Asianet Suvarna News Asianet Suvarna News

ಮಾರುತಿ, ಮಹೀಂದ್ರಾ ಚೇತರಿಕೆ: ಉಳಿದ ಕಂಪೆನಿಗಳಿಗಿಲ್ಲ ಲಾಭ!

ಮಾರುತಿ, ಮಹೀಂದ್ರಾ ಚೇತರಿಕೆ| ಉಳಿದ ವಾಹನ ಕಂಪನಿಗಳಿಗೆ ಇನ್ನೂ ಚೇತರಿಕೆ ಇಲ್ಲ

Maruti and Mahindra sales rise in December
Author
Bangalore, First Published Jan 2, 2020, 4:33 PM IST

ನವದೆಹಲಿ[ಜ.02]: ಕಳೆದ ಹಲವು ತಿಂಗಳಿನಿಂದ ದೇಶದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಉಂಟಾಗಿರುವ ಭಾರೀ ಹಿಂಜರಿತ ಮುಂದುವರಿದಿದೆ. ಆದರೆ ಈ ಹಿಂಜರಿಕೆಯಲ್ಲೂ ಮಾರುತಿ ಮತ್ತು ಮಹೀಂದ್ರಾ ಕಂಪನಿಗಳು ಮಾರಾಟದಲ್ಲಿ ಏರುಗತಿ ದಾಖಲಿಸುವ ಮೂಲಕ ಬದಲಾವಣೆಯ ಸುಳಿವು ನೀಡಿವೆ.

ಮಾರುತಿ ಸುಝುಕಿ ಕಂಪನಿ 2019ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಶೇ.2.4ರಷ್ಟುಪ್ರಗತಿ ದಾಖಲಿಸಿದೆ. 2018ರ ಡಿಸೆಂಬರ್‌ನಲ್ಲಿ 121,479 ಕಾರು ಮಾರಾಟವಾಗಿದ್ದರೆ, ಈ ವರ್ಷ ಅದು 1,24,375ಕ್ಕೆ ಏರಿದೆ. ಇದೇ ವೇಳೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿ ಈ ವರ್ಷದ ಡಿಸೆಂಬರ್‌ನಲ್ಲಿ 37081 ವಾಹನ ಮಾರಾಟದ ಮೂಲಕ ಶೇ.1ರ ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಅದು 36,690 ವಾಹನ ಮಾರಿತ್ತು.ಮಾರಾಟವಾಗಿದ್ದರೆ ಈ ಬಾರಿ 37,081 ಕಾರುಗಳು ಮಾರಾಟವಾಗಿದೆ.

ಇದೇ ವೇಳೆ ಹ್ಯುಂಡೈ ಕಾರು ಮಾರಾಟದಲ್ಲಿ ಶೇ.9.8ರಷ್ಟು, ಟೊಯೋಟಾ ಶೇ.16.36, ವೋಲ್ವೋ ಎಲೆಕ್ಟ್ರಿಕಲ್‌ ವಾಣಿಜ್ಯ ವಾಹನ ಮಾರಾಟ ಶೇ.19.1ರಷ್ಟು, ಟಾಟಾ ಮೋಟಾ​ರ್‍ಸ್ ಶೇ.12ರಷ್ಟುಕುಸಿತ ದಾಖಲಿಸಿದೆ.

Follow Us:
Download App:
  • android
  • ios