Asianet Suvarna News Asianet Suvarna News

Tata Nexon ಕಾರಿನ ಇಂಜಿನ್‌ ಬೇನಲ್ಲಿ ವಾರವಿದ್ದ ಕಿಂಗ್‌ ಕೋಬ್ರಾ

ಇಲ್ಲೊಂದು ಕಿಂಗ್‌ ಕೋಬ್ರಾ ಟಾಟಾ ನೆಕ್ಸಾನ್ಕಾರಿನಲ್ಲಿ ಸೇರಿಕೊಂಡು 240 ಕಿಲೋಮೀಟರ್ಗೂ ಹೆಚ್ಚು ಪ್ರಯಾಣಿಸಿದ ಘಟನೆ ವರದಿಯಾಗಿದೆ.

King Kobra stays in engine bey of Tata Nexon for a week
Author
First Published Sep 2, 2022, 1:20 PM IST

ನಿಮ್ಮ ಮನೆಯ ಮುಂದೆ ಅಥವಾ ಪಾರ್ಕಿಂಗ್‌ ಲಾಟ್‌ನಲ್ಲಿ (Parking lot) ನಿಲ್ಲಿಸಿರುವ ಕಾರಿನಲ್ಲಿ ಇಲಿ, ಹೆಗ್ಗಣಗಳು ಸೇರಿಕೊಳ್ಳುವುದು ಹೊಸದೇನಲ್ಲ. ಕೆಲವೊಮ್ಮೆ ಹಾವುಗಳು ಸೇರಿಕೊಳ್ಳುತ್ತವೆ. ಇದು ಅಪಾಯಕಾರಿ ಕೂಡ ಆಗಬಹುದು. ಇಲ್ಲೊಂದು ಕಿಂಗ್‌ ಕೋಬ್ರಾ (king Kobra) ಟಾಟಾ ನೆಕ್ಸಾನ್ (Tata Nexon) ಕಾರಿನಲ್ಲಿ ಸೇರಿಕೊಂಡು 240 ಕಿಲೋಮೀಟರ್ಗೂ ಹೆಚ್ಚು ಪ್ರಯಾಣಿಸಿದ ಘಟನೆ ವರದಿಯಾಗಿದೆ. ಇದು  ಒಂದು ವಾರದವರೆಗೆ ಕಾರಿನ ಇಂಜಿನ್ ಬೇಯಲ್ಲಿ ವಾಸಿಸುತ್ತಿದ್ದಂತೆ.

ಒಂದು ವಾರ ಕಾರಿನಲ್ಲಿದ್ದ ಹಾವು ಅಂತಿಮವಾಗಿ ಹತ್ತಿರದ ಮನೆಯಲ್ಲಿ ಕಾಣಿಸಿಕೊಂಡಿದೆ. ನಂತರ ಅದನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಈಗಾಗಲೇ ಆನ್ಲೈನ್ನಲ್ಲಿ ವೈರಲ್‌ ಆಗಿದ್ದು, ಟಾಟಾ ನೆಕ್ಸಾನ್ ಎಸ್ಯುವಿ (SUV) ಮಾಲೀಕರು ಇಡೀ ಘಟನೆಯನ್ನು ವಿವರಿಸಿದ್ದಾರೆ. ಈ ವಿಡಿಯೋವನ್ನು MediaoneTV ಲೈವ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾವನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಟಾಟಾ ನೆಕ್ಸಾನ್ ಮಾಲೀಕ ಸುಜಿತ್ ಕೊಟ್ಟಾಯಂ ಜಿಲ್ಲೆಯ ಅರ್ಪೂಕರ ನಿವಾಸಿ ಸುಜಿತ್. ಇವರು ಆಗಸ್ಟ್ 2 ರಂದು ತಮ್ಮ ಟಾಟಾ ನೆಕ್ಸಾನ್ನಲ್ಲಿ ಮಲಪ್ಪುರಂ ಜಿಲ್ಲೆಯ ನಿಲಂಬೂರ್ಗೆ ಪ್ರಯಾಣಿಸಿದ್ದರು. ನಿಲಂಬೂರಿನಲ್ಲಿ ಕಾರನ್ನು ನಿಲ್ಲಿಸಿದ್ದಾಗ ಸುಜಿತ್ ತಮ್ಮ ಕಾರಿನಲ್ಲಿ ಕಿಂಗ್ ಕೋಬ್ರಾವನ್ನು ನೋಡಿದ್ದಾರೆ.

ಕಾರಿನಲ್ಲಿ 200 ಕಿಲೋ ಮೀಟರ್‌ಗೂ ದೂರ ಪ್ರಯಾಣಿಸಿದ ಕೋಬ್ರಾ ಪೊಲೀಸರ ವಶಕ್ಕೆ

ತಕ್ಷಣ ಅವರು ಹಾವನ್ನು ಹೊರ ತೆಗೆಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರು. ಆಗ ಹಾವು ಇಂಜಿನ್ ಬೇ ಒಳಗೆ ಪ್ರವೇಶಿಸಿ ಕಾರು ಬ್ಯಾಟರಿಯ ಪಕ್ಕದಲ್ಲಿ ಕುಳಿತಿತ್ತು. ಅದು ಬ್ಯಾಟರಿಯ ಅಡಿಯಲ್ಲಿ ಹೋಗಿದ್ದರಿಂದ ಅಧಿಕಾರಿಗಳಿಗೆ ಅದನ್ನು ರಕ್ಷಿಸಲು ತೊಂದರೆಯಾಯಿತು. ಆಗ ಅಧಿಕಾರಿಗಳು ಸುಜಿತ್ಗೆ ಕಾರನ್ನು ಸ್ಟಾರ್ಟ್ ಮಾಡಲು ಕೇಳಿದರು ಮತ್ತು ಇಂಜಿನ್ ತುಂಬಾ ಬಿಸಿಯಾದರೆ, ಹಾವು ತಾನಾಗಿಯೇ ಹೊರಬರುತ್ತದೆ ಎಂದು ಅವರು ಭಾವಿಸಿದರು. ಆದರೆ, ಅದು ಆಗಲಿಲ್ಲ, ಆದ್ದರಿಂದ ಅವರು ಕಾರನ್ನು ಒಂದೆರಡು ದಿನಗಳವರೆಗೆ ಒಂದೆಡೆ ನಿಲ್ಲಿಸಿ ಹಾವು ಹೊರಬರಲು ಸಮಯ ನೀಡಿದರು. ಒಂದೆರಡು ದಿನಗಳ ನಂತರ, ಮಾಲೀಕರು ಕಾರನ್ನು ಸರ್ವೀಸ್ ಸ್ಟೇಷನ್ಗೆ ತೆಗೆದುಕೊಂಡು ಹೋಗಿ ಅಂಡರ್ ಬಾಡಿ ಪರೀಕ್ಷಿಸಲು ಕಾರನ್ನು ಎತ್ತಿದರು.

ಒಂದು ವೇಳೆ ಹಾವು ಹೊರ ಬರದಿದ್ದರೆ ಕಾರನ್ನು ಡೀಸೆಲ್ ಹಾಕಿ ತೊಳೆಯಲು ಯೋಜಿಸಿದ್ದರು. ಆದರೆ, ಅವೆಲ್ಲಾ ಮಾಡಿದ ನಂತರ ಅವರ ಕಾರಿನಲ್ಲಿ ಹಾವು ಕಾಣದ ಕಾರಣ ಹಾವು ಹೊರಕ್ಕೆ ತೆರಳಿರಬಹುದು ಎಂದು ಭಾವಿಸಿದ್ದರು. ಹಾವು ಹೊರಗೆ ಹೋಗುವುದನ್ನು ಅವರು ನೋಡಿರಲಿಲ್ಲ. ನಂತರ ಅವರು ಕಾರನ್ನು ನಿಲಂಬೂರಿನಿಂದ ಸುಮಾರು 240 ಕಿಮೀ ದೂರದಲ್ಲಿರುವ ಅರ್ಪೂಕಾರದಲ್ಲಿರುವ ತಮ್ಮ ಮನೆಗೆ ಓಡಿಸಿದರು. ಅದರೆ, ಒಂದು ವಾರದ ನಂತರ, ಅವರು ತಮ್ಮ ಕಾರಿನ ಕೆಳಗೆ ಹಾವಿನ ಚರ್ಮವನ್ನು ನೇತಾಡುತ್ತಿರುವುದನ್ನು ಕಂಡಾಗ, ತಮ್ಮ ಕಾರಿನಲ್ಲಿ ಹಾವು ಇನ್ನೂ ಇದೆ ಎಂದು ಅರಿತರು.

ಹಬ್ಬದ ಋತುವಿಗೆ ಟಾಟಾದಿಂದ ಭರ್ಜರಿ ಕೊಡುಗೆ, JET ಎಡಿಶನ್ ಕಾರು ಬಿಡುಗಡೆ!

ತಕ್ಷಣ ಅವರು ತಮ್ಮ ಪ್ರದೇಶದಲ್ಲಿ ಹಾವು ರಕ್ಷಣಾ ತಂಡವನ್ನು ಕರೆದು ಹಾವಿನ ಹುಡುಕಾಟವನ್ನು ಪ್ರಾರಂಭಿಸಿದರು. ಕಾರನ್ನು ಪರೀಕ್ಷಿಸಲು ಬಂಪರ್ ತೆಗೆದರು ಆದರೆ, ಎಲ್ಲಿಯೂ ಹಾವು ಕಾಣಿಸಲಿಲ್ಲ. ಇದಾದ ಒಂದೆರಡು ದಿನಗಳ ನಂತರ ಪಕ್ಕದ ಮನೆಯೊಂದರಲ್ಲಿ ಹಾವು ಕಾಣಿಸಿಕೊಂಡಿದೆ ಎಂಬ ಸುದ್ದಿ ಸುಜಿತ್ಗೆ ತಿಳಿಯಿತು. ಕಿಂಗ್ ಕೋಬ್ರಾ (King Cobra) ಕಥೆಯ ಬಗ್ಗೆ ಸ್ಥಳೀಯರಿಗೆ ಈಗಾಗಲೇ ತಿಳಿದಿದ್ದರಿಂದ ಸುಜಿತ್ಗೆ ಕರೆ ಮಾಡಿ ಅದೇ ಹಾವು ಎಂದು ಖಚಿತಪಡಿಸಿದ್ದಾರೆ. ಸುಜಿತ್ ಅವರು ಆ ಹಾವು ತಮ್ಮ ನೆಕ್ಸಾನ್ನಲ್ಲಿ ನೋಡಿದಂತೆಯೇ ಇದೆ ಎಂದು ಖಚಿತಪಡಿಸಿದ್ದಾರೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು (Forest Department Officials) ಇದು ಸಾಮಾನ್ಯವಾಗಿ ತಮ್ಮ ಪ್ರದೇಶದಲ್ಲಿ ಕಂಡುಬರದ ಕಿಂಗ್ ಕೋಬ್ರಾ ಎಂದು ಹೇಳಿದ್ದಾರೆ.

Follow Us:
Download App:
  • android
  • ios