kia carens ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಬಿಡುಗಡೆ, 25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ MPV ಕಾರು!
- ಭಾರತದಲ್ಲಿ ಭಾರಿ ಸಂಚನಲ ಸೃಷ್ಟಿಸಿದ ಕಿಯಾ ಕ್ಯಾರೆನ್ಸ್ ಕಾರು
- ಬುಕಿಂಗ್ ಆರಂಭಿಸಿರುವ ಕಿಯಾ ಕ್ಯಾರೆನ್ಸ್‌ಗೆ ಭರ್ಜರಿ ಡಿಮ್ಯಾಂಡ್
- ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಕಾರು ಬಿಡುಗಡೆ
ನವದೆಹಲಿ(ಜ.27): ಸೌತ್ ಕೊರಿಯಾದ ಕಿಯಾ ಮೋಟಾರ್ಸ್(Kia motors) ಭಾರತದಲ್ಲಿ ಈಗಾಗಲೇ ಮೂರು ಕಾರುಗಳ ಮೂಲಕ ಭಾರಿ ಸಂಚಲನ ಮೂಡಿಸಿದೆ. ಇದೀಗ ನಾಲ್ಕನೇ ಕಾರಾಗಿ ಕಿಯಾ ಕ್ಯಾರೆನ್ಸ್ MPV ಕಾರು ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಕಾರು ಬಿಡುಗಡೆಯಾಗಲಿದೆ.
ಫೆಬ್ರವರಿ ಆರಂಭದಲ್ಲಿ ಕಿಯಾ ಕ್ಯಾರೆನ್ಸ್(Kia Carens) ಕಾರಿನ ಬೆಲೆ ಬಹಿರಂಗವಾಗಲಿದೆ. ಕಿಯಾ ಕ್ಯಾರೆನ್ಸ್ ಕಾರಿನ ಬೆಲೆ 14 ರಿಂದ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಲೆ ಬಹಿರಂಗ ಬಳಿಕ ಕಿಯಾ ಕ್ಯಾರೆನ್ಸ್ ಫೆಬ್ರವರಿಯಲ್ಲೇ ಬಿಡುಗಡೆಯಾಗಲಿದೆ(Kia Carens Launch) ಎಂದು ಮೂಲಗಳು ಹೇಳುತ್ತಿವೆ.
Kia Carens ಭಾರತದಲ್ಲಿ ಹೊಸ ದಾಖಲೆ, ಮೊದಲ ದಿನ 7,738 ಕಾರು ಬುಕ್!
ಕಿಯಾ ಕ್ಯಾರೆನ್ಸ್ ಕಾರಿನ ಬುಕಿಂಗ್(Bookings) ಜನವರಿ 14 ರಿಂದ ಆರಂಭಗೊಂಡಿದೆ. 25,000 ರೂಪಾಯಿ ನೀಡಿ ಕಿಯಾ ಕ್ಯಾರೆನ್ಸ್ ಕಾರು ಬುಕ್ ಮಾಡಿಕೊಳ್ಳಬಹುದು. 5 ಟ್ರಿಮ್ ಮಾಡೆಲ್‌ಗಳಲ್ಲಿ ಕಿಯಾ ಕ್ಯಾರೆನ್ಸ್ ಕಾರು ಲಭ್ಯವಿದೆ. ಪ್ರಿಯಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸುರಿ ಹಾಗೂ ಲಕ್ಸುರಿ ಪ್ಲಸ್ ವೇರಿಯೆಂಟ್ ಲಭ್ಯವಿದೆ.
ವಿಶೇಷ ಅಂದರೆ ಕಿಯಾ ಕ್ಯಾರೆನ್ಸ್ 6 ಸೀಟರ್ ಹಾಗೂ 7 ಸೀಟರ್ ಆಯ್ಕೆಯೂ ಲಭ್ಯವಿದೆ. 8 ಬಣ್ಣಗಳಲ್ಲೂ ಲಭ್ಯವಿದೆ. ಇದರ ಜೊತೆಗೆ ಹಲವು ಅತ್ಯಾಧುನಿಕ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಕ್ಯಾರೆನ್ಸ್ ಮೂರು ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 15. ಲೀಟರ್ ನ್ಯಾಚುರಲ್ ಪೆಟ್ರೋಲ್, 1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದೆ.
Kia Price Hike ಕರೆನ್ಸ್ ಕಾರು ಬಿಡುಗಡೆಗೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ!
1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು 115PS ಪವರ್ ಹಾಗೂ 144Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. 1.4 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು 140PS ಪವರ್ ಹಾಗೂ 242Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 7 ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಶನ್ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಕಾರು 115PS ಪವರ್ ಹಾಗೂ 250Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ವೇರಿಯೆಂಟ್ ಕಾರಿನಲ್ಲಿ 6 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.
ಕಿಯಾ ಕ್ಯಾರೆನ್ಸ್ ಕಾರು 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಪ್ಲೇ ಹಾಗೂ ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್ ಪೇನ್ ಸನ್‌ರೂಫ್, 64 ಆ್ಯಂಬಿಯೆಂಟ್ ಕಲರ್ ಲೈಟಿಂಗ್, ಡ್ರೈವರ್ ಡಿಸ್‌ಪ್ಲೇ, ವೈಯರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಕಾರಿನಲ್ಲಿ ಸುರಕ್ಷತಾ ಫೀಚರ್ಸ್‌ಗೂ ಆದ್ಯತೆ ನೀಡಲಾಗಿದೆ. 6 ಏರ್‌ಬ್ಯಾಗ್ಸ್, ABS ಹಾಗೂ EBD ಬ್ರೇಕ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಹಾಗೂ ಟೈಯರ್ ಪ್ರೆಶರ್ ಮಾನಿಟರ್ ಸಿಸ್ಟಮ್ ಹೊಂದಿದೆ.
ಕಿಯಾ ಮೋಟಾರ್ಸ್ ಭಾರತದಲ್ಲಿ ಸೆಲ್ಟೋಸ್ ಕಾರಿನ ಮೂಲಕ ಹೊಸ ಅಧ್ಯಾಯ ಆರಂಭಿಸಿತು. ಆಕರ್ಷಕ ವಿನ್ಯಾಸ, ಕಾರಿನ ಪರ್ಫಾಮೆನ್ಸ್ , ಕಡಿಮೆ ಬೆಲೆ ಸೇರಿದಂತೆ ಹಲವು ಕಾರಣಗಳಿಂದ ಕಿಯಾ ಸೆಲ್ಟೋಸ್ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಬಿಡುಗಡೆ ಮಾಡಿತು. ಬಳಿಕ ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿನ ಬೇಡಿಕೆಗೆ ಅನುಗುಣವಾಗಿ ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡಿದೆ.