Kia Carens Launch ಭಾರತದಲ್ಲಿ ಕಿಯಾ ಕ್ಯಾರೆನ್ಸ್ MPV ಕಾರು ಬಿಡುಗಡೆ, ಬೆಲೆ 8.99ಲಕ್ಷ ರೂ!

  • ಕಿಯಾ ಕ್ಯಾರೆನ್ಸ್ ಕಾರು 19 ವೇರಿಯಂಟ್‌ಗಳಲ್ಲಿ ಲಭ್ಯ
  • ಈಗಾಗಲೇ 19 ಸಾವಿರ ಕಾರುಗಳ ಬುಕಿಂಗ್
  • ಅತಿ ಉದ್ದವಾದ, ಅತ್ಯಾಕರ್ಷಕ ಕಾರು
Kia launch carens MPV car in India with Starting price Rs 8 99 lakh

ನವದೆಹಲಿ(ಫೆ.15):  ಕಿಯಾ ಇಂಡಿಯಾ ಭಾರತದಲ್ಲಿ(India) ತನ್ನ ನಾಲ್ಕನೇ ಎಸ್‌ಯುವಿಯಾದ ಕಿಯಾ ಕ್ಯಾರೆನ್ಸ್‌(Kia Carens) ಅನ್ನು ಬಿಡುಗಡೆಗೊಳಿಸಿದೆ. ಬಹುನಿರೀಕ್ಷೆಯ ಈ ಕಾರು ‘ಮೇಡ್‌ ಫಾರ್‌ ಇಂಡಿಯಾ’ ಕಾರಾಗಿದ್ದು, ಆರಂಭಿಕ ದರ 8.99 ಲಕ್ಷ ರೂ.ಗಳಷ್ಟಿದೆ. ಕ್ಯಾರೆನ್ಸ್ ಪ್ರೀಮಿಯಂ ಸ್ಮಾರ್ಟ್ ಸ್ಟ್ರೀಮ್ 1.5 ಪೆಟ್ರೋಲ್ 6 ಎಂಟಿವೇರಿಯಂಟ್ಗಳು ಈ ಆರಂಭಿಕ ದರದಲ್ಲಿ ಲಭ್ಯವಾಗಲಿದೆ. ಕ್ಯಾರೆನ್ಸ್ 9 ಶ್ರೇಣಿಗಳಲ್ಲಿ ಲಭ್ಯವಿದ್ದು, ಅವುಗಳ ದರ 8.99 ಲಕ್ಷ ರೂ.ಗಳಿಂದ 16.99 ಲಕ್ಷ ರೂ.ಗಳವರೆಗೆ (ಎಕ್ಸ್ಶೋರೂಂ) ಇದೆ. ಇವು 5 ಟ್ರಿಮ್ಗಳು, 3 ಇಂಜಿನ್ ಮತ್ತು  3 ಟ್ರಾನ್ಸ್ಮಿಶನ್ ಆಯ್ಕೆಗಳಲ್ಲಿ ಲಭ್ಯವಿದೆ. 

ಕಿಯಾ ಕ್ಯಾರೆನ್ಸ್ ಈಗಾಗಲೇ ಬುಕಿಂಗ್(Car Bookings) ಆರಂಭಿಸಿದ್ದು,  19,089 ಬುಕಿಂಗ್ಗಳನ್ನು ಪಡೆದಿದೆ. ಬುಕಿಂಗ್ 2022ರ ಜನವರಿ 14 ರಂದು ಆರಂಭವಾಗಿತ್ತು. ಕಿಯಾ ಕ್ಯಾರೆನ್ಸ್ ಐದು ಟ್ರಿಮ್ಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್,  ಲಕ್ಷುರಿ ಮತ್ತು ಲಕ್ಷುರಿ ಪ್ಲಸ್. ಪ್ರೀಮಿಯಂ ಇಂದ ಲಕ್ಷುರಿ ಟ್ರಿಮ್ಗಳ ವಾಹನಗಳು ಏಳು ಹಾಗೂ ಲಕ್ಷುರಿ ಪ್ಲಸ್ ಟ್ರಿಮ್ನಲ್ಲಿ 6 ಹಾಗೂ 7 ಸೀಟುಗಳಲ್ಲಿ ಲಭ್ಯವಿದೆ. 

Fire Risk: ಖಾಲಿ ಜಾಗದಲ್ಲಿ ವಾಹನ ನಿಲ್ಲಿಸುವಂತೆ ಗ್ರಾಹಕರಿಗೆ ಕಿಯಾ, ಹ್ಯುಂಡೈ ಕರೆ!

ಕಿಯಾ ಕ್ಯಾರೆನ್ಸ್ ಸುಸ್ಥಿರವಾದ 10 ಹೈಸುರಕ್ಷತೆ ಪ್ಯಾಕೇಜ್ ಒಳಗೊಂಡಿದ್ದು, ಇದರಲ್ಲಿ 6 ಏರ್ಬ್ಯಾಗ್ಗಳು, ಡಿಬಿಸಿ, ವಿಎಸ್ಎಂ, ಎಚ್ಎಸಿ, ಇಎಸ್ಸಿ ಮತ್ತು ಆಲ್ವೀಲ್ಡಿಸ್ಕ್ ಬ್ರೇಕ್ಗಳಿವೆ. ಇವೆಲ್ಲವೂ ಎಲ್ಲ ಐದು ಟ್ರಿಮ್ ಲೆವೆಲ್ಗಳಲ್ಲೂ ಲಭ್ಯವಿವೆ. ಇದರಲ್ಲಿ ಮೂರು ಇಂಜಿನ್ ಆಯ್ಕೆಗಳಿರಲಿವೆ. ಸ್ಮಾರ್ಟ್ಸ್ಟ್ರೀಮ್ 1.5 ಪೆಟ್ರೋಲ್, ಸ್ಮಾರ್ಟ್ಸ್ಟ್ರೀಮ್ 1.4 ಟಿಜಿಡಿಐ ಪೆಟ್ರೋಲ್ ಮತ್ತು 1.5 ಸಿಆರ್ಡಿಐವಿಜಿಟಿ ಡೀಸೆಲ್ ಇದ್ದು, ಇದರಲ್ಲಿ ಮೂರು ಟ್ರಾನ್ಸ್ಮಿಶನ್ಗಳಿವೆ. ಅವುಗಳೆಂದರೆ, 6 ಎಂಟಿ, 7 ಡಿಸಿಟಿ ಅಥವಾ 6 ಎಟಿ.

ಆಕರ್ಷಕ ಬೆಲೆಯ ಜೊತೆಗೆ, ಪ್ರತಿ ಕಿಲೋಮೀಟರಿಗೆ 37 ಪೈಸೆಯಷ್ಟು ಅತಿ ಕಡಿಮೆ ನಿರ್ವಹಣೆಯನ್ನೂ ಕ್ಯಾರೆನ್ಸ್ ನೀಡುತ್ತಿದೆ. ಕಾರಿನ ಸ್ಟೈಲಿಂಗ್ ಕುರಿತು ಮಾತನಾಡುವುದಾದರೆ, ಕಿಯಾ ಕ್ಯಾರೆನ್ಸ್ ಎಂಪಿವಿ (Kia Carens MPV) ಹೊಸ ವಿನ್ಯಾಸ ಭಾರತದಲ್ಲಿ ಮೊದಲ ಮಾದರಿಯಾಗಿದೆ, ಇದು ಜಾಗತಿಕವಾಗಿ ಕಿಯಾ ಇವಿ6 (Kia EV6)ನೊಂದಿಗೆ ಪಾದಾರ್ಪಣೆ ಮಾಡಿದೆ. ಆದ್ದರಿಂದ, ಇದು ಸ್ಪ್ಲಿಟ್ ಲೈಟಿಂಗ್ ಸೆಟಪ್, ಸಿಗ್ನೇಚರ್ ಎಲ್ಇಡಿ ಡಿಆರ್ಎಲ್ಗಳು (LED DRLಗಳು), ನಯವಾದ LED ಹೆಡ್ಲ್ಯಾಂಪ್ಗಳು ಮತ್ತು ದೊಡ್ಡ ಬಂಪರ್ಗಳನ್ನು ಒಳಗೊಂಡಿದೆ. ಅದರ ಕೆಳಗಿನ ಕ್ರೋಮ್ ಲೈನ್ ಎರಡೂ ಹೆಡ್ಲ್ಯಾಂಪ್ಗಳನ್ನು ಸಂಪರ್ಕಿಸುತ್ತದೆ. ಅಲಾಯ್ ಚಕ್ರಗಳು, ಕಿಯಾದ ಸಿಗ್ನೇಚರ್ ಚಿಹ್ನೆ ಇರುವ ಟೈಗರ್ ಚಿಹ್ನೆಗಳಿವೆ. 

ಭಾರತದಲ್ಲಿ ನಿರ್ಮಾಣವಾದ ಕಿಯಾ ಸೊನೆಟ್ ನೇಪಾಳದಲ್ಲಿ ಲಾಂಚ್: ಬೆಲೆ 22 ಲಕ್ಷ ರೂ!

ಕಿಯಾ ಕ್ಯಾರೆನ್ಸ್ ಕ್ಲಾಸ್-ಲೀಡಿಂಗ್ ಆಯಾಮಗಳನ್ನು ಹೊಂದಿದ್ದು, 4,540 ಎಂಎಂ ಉದ್ದ, 1800 ಎಂಎಂ ಅಗಲ, 1700 ಎಂಎಂ ಎತ್ತರ ಮತ್ತು 2780 ಎಂಎಂ ವೀಲ್ಬೇಸ್ನಲ್ಲಿ ಬರುತ್ತದೆ. ಇದು ಮಾರುತಿ ಸುಜುಕಿ ಎರ್ಟಿಗಾ ಅಥವಾ ಎಕ್ಸ್ಎಲ್ 6 ಗಿಂತಲೂ ಉದ್ದವಾಗಿದೆ ಮತ್ತು ಹ್ಯುಂಡೈ ಅಲ್ಕಾಜರ್ಗಿಂತ ಸ್ವಲ್ಪ ಉದ್ದವಾಗಿದೆ.

ಇದು ಕಿಯಾದ ಇತರ ಕಾರುಗಳಿಗಿಂತ ಹೆಚ್ಚು ವಿಶಾಲವಾಗಿದೆ ಮತ್ತು ವಿಭಾಗದಲ್ಲಿ ಅತಿ ಉದ್ದದ ವೀಲ್ಬೇಸ್ ಅನ್ನು ಸಹ ಹೊಂದಿದೆ. ಕಿಯಾ ಕ್ಯಾರೆನ್ಸ್ ಎಂಪಿವಿ (Kia Carens MPV) ಎಲ್ಲಾ ಮೂರು ಆಸನಗಳೊಂದಿಗೆ 216 ಲೀಟರ್ ಲಗೇಜ್ ಜಾಗವನ್ನು ನೀಡುತ್ತದೆ. ಮೂರನೇ ಸಾಲಿನ ಕೆಳಗೆ, 645 ಲೀಟರ್ ಬೂಟ್ ಸ್ಪೇಸ್ ಇದೆ, ಮತ್ತು ಎರಡನೇ ಸಾಲಿನ ಸೀಟುಗಳು ಸಂಪೂರ್ಣವಾಗಿ ಫ್ಲಾಟ್ ಆಗಿವೆ. 1164 ಲೀಟರ್ಗಳಷ್ಟು ಕಾರ್ಗೋ ಸ್ಪೇಸ್ ಇದೆ. 

ಈ ಸಂದರ್ಭದಲ್ಲಿ ಮಾತನಾಡಿದ ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತಾಯೆ ಜಿನ್ಪಾರ್ಕ್“ಆರಂಭದಿಂದಲೂ, ಭಾರತೀಯ ಗ್ರಾಹಕರ ಡ್ರೈವಿಂಗ್ ಅನುಭವವನ್ನು ಉತ್ತಮವಾಗಿಸುವುದರ ಮೇಲೆ ನಾವು ಗಮನಹರಿಸಿದ್ದೇವೆ. ಕ್ಯಾರೆನ್ಸ್ ಈ ಶ್ರೇಣಿಯಲ್ಲೇ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ, ಇದು ಅಪೂರ್ವ ವಿನ್ಯಾಸ ಮತ್ತು ಪ್ರಾಯೋಗಿಕತೆ ಇದೆ ಮತ್ತು ಆಕರ್ಷಕ ಬೆಲೆಯಲ್ಲಿ ಅಪಾರ ಆಯ್ಕೆಗಳನ್ನು ಹೊಂದಿದೆ ಎಂದರು.

Latest Videos
Follow Us:
Download App:
  • android
  • ios