Kia Carens Car ದಾಖಲೆ ಬರೆದ ಕಿಯಾ ಕರೆನ್ಸ್, ಒಂದೇ ದಿನ 40 MPV ಕಾರು ವಿತರಣೆ!

  • ಇತ್ತೀಚೆಗೆ ಬಿಡುಗಡೆಯಾದ ಕಿಯಾ ಕರೆನ್ಸ್ ಕಾರಿಗೆ ಭಾರಿ ಬೇಡಿಕೆ
  • ಜನವರಿ ಮಧ್ಯಭಾಗದಲ್ಲಿ ಕರೆನ್ಸ್ ಬಿಡುಗಡೆ, 19,000 ಕರೆನ್ಸ್ ಕಾರು ಬುಕಿಂಗ್
  • ಒಂದೇ ದಿನ 40 ಕಿಯಾ ಕರೆನ್ಸ್ ಕಾರು ಬಿಡುಗಡೆ
     
Kia Carens MPV car create record devlivers 40 MPV in single day in Hyderabad ckm

ಹೈದರಾಬಾದ್(ಫೆ.25): ಭಾರತದಲ್ಲಿ ಇದೀಗ MPV ಕಾರುಗಳಿಗೆ(Car sales) ಹೆಚ್ಚಿನ ಬೇಡಿಕೆ ಇದೆ. ಇತ್ತೀಚೆಗೆ ಕಿಯಾ ಮೋಟಾರ್ಸ್(Kia Motors) ಭಾರತದಲ್ಲಿ ಕಿಯಾ ಕರೆನ್ಸ್ MPV ಕಾರು ಬಿಡುಗಡೆ ಮಾಡಿದೆ. ಜನವರಿಯಲ್ಲಿ ಕಾರು ಬಿಡುಗಡೆಯಾಗಿದ್ದು ಇದೀಗ 19,000 ಕಾರು ಬುಕಿಂಗ್(Car Booking) ಆಗಿದೆ. ಬುಕಿಂಗ್ ದಾಖಲೆ ಬಳಿಕ ಇದೀಗ ಒಂದೇ ದಿನ 40 ಕಾರು ಡೆಲಿವರಿ ಮೂಲಕ ಮತ್ತೊಂದು ದಾಖಲೆ ಬರೆದಿದೆ.

ಹೈದರಾಬಾದ್‌ನ ಡೀಲರ್ ಒಂದೇ ದಿನ 40 ಕಿಯಾ ಕರೆನ್ಸ್ ಕಾರು(Kia carens) ಗ್ರಾಹಕರಿಗೆ ವಿತರಿಸುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಲಾಗಿದೆ. ಮಾರುತಿ ಎರ್ಟಿಗಾ, ಮಹಿಂದ್ರ ಮರಾಜೋ, ಮಾರುತಿ XL6 ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಕಿಯಾ ಕರೆನ್ಸ್ ಕಾರು ಇದೀಗ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.ದೇಶದ ಬಹತೇಕ ಕಿಯಾ ಡೀಲರ್‌ ಬಳಿ ಕಿಯಾ ಕರೆನ್ಸ್ ಕಾರು ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. ಹಲವು ಡೀಲರ್‍‌ಬಳಿ ಒಂದೇ ದಿನ 15 ರಿಂದ 20 ಕರೆನ್ಸ್ ಕಾರುಗಳು ಮಾರಾಟಗೊಂಡಿದೆ. 

Kia Carens Launch ಭಾರತದಲ್ಲಿ ಕಿಯಾ ಕ್ಯಾರೆನ್ಸ್ MPV ಕಾರು ಬಿಡುಗಡೆ, ಬೆಲೆ 8.99ಲಕ್ಷ ರೂ!

ಕಿಯಾ ಮೋಟಾರ್ಸ್ ಭಾರತದಲ್ಲಿ ಸೆಲ್ಟೋಸ್ ಕಾರು ಬಿಡುಗಡೆ ಮಾಡುವ ಮೂಲಕ ಹೊಸ ಅಧ್ಯಾಯ ಬರೆದಿತ್ತು. ಮೊದಲ ಕಾರಿನಲ್ಲಿ ದೇಶದಲ್ಲಿ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಸೂಚನೆ ನೀಡಿತ್ತು.  ಬಳಿಕ ಕಿಯಾ ಕಾರ್ನಿವಲ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಕಿಯಾ ಸೊನೆಸ್ ಸಬ್ ಕಾಂಪಾಕ್ಟ್ SUV ಕಾರು ಭಾರಿ ಸಂಚಲನ ಮೂಡಿಸಿತ್ತು. ಇದೀಗ ಕಿಯಾ ಕರೆನ್ಸ್ ಹೊಸ ದಾಖಲೆ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ಕಿಯಾ ಕರೆನ್ಸ್ ಕಾರು 5 ಟ್ರಿಮ್‌ನಲ್ಲಿ ಲಭ್ಯವಿದೆ. ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸುರಿ, ಲಕ್ಸುರಿ ಪ್ಲಸ್ ವೇರಿಯೆಂಟ್ ಕಾರುಗಳು ಲಭ್ಯವಿದೆ. ಈ ಕಾರುಗಳು ಒಟ್ಟು 19 ವೇರಿಯೆಂಟ್ ಕಾರುಗಳು ಲಭ್ಯವಿದೆ. ಮೂರು ಎಂಜಿನ್ ಆಯ್ಕೆಗಳಿವೆ. ಇಷ್ಟೇ ಅಲ್ಲ 6 ಸೀಟರ್ ಹಾಗೂ 7 ಸೀಟರ್ ಕಾರುಗಳು ಲಭ್ಯವಿದೆ.

Fire Risk: ಖಾಲಿ ಜಾಗದಲ್ಲಿ ವಾಹನ ನಿಲ್ಲಿಸುವಂತೆ ಗ್ರಾಹಕರಿಗೆ ಕಿಯಾ, ಹ್ಯುಂಡೈ ಕರೆ!

1.5 ಲೀಟರ್,1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು 113 hp ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.4 ಲೀಟರ್  T-GDi ಟರ್ಬೋ ಪೆಟ್ರೋಲ್ ಎಂಜಿನ್ 138 hp ಪವರ್ ಹಾಗೂ 242 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.5 ಲೀಟರ್ CRDi VGT ಡೀಸೆಲ್ ಎಂಜಿನ್ ಕಾರು 113 hp ಪವರ್  ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮೂರು ವೇರಿಯೆಂಟ್ ಕಾರುಗಳು 6MT, 7DCT ಹಾಗೂ 6AT ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 16.5 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಡೀಸೆಲ್ ಕಾರು 21.5 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಿಯಾ ಕರೆನ್ಸ್ ನಿರ್ವಹಣಾ ವೆಚ್ಚ ಪ್ರತಿ ಕೀಲೋಮೀಟರ್‌ಗೆ 37 ಪೈಸೆ ಮಾತ್ರ ಎಂದು ಕಂಪನಿ ಹೇಳಿದೆ.

Latest Videos
Follow Us:
Download App:
  • android
  • ios