Asianet Suvarna News Asianet Suvarna News

ಹೆಚ್ಚು ಸುರಕ್ಷತೆ, ಮೋಸ್ಟ್ ಪವರ್‌ಫುಲ್, ನೂತನ ಸ್ಮಾರ್ಟ್ ಕಿಯಾ ಸೆಲ್ಟೋಸ್ ಕಾರು ಅನಾವರಣ!

ಕಿಯಾ ಸೆಲ್ಟೋಸ್ ಭಾರತದಲ್ಲಿ ಬಹುಬೇಡಿಕೆಯ ಕಾರು. ಇದೀಗ ಕಿಯಾ ಅತ್ಯಂತ ಸ್ಮಾರ್ಟ್ ಹಾಗೂ ಸುರಕ್ಷತೆಯ ಸೆಲ್ಟೋಸ್ ಕಾರು ಅನಾವರಣ ಮಾಡಿದೆ. ನೂತನ ಕಾರು ಹಲವು ಸ್ಮಾರ್ಟ್ ಫೀಚರ್ಸ್ ಜೊತೆಗೆ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. 
 

Kia unveils Most Evolved Safest and Smartest Seltos SUV car in India ckm
Author
First Published Jul 5, 2023, 3:41 PM IST

ಅನಂತಪುರಂ(ಜು.05) : ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಭಾರಿ ಜನಪ್ರಿಯವಾಗಿರುವ ಕಿಯಾ ಮೋಟಾರ್ಸ್ ಇದೀಗ ತನ್ನ ಭಾರಿ ಬೇಡಿಕೆಯ ಸೆಲ್ಟೋಸ್ ಕಾರನ್ನು ಹೊಸ ಅವತಾರದಲ್ಲಿ ಅನಾವರಣ ಮಾಡಿದೆ. ಸ್ಮಾರ್ಟ್, ಪವರ್, ಸುರಕ್ಷಿತ, ಅದ್ಭುತ ಪ್ರಯಾಣ, ಡ್ರೈವಿಂಗ್ ಅನುಭವ, ಅತ್ಯುತ್ತಮ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.   ಕಿಯಾ ನೂತನ ಸ್ಮಾರ್ಟ್ ಸೆಲ್ಟೋಸ್ ಕಾರು ಅತ್ಯಂತ ಸುಧಾರಿತ ಲೆವೆಲ್ 2 ಎಡಿಎಎಸ್‌ 17 ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಭಾರತದಲ್ಲಿ ಇವಿ6 ನಂತಹ ಸೂಪರ್ ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಲಭ್ಯವಿದೆ. ಹೆಚ್ಚುವರಿ 15 ಸುಸ್ಥಿರ ಸುರಕ್ಷತೆ ಫೀಚರ್ಸ್ ಹೊಂದಿದೆ.  

ಸ್ಮಾರ್ಟ್‌ಸ್ಟ್ರೀಮ್‌ ಜಿ1.5 ಟಿ-ಜಿಡಿಐ ಪೆಟ್ರೋಲ್ ಇಂಜಿನ್, 160 ಪಿಎಸ್ ಪವರ್ ಮತ್ತು 253 ಎನ್‌ಎಂ ಟಾರ್ಕ್‌ ಜನರೇಟ್ ಮಾಡುವ ಕಿಯಾ ಇಂಡಿಯಾ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಿಡ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಅತ್ಯಂತ ಶಕ್ತಿಯುತ ಇಂಜಿನ್ ನೀಡುತ್ತಿದೆ.  ಡ್ಯೂಯೆಲ್ ಸ್ಕ್ರೀನ್ ಪನೋರಮಿಕ್ ಡಿಸ್‌ಪ್ಲೇ, 26.04 ಸೆಂ.ಮೀ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಮತ್ತು 26.03 ಸೆಂ.ಮೀ ಎಚ್‌ಡಿ ಟಚ್‌ಸ್ಕ್ರೀನ್ ನ್ಯಾವಿಗೇಶನ್‌, ಡ್ಯೂಯೆಲ್ ಝೋನ್ ಸಂಪೂರ್ಣ ಆಟೋಮ್ಯಾಟಿಕ್ ಏರ್ ಕಂಡೀಷನರ್ ಮತ್ತು ಆರ್‌18 46.20 ಸೆಂ.ಮೀ ಕ್ರಿಸ್ಟಲ್ ಕಟ್ ಗ್ಲಾಸಿ ಬ್ಲಾಕ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಕಿಯಾ ಇದರಲ್ಲಿ ಅತ್ಯಂತ ನಿರೀಕ್ಷಿತ ಡ್ಯೂಯೆಲ್ ಪೇನ್ ಪನೋರಮಿಕ್ ಸನ್‌ರೂಫ್‌ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಸ ಸೆಲ್ಟೋಸ್‌ನಲ್ಲಿ ಸೇರಿಸಿದ್ದು, ಅತ್ಯಂತ ಉತ್ತಮ ಮೌಲ್ಯ ವರ್ಧನೆಯಾಗಿದೆ. ಮಸ್ಕುಲರ್ ಮತ್ತು ಕ್ರೀಡಾ ಲುಕ್ ಅನ್ನು ಹೊಂದಿರುವ ಕ್ರೌನ್ ಜ್ಯೂವೆಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಕನೆಕ್ಟೆಡ್‌ ಟೇಲ್ ಲ್ಯಾಂಪ್‌ಗಳು ಕಿಯಾ ಸಿಗ್ನೇಚರ್ ಸ್ಟಾರ್ ಮ್ಯಾಪ್ ಲೈಟಿಂಗ್ ಕಾನ್ಸೆಪ್ಟ್ ಅನ್ನು ಹೊಂದಿವೆ.

ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್, 3 ವರ್ಷದಲ್ಲಿ 3 ಲಕ್ಷ ಕಾರು ಮಾರಾಟ!

ಸುರಕ್ಷಿತ ಮತ್ತು ಸ್ಮಾರ್ಟ್‌: 2023 ಕಿಯಾ ಸೆಲ್ಟೋಸ್ ಅತ್ಯಂತ ಎವಾಲ್ವ್‌ಡ್‌ 2 ಎಡಿಎಎಸ್‌ ಅನ್ನು ಹೊಂದಿದ್ದು, ಇದರಲ್ಲಿ ಮೂರು ರೇಡಾರ್‌ಗಳಿವೆ (1 ಮುಂಭಾಗದಲ್ಲಿ ಮತ್ತು 2 ಹಿಂಬದಿ ಮೂಲೆಯಲ್ಲಿ) ಮತ್ತು ಒಂದು ಫ್ರಂಟ್ ಕ್ಯಾಮೆರಾ ಇದೆ. ಸೆಲ್ಟೋಸ್‌ನಲ್ಲಿ ಅಳವಡಿಸಿದ ಎಡಿಎಎಸ್‌ ಸಿಸ್ಟಮ್‌ ಸೆಗ್ಮೆಂಟ್‌ನಲ್ಲೇ ಅತ್ಯುತ್ತಮವಾಗಿದ್ದು, 17 ಸುಧಾರಿತ ಅಡಾಪ್ಟಿವ್ ವೈಶಿಷ್ಟ್ಯಗಳಿವೆ.

ಸುರಕ್ಷತೆ ಪ್ಯಾಕ್‌ : ಎಡಿಎಎಸ್‌ ಲೆವೆಲ್‌ 2 ವೈಶಿಷ್ಟ್ಯಗಳ ಜೊತೆಗೆ, ಹೊಸ ಸೆಲ್ಟೋಸ್‌ನಲ್ಲಿ ಕಿಯಾ ಇಂಡಿಯಾ 15 ಸುರಕ್ಷತೆ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದನ್ನು 'ಸುಸ್ಥಿರ 15 ಪ್ರಮಾಣಿತ ಸುರಕ್ಷತೆ ಪ್ಯಾಕ್' ಎಂದು ಕರೆಯಲಾಗಿದ್ದು, ಇದರಲ್ಲಿ ಪ್ರಮಾಣಿತ 6 ಏರ್‌ಬ್ಯಾಗ್‌ಗಳು ಮತ್ತು 3 ಪಾಯಿಂಟ್ ಸೀಟ್‌ ಬೆಲ್ಟ್‌ಗಳಿವೆ. ಇವು ಎಲ್ಲ ವೇರಿಯಂಟ್‌ಗಳಲ್ಲೂ ಲಭ್ಯವಿವೆ. ಇದರಲ್ಲಿ 11 ಆಕ್ಟಿವ್ ಸೇಫ್ಟಿ ಫೀಚರ್‌ಗಳಿವೆ. ಎಬಿಎಸ್ (ಆಂಟಿ ಲಾಕ್ ಬ್ರೇಕ್ ಸಿಸ್ಟಮ್‌), ಬಿಎಎಸ್‌ (ಬ್ರೇಕ್ ಫೋರ್ಸ್ ಅಸಿಸ್ಟ್‌ ಸಿಸ್ಟಮ್), ಆಲ್ ವೀಲ್ ಡಿಸ್ಕ್‌ ಬ್ರೇಕ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ವಿಎಸ್‌ಎಂ (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್) ಇತರೆ ಇವೆ.

ಎಕ್ಸ್‌ಟೀರಿಯರ್: ಕಿಯಾದ ಒಪೊಸಿಟ್ಸ್ ಯುನೈಟೆಡ್‌ ವಿನ್ಯಾಸ ಸಿದ್ಧಾಂತಕ್ಕೆ ಹೊಸ ಸೆಲ್ಟೋಸ್‌ ಅನುಗುಣವಾಗಿದ್ದು, ನಿಸರ್ಗ ಮತ್ತು ಮನುಕುಲದಲ್ಲಿ ಕಂಡುಬಂದಿರುವ ವೈರುಧ್ಯಗಳಿಂದ ಪ್ರೇರಿತವಾಗಿದೆ. ಎಸ್‌ಯುವಿಯಲ್ಲಿ ಕಿಯಾ ಸಿಗ್ನೇಚರ್ ಸ್ಟಾರ್ ಮ್ಯಾಪ್ ಎಲ್‌ಇಡಿ ಲೈಟಿಂಗ್‌ ಕಾನ್ಸೆಪ್ಟ್ ಇದ್ದು, ಸ್ವೀಪಿಂಗ್‌ ಎಲ್ಇಡಿ ಲೈಟ್ ಗೈಡ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳಲ್ಲಿ ಕಾಣಿಸುತ್ತದೆ. ಹೊಚ್ಚ ಹೊಸ, ಕ್ರೌನ್ ಜ್ಯೂವೆಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಐಸ್ ಕ್ಯೂಬ್ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಮತ್ತು ಸೀಕ್ವೆನ್ಷಿಯಲ್‌ ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು ಭವಿಷ್ಯದ ನೋಟವನ್ನು ಒದಗಿಸುತ್ತವೆ. ಹೊಚ್ಚ ಹೊಸ ಪ್ಯೂಟರ್ ಆಲಿವ್ ಕಲರ್‌ ಆಯ್ಕೆಯಿಂದಾಗಿ ಹೊಸ ಸೆಲ್ಟೋಸ್‌ ಹಿಂದಿಗಿಂತ ಹೆಚ್ಚು ಆಕರ್ಷಕವಾಗಿದೆ.

ರೀಡಿಸೈನ್ ಮಾಡಿದ ಬಂಪರ್‌, ಹೊಸ ಸ್ಕಿಡ್ ಪ್ಲೇಟ್‌ ಮತ್ತು ಕ್ರೀಡಾತ್ಮಕ ಲುಕ್‌ ಇರುವ ಸಿಗ್ನೇಚರ್ ಟೈಗರ್ ನೋಸ್ ಗ್ರಿಲ್ ಹೊಸ ಕಿಯಾ ಸೆಲ್ಟೋಸ್‌ಗೆ ಸಾಹಸೀ ಸ್ಪಿರಿಟ್ ನೀಡಿದೆ ಮತ್ತು ಮಸ್ಕುಲರ್ ಮತ್ತು ಸ್ಫೋರ್ಟಿಯರ್ ರೋಡ್ ಪ್ರೆಸೆನ್ಸ್ ಅನ್ನು ನೀಡುತ್ತದೆ. ಇದರ ಜೊತೆಗೆ 50 ಎಂಎಂ ಉದ್ದ ಹೆಚ್ಚಳವಾಗಿದೆ. ಅದ್ಭುತ ರೋಡ್ ಪ್ರೆಸೆನ್ಸ್‌ ಅನ್ನು ಇದು ನೀಡುತ್ತದೆ.

ಕೈಗೆಟುಕುವ ದರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಕಿಯಾ!

ಮರುವಿನ್ಯಾಸಗೊಳಿಸಿದ ಟೇಲ್‌ಗೇಟ್‌ ಮತ್ತು ಹೊಸ ಸ್ಟಾರ್ ಮ್ಯಾಪ್ ಎಲ್‌ಇಡಿ ಕನೆಕ್ಟೆಡ್‌ ಟೇಲ್‌ಲ್ಯಾಂಪ್‌ಗಳು ವಿಶಿಷ್ಟತೆಯನ್ನು ನೀಡುತ್ತದೆ ಮತ್ತು ಹೊಸ ಸೆಲ್ಟೋಸ್‌ನ ಬ್ಯಾಡ್ಆಸ್ ಅಂಶವನ್ನು ಸೇರಿಸಿದೆ. ಇದಕ್ಕೆ 17 ಇಂಚು ಅಲಾಯ್ ವೀಲ್‌ಗಳನ್ನು ಹೊಂದಿದ್ದು, ಸೆಗ್ಮೆಂಟ್‌ನಲ್ಲೇ ಪ್ರಥಮ 18 ಇಂಚು ಕ್ರಿಸ್ಟಲ್ ಕಟ್ ಗ್ಲಾಸಿ ಬ್ಲಾಕ್ ಅಲಾಯ್‌ ವೀಲ್‌ಗಳನ್ನು ಒದಗಿಸುತ್ತದೆ.

ಹೊಸ ಸೆಲ್ಟೋಸ್ 8 ಮಾನೋಟೋನ್, 2 ಡ್ಯೂಯೆಲ್ ಟೋನ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರಾಫೈಟ್ ಕಲರ್‌ನಲ್ಲಿ ಲಭ್ಯವಿದೆ. ಕಲರ್ ಆಪ್ಷನ್‌ನಲ್ಲಿ ಹೊಸದಾಗಿ ಬಿಡುಗಡೆ ಮಾಡಿದ ಪ್ಯೂಟರ್ ಆಲಿವ್ ಕಲರ್‌ ಕೂಡ ಇದ್ದು, ಇದು ವಿಶಿಷ್ಟ ಲುಕ್ ನೀಡುತ್ತದೆ. ಇನ್ನೊಂದೆಡೆ ಇತರ ಆಯ್ಕೆಗಳೆಂದರೆ, ಇಂಪೀರಿಯಲ್ ಬ್ಲ್ಯೂ, ಇಂಟೆನ್ಸ್‌ ರೆಡ್, ಅರೋರಾ ಬ್ಲಾಕ್ ಪರ್ಲ್‌, ಕ್ಲಿಯರ್ ವೈಟ್, ಸ್ಪಾರ್ಕ್ಲಿಂಗ್ ಸಿಲ್ವರ್, ಗ್ಲೇಶಿಯರ್ ವೈಟ್ ಪರ್ಲ್‌, ಗ್ರಾವಿಟಿ ಗ್ರೇ, ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರಾಫೈಟ್ (ಎಕ್ಸ್‌-ಲೈನ್), ಗ್ಲೇಶಿಯರ್ ವೈಟ್ ಪರ್ಲ್+ ಅರೋರಾ ಬ್ಲಾಕ್ ಪರ್ಲ್‌ ಮತ್ತು ಇಂಟೆನ್ಸ್‌ ರೆಡ್‌ + ಅರೋರಾ ಬ್ಲಾಕ್ ಪರ್ಲ್‌ ಇವೆ.

ಸುಧಾರಿತ ಕ್ಯಾಬಿನ್ ಅನುಭವ: 2023 ಕಿಯಾ ಸೆಲ್ಟೋಸ್‌ ಅದ್ಬುತ ಮತ್ತು ಅನುಕೂಲಕರ ಪ್ರಯಾಣ ಅನುಭವವನ್ನು ಒದಗಿಸುತ್ತದೆ. ಸುಧಾರಿತ ತಂತ್ರಜ್ಞಾನ ಮತ್ತು ದಕ್ಷ ವಿನ್ಯಾಸ ಇದಕ್ಕಿದೆ. ಡ್ಯೂಯೆಲ್ ಪೇನ್ ಪನೋರಮಿಕ್ ಸನ್‌ರೂಫ್‌ ಅದ್ಭುತ ವೀಕ್ಷಣೆಯನ್ನು ಒಳಗಿನಿಂದ ಒದಗಿಸುತ್ತದೆ ಮತ್ತು ಕ್ಯಾಬಿನ್ ಸ್ಪೇಸ್‌ ಅನ್ನು ಇದು ಹೆಚ್ಚಿಸಿದ ಭಾವವನ್ನು ಮೂಡಿಸುತ್ತದೆ. ಇದೇ ಸಮಯದಲ್ಲಿ ಹೊಸದಾಗಿ ಸೇರಿಸಿದ ಡ್ಯೂಯೆಲ್ ಝೋನ್ ಫುಲ್ಲೀ ಅಟೊಮ್ಯಾಟಿಕ್ ಏರ್ ಕಂಡೀಷನರ್ ಹೆಚ್ಚುವರಿ ಅನುಕೂಲವನ್ನು ಒದಗಿಸುತ್ತದೆ.

ಹಿಂದಿನ ಮಾಡೆಲ್‌ನಲ್ಲಿ ಅರೆ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಬದಲಿಗೆ ಹೊಸ ಸೆಲ್ಟೋಸ್‌ನಲ್ಲಿ ದೊಡ್ಡ ಡ್ಯೂಯೆಲ್ ಸ್ಕ್ರೀನ್‌ ಪನೋರಮಿಕ್ ಡಿಸ್ಪ್ಲೇ ಜೊತೆಗೆ 26.03 ಸೆಂ.ಮೀ (10.25") ಎಚ್‌ಡಿ ಟಚ್‌ಸ್ಕ್ರೀನ್ ನ್ಯಾವಿಗೇಶನ್‌ ಸಿಸ್ಟಮ್ ಇದೆ ಮತ್ತು ಹೊಚ್ಚ ಹೊಸ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಜೊತೆಗೆ 26.04 ಸೆಂ.ಮೀ (10.25") ಕಲರ್ ಎಲ್‌ಸಿಡಿ ಎಂಐಡಿ ಡಿಸ್‌ಪ್ಲೇ ಕೂಡ ಇದೆ. ತಂತ್ರಜ್ಞಾನವನ್ನು ಆಳವಾಗಿ ಅಳವಡಿಸಿದ ಈ ವಿಧಾನವು ಪ್ರಯಾಣಿಕರಿಗೆ ಭವಿಷ್ಯಾತ್ಮಕ ಅನುಭವವನ್ನು ನೀಡುತ್ತದೆ ಮತ್ತು ವಾಹನದ ಪ್ರೀಮಿಯಂ ಅಪೀಲ್ ಅನ್ನು ಉದ್ದೀಪಿಸುತ್ತದೆ.

ಇದರ ಜೊತೆಗೆ, ಪ್ರಸ್ತುತ ಇರುವ ಸೆಗ್ಮೆಂಟ್‌ ಅನ್ನೇ ವ್ಯಾಖ್ಯಾನಿಸುವ ವೈಶಿಷ್ಟ್ಯಗಳೆಂದರೆ ಸ್ಮಾರ್ಟ್‌ 20.32 ಸೆಂ.ಮೀ (8.0") ಹೆಡ್ಸ್‌ ಅಪ್‌ ಡಿಸ್‌ಪ್ಲೇ, ವೆಂಟಿಲೇಟೆಡ್‌ ಸೀಟ್‌ಗಳು, 8 ವೇ ಪವರ್ ಡ್ರೈವರ್ಸ್‌ ಸೀಟ್, 8 ಸ್ಪೀಕರ್‌ಗಳ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್, ವೈರಸ್ ಮತ್ತು ಬ್ಯಾಕ್ಟೀರಿಯಾ ರಕ್ಷಣೆಯ ಜೊತೆಗೆ ಸ್ಮಾರ್ಟ್‌ ಪ್ಯೂರ್ ಏರ್ ಪ್ಯೂರಿಫೈಯರ್‌ ಮತ್ತು ಕ್ಲಸ್ಟರ್‌ನಲ್ಲಿ ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ 360 ಡಿಗ್ರಿ ಕ್ಯಾಮೆರಾ ಇದೆ.

ಕಿಯಾ ಕನೆಕ್ಟ್: ಕಿಯಾ ಸೆಲ್ಟೋಸ್ ಬಿಡುಗಡೆಯ ಮೂಲಕ 2019 ರಲ್ಲಿ ಉದ್ಯಮದಲ್ಲಿ ಹೊಸ ಮಾನದಂಡವನ್ನು ರೂಪಿಸಿತ್ತು. ಇದು 37 ಕನೆಕ್ಟೆಡ್ ಕಾರ್ ಫೀಚರ್‌ಗಳನ್ನು ಒಳಗೊಂಡಿತ್ತು. ಇದನ್ನು ನಿಧಾನವಾಗಿ 50 ಕ್ಕೆ ಏರಿಕೆ ಮಾಡಲಾಗಿತ್ತು. ಆದರೆ, ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ ಮತ್ತು ನಿರಂತರ ಅನ್ವೇಷಣೆಯಿಮದಾಗಿ, ಹೊಸ ಸೆಲ್ಟೋಸ್ 67 ಸ್ಮಾರ್ಟ್‌ ಫೀಚರ್‌ಗಳನ್ನು ಒಳಗೊಂಡಿದೆ. ಇದರಿಂದ ನೀವು ಎಸ್‌ಯುವಿ ಜೊತೆಗೆ ರಿಮೋಟ್ ಆಗಿ ಕನೆಕ್ಟ್ ಆಗಿರುತ್ತೀರಿ.

ಸೆಗ್ಮೆಂಟ್‌ನಲ್ಲೇ ಉತ್ತಮ ಸ್ಮಾರ್ಟ್‌ಸ್ಕ್ರೀನ್‌ ಜಿ1.5 ಟಿ-ಜಿಡಿಐ ಪೆಟ್ರೋಲ್ ಇಂಜಿನ್‌, 160 ಪಿಎಸ್‌/253 ಎನ್ಎಂ ಸಹಿತ 2023 ಕಿಯಾ ಸೆಲ್ಟೋಸ್‌ ನಗರ ಮತ್ತು ಹೆದ್ದಾರಿಗಳಲ್ಲಿ ತೆಗೆದುಕೊಂಡು ಹೋಗಲು ಉತ್ತಮ ಸಹಭಾಗಿಯಾಗಿದೆ. ಹೊಚ್ಚ ಹೊಸ ಸ್ಮಾರ್ಟ್‌ಸ್ಕ್ರೀನ್‌ ಜಿ1.5 ಟಿ-ಜಿಡಿಐ ಇಂಜಿನ್‌ನಲ್ಲಿ 160 ಪಿಎಸ್‌ ಮತ್ತು 253 ಎನ್‌ಎಮ್‌ ಇದೆ. ಇದು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಶಕ್ತಿಯುತ ಟರ್ಬೋಚಾರ್ಜ್ಡ್‌ ಪೆಟ್ರೋಲ್ ಇಂಜಿನ್ ಆಗಿದೆ. ಅತ್ಯಾಧುನಿಕ 6 ಐಎಂಟಿ ಮತ್ತು 7 ಡಿಸಿಟಿ ಟ್ರಾನ್ಸ್‌ಮಿಶನ್‌ಗಳನ್ನು ಹೊಂದಿರುವ ಈ ಹೊಸ ಸೆಲ್ಟೋಸ್‌ ನಗರಕ್ಕೆ ಅತ್ಯಂತ ಚೆನ್ನಾಗಿ ಹೊಂದುವ ಎಸ್‌ಯುವಿ ಆಗಿದೆ. ಇದು ಕ್ಲಚ್ ಅನ್ನು ಮ್ಯಾನ್ಯುಅಲ್ ಆಗಿ ಎಂಗೇಜ್ ಮಾಡುವ ಕಿರಿಕಿರಿ ಇಲ್ಲದೇ ಮ್ಯಾನ್ಯುಅಲ್ ಡ್ರೈವಿಂಗ್‌ನ ಖುಷಿಯನ್ನು ನೀಡುತ್ತದೆ.

ಈ ಟರ್ಬೋ ಇಂಜಿನ್ ಜೊತೆಗೆ, 2023 ಕಿಯಾ ಸೆಲ್ಟೋಸ್‌ ಸ್ಮಾರ್ಟ್‌ಸ್ಟ್ರೀಮ್ ಜಿ1.5 ಪೆಟ್ರೋಲ್ ಇಂಜಿನ್ ಮತ್ತು 1.5ಎಲ್‌ ಸಿಆರ್‌ಡಿಐ ವಿಜಿಟಿ ಡೀಸೆಲ್ ಇಂಜಿನ್ ಜೊತೆಗೆ ಲಭ್ಯವಿದೆ. 5 ಟ್ರಾನ್ಸ್‌ಮಿಶನ್ ಆಯ್ಕೆಗಳಾದ ಎಂಟಿ, ಐಎಂಟಿ, ಐವಿಟಿ, 6ಎಟಿ ಮತ್ತು 7ಡಿಸಿಟಿ ಜೊತೆಗೆ, ಹೊಚ್ಚ ಹೊಸ ಸೆಲ್ಟೋಸ್ 18 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು ವಿವಿಧ ವರ್ಗದ ಗ್ರಾಹಕರ ಅಗತ್ಯವನ್ನು ಪೂರೈಸುತ್ತದೆ.
 

Follow Us:
Download App:
  • android
  • ios