SUV ಸೆಗ್ಮೆಂಟ್‌ಗಳಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿದೆ. ಇದೀಗ ನಿಸಾನ್ ಟೆಕ್ಟಾನ್ ಕಾರು ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಮಾರುತಿ ಗ್ರ್ಯಾಂಡ್ ವಿಟಾರ ಕಾರಿಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಬರೋಬ್ಬರಿ 95 ಸಾವಿರ ರೂ ರಿಯಾಯಿತಿ ನೀಡಲಾಗಿದೆ.
ನೀವು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಈ ತಿಂಗಳು ಅತ್ಯುತ್ತಮ. ಕಾರಣ ಎಸ್‌ಯುವಿ ಕಾರುಗಳ ಪೈಪೋಟಿ ಹೆಚ್ಚಾಗುತ್ತಿದೆ. ಪ್ರತಿ ಕಂಪನಿಗಳು ಹೊಸ ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಕ್ರೆಟಾ, ಡಸ್ಟರ್ ಸೇರಿದಂತೆ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಇದೀಗ ನಿಸಾನ್ ಟೆಕ್ಟಾನ್ ಕಾರು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇತ್ತ ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರ ಎಸ್‌ಯುವಿ ಕಾರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದೀಗ ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರ ಕಾರು ಇದೀಗ ಮತ್ತಷ್ಟು ಅಗ್ಗವಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಡಿಸ್ಕೌಂಟ್ ಡಿಟೇಲ್
ಮಾರುತಿ ಸುಜುಕಿ ಇದೀಗ ಗ್ರ್ಯಾಂಡ್ ವಿಟಾರ ಕಾರಿಗೆ ಜುಲೈ ತಿಂಗಳ ಡಿಸ್ಕೌಂಟ್ ಘೋಷಿಸಿದೆ. ಈ ಆಫರ್ ಜುಲೈ 31 ರ ವರೆಗೆ ಇರಲಿದೆ. ಈ ತಿಂಗಳಲ್ಲಿ ಯಾವುದೇ ದಿನ ಗ್ರ್ಯಾಂಡ್ ವಿಟಾರ ಬುಕ್ ಮಾಡುವ ಗ್ರಾಹಕರು ಈ ಡಿಸ್ಕೌಂಟ್ ಆಫರ್ ಪಡೆಯಲಿದ್ದಾರೆ. ಮಾರುತಿ ವಿಟಾರ ಡಿಸ್ಕೌಂಟ್ ವೇರಿಯೆಂಟ್‌ಗಳ ಮೇಲೆ ವ್ಯತ್ಯಾಸವಾಗಲಿದೆ. ಗ್ರ್ಯಾಂಡ್ ವಿಟಾರ ಪೈಕಿ ಸಿಗ್ಮಾ ವೇರಿಯೆಂಟ್ ಕಾರಿಗೆ ಒಟ್ಟು 95,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಗ್ರ್ಯಾಂಡ್ ವಿಟಾರ ಡೆಲ್ಟಾ ಪೆಟ್ರೋಲ್ ವೇರಿಯೆಂಟ್ ಕಾರಿಗೆ ಒಟ್ಟು 85,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದೇ ವೇಳೆ ಜೆಟಾ ಹಾಗೂ ಆಲ್ಫಾ ವೇರಿಯೆಂಟ್ ಕಾರುಗಳ ಆಫರ್ ಬೆಲೆ ವ್ಯತ್ಯಾಸವಾಗಲಿದೆ.ಮಾರುತಿ ಸುಜುಕಿ ಘೋಷಿಸಿದ ಗ್ರ್ಯಾಂಡ್ ವಿಟಾರ ಡಿಸ್ಕೌಂಟ್ ಆಫರ್, ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಲಾಯಲ್ಟಿ ರಿವಾರ್ಡ್, ಕಾರ್ಪೋರೇಟ್ ಬೋನಸ್ ಸೇರಿದಂತೆ ಹಲವು ಆಫರ್ ಒಳಗೊಂಡಿದೆ.
ಸಿಎನ್‌ಜಿ ವೇರಿಯೆಂಟ್‌ಗೂ ಇದೇ ಆಫರ್
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಸಿಎನ್‌ಜಿ ವೇರಿಯೆಂಟ್‌ಗೂ ಆಫರ್ ನೀಡಲಾಗಿದೆ. ಈ ಪೈಕಿ ಡೆಲ್ಟಾ ಸಿಎನ್‌ಜಿ ಹಾಗೂ ಝೆಟಾ ಸಿಎನ್‌ಜಿ ಕಾರಿಗೆ ಒಟ್ಟು 90,000 ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ಕಾರುಗಳಿಗೆ ಭಾರಿ ಬೇಡಿಕೆ ಹೆಚ್ಚಾಗುತ್ತಿದೆ.
ಹೈಬ್ರಿಡ್ ಗ್ರ್ಯಾಂಡ್ ವಿಟಾರ ಕಾರಿಗೂ ಇದೆ ಡಿಸ್ಕೌಂಟ್
ಮಾರುತಿ ಸುಜುಕಿ ಕಾರುಗಳ ಪೈಕಿ ಗ್ರಾಹಕರು ಹೈಬ್ರಿಡ್ ಮಾಡೆಲ್ ಕಾರುಗಳ ಮೊರೆ ಹೋಗುತ್ತಿದ್ದಾರೆ. ಹೆಚ್ಚಿನ ಮೈಲೇಜ್, ಕಡಿಮೆ ನಿರ್ವಹಣೆ ವೆಚ್ಚಗಳ ಕಾರಣ ಕಾರು ಪ್ರಿಯರು ಸ್ಟ್ರಾಂಗ್ ಹೈಬ್ರಿಡ್ ಮಾಡೆಲ್ ಆಯ್ಕೆ ಮಾಡುತ್ತಿದ್ದಾರೆ. ಇದೀಗ ಮಾರುತಿ ಗ್ರ್ಯಾಂಡ್ ವಿಟಾರ ಹೈಬ್ರಿಡ್ ಕಾರುಗಳಿಗೆ ಕೆಲ ಆಫರ್ ನೀಡಲಾಗಿದೆ. ಶೂನ್ಯ ರಸ್ತೆ ತೆರಿಗೆ, 5 ವರ್ಷಗಳ ವಿಸ್ತರಣೆ ವಾರೆಂಟಿ, ಎಕ್ಸ್‌ಚೇಂಜ್ ಬೋನಸ್ ಗರಿಷ್ಠ 50,000 ರೂಪಾಯಿ, 30,000 ರೂಪಾಯಿ ಲಾಯಲ್ಟಿ ಬೋನಸ್, 10,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಗ್ರ್ಯಾಂಡ್ ವಿಟಾರ ಕಾರಿನ ಬೆಲೆ 10.76 ಲಕ್ಷ ರೂಪಾಯಿಯಿಂದ 19.72 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದೀಗ ಈ ಬೆಲೆ ಡಿಸ್ಕೌಂಟ್ ಬಳಿಕ ಮತ್ತಷ್ಟು ಕಡಿಮೆಯಾಗಲಿದೆ. ಹೀಗಾಗಿ ಜುಲೈ ತಿಂಗಳಲ್ಲಿ ಮಾರುತಿ ವಿಟಾರ ಕಾರು ಖರೀದಿಗೆ ಸೂಕ್ತ ಸಮಯವಾಗಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಗ್ರ್ಯಾಂಡ್ ವಿಟಾರ ಲಭ್ಯವಾಗುತ್ತಿದೆ. ಇಷ್ಟೇ ಅಲ್ಲ ನಿರ್ವಹಣೆ ವೆಚ್ಚ ಕೂಡ ಇತರ ಕಾರುಗಳಿಗಿಂತ ಕಡಿಮೆಯಾಗಿದೆ.
ವಿಶೇಷ ಸೂಚನೆ: ಕಾರುಗಳ ಡಿಸ್ಕೌಂಟ್ ಆಫರ್, ರಾಜ್ಯದಿಂದ ರಾಜ್ಯ, ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಕುರಿತು ಮಾಹಿತಿ ಖಚಿತಪಡಿಸಿಕೊಳ್ಳಿ.


