ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ತಿಂಗಳು. ಹೀಗಾಗಿ ಹಲವು ಆಟೋಮೊಬೈಲ್  ಕಂಪನಿಗಳು ಸ್ಟಾಕ್ ಕ್ಲಿಯರೆನ್ಸ್‌ಗೆ ಮುಂದಾಗಿದೆ. ಇದರಿಂದ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಇದೀಗ ಮಾರುತಿ ಸುಜುಕಿ ಆರ್ಥಿಕ ವರ್ಷಕ ಕೊನೆಯ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದೆ. 

ನವದೆಹಲಿ(ಮಾ.09): ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ನಾವಿದ್ದೇವೆ. 2023ರ ಮಾರ್ಚ್ ಹಲವು ಕಾರಣಗಳಿಂದ ಪ್ರಮುಖವಾಗಿದೆ. ಕಾರಣ ಎಪ್ರಿಲ್ ತಿಂಗಳಿನಿಂದ ಹೊಸ ಆರ್ಥಿಕ ವರ್ಷ ಆರಂಭಗೊಳ್ಳಲಿದೆ. ಬಜೆಟ್‌ನಲ್ಲಿ ಘೋಷಿಸಿರುವ ಈ ವರ್ಷದ ಅನುದಾನಗಳು ಪ್ರತಿ ಇಲಾಖೆಗೆ ತಲುಪಲಿದೆ. ಹೊಸ ಆರ್ಥಿಕ ನೀತಿ, ಹೊಸ ಯೋಜನೆಗಳು ಜಾರಿಗೆ ಬರಲಿದೆ. ಹೀಗಾಗಿ ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಕೆಲ ಆಟೋಮೊಬೈಲ್ ಕಂಪನಿಗಳು ಸ್ಟಾಕ್ ಕ್ಲಿಯರೆನ್ಸ್‌ಗೆ ಮುಂದಾಗಿದೆ. ಇಷ್ಟೇ ಅಲ್ಲ ಪ್ರಸಕ್ತ ಆರ್ಥಿಕ ವರ್ಷದಲ್ಲಿನ ಮಾರಾಟ ದಾಖಲೆಯನ್ನು ಉತ್ತಮಪಡಿಸಿಕೊಳ್ಳಲು ಇದೀಗ ಆಫರ್ ಘೋಷಿಸಿದೆ. ಮಾರುತಿ ಸುಜುಕಿ ಆಯ್ದ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 64,000 ರೂಪಾಯಿ ಆಫರ್ ನೀಡಿದೆ.

ಮಾರುತಿ ಸುಜುಕಿ ದೇಶಾದ್ಯಂತ ಈ ಆಫರ್ ನೀಡಿದೆ. ನಗದು ಡಿಸ್ಕೌಂಟ್, ಎಕ್ಸ್‌ಜೇಂಜ್ ಆಫರ್, ಕಾರ್ಪೋರೇಟ್ ಡಿಸ್ಕೌಂಟ್ ಸೇರಿದಂತೆ ಇತರ ಕೆಲ ಆಫರ್‌ಗಳನ್ನು ಗ್ರಾಹಕರಿಗಾಗಿ ನೀಡಿದೆ. ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿಗೆ ಗರಿಷ್ಠ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಒಟ್ಟು 64,000 ರೂಪಾಯಿ ಆಫರ್ ನೀಡಲಾಗಿದೆ. ಇದರಲ್ಲಿ ನಗದ ಡಿಸ್ಕೌಂಟ್ 40,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ಹಾಗೂ ಕಾರ್ಪೋರೇಟ್ ಡಿಸ್ಕೌಂಟ್ 4,000 ರೂಪಾಯಿ ಒಳಗೊಂಡಿದೆ.

550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!

ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಒಟ್ಟು 54,000 ರೂಪಾಯಿ ಆಫರ್ ಘೋಷಿಸಲಾಗಿದೆ. 30,000 ರೂಪಾಯಿ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ಹಾಗೂ ಕಾರ್ಪೋರೇಟ್ ಡಿಸ್ಕೌಂಟ್ 4,000 ರೂಪಾಯಿ ಒಳಗೊಂಡಿದೆ. ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಹಾಗೂ ಅಲ್ಟೋ ಕಾರಿಗೆ ಒಟ್ಟು 49,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 30,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 4,000 ರೂಪಾಯಿ ಕಾರ್ಪೋರೇಟ್ ಆಫರ್ ಒಳಗೊಂಡಿದೆ. 

ಮಾರುತಿ ಸುಜುಕಿ ಸೆಲೆರಿಯಾ ಕಾರಿಗೆ ಒಟ್ಟು 44,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಸೆಲೆರಿಯೋ ಕಾರಿಗೆ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಹಾಗೂ ಕಾರ್ಪೋರೇಟ್ ಆಫರ್ 4,000 ರೂಪಾಯಿ ನೀಡಲಾಗಿದೆ. ಮಾರುತಿ ಸುಜುಕಿ ಅಲ್ಟೋ 800 ಕಾರಿಗೆ 38,000 ರೂಪಾಯಿ ರಿಯಾಯಿತಿ ನೀಡಲಾಗಿದೆ. ಇದರಲ್ಲಿ 20,000 ರೂಪಾಯಿ ನಗದು ರಿಯಾಯಿತಿ, 15,000 ರೂಪಾಯಿ ವಿನಿಮಯ ಆಫರ್ ಹಾಗೂ 4,000 ರೂಪಾಯಿ ಕಾರ್ಪೋರೇಟ್ ಆಫರ್ ಸೇರಿದೆ.

ವಾಹನ ಖರೀದಿಸಲು ಸಕಾಲ, 5 ರಿಂದ 10 ಲಕ್ಷ ರೂಗೆ ಲಭ್ಯವಿಗೆ ಉತ್ತಮ ಕಾರು!

ಮಾರುತಿ ಡಿಸೈರ್ ಕಾರಿಗೆ 10,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಡಿಸೈರ್ ಕಾರಿಗೆ ನಗದು ಡಿಸ್ಕೌಂಟ್ ಹಾಗೂ ಕಾರ್ಪೋರೇಟ್ ಆಫರ್ ನೀಡಿಲ್ಲ. ಕೇವಲ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. ಮಾರುತಿ ಸುಜುಕಿ ಘೋಷಿಸಿರುವ ಆಫರ್ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದೆ.

ಸೂಚನೆ: ಮಾರುತಿ ಸುಜುಕಿ ಆಫರ್ ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಬದಲಾಗಲಿದೆ. ಇಷ್ಟೇ ಅಲ್ಲ ನೆಕ್ಸಾ ಹಾಗೂ ಅರೆನಾ ಡೀಲರ್ಸ್ ಆಫರ್ ಕೂಡ ಬದಲಾಗಲಿದೆ. ಹೀಗಾಗಿ ಆಫರ್ ಕುರಿತು ಹತ್ತಿರದ ಡೀಲರ್ ಬಳಿ ಖಚಿತಪಡಿಸಿಕೊಳ್ಳಿ