Jeep Meridian ಭಾರತದಲ್ಲಿ ಜೀಪ್ ಮೆರಿಡಿಯನ್ ಕಾರು ಇದೇ ತಿಂಗಳಲ್ಲಿ ಅನಾವರಣ!
- ಮೂರು ಸಾಲಿನ ಆಸನದ ಜೀಪ್ ಮೆರಿಡಿಯನ್ ಕಾರು
- ಟಾಟಾ ಸಫಾರಿ ಸೇರಿದಂತೆ 7 ಸೀಟರ್ ಕಾರಿಗೆ ಪ್ರತಿಸ್ಪರ್ಧಿ
- ಮಾ.29ಕ್ಕೆ ನೂತನ ಕಾರು ಅನಾವರಣ, 2 ವೇರಿಯೆಂಟ್‌ನಲ್ಲಿ ಲಭ್ಯ
ನವದೆಹಲಿ(ಮಾ.16): ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಜೀಪ್ ಕಂಪಾಸ್ ಭಾರಿ ಸಂಚಲನ ಸೃಷ್ಟಿಸಿದೆ. ಹಲವು ಅಪ್‌ಗ್ರೇಡ್ ಮೂಲಕ ಮಾರುಕಟ್ಟೆ ಪ್ರವೇಶಿಸುಪ ಜೀಪ್ ಇದೀಗ ಮೂರು ಸಾಲಿನ ಮೆರಿಡಿಯನ್ ಕಾರು ಅನಾವರಣಗೊಳ್ಳುತ್ತಿದೆ.
ಮಾರ್ಚ್ 29 ರಂದು ನೂತನ ಜೀಪ್ ಮೆರಿಡಿಯನ್ ಕಾರು ಅನಾವರಣಗೊಳ್ಳಲಿದೆ. ಇದು ಮೂರು ಸಾಲಿನ ಆಸನ ಸಾಮರ್ಥ್ಯದ ಕಾರು. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಮಾರ್ಚ್ 29ಕ್ಕೆ ಬಹಿರಂಗವಾಗಲಿದೆ. ಕಾರಿನ ಬುಕಿಂಗ್ ಮೇ ತಿಂಗಳಿನಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ಜೀಪ್ ಮೆರಿಡಿಯನ್ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.
Jeep Comapss Trailhawk ಭಾರತದಲ್ಲಿ ಬಹುನಿರೀಕ್ಷಿತ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಕಾರು ಬಿಡುಗಡೆ!
ಜೀಪ್ ಮೆರಿಡಿಯನ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇನ್ನು 1.4 ಲೀಟರ್ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಕಾರು 161 bhp ಪವರ್ ಹಾಗೂ 250 Nm ಪೀಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ಎಂಜಿನ್ ಕಾರು 171 bhp ಪವರ್ ಹಾಗೂ 350 Nm ಪೀಕ್ ಸಾಮರ್ಥ್ಯ ಹೊಂದಿದೆ.
ಜೀಪ್ ಮೆರಿಡಿಯನ್ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.ಕಳೆದ ತಿಂಗಳು ಭಾರತದಲ್ಲಿ ಜೀಪ್ ಮೆರಿಡಿಯನ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ನೋಟದಲ್ಲಿ ಜೀಪ್ ಕಮಾಂಡರ್‌ಗೆ ಹೋಲಿಕೆಯಾಗುತ್ತಿರುವ ನೂತನ ಕಾರು, ಅತ್ಯಾಕರ್ಷಕ ವಿನ್ಯಾಸ ಹಾಗೂ ಇಂಟಿಯರ್ ಹೊಂದಿದೆ.
ರಾಂಗ್ಲರ್ 80 ನೇ ವಾರ್ಷಿಕೋತ್ಸವ; ಭಾರತದಲ್ಲಿ ತಯಾರಾದ ಜೀಪ್ ರಾಂಗ್ಲರ್ ಬಿಡುಗಡೆ!
ಜೀಪ್ ಕಂಪಾಸ್‌ನ 2 ಡೀಸೆಲ್ ಅಟೊಮ್ಯಾಟಿಕ್ ಕಾರು
ಡೀಸೆಲ್ ಎಂಜಿನ್ ಹೊಂದಿರುವ ಅಟೊಮ್ಯಾಟಿಕ್ ವೇರಿಯೆಂಟ್‌ನ ಎರಡು 4*4 ವಾಹನಗಳನ್ನು ಜೀಪ್ ಕಂಪಾಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲಾಂಗಿಟ್ಯೂಡ್ (ಬೇಸ್) ಮತ್ತು ಲಿಮಿಟೆಡ್ ಪ್ಲಸ್ (ಟಾಪ್ ಎಂಡ್)ಈ ಹೊಸ ಎಸ್‌ಯುವಿಗಳು. ಬಿಎಸ್6, 173 ಎಚ್‌ಪಿ 350 ಎನ್‌ಎಂ, 2.0 ಲೀಟರ್ ಟರ್ಬೋ ಡಿಸೆಲ್ ಎಂಜಿನ್ ಹೊಂದಿವೆ. 9 ಅಟೊಮ್ಯಾಟಿಕ್ ಸ್ಪೀಡ್ ಟ್ರಾನ್ಸ್‌ಮಿಶನ್‌ಗಳು ಇದರಲ್ಲಿವೆ. ಈಗ ಬಿಡುಗಡೆಯಾಗಿರುವ ಎರಡೂ ವಾಹನಗಳಲ್ಲೂ ಕ್ರೂಸ್ ಕಂಟ್ರೋಲ್ ಇದೆ. ಸ್ಪೀಡ್ ಕಂಟ್ರೋಲ್‌ಗೆ ಇದು ಸಹಕಾರಿ. 7 ಇಂಚಿನ ಯು ಕನೆಕ್ಟ್ ಸ್ಕ್ರೀನ್ ಇದೆ. ರಿವರ್ಸ್ ಕ್ಯಾಮರಾ ಸೆಟ್‌ಅಪ್ ಇದೆ.
ಜೀಪ್ ಕಂಪಾಸ್‌ನ ಸ್ಪೋಟ್ಸ್‌ರ್ ಪ್ಲಸ್ ಟ್ರಿಮ್
ಹೆಚ್ಚುತ್ತಿರುವ ಸ್ಪರ್ಧೆಯ ಮಧ್ಯೆ ಫಿಯೆಟ್ ಕ್ರೈಸ್ಲರ್ ಇಂಡಿಯಾ ಕಂಪೆನಿ ಜೀಪ್ ಕಂಪಾಸ್ ಸೀರಿಸ್‌ನ ಹೊಸ ಮಾಡೆಲ್ ಸ್ಪೋಟ್ಸ್‌ರ್ ಪ್ಲಸ್ ಟ್ರಿಮ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. 16 ಇಂಚಿನ ಸ್ಟೋರ್ಟಿ ಆಕರ್ಷಕ ಅಲಾಯ್, ತಾಪಮಾನವನ್ನು ನಿಯಂತ್ರಿಸುವ ಡ್ಯುಯೆಲ್ ಝೋನ್ ಸ್ವಯಂ ಚಾಲಿತ ಏರ್ ಕಂಡೀಶನಿಂಗ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಕಾರಿನ ಮೇಲ್ಭಾಗ ಕರಿಬಣ್ಣದ ರೂಫ್ ರೈಲ್ಸ್ ಮೊದಲಾದ 21 ಹೊಸ ಫೀಚರ್‌ಗಳಿರುವ ಕಾರ್ ಇದು. ಇದಲ್ಲದೇ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಮತ್ತೊಂದು ವಿಶೇಷತೆ. ಕಂಫರ್ಟ್ ಹಾಗೂ ಲಗ್ಸುರಿಗಳೆರಡನ್ನೂ ಹದವಾಗಿ ಬೆರೆಸಿ ತಯಾರಿಸಿರೋ ಈ ಎಸ್‌ಯುವಿ 14.1 ರಷ್ಟುಮೈಲೇಜ್ ಕೊಡುತ್ತೆ ಅಂತ ಕಂಪೆನಿ ಹೇಳುತ್ತೆ. ಪೆಟ್ರೋಲ್ ಹಾಗೂ ಡೀಸೆಲ್‌ಗಳೆರಡರಲ್ಲೂ ಲಭ್ಯ.
ಜೀಪ್ ಕಂಪಾಸ್ ಲಾಂಗಿಟ್ಯೂಡ್(ಓ) ಬಂತು
ಈಗ ಎಸ್‌ಯುವಿಗಳದೇ ಕಾರುಬಾರು. ಹಾಗಾಗಿ ಜೀಪ್ ಕಂಪಾಸ್ ಈಗಾಗಲೇ ಚಾಲ್ತಿಯಲ್ಲಿರುವ ಮಹೀಂದ್ರ ಎಕ್ಸ್‌ಯುವಿ500, ಹ್ಯುಂಡೈ ಟಕ್ಸನ್, ಹ್ಯುಂಡೈ ಕ್ರೆಟಾ ಹೀಗೆ ಹಲವು ಕಾರುಗಳಿಗೆ ಸ್ಪರ್ಧೆಯೊಡ್ಡಲಿದೆ. ಈ ಜೀಪ್ ಕಂಪಾಸ್ ಪೆಟ್ರೋಲ್ ಕಾರ್ ನಾಲ್ಕು ರೀತಿಯಲ್ಲಿ ಮಾರುಕಟ್ಟೆಯಲ್ಲಿ ದೊರಕಲಿದೆ. ಸ್ಪೋರ್ಟ್ ಲಾಂಗಿಟ್ಯೂಡ್(ಓ), ಲಿಮಿಟೆಡ್ ಮತ್ತು ಲಿಮಿಟೆಡ್ ಪ್ಲಸ್.