ನವೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಈ ಕಾರುಗಳು: ಎಲೆಕ್ಟ್ರಿಕ್, CNG ಮಾದರಿಗೆ ಬೇಡಿಕೆ
ನವೆಂಬರ್‌ನಲ್ಲಿ ಐದು ಕಾರುಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಇದರಲ್ಲಿ ಐದು ವಾಹನಗಳಲ್ಲಿ ಒಂದು ಎಲೆಕ್ಟ್ರಿಕ್, (Electric) ಒಂದು ಸಿಎನ್ಜಿ (CNG) ಮತ್ತು ಮೂರು ಪೆಟ್ರೋಲ್-ಡೀಸೆಲ್ (Petrol-diesel) ಕಾರುಗಳು ಒಳಗೊಂಡಿವೆ.
ನೀವು ಮುಂದಿನ ತಿಂಗಳೊಳಗೆ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಈ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಮುಂದಿನ ತಿಂಗಳು ನವೆಂಬರ್ನಲ್ಲಿ ಐದು ಕಾರುಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಇದರಲ್ಲಿ ಐದು ವಾಹನಗಳಲ್ಲಿ ಒಂದು ಎಲೆಕ್ಟ್ರಿಕ್, (Electric) ಒಂದು ಸಿಎನ್ಜಿ (CNG) ಮತ್ತು ಮೂರು ಪೆಟ್ರೋಲ್-ಡೀಸೆಲ್ (Petrol-diesel) ಕಾರುಗಳು ಒಳಗೊಂಡಿವೆ. ಈ ವಾಹನಗಳು ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಇಲ್ಲಿವೆ ಅವುಗಳ ವಿವರ:
ಹೊಸ ಪೀಳಿಗೆಯ ಎಂಜಿ ಹೆಕ್ಟರ್ (MG Hector)
ಆಟೋ ಮೇಜರ್ ಎಂಜಿ, ಮುಂದಿನ ತಿಂಗಳು ಎಂಜಿ ಹೆಕ್ಟೇರ್ ಹೊಸ ಪೀಳಿಗೆಯ ವಾಹನದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. MG ಯ ಈ SUV ಅನೇಕ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಬಿಡುಗಡೆಯ ನಂತರ ಈ ಎಸ್ಯುವಿ (SUV) ಕಂಪನಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಬಿಡುಗಡೆಗೊಳಿಸಿದ್ದ ಎಂ.ಜಿ. ಹೆಕ್ಟರ್, ಆಟೊಮೊಬೈಲ್ ವಲಯದಲ್ಲಿ ಹೊಸ ಕ್ರಾಂತಿ ಮೂಡಿಸಿತ್ತು. ಎಂ.ಜಿ. ಹೆಕ್ಟರ್ನ ದರ 14.42 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದು ಪೆಟ್ರೋಲ್, ಡೀಸೆಲ್ ಹಾಗೂ ಹೈಬ್ರಿಡ್ ವೇರಿಯಂಟ್ಗಳಲ್ಲಿ ಲಭ್ಯವಿದೆ.
ಜೀಪ್ ಗ್ರ್ಯಾಂಡ್ ಚೆರೋಕೀ
ಈ ಪಟ್ಟಿಯಲ್ಲಿ ಎರಡನೇ ಹೆಸರು ಜೀಪ್ ಗ್ರ್ಯಾಂಡ್ ಚೆರೋಕೀ (Jeep Grand Cherokee). ಜೀಪ್ ಗ್ರ್ಯಾಂಡ್ ಚೆರೋಕೀ ಪ್ರೀಮಿಯಂ ಅನ್ನು ವಿಭಾಗದಲ್ಲಿ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು. ಈ ಜೀಪ್ ಕಾರು ಪ್ರೀಮಿಯಂ ವಿಭಾಗದಲ್ಲಿ ಹೊಸ ಕ್ರಂತಿ ಉಂಟುಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಏಕೆಂದರೆ ಅದರ ಎಂಜಿನ್ ಮತ್ತು ವೈಶಿಷ್ಟ್ಯಗಳು ಬಹಳಷ್ಟು ನವೀಕರಣಗಳನ್ನು ಹೊಂದಲಿದೆ. ಇದರ ಬೆಲೆ 75.15 ಲಕ್ಷ ರೂ.ಗಳಿಂದ 1.14 ಕೋಟಿ ರೂ.ಗಳವರೆಗೆ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಬಿವೈಡಿ ಆಟ್ಟೋ 3 (BYD Atto 3)
ಚೈನೀಸ್ ತಯಾರಕ ಕಂಪನಿ ಬಿವೈಡಿ (BYD) ಶೀಘ್ರದಲ್ಲೇ ತನ್ನ ಎಲೆಕ್ಟ್ರಿಕಲ್ ಎಸ್ಯುವಿ (SUV) ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಇತ್ತೀಚೆಗಷ್ಟೇ ಈ ಎಸ್ಯುವಿಯ ವಿವರಗಳನ್ನು ಅನಾವರಣಗೊಳಿಸಿದೆ. ಅಟ್ಟೊ 3 ಚೈನೀಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ SUV ಆಗಿರಲಿದೆ. ಕಂಪನಿಯು ಮುಂದಿನ ತಿಂಗಳು ಇದರ ವಿತರಣೆಯನ್ನು ಪ್ರಾರಂಭಿಸಬಹುದು. ಈ ಕಾರು ಉತ್ತಮ ಶ್ರೇಣಿ ಮತ್ತು ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್
ಇತ್ತೀಚೆಗಷ್ಟೇ ಹೈರೈಡರ್ ಎಸ್ಯುವಿಯನ್ನು ಬಿಡುಗಡೆಗೊಳಿಸಿದ್ದ ಟೊಯೋಟಾ ಇನ್ನೋವಾ ಹೈ ಕ್ರಾಸ್ (Innova High cross) ಅನ್ನು ಬಿಡುಗಡೆಗೊಳಿಸಲಿದೆ. ಇದು ಇತ್ತೀಚೆಗೆ ಅನೇಕ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಗುರುತಿಸಲ್ಪಟ್ಟಿದೆ. ಮುಂದಿನ ತಿಂಗಳು ಈ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆದಿದೆ. ಇನ್ನೋವಾ ಕ್ರಿಸ್ಟಾದ ಮಾದರಿಯಂತೆ ಈ ವಾಹನವೂ ಮಾರುಕಟ್ಟೆಯಲ್ಲಿ ಗಟ್ಟಿಯಾದ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.
ಮಾರುತಿ ಬಲೆನೊ 2022 ಸಿಎನ್ಜಿ (Cng)
ಮಾರುತಿ ಸುಜುಕಿ ತನ್ನ ಬಲೆನೊ ಅನ್ನು ಸಿಎನ್ಜಿ ವೇರಿಯಂಟ್ಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದೆ. ಗ್ರಾಹಕರು ಸಿಎನ್ಜಿ ಮಾದರಿಯನ್ನು ಖರೀದಿಸಲಿದ್ದಾರೆ ಎಂದು ಕಂಪನಿ ಭರವಸೆ ಹೊಂದಿದೆ. 5 ಆಸನದ ಈ ಹ್ಯಾಚ್ಬ್ಯಾಕ್ 6.42 ಲಕ್ಷ ರೂ.ಗಳಿಂದ 9.60 ಲಕ್ಷ ರೂ.ಗಳವರೆಗೆ ಲಭ್ಯವಿದೆ. ಇದು 22.3 ಇಂದ 22.9 ಕಿಮೀ ಮೈಲೇಜ್ ನೀಡುತ್ತದೆ. ಇದು 7 ವೇರಿಯಂಟ್ಗಳಲ್ಲಿ ಲಭ್ಯವಿದೆ.