ಸಿಫ್ಟ್ , ವ್ಯಾಗನ್ಆರ್ ಅಲ್ಲ, ಮಾರುತಿ ಸುಜುಕಿಗೆ ಅಚ್ಚರಿ ತಂದ ಗರಿಷ್ಠ ಮಾರಾಟದ ಕಾರು ಪಟ್ಟಿ!

ಮಾರುತಿ ಕಾರುಗಳ ಪೈಕಿ ಅಥವಾ ಒಟ್ಟಾರೆ ಹ್ಯಾಚ್‌ಬ್ಯಾಕ್ ಕಾರುಗಲ ಸಿಫ್ಟ್ ಅಥವಾ ಮಾರುತಿ ವ್ಯಾಗನ್ಆರ್ ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುತ್ತದೆ.ಆದರೆ ನವೆಂಬರ್ ತಿಂಗಳ ಅಂಕಿ ಅಂಶ ಮಾರುತಿ ಸುಜುಕಿಗೆ ಅಚ್ಚರಿ ತಂದಿದೆ. ಅಷ್ಟಕ್ಕೂ ಮೊದಲ ಸ್ಥಾನ ಪಡೆದ ಕಾರು ಯಾವುದು?  

Maruti Baleno leads tops on November 2024 car sales swift slips 2nd place ckm

ನವದೆಹಲಿ(ಡಿ.19) ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರಿಗೆ ಭಾರಿ ಬೇಡಿಕೆ ಇದೆ. ಮಧ್ಯಮ ವರ್ಗದ ಕಾರು ಕನಸು ನನಸು ಮಾಡುತ್ತಿರುವ ಈ ಕಾರು ಮಾರಾಟದಲ್ಲೂ ದಾಖಲೆ ಬರೆಯುತ್ತಿದೆ. ಹೀಗಾಗಿ ಮಾರುತಿ ಸುಜುಕಿ ಈ ಸೆಗ್ಮೆಂಟ್‌ನಲ್ಲಿ ಹಲವು ಕಾರುಗಳನ್ನು ನೀಡುತ್ತಿದೆ.  ಆದರ ಭಾರತದ ರಸ್ತೆ, ಇಲ್ಲಿನ ಪರಿಸ್ಥಿತಿ ಹಾಗೂ ಸ್ಟೈಲೀಶ್ ಲುಕ್‌ನಿಂದ ಎಸ್‌ಯುವಿ ಕಾರುಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಆದರೆ ನವೆಂಬರ್ ತಿಂಗಳಲ್ಲಿ ಹಲವು ಲೆಕ್ಕಾಚಾರ ಉಲ್ಟಾ ಆಗಿದೆ.ಕಾರಣ ನವೆಂಬರ್ ತಿಂಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗಿದೆ. ಈ ಪೈಕಿ ಮಾರುತಿ ಸುಜುಕಿಗೆ ಕೆಲ ಅಚ್ಚರಿ ಎದುರಾಗಿದೆ. ಕಾರಣ ವ್ಯಾಗನ್ಆರ್, ಸ್ವಿಫ್ಟ್ ಕಾರುಗಳು ಮಾರಾಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದರೆ ನವೆಂಬರ್ ತಿಂಗಳಲ್ಲಿ ಈ ಕಾರುಗಳನ್ನು ಹಿಂದಿಕ್ಕಿರುವ ಮಾರುತಿ ಬಲೆನೋ ಮೊದಲ ಸ್ಥಾನಕ್ಕೇರಿದೆ. 

2024ರ ನವೆಂಬರ್ ತಿಂಗಳಲ್ಲಿ ಒಟ್ಟು 81,551 ಹ್ಯಾಚ್‌ಬ್ಯಾಕ್‌ಗಳು ಮಾರಾಟವಾಗಿವೆ. 2023ರ ನವೆಂಬರ್‌ನಲ್ಲಿ ಮಾರಾಟವಾದ 85,112 ಯೂನಿಟ್‌ಗಳಿಗೆ ಹೋಲಿಸಿದರೆ ಇದು ಶೇ.4.18ರಷ್ಟು ವಾರ್ಷಿಕ ಕುಸಿತವಾಗಿದೆ. 2024ರ ಅಕ್ಟೋಬರ್‌ನಲ್ಲಿ ಮಾರಾಟವಾದ 89,369 ಯೂನಿಟ್‌ಗಳಿಂದ ಮಾಸಿಕ ಮಾರಾಟವೂ ಶೇ.8.75ರಷ್ಟು ಕುಸಿದಿದೆ. ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಕಂಪನಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ನಾಲ್ಕು ಮಾದರಿಗಳಿದ್ದು, ಟಾಪ್ 10ರಲ್ಲಿ ಆರು ಹ್ಯಾಚ್‌ಬ್ಯಾಕ್‌ಗಳಿವೆ.

ಟಾಟಾ ಟಿಯಾಗೋ to ಮಾರುತಿ ಸ್ವಿಫ್ಟ್, ಕೇವಲ ₹3.99 ಲಕ್ಷದಿಂದ ಆರಂಭಗೊಳ್ಳುವ ಟಾಪ್ 5 ಕಾರು!

2024ರ ನವೆಂಬರ್‌ನಲ್ಲಿ 16,293 ಯೂನಿಟ್‌ಗಳು ಮಾರಾಟವಾಗುವ ಮೂಲಕ ಮಾರುತಿ ಸುಜುಕಿ ಬಲೆನೊ ಅಗ್ರಸ್ಥಾನದಲ್ಲಿದೆ. ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಮತ್ತು ಕಾರು ಇದಾಗಿದೆ. 2023ರ ನವೆಂಬರ್‌ನಲ್ಲಿ ಮಾರಾಟವಾದ 12961 ಯೂನಿಟ್‌ಗಳಿಗೆ ಹೋಲಿಸಿದರೆ ಇದು ಶೇ. 25.71  ರಷ್ಟು ಏರಿಕೆಯಾಗಿದೆ. ಪ್ರಸ್ತುತ ಬಲೆನೊ ಶೇ. 19.98 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. 2024 ಅಕ್ಟೋಬರ್‌ನಲ್ಲಿ ಮಾರಾಟವಾದ 19,082 ಯೂನಿಟ್‌ಗಳಿಗೆ ಹೋಲಿಸಿದರೆ ಇದು ಶೇ. 1.3 ರಷ್ಟು ಮಾಸಿಕ ಏರಿಕೆಯಾಗಿದೆ.

ಮಾರುತಿ ಬಲೆನೊ ನಂತರ 14,737 ಯೂನಿಟ್‌ಗಳೊಂದಿಗೆ ಮಾರುತಿ ಸ್ವಿಫ್ಟ್ ಎರಡನೇ ಸ್ಥಾನದಲ್ಲಿದೆ. ಸ್ವಿಫ್ಟ್‌ನ ವಾರ್ಷಿಕ ಮಾರಾಟವು ಶೇ.3.75 ಷ್ಟು ಕುಸಿದಿದೆ. 2023 ರ ನವೆಂಬರ್ ಮತ್ತು 2024ರ ಅಕ್ಟೋಬರ್‌ನಲ್ಲಿ ಕ್ರಮವಾಗಿ 15,311  ಹಾಗೂ 17,539  ಯೂನಿಟ್‌ಗಳು ಮಾರಾಟವಾಗಿವೆ. ಸ್ವಿಫ್ಟ್ ಶೇ.18.07 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಪಟ್ಟಿಯಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ವ್ಯಾಗನ್ R.  20223 ರ ನವೆಂಬರ್‌ನಲ್ಲಿ ಮಾರಾಟವಾದ 16,567  ಯೂನಿಟ್‌ಗಳಿಗೆ ಹೋಲಿಸಿದರೆ 13,982  ಯೂನಿಟ್‌ಗಳ ಮಾರಾಟವು ಶೇ.15.60ರಷ್ಟು ಕುಸಿತವಾಗಿದೆ. ವ್ಯಾಗನ್ Rನ ಮಾಸಿಕ ಮಾರಾಟವು ಶೇ. 0.43 ರಷ್ಟು ಏರಿಕೆಯಾಗಿದೆ. ಪ್ರಸ್ತುತ ಶೇ. 17.15 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಆಲ್ಟೊದ ವಾರ್ಷಿಕ ಮತ್ತು ಮಾಸಿಕ ಮಾರಾಟವು ಕ್ರಮವಾಗಿ ಶೇ.7.54  ಮತ್ತು ಶೇ.12.65 ರಷ್ಟು ಕುಸಿದಿದೆ. ಕಳೆದ ತಿಂಗಳು ಅದರ ಮಾರಾಟವು 7,467 ಯೂನಿಟ್‌ಗಳಿಗೆ ಇಳಿದಿದೆ.

ಹ್ಯುಂಡೈ i10 ನಿಓಸ್‌ಗೆ ಕಳೆದ ತಿಂಗಳು ಬೇಡಿಕೆ ಹೆಚ್ಚಾಗಿದೆ. 2023ರ ನವೆಂಬರ್‌ನಲ್ಲಿ ಮಾರಾಟವಾದ 4,708  ಯೂನಿಟ್‌ಗಳಿಂದ ಶೇ. 20.37  ರಷ್ಟು ಏರಿಕೆಯಾಗಿ 5,667  ಯೂನಿಟ್‌ಗಳಿಗೆ ಏರಿದೆ. ಆದಾಗ್ಯೂ, 2024ರ ಅಕ್ಟೋಬರ್‌ನಲ್ಲಿ ಮಾರಾಟವಾದ 6,235 ಯೂನಿಟ್‌ಗಳಿಗೆ ಹೋಲಿಸಿದರೆ ಅದರ ಮಾಸಿಕ ಮಾರಾಟವು ಶೇ. 9.10 ರಷ್ಟು ಕುಸಿದಿದೆ. ಟಾಟಾ ಟಿಯಾಗೊ/ಇವಿ ಕಳೆದ ತಿಂಗಳು 5,319  ಯೂನಿಟ್‌ಗಳನ್ನು ಮಾರಾಟ ಮಾಡಿದೆ. ವಾರ್ಷಿಕವಾಗಿ ಶೇ. 3.43 ರಷ್ಟು ಕುಸಿತ ಕಂಡಿದ್ದರೂ, ಮಾಸಿಕವಾಗಿ ಶೇ. 13.61  ರಷ್ಟು ಏರಿಕೆಯಾಗಿದೆ.

2024೪ರ ನವೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಹ್ಯುಂಡೈ i20 (3,925 ಯೂನಿಟ್‌ಗಳು), ಟೊಯೋಟಾ ಗ್ಲಾನ್ಜಾ (3,806 ಯೂನಿಟ್‌ಗಳು), ಮಾರುತಿ ಸೆಲೆರಿಯೊ (2,379ಯೂನಿಟ್‌ಗಳು) ಸೇರಿವೆ. i20 ಮತ್ತು ಗ್ಲಾನ್ಜಾ ಮಾರಾಟ ಕುಸಿದಿದೆ.2023ರ ನವೆಂಬರ್‌ನಲ್ಲಿ ಮಾರಾಟವಾದ 2,215 ಯೂನಿಟ್‌ಗಳಿಗೆ ಹೋಲಿಸಿದರೆ ಶೇ.7.40  ರಷ್ಟು ಏರಿಕೆಯೊಂದಿಗೆ ಸೆಲೆರಿಯೊ ಹೆಚ್ಚಿನ ಗಮನ ಸೆಳೆದಿದೆ. ಕಳೆದ ತಿಂಗಳು 2,283 ಯೂನಿಟ್‌ಗಳ ಮಾರಾಟದೊಂದಿಗೆ ಮಾರುತಿ S-ಪ್ರೆಸೊಗೂ ಬೇಡಿಕೆಯಿದೆ.

ಸಿರಿಯಾ ಅಧ್ಯಕ್ಷ ಪಲಾಯನದ ಬೆನ್ನಲ್ಲೇ ಫೆರಾರಿ, ಲ್ಯಾಂಬೋರ್ಗಿನಿ ಸೇರಿ ದುಬಾರಿ ಕಾರು ಲೂಟಿ!

2024ರ ನವೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವುದು ಮಾರುತಿ ಇಗ್ನಿಸ್. ಆದರೆ ಅದರ ವಾರ್ಷಿಕ ಮಾರಾಟವು ಶೇ. 32.71  ರಷ್ಟು ಏರಿಕೆಯಾಗಿ 2,203  ಯೂನಿಟ್‌ಗಳಿಗೆ ತಲುಪಿದೆ. 2023ರ ನವೆಂಬರ್‌ನಲ್ಲಿ 1,660  ಯೂನಿಟ್‌ಗಳು ಮಾರಾಟವಾಗಿವೆ. 2024ರ ಅಕ್ಟೋಬರ್‌ನಲ್ಲಿ ಮಾರಾಟ 2,663 ಯೂನಿಟ್‌ಗಳಿಗೆ ತಲುಪಿದೆ. ಕಳೆದ ತಿಂಗಳು 2,083 ಯೂನಿಟ್‌ಗಳ ಮಾರಾಟದೊಂದಿಗೆ ಟಾಟಾ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ವಾರ್ಷಿಕವಾಗಿ ಶೇ. 57.96  ರಷ್ಟು ಮತ್ತು ಮಾಸಿಕವಾಗಿ ಶೇ. 21.16 ರಷ್ಟು ಕುಸಿತ ಕಂಡಿದೆ.

ಎಂಜಿ ಕಾಮೆಟ್ ಇವಿ (600 ಯೂನಿಟ್‌ಗಳು), ರೆನಾಲ್ಟ್ ಕ್ವಿಡ್ (549 ಯೂನಿಟ್‌ಗಳು), ಸಿಟ್ರೊಯೆನ್ C3 (200 ಯೂನಿಟ್‌ಗಳು) ಬೇಡಿಕೆಯಲ್ಲಿ ತೀವ್ರ ಕುಸಿತ ಕಂಡರೆ, ಸಿಟ್ರೊಯೆನ್ ಇಸಿ3 ಇವಿಗೆ 2024ರ ನವೆಂಬರ್‌ನಲ್ಲಿ ಬೇಡಿಕೆ ಮೂರು ಪಟ್ಟು ಹೆಚ್ಚಾಗಿ 16 ಯೂನಿಟ್‌ಗಳಿಗೆ ಏರಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 18 ಯೂನಿಟ್‌ಗಳಿಂದ ಶೇ.238.89 ರಷ್ಟು ಏರಿಕೆಯಾಗಿದೆ.

ಬಲೆನೊದ ವೈಶಿಷ್ಟ್ಯಗಳು
ಬಲೆನೊ 1.2 ಲೀಟರ್, ನಾಲ್ಕು ಸಿಲಿಂಡರ್ K12N ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 83 bhp ಪವರ್ ಉತ್ಪಾದಿಸುತ್ತದೆ. ಇನ್ನೊಂದು ಆಯ್ಕೆಯೆಂದರೆ 1.2ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್, ಇದು 90 bhp ಪವರ್ ಉತ್ಪಾದಿಸುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ. ಬಲೆನೊ ಸಿಎನ್‌ಜಿ 1.2 ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 78 ಪಿಎಸ್ ಪವರ್ ಮತ್ತು 99 Nm ಟಾರ್ಕ್ ಉತ್ಪಾದಿಸುತ್ತದೆ.
 

Latest Videos
Follow Us:
Download App:
  • android
  • ios