ಹಬ್ಬದ ಸೀಸನ್ ಪ್ರಯುಕ್ತ ಕಿಯಾ ಮೋಟಾರ್ಸ್ ತನ್ನ ಪ್ರೀಮಿಯಂ ಎಂಪಿವಿ 'ಕಿಯಾ ಕಾರ್ನಿವಲ್' ಮೇಲೆ 1.70 ಲಕ್ಷ ರೂ.ಗಳವರೆಗೆ ಆಫರ್ ಘೋಷಿಸಿದೆ. ಇದರಲ್ಲಿ ಎಕ್ಸ್‌ಚೇಂಜ್, ಸ್ಕ್ರ್ಯಾಪೇಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಸೇರಿವೆ. ಈ ಲಕ್ಸುರಿ ಕಾರು ಅತ್ಯುತ್ತಮ ಪರ್ಫಾರ್ಮೆನ್ಸ್ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.

ಹಬ್ಬದ ಸೀಸನ್‌ನಲ್ಲಿ ಲಕ್ಸುರಿ ಎಂಪಿವಿ ಕಾರು ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್ ಇದೆ. ಕಿಯಾ ಮೋಟಾರ್ಸ್ ತನ್ನ ಪ್ರೀಮಿಯಂ ಕಾರು 'ಕಿಯಾ ಕಾರ್ನಿವಲ್' ಮೇಲೆ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 1.70 ಲಕ್ಷ ರೂ.ಗಳವರೆಗೆ ಆಫರ್ ಘೋಷಿಸಿದೆ. ಎಕ್ಸ್‌ಚೇಂಜ್ ಬೋನಸ್, ಸ್ಕ್ರ್ಯಾಪೇಜ್ ಬೋನಸ್ ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಈ ಆಫರ್ ಒಳಗೊಂಡಿದೆ. ದೊಡ್ಡ ಫ್ಯಾಮಿಲಿಗೆ ಹೇಳಿ ಮಾಡಿಸಿದಂತಹ, ಆರಾಮದಾಯಕ ಪ್ರಯಾಣ ನೀಡುವ ಕಾರು ಹುಡುಕುತ್ತಿರುವವರು ಈ ಆಫರ್ ಕಡೆ ಗಮನಹರಿಸಬಹುದು.

1.70 ಲಕ್ಷ ರೂ. ಆಫರ್ ಪಡೆಯುವುದು ಹೇಗೆ?

ಕಿಯಾ ಕಾರ್ನಿವಲ್ ಮೇಲಿನ ಈ ಆಫರ್ ಅನ್ನು ಕಂಪನಿ ಮೂರು ವಿಭಾಗಗಳಲ್ಲಿ ನೀಡುತ್ತಿದೆ. ಹಳೆಯ ವಾಹನ ಎಕ್ಸ್‌ಚೇಂಜ್ ಮಾಡುವ ಗ್ರಾಹಕರು 1 ಲಕ್ಷ ರೂ.ವರೆಗೆ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದು. ಹಳೆಯ ವಾಹನವನ್ನು ಗುಜರಿಗೆ (ಸ್ಕ್ರ್ಯಾಪೇಜ್) ಹಾಕುವವರಿಗೆ 20,000 ರೂ.ವರೆಗೆ ಸ್ಕ್ರ್ಯಾಪೇಜ್ ಬೋನಸ್ ಸಿಗಲಿದೆ. ಇದರ ಜೊತೆಗೆ, ಆಯ್ದ ಕಂಪನಿಗಳ ಉದ್ಯೋಗಿಗಳಿಗೆ 50,000 ರೂ.ವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಕಿಯಾ ನೀಡುತ್ತಿದೆ. ಈ ಮೂರೂ ಆಫರ್‌ಗಳನ್ನು ಸೇರಿಸಿದರೆ ಒಟ್ಟು 1.70 ಲಕ್ಷ ರೂ.ಗಳವರೆಗೆ ಉಳಿತಾಯ ಮಾಡಬಹುದು. ಆದರೆ, ಈ ಎಲ್ಲಾ ಆಫರ್‌ಗಳು ಎಲ್ಲರಿಗೂ ಒಟ್ಟಿಗೆ ಸಿಗುವುದಿಲ್ಲ. ಗ್ರಾಹಕರ ಅರ್ಹತೆ, ಡೀಲರ್‌ಶಿಪ್‌ಗಳ ಷರತ್ತುಗಳ ಆಧಾರದ ಮೇಲೆ ಆಫರ್ ಮೊತ್ತ ಬದಲಾಗಬಹುದು.

ಪ್ರೀಮಿಯಂ ಫೀಚರ್ಸ್ ಹೊಂದಿರುವ ಕಿಯಾ ಕಾರ್ನಿವಲ್

ಕಿಯಾ ಕಂಪನಿಯ ಈ ಫ್ಲ್ಯಾಗ್‌ಶಿಪ್ ಎಂಪಿವಿ ಕಾರನ್ನು ಲಕ್ಸುರಿ ಹಾಗೂ ಕಂಫರ್ಟ್‌ಗೆಂದೇ ಡಿಸೈನ್ ಮಾಡಲಾಗಿದೆ. 3.5 ಲೀಟರ್ ಸ್ಮಾರ್ಟ್‌ಸ್ಟ್ರೀಮ್ ವಿ6 ಪೆಟ್ರೋಲ್ ಎಂಜಿನ್ ಈ ಕಾರಿನಲ್ಲಿದೆ. ಇದು ಅತ್ಯುತ್ತಮ ಪರ್ಫಾರ್ಮೆನ್ಸ್ ಜೊತೆಗೆ ಸ್ಮೂತ್ ಡ್ರೈವಿಂಗ್ ಅನುಭವ ನೀಡುತ್ತದೆ. ಎರಡನೇ ಸಾಲಿನಲ್ಲಿರುವ ಪ್ರೀಮಿಯಂ ಕ್ಯಾಪ್ಟನ್ ಸೀಟ್‌ಗಳು ಈ ಕಾರಿನ ಪ್ರಮುಖ ಹೈಲೈಟ್. ಲಾಂಗ್ ಡ್ರೈವ್ ಹೋಗುವಾಗ ಇದು ಸಖತ್ ಕಂಫರ್ಟ್ ಕೊಡುತ್ತದೆ. ಬಿಸಿ ಹಾಗೂ ತಂಪಾದ ಪಾನೀಯಗಳನ್ನು ಇಡಲು ಸ್ಟೋರೇಜ್, ಶೂ ರ್ಯಾಕ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್‌ಗಳು ಕ್ಯಾಬಿನ್ ಒಳಗಿವೆ.

ಕಿಯಾ ಕಾರ್ನಿವಲ್ ಬೆಲೆ ಎಷ್ಟು?

ಭಾರತದ ಮಾರುಕಟ್ಟೆಯಲ್ಲಿ ಕಿಯಾ ಕಾರ್ನಿವಲ್ ಎಕ್ಸ್-ಶೋರೂಂ ಬೆಲೆ ಅಂದಾಜು 59.45 ಲಕ್ಷ ರೂ.ಗಳಿಂದ 59.65 ಲಕ್ಷ ರೂ.ವರೆಗೆ ಇದೆ. ಈ ಬೆಲೆಯಲ್ಲಿ 1.70 ಲಕ್ಷ ರೂ.ಗಳ ಆಫರ್ ಸಿಗುತ್ತಿರುವುದು ಗ್ರಾಹಕರಿಗೆ ದೊಡ್ಡ ರಿಲೀಫ್. ಆದರೆ, ನೀವು ಇರುವ ನಗರ, ಡೀಲರ್‌ಶಿಪ್‌ನಲ್ಲಿರುವ ಸ್ಟಾಕ್ ಹಾಗೂ ಷರತ್ತುಗಳ ಆಧಾರದ ಮೇಲೆ ಆಫರ್ ಮೊತ್ತದಲ್ಲಿ ವ್ಯತ್ಯಾಸವಿರಬಹುದು. ಕಾರು ಬುಕ್ ಮಾಡುವ ಮುನ್ನ ನಿಮ್ಮ ಹತ್ತಿರದ ಕಿಯಾ ಶೋರೂಂಗೆ ಭೇಟಿ ನೀಡಿ ಎಕ್ಸ್‌ಚೇಂಜ್ ವ್ಯಾಲ್ಯೂ ಹಾಗೂ ಡಿಸ್ಕೌಂಟ್ ಬಗ್ಗೆ ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಗಮನಿಸಿ: ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮಾಹಿತಿಯನ್ನು ಆಧರಿಸಿ ಈ ಡಿಸ್ಕೌಂಟ್ ವಿವರಗಳನ್ನು ನೀಡಲಾಗಿದೆ. ರಾಜ್ಯ, ನಗರ, ಡೀಲರ್‌ಶಿಪ್, ಸ್ಟಾಕ್, ಬಣ್ಣ ಹಾಗೂ ವೇರಿಯೆಂಟ್‌ಗೆ ತಕ್ಕಂತೆ ಈ ಆಫರ್‌ಗಳು ಬದಲಾಗುತ್ತವೆ. ನಿಮ್ಮ ನಗರದಲ್ಲಿ ಈ ಡಿಸ್ಕೌಂಟ್ ಹೆಚ್ಚು ಅಥವಾ ಕಡಿಮೆ ಇರಬಹುದು. ಹೀಗಾಗಿ, ಕಾರು ಖರೀದಿಸುವ ಮುನ್ನ ನಿಖರವಾದ ಆಫರ್ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.