Car Delivery 90 ದಿನದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರ XUV700,14 ಸಾವಿರ ಕಾರು ಡೆಲಿವರಿ, 1 ಲಕ್ಷ ಬುಕಿಂಗ್!

*ಭರವಸೆಯಂತೆ ವಾಹನಗಳ ಡೆಲಿವರಿ

*ದೇಶಾದ್ಯಂತ 75 ಸಾವಿರಕ್ಕೂ ಹೆಚ್ಚು ಬುಕಿಂಗ್

*2021ರ ಭಾರಿ ಬೇಡಿಕೆಯ ಎಸ್‌ಯುವಿ

Mahindra XUV700 delivers 14000 cars in first slot across India just 90 days

ನವದೆಹಲಿ(ಜ.27): ಭಾರತೀಯ ಮಾರುಕಟ್ಟೆಯಲ್ಲಿ ಸದೃಢ ಮಿಡ್-ಸೈಜ್( Mid size) ಎಸ್ಯುವಿ (SUV)ಯಾಗಿ ಗುರುತಿಸಿಕೊಂಡಿರುವ ಮಹೀಂದ್ರ  ಎಕ್ಸ್ಯುವಿ700 (Mahindra XUV700), ತನ್ನ ಭರವಸೆಯನ್ನು ಉಳಿಸಿಕೊಂಡಿದ್ದು, ಮೊದಲ ಹಂತದಲ್ಲಿ 14 ಸಾವಿರ ವಾಹನಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡಿದೆ. 2021ರ ಆ.15ರಂದು ಅಂದರೆ ಸ್ವಾತಂತ್ರ್ಯೋತ್ಸವದ ದಿನದಂದು ಈ ಮಹತ್ವಕಾಂಕ್ಷೆಯ ವಾಹನ ಬಿಡುಗಡೆಯಾಗಿತ್ತು.
ಎಕ್ಸ್ಯುವಿ 700, 2021ರ ಕಾರು ಮಾರುಕಟ್ಟೆಯ ಅತಿ ದೊಡ್ಡ ಬಿಡುಗಡೆಯಾಗಿದೆ. ಮೂರು-ಸಾಲು ಸೀಟಿನ ಈ ಎಸ್ಯುವಿ (SUV) ಆಕರ್ಷಕ ನೋಟ, ವೈಶಿಷ್ಟ್ಯಗಳಿಂದ ತುಂಬಿದ ಕ್ಯಾಬಿನ್ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 

ಈ ಕಾರು ಬಿಡುಗಡೆಯಾಗುತ್ತಿದ್ದಂತೆಯೇ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದು, ಬುಕಿಂಗ್ ಆರಂಭವಾದ ಮೊದಲ 55 ನಿಮಿಷಗಳಲ್ಲೇ 25 ಸಾವಿರ ಕಾರುಗಳು ಬುಕ್ ಆಗಿವೆ. ನಂತರ ಮರುದಿನ ಕೂಡ ಕೇವಲ ಒಂದು ಗಂಟೆಯಲ್ಲಿ 25 ಸಾವಿರ ಕಾರುಗಳ ಬುಕಿಂಗ್ ನಡೆದಿದೆ. ಮಹೀಂದ್ರಾ 2020ರಲ್ಲಿ ಬಿಡುಗಡೆಯಾದ ನವೀಕರಿಸಿದ ಥಾರ್ನ (Thar) ಯಶಸ್ಸಿನ ನಡುವೆಯೇಬೊಲೆರೋ ನಿಯೋ ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿತ್ತು. ಇದಾದ ನಂತರ ಕಂಪನಿಯ ಬಲವಾದ ಆರ್ಥಿಕ ಪ್ರದರ್ಶನಕ್ಕೆ ಹೆಚ್ಚಾಗಿ ಮನ್ನಣೆ ಪಡೆದ ವಾಹನ ಎಂದರೆ ಎಕ್ಸ್ಯುವಿ 700 ( XUV700) ಆಗಿದೆ.

Top 5 SUV cars ಟಾಟಾ ಪಂಚ್ to ಮಹೀಂದ್ರ XUV700,ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು!

ಮಹೀಂದ್ರಾ XUV700700 ಬೇಡಿಕೆ ಹೆಚ್ಚಲು ಕೆಲ ಕಾರಣಗಳು:
ಮಹೀಂದ್ರ XUV700 ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆ:
ಎಂಎಕ್ಸ್ (MX) ಸರಣಿಯಲ್ಲಿನ ಎಕ್ಸ್ಯುವಿ 700 (XUV700) 2.0-ಲೀಟರ್ ಟರ್ಬೊ ಜಿಡಿಐ ಎಂಸ್ಟಾಲಿಯನ್  (GDi mStallion) ಪೆಟ್ರೋಲ್ ಎಂಜಿನ್ನಿಂದ ಚಾಲಿತವಾಗಿದ್ದು ಅದು 195 ಬಿಎಚ್ಪಿ ಅನ್ನು ಉತ್ಪಾದಿಸುತ್ತದೆ ಮತ್ತು 380 ಎನ್ಎಂ ಟಾರ್ಕ್ ಅನ್ನು ಹೊಂದಿದೆ. ನಂತರ 2.2-ಲೀಟರ್ ಕಾಮನ್ರೈಲ್ ಟರ್ಬೊ ಡೀಸೆಲ್ ಎಂಹ್ವಾಕ್ ಎಂಜಿನ್ 153 ಬಿಎಚ್ಪಿ ಮತ್ತು 360 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ.

ಬೆಂಗಳೂರು ತಲುಪಿದ ಮಹೀಂದ್ರಾ XUV700 ಫ್ರೀಡಂ ಡ್ರೈವ್ ಅಭಿಯಾನ!

ಮಹೀಂದ್ರ XUV700700 ವಿನ್ಯಾಸ:
XUV700 ಹೊರ ವಿನ್ಯಾಸ ಕೂಡ ಇದರ ಬೇಡಿಕೆ ಹೆಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮುಂಭಾಗದಲ್ಲಿ ಎದ್ದುಕಾಣುವ ಎಲ್ಇಡಿ ಡಿಆರ್ಲೆ್ಗಳು, ಮುಂಭಾಗದ ಕಪ್ಪು ಗ್ರಿಲ್, ವಾಹನಕ್ಕೆ ಹೊಂದಿಕೊಂಡಂತಿರುವ ಡೋರ್ ಹ್ಯಾಂಡಲ್ಗಳು, ದೊಡ್ಡ ಚಕ್ರಗಳು, ಸ್ಪೋರ್ಟಿ ಅಲಾಯ್ ವಿನ್ಯಾಸಗಳು ಇದರ ಪ್ರಮುಖ ಆಕರ್ಷಣೆಯಾಗಿವೆ.

ಬೃಹತ್ ಕ್ಯಾಬಿನ್:
XUV700 ಐದು ಮತ್ತು ಏಳು ಆಸನಗಳಲ್ಲಿ ಲಭ್ಯವಿದೆ. ವೇರಿಯಂಟ್ಗಳ ಆಧಾರದ ಮೇಲೆ, ಕ್ಯಾಬಿನ್ನಲ್ಲಿ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು 10.25-ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್, ಅದೇ ಗಾತ್ರದ ಡಿಜಿಟಲ್ ಕ್ಲಸ್ಟರ್, 70 ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ ಅಡ್ರೆನಾಖರ್ಸ್ ಕನೆಕ್ಟ್, ಮೆಮೊರಿಯೊಂದಿಗೆ ಆರು-ವೇ ಪವರ್ ಡ್ರೈವರ್ ಸೀಟ್, 360-ಡಿಗ್ರಿ ಕ್ಯಾಮೆರಾ, ಸೋನಿ 3ಡಿ ಸೌಂಡ್, ವೈರ್ಲೆಸ್ ಚಾರ್ಜಿಂಗ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

Mahindra Car Offers ಆಯ್ದ ಕಾರಿನ ಮೇಲೆ ಗರಿಷ್ಠ 82,000 ರೂ ಡಿಸ್ಕೌಂಟ್ ಘೋಷಿಸಿದ ಮಹೀಂದ್ರ!

ಈ ಎಸ್ಯುವಿ ಗ್ಲೋಬಲ್ ಎನ್-ಕ್ಯಾಪ್ನ ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದು ಸುಧಾರಿತ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರುತ್ತದೆ, ಇದು ರಸ್ತೆ ಅಪಘಾತಗಳು ಅಥವಾ ಮಾನವ ದೋಷದಿಂದ ಉಂಟಾದ ಅಪಘಾತಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಇದರ ಅಡಿಯಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಟ್ರಾಫಿಕ್ ಸಿಗ್ ರೆಕಗ್ನಿಷನ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮುಂತಾದ ವೈಶಿಷ್ಟ್ಯಗಳು ಬರುತ್ತವೆ. ಇದು ಡ್ಯುಯಲ್ ಏರ್‌ಬ್ಯಾಗ್‌ಗಳಿವೆ. ಮಹೀಂದ್ರ XUV700 ಬೆಲೆ ಅದರ ವೇರಿಯಂಟ್ಗಳ ಮೇಲೆ ಅವಲಂಬಿತವಾಗಿರುತ್ತದೆ. ಐದು ಸೀಟುಗಳನ್ನು ಹೊಂದಿರುವ ಎಂಎಕ್ಸ್ ಪೆಟ್ರೋಲ್  ವೇರಿಯಂಟ್ ಬೆಲೆ 2.95 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

Latest Videos
Follow Us:
Download App:
  • android
  • ios