ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿಯಾಗಿರುವ ಮಹೀಂದ್ರಾ ಕಂಪನಿ ತನ್ನ ಹಲವು ಪ್ರಯಾಣಿಕ ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಈ ಪೈಕಿ ಮಹೀಂದ್ರಾ ಎಕ್ಸ್‌ಯುವಿ300 ಇದೀಗ ಸೇಫ್ಟಿ ರ್ಯಾಂಕಿಂಗ್‌ನಲ್ಲಿ ಫೈವ್ ಸ್ಟಾರ್ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಭಾರತೀಯ ಕಾರು ಎಂಬ ಕೀರ್ತಿಯನ್ನು ಸಂಪಾದಿಸಿದೆ.
ಸುರಕ್ಷತೆ ಮತ್ತು ಮಜಬೂತ್ತಾದ ಪ್ರಯಾಣಿಕ ವಾಹನಗಳ ತಯಾರಿಕೆಯಲ್ಲಿ ದೇಶೀಯ ಮೋಟಾರು ವಾಹನ ಉತ್ಪಾದನಾ ಕಂಪನಿ ಮಹೀಂದ್ರಾ ಮುಂದಿದೆ. ಈ ಕಂಪನಿಯ ಮಹೀಂದ್ರಾ ಎಕ್ಸ್‌ಯುವಿ300 ಎಸ್‌ಯುವಿ ಮತ್ತೊಂದು ಮೈಲುಗಲ್ಲು ನೆಟ್ಟಿದೆ ಇದೀಗ.
ಇಂಡಿಯಾ ಟು ಸಿಂಗಾಪುರ ಬಸ್, ವಯಾ ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷ್ಯಾ!
ವಿಷಯ ಏನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಸೇಫ್ಟಿ ರ್ಯಾಂಕಿಂಗ್‌ನಲ್ಲಿ 5 ಸ್ಟಾರ್ ಪಡೆದ ಭಾರತದ ಮೊದಲ ಸಬ್ ಕಾಂಪಾಕ್ಟ್ ಕಾರು ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಈ ಬಗ್ಗೆ ಗ್ಲೋಬಲ್ ಎನ್‌ಸಿಎಪಿ ತನ್ನ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ವಿಶೇಷ ಎಂದರೆ, 2020ರಲ್ಲಿ ಭಾರತದಲ್ಲಿ ಎಕ್ಸ್‌ಯುವಿ300 ಫೈವ್ ಸ್ಟಾರ್ ರೇಟಿಂಗ್ ಸಂಪಾದಿಸಿತ್ತು. ಮತ್ತೊಂದು ವಿಶೇಷ ಏನೆಂದರೆ, ಗ್ಲೋಬಲ್ ಎನ್‌ಸಿಎಂಪಿ ಇಂಡಿಯನ್ ಮತ್ತು ಆಫ್ರಿಕನ್ ಪ್ರೋಗ್ರಾಮ್ ಎರಡೂ ಒಂದೇ ರೀತಿಯ ಸುರಕ್ಷೆಯ ಪರೀಕ್ಷೆಯ ನಿಯಮಗಳನ್ನು ಹೊಂದಿವೆ. ಉತ್ಪಾದನಾ ಅನುಸರಣೆ ಪರಿಶೀಲನೆಯ ನಂತರ, ದಕ್ಷಿಣ ಆಫ್ರಿಕಾದ ಮಾದರಿಯಲ್ಲಿಯೂ ಸಹ ರೇಟಿಂಗ್ ಅನ್ನು ದೃಢಪಡಿಸಲಾಗಿದೆ. ಎಕ್ಸ್‌ಯುವಿ300 ಸಬ್ ಕಾಂಪಾಕ್ಟ್ ಕಾರನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಭಾರತದಿಂದಲೇ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.
ಮಹೀಂದ್ರಾ ಎಕ್ಸ್‌ಯುವಿ300 ಕ್ರ್ಯಾಶ್ ಟೆಸ್ಟ್ ರೇಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಟುವರ್ಡ್ಸ್ ಝೀರೋ ಫೌಂಡೇಷನ್ ಪ್ರೆಸಿಡೆಂಟ್ ಡೇವಿಡ್ ವಾರ್ಡ್, ನಮ್ಮ ಆಫ್ರಿಕಾ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಸೇಫ್ಟಿ ಕ್ರ್ಯಾಶ್‌ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿರುವುದಕ್ಕೆ ನಮಗೆ ಸಂತೋಷವನ್ನು ತಂದಿದೆ. ಆಫ್ರಿಕಾದಲ್ಲಿ ವಾಹನ ಸುರಕ್ಷತೆಗೆ ಸಂಬಂಧಿಸಿದಂತೆ ಇದೊಂದು ಲ್ಯಾಂಡ್‌ಮಾರ್ಕ್ ಆಗಿದೆ. ಮಹೀಂದ್ರಾದಿಂದ ಮುಂದುವರಿದ ಸುರಕ್ಷತಾ ಬದ್ಧತೆಯನ್ನು ಗುರುತಿಸಲು ನಾವು ವಿಶೇಷವಾಗಿ ಸಂತೋಷಪಟ್ಟಿದ್ದೇವೆ. ಎಕ್ಸ್‌ಯುವಿ300 ಸಬ್ ಕಾಂಪಾಕ್ಟ್ ಕಾರನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಜಾಗತಿಕ ರಫ್ತು ಮಾರುಕಟ್ಟೆಗಳಿಗೆ ಸುರಕ್ಷತಾ ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ದೇಶೀಯ ಭಾರತೀಯ ವಾಹನ ಉದ್ಯಮದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದ್ದಾರೆ.
8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್
ಮಹೀಂದ್ರಾ ಎಕ್ಸ್‌ಯುವಿ 300 ಸಬ್ ಕಾಂಪಾಕ್ಟ್ ಕಾರು ಕ್ರ್ಯಾಶ್ ಪರೀಕ್ಷೆ ವೇಳೆ, ಡ್ರೈವರ್ ಮತ್ತು ಕೋ ಡ್ರೈವರ್ ತಲೆ ಮತ್ತು ಕುತ್ತಿಗೆ ಅತ್ಯುತ್ತಮ ರಕ್ಷಣೆ ಒದಗಿಸುತ್ತದೆ. ಕ್ರ್ಯಾಶಿಂಗ್ ಟೆಸ್ಟ್ ವೇಳೆ, ಡ್ರೈವರ್ ಎದೆ ಭಾಗಕ್ಕೆ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತಲ್ಲದೇ, ಕೋ ಡ್ರೈವರ್‌ಗೂ ಈ ವಿಷಯದಲ್ಲಿ ಹೆಚ್ಚಿನ ಸುರಕ್ಷತೆ ಸಾಧ್ಯವಾಗಿದೆ. ಕಾರಿನ ಬಾಡಿಶೆಲ್ ಅತ್ಯುತ್ತಮವಾಗಿದ್ದು ಸ್ಥಿರವಾಗಿದೆ ಎಂದು ಭಾವಿಸಲಾಗಿದೆ ಮತ್ತು ಹೆಚ್ಚಿನ ಭಾರವನ್ನು ತಾಳಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಇದೇ ವೇಳೆ ಪಾದವಿಡಲು ಇರುವ ಜಾಗ ಕೂಡ ಸ್ಥಿರವಾಗಿರುವುದು ಪರೀಕ್ಷೆ ವೇಳೆ ಗೊತ್ತಾಗಿದೆ. ಯುಎನ್95 ಸೈಡ್ ಇಂಪಾಕ್ಟ್ ರೆಗ್ಯುಲೆಷನ್‌ನಲ್ಲಿ ಎಕ್ಸ್‌ಯುವಿ 300 ತಾಂತ್ರಿಕ ಅಗತ್ಯಗಳನ್ನು ಪೂರೈಸಿದೆ. ಅಂದರೆ, ಫ್ರಂಟ್ ಸೀಟಿನ ಡ್ರೈವರ್ ಹಾಗೂ ಕೋ ಡ್ರೈವರ್ ಅವರಿಗೆ ಸೀಟ್ ಬೆಲ್ಟ್ ರಿಮೈಂಡರ್ ಹಾಗೂ ಎಬಿಎಸ್ ಸೇರಿದಂತೆ ಇನ್ನಿತರ ತಾಂತ್ರಿಕ ಸಂಗತಿಗಳಾಗಿವೆ.
ಭಾರತದ ಆಟೋಮೊಬೈಲ್ ಕ್ಷೇತ್ರದ ಬಹುದೊಡ್ಡ ಕಂಪನಿಯಾಗಿರುವ ಮಹೀಂದ್ರಾ, ಪ್ರಯಾಣಿಕ ವಾಹನಗಳ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ. ಮಹೀಂದ್ರ ಕಂಪನಿಯ ಬಹುತೇಕ ಕಾರುಗಳು, ಜೀಪ್‌ಗಳು ವಿಷಯದಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಥಾರ್ ಕೂಡ ಹೆಚ್ಚು ಜನಪ್ರಿಯವನ್ನು ಪಡೆದುಕೊಳ್ಳುತ್ತದೆ. ದೇಶೀ ವಾಹನ ಉತ್ಪಾದನಾ ಕಂಪನಿಯಾಗಿರುವ ಮಹೀಂದ್ರ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂಬುದಕ್ಕೆ ಇದು ಕೂಡ ನಿದರ್ಶನವಾಗಿದೆ. ಈ ಒಂದು ಕಾರಣದಿಂದಲೇ ಭಾರತದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಂಪನಿಗೆ ಸಾಧ್ಯವಾಗಿದೆ ಎಂದು ಹೇಳಬಹುದು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 29, 2021, 3:44 PM IST