ ಎಲೆಕ್ಟ್ರಿಕ್‌ನ ಆರಂಭಿಕ ಬೆಲೆಯನ್ನು 81,700 ರೂ.ಗಳಲ್ಲಿ ಇರಿಸಲಾಗಿದೆ. ಇದು ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಅಥರ್ ರಿಜ್ಟಾ ಮತ್ತು ಓಲಾ ಎಸ್1 ಏರ್‌ನಂತಹ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿದೆ.
MG9 ಮತ್ತು ಸೈಬರ್‌ಸ್ಟರ್ ಅನಾವರಣ ಮಾಡಿದ ಮಾರಿಸನ್ ಗ್ಯಾರೆಜ್: ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ಮುಂಬರುವ ಎಂಪಿವಿ ಎಂ9 (ಹಿಂದೆ ಮಿಫಾ 9 ಎಂದು ಕರೆಯಲಾಗುತ್ತಿತ್ತು) ಅನ್ನು ಇಂಡಿಯಾ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ.ಇದು MG ಆಯ್ದ ಪ್ರೀಮಿಯಂ ಔಟ್‌ಲೆಟ್‌ಗಳಲ್ಲಿ ಲಭ್ಯವಿರುತ್ತದೆ ಮತ್ತು ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಜೊತೆಗೆ ಮಾರಾಟವಾಗಲಿದೆ. ಕಾರು ತಯಾರಕರು ಇಂದಿನಿಂದ ಪೂರ್ವ-ಬುಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ, ಈ ವರ್ಷದ ಏಪ್ರಿಲ್‌ನಲ್ಲಿ ಡೆಲಿವರಿ ಪ್ರಾರಂಭವಾಗಲಿದೆ. MG M9 ಅನ್ನು ಬಾಕ್ಸಿ ವಿನ್ಯಾಸ ಆದರೆ ನಯವಾದ LED DRLಗಳು ಮತ್ತು LED ಹೆಡ್‌ಲ್ಯಾಂಪ್‌ಗಳೊಂದಿಗೆ ಪ್ರೀಮಿಯಂ MPV ಆಗಿ ಬಿಡುಗಡೆ ಮಾಡಲಾಗುತ್ತದೆ. ಇವುಗಳನ್ನು ಮುಂಭಾಗದ ಬಂಪರ್‌ನಲ್ಲಿ ಜೋಡಿಸಲಾಗಿದೆ ಮತ್ತು ಅಂಚಿನಲ್ಲಿ ಕ್ರೋಮ್ ಅಲಂಕಾರಗಳನ್ನು ಹೊಂದಿವೆ. ಇದು ಲಂಬವಾದ LED ಟೈಲ್‌ಲೈಟ್‌ಗಳನ್ನು ಹೊಂದಿದೆ.
ಓಲಾಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗೆ ಬಿಗ್ ಶಾಕ್; ಓಲಾ ಮೀರಿಸಿದ ಇತರೆ ಬ್ರ್ಯಾಂಡ್ ಬೈಕ್‌ಗಳ ವಿವರ ಇಲ್ಲಿದೆ ನೋಡಿ!
ಮೊದಲ ಬಾರಿಗೆ, 34 ಆಟೋಮೊಬೈಲ್ ಕಂಪನಿಗಳು ಎಕ್ಸ್‌ಪೋ 2025 ರಲ್ಲಿ ಭಾಗವಹಿಸುತ್ತಿವೆ. 1986 ರಲ್ಲಿ ನಡೆದ ಮೊದಲ ಆವೃತ್ತಿಯ ಆಟೋ ಎಕ್ಸ್‌ಪೋ ನಂತರದ ಅತ್ಯಧಿಕ ಸಂಖ್ಯೆ ಇದಾಗಿದೆ. ಈ ಎಕ್ಸ್‌ಪೋದ ಅಧಿಕೃತ ಹೆಸರು 'ದಿ ಮೋಟಾರ್ ಶೋ'.
TVS CNG scooter: ಬಜಾಜ್ ಬಳಿಕ ಟಿವಿಎಸ್‌ನಿಂದಲೂ ಸಿಎನ್‌ಜಿ ಸ್ಕೂಟರ್ ಬಿಡುಗಡೆ?
ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರತನ್ ಟಾಟಾ ಮತ್ತು ಒಸಾಮು ಸುಜುಕಿ ಅವರನ್ನು ಸ್ಮರಿಸಿದರು. 'ಭಾರತದ ಆಟೋ ಉದ್ಯಮವು ಅದ್ಭುತವಾಗಿದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ. ಇಂದು ನಾನು ರತನ್ ಟಾಟಾ ಮತ್ತು ಒಸಾಮು ಸುಜುಕಿಯನ್ನೂ ನೆನಪಿಸಿಕೊಳ್ಳುತ್ತೇನೆ. ಈ ಇಬ್ಬರು ಮಹಾನ್ ಪುರುಷರು ಭಾರತೀಯ ಆಟೋ ಕ್ಷೇತ್ರದ ಬೆಳವಣಿಗೆಗೆ ಮತ್ತು ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ' ಎಂದು ಹೇಳಿದ್ದಾರೆ.