ಲ್ಯಾಂಡ್ ರೋವರ್ ಡಿಫೆಂಡರ್ ಅಮೃತ ಮಹೋತ್ಸವ, 75ನೇ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!
3D ಸರೌಂಡ್ ಕ್ಯಾಮೆರಾ, ಮ್ಯಾಟ್ರಿಕ್ಸ್ LED ಹೆಡ್‍ಲೈಟ್‍ಗಳು, ಎಲೆಕ್ಟ್ರಿಕ್ ಹೈಬ್ರಿಡ್ DV, ಗ್ರಾಸ್ಮೀರ್ ಗ್ರೀನ್ ಬಣ್ಣದಲ್ಲಿ ಹೊಚ್ಚ ಹೊಸ ಲಿಮಿಟೆಡ್ ಎಡಿಶನ್ ಡಿಫೆಂಡರ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.
ಬೆಂಗಳೂರು(ಸೆ.19): ಲ್ಯಾಂಡ್ ರೋವರ್ ಡಿಫೆಂಡರ್ 75 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದೆ. ಇದರ ಹಿನ್ನಲೆಯಲ್ಲಿ75 ನೇ ಲಿಮಿಟೆಡ್ ಎಡಿಷನ್ ಡಿಫೆಂಡರ್ ಕಾರು ಬಿಡುಗಡೆ ಮಾಡಿದೆ. 1948 ರಲ್ಲಿ ಆ್ಯಮರ್ಸರ್‌ಡ್ಯಾಮ್ ಮೋಟಾರ್ ಶೋನಲ್ಲಿ ಮೊದಲ ಸರಣಿ ಪರಿಚಯಿಸಲಾಯಿತು. ಇದೀಗ 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ 75ನೇ ಎಡಿಶನ್ ಬಿಡುಗಡೆ ಮಾಡಿದೆ. 90 ಅಥವಾ 110 ಬಾಡಿ ಡಿಸೈನ್ ಗಳಲ್ಲಿ ಲಭ್ಯವಿರುವ ಡಿಫೆಂಡರ್ 75 ನೇ ಲಿಮಿಟೆಡ್ ಎಡಿಷನ್ ಸಾಂಪ್ರದಾಯಿಕ ಗ್ರಾಸ್ಮೀರ್ ಗ್ರೀನ್ ಪೇಂಟ್‍ನಲ್ಲಿ ಫಿನಿಶಿಂಗ್ ಮಾಡಿರುವ ವಿಶೇಷವಾದ ಬಾಹ್ಯ ವಿನ್ಯಾಸದ ಥೀಮ್ ಅನ್ನು ಹೊಂದಿದೆ. ಡಿಫೆಂಡರ್ ನ ದೀರ್ಘಬಾಳಿಕೆಯ ಮತ್ತು ಬಹುಮುಖ ಒಳಾಂಗಣವು ಇದೇ ರೀತಿಯ ಸಂಸ್ಕರಣೆಯನ್ನು ಪಡೆದುಕೊಂಡಿದೆ, ಬ್ರಷ್ ಮಾಡಿದ ಗ್ರಾಸ್ಮೀರ್ ಗ್ರೀನ್ ಪೌಡರ್ ಕೋಟ್‍ನಲ್ಲಿ ಕ್ರಾಸ್ ಕಾರ್ ಬೀಮ್ ಫಿನಿಶ್ ಅನ್ನು ಪೂರ್ಣಗೊಳಿಸಲಾಗಿದೆ ಮತ್ತು ಕ್ರಾಸ್ ಕಾರ್ ಬೀಮ್ ಎಂಡ್ ಕ್ಯಾಪ್‍ಗಳ ಮೇಲೆ ಲೇಸರ್-ಎಚ್ಚಣೆಯ ವಿವರಗಳನ್ನು ಮಾಡಲಾಗಿದೆ. ಆಸನಗಳನ್ನು ರೆಸಿಸ್ಟ್ ಎಬೊನಿಯಲ್ಲಿ ಪೂರ್ಣಗೊಳಿಸಲಾಗಿದೆ, ಸೆಂಟರ್ ಕನ್ಸೋಲ್‍ನಲ್ಲಿ ರೋಬಸ್ಟೆಕ್ ವಸ್ತುವಿನಿಂದ ಮಾಡಲಾದ ಹಾಕಿ ಸ್ಟಿಕ್ ಇದೆ – ಇದು ಡಿಫೆಂಡರ್ ನಲ್ಲಿ ಲಭ್ಯವಿರುವ ಅತ್ಯಂತ ದೃಢವಾದ ಫ್ಯಾಬ್ರಿಕ್ ಆಗಿದೆ.
ಡಿಫೆಂಡರ್ ನ(Land Rover Defender) ಲೈಫ್‍ಸೈಕಲ್ ಮುಖ್ಯ ಇಂಜಿನಿಯರ್ ಸ್ಟುವರ್ಟ್ ಫ್ರಿತ್ ಹೇಳಿದ್ದಾರೆ. ಹೊಸ ಡಿಫೆಂಡರ್ ಅನ್ನು ಬಹಿರಂಗಪಡಿಸಿದಾಗಿನಿಂದ, ಪ್ರಪಂಚದಾದ್ಯಂತದ ಗ್ರಾಹಕರು ಪ್ರೀತಿಯಲ್ಲಿ ಬಿದ್ದಿದ್ದಾರೆ ಮತ್ತು ಬಹಳವಾದ ಬೇಡಿಕೆಯನ್ನು ಹೊಂದಿದೆ. ಈ ಹೊಸ ಲಿಮಿಟೆಡ್(Limited Edition Defender) ಎಡಿಷನ್ ತನ್ನ ಬಣ್ಣ ಮತ್ತು ವಿವರಗಳೊಂದಿಗೆ ಕಳೆದ 75 ವರ್ಷಗಳ ಚೈತನ್ಯವನ್ನು ಸೆರೆಹಿಡಿಯುತ್ತದೆ ಮತ್ತು ಹೈಬ್ರಿಡ್ ಎಲೆಕ್ಟ್ರಿಕ್ ಪವರ್(Electric Power), ಕಾನ್ಫಿಗರ್ ಮಾಡಬಹುದಾದ ಟೆರೈನ್ ರೆಸ್ಪಾನ್ಸ್, ಏರ್ ಅಪ್‍ಡೇಟ್‍ಗಳ ಮೇಲಿನ ಸಾಫ್ಟ್‍ವೇರ್ ಮತ್ತು ಅಪ್ರತಿಮ ಎಲ್ಲಾ ಭೂಪ್ರದೇಶ ಸಾಮಥ್ರ್ಯದಂತಹ ನವೀನ ಹೊಸ ತಂತ್ರಜ್ಞಾನದೊಂದಿಗೆ ಅದನ್ನು ಬೆಸೆಯುತ್ತದೆ ಎಂದರು.
ಲ್ಯಾಂಡ್ ರೋವರ್‌ಗೆ 2021ರ ವಿಶ್ವದ ಅತ್ಯುತ್ತಮ ಡಿಸೈನ್ ಕಾರು ಪ್ರಶಸ್ತಿ!
ಲಿಮಿಟೆಡ್ ಎಡಿಷನ್ ಉನ್ನತ-ನಿರ್ದಿಷ್ಟತೆಯ HSE ಅನ್ನು ಆಧರಿಸಿದ್ದು, ಸಮಗ್ರ ಗುಣಮಟ್ಟದ ಉಪಕರಣಗಳನ್ನು ಹೊಂದಿದೆ. ನವೀನ ತಂತ್ರಜ್ಞಾನವು 3D ಸರೌಂಡ್ ಕ್ಯಾಮೆರಾ, ಕಾನ್ಫಿಗರ್ ಮಾಡಬಹುದಾದ ಟೆರೈನ್ ರೆಸ್ಪಾನ್ಸ್, ಮೆರಿಡಿಯನ್ ಸೌಂಡ್ ಸಿಸ್ಟಮ್, ಮ್ಯಾಟ್ರಿಕ್ಸ್ LED ಫ್ರಂಟ್ ಲೈಟಿಂಗ್, 28.95 ಸೆಂ (11.4) ಪಿವಿ ಪ್ರೊ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೆಡ್-ಅಪ್ ಡಿಸ್ಪ್ಲೇ ಮತ್ತು ವೈರ್‍ಲೆಸ್ ಡಿವೈಸ್ ಚಾರ್ಜರ್ ಅನ್ನು ಒಳಗೊಂಡಿದೆ.
ಎಲ್ಲಾ 75 ನೇ ಲಿಮಿಟೆಡ್ ಎಡಿಷನ್ ನ ಮಾದರಿಗಳು ಫೋಲ್ಡಿಂಗ್ ಫ್ಯಾಬ್ರಿಕ್ ರೂಫ್ ಅಥವಾ ಸ್ಲೈಡಿಂಗ್ ಪನೋರಮಿಕ್ ರೂಫ್‍ನ ಆಯ್ಕೆಯನ್ನು ಸಹ ಒಳಗೊಂಡಿರುತ್ತವೆ, ಆದರೆ 14-ವೇ ಡ್ರೈವರ್ ಮತ್ತು ಪ್ಯಾಸೆಂಜರ್ ಹೀಟೆಡ್ ಎಲೆಕ್ಟ್ರಿಕ್ ಮೆಮೊರಿ ಸೀಟ್‍ಗಳು, ಹೀಟೆಡ್ ಸ್ಟೀರಿಂಗ್ ವೀಲ್ ಮತ್ತು ಮೂರು ವಲಯ ಹವಾಮಾನ ನಿಯಂತ್ರಣಗಳು ಉನ್ನತ ಆರಾಮವನ್ನು ನೀಡುತ್ತವೆ. ವರ್ಧಿತ ಸಾಮಥ್ರ್ಯಕ್ಕಾಗಿ ಎಲೆಕ್ಟ್ರಿಕಲ್ ಡಿಪ್ಲೋಯಬಲ್ ಟೋ ಬಾರ್ ಮತ್ತು ಆಲ್-ಸೀಸನ್ ಟೈರ್ ಗಳನ್ನು ಆಯ್ಕೆಗಳಲ್ಲಿ ಸೇರಿಸಿಕೊಳ್ಳಬಹುದು.
ಪವರ್‍ಟ್ರೇನ್ ಆಯ್ಕೆಗಳು P400 ಮತ್ತು D300 ಇಂಜಿನಿಯಮ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳ ಜೊತೆಗೆ 110 ಮಾದರಿಗಳಲ್ಲಿ ಶಕ್ತಿಯುತ ಮತ್ತು ಪರಿಣಾಮಕಾರಿಯಾದ P400e ಪ್ಲಗ್-ಇನ್ ಎಲೆಕ್ಟ್ರಿಕ್ ಹೈಬ್ರಿಡ್ (PHEV) ಅನ್ನು ಒಳಗೊಂಡಿವೆ, ಇವೆರಡೂ ವೇಗವರ್ಧನೆ ಮತ್ತು ಬ್ರೇಕಿಂಗ್ ನಿಂದ ಸಾಮಾನ್ಯವಾಗಿ ಕಳೆದುಕೊಳ್ಳುವ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಮೈಲ್ಡ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (MHEV) ತಂತ್ರಜ್ಞಾನವನ್ನು ಬಳಸಿಕೊಂಡು ಪವರ್ ಡೆಲಿವರಿ ಮತ್ತು ಇಂಧನ ಮಿತವ್ಯಯವನ್ನು ಹೆಚ್ಚಿಸುತ್ತವೆ.
ಟಾಪ್ ಗೇರ್ ನ 2020 ವರ್ಷದ ಕಾರು, ಮೋಟಾರ್ ಟ್ರೆಂಡ್‍ನ ವರ್ಷದ 2021 SUV ಮತ್ತು ಆಟೋಕಾರ್‍ನ ಅತ್ಯುತ್ತಮ SUV 2020 ಮತ್ತು 5 ಸ್ಟಾರ್ ಯೂರೋ NCAP ಸುರಕ್ಷತಾ ರೇಟಿಂಗ್ ಸೇರಿದಂತೆ 50 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಡಿಫೆಂಡರ್ ಗೆದ್ದಿದೆ.
ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಹೈಬ್ರಿಡ್ ಬುಕಿಂಗ್ ಆರಂಭ; ಮನೆಯಲ್ಲೆ ಸುಲಭ ಚಾರ್ಜಿಂಗ್!
ಲ್ಯಾಂಡ್ ರೋವರ್ ಒಂದೇ ವಾಹನದ ಬಿಡುಗಡೆಯೊಂದಿಗೆ ಹುಟ್ಟಿದೆ. ಇಂದು ನಮ್ಮ SUV ಗಳ ಕುಟುಂಬವು ಏಳು ದಶಕಗಳಿಗೂ ಹೆಚ್ಚು ಕಾಲ ಲ್ಯಾಂಡ್ ರೋವರ್ ಅನ್ನು ನಿರೂಪಿಸಿರುವ ನಾವೀನ್ಯತೆಯ ಪ್ರವರ್ತಕ ಮನೋಭಾವಕ್ಕೆ ಸಾಕ್ಷಿಯಾಗಿದೆ. ನಮ್ಮ ಡಿಫೆಂಡರ್, ಡಿಸ್ಕವರಿ ಮತ್ತು ರೇಂಜ್ ರೋವರ್ ಬ್ರ್ಯಾಂಡ್ ಕುಟುಂಬಗಳು ಅಪ್ರತಿಮ ಸಾಮಥ್ರ್ಯ, ಬಹುಮುಖತೆ ಮತ್ತು ಐಷಾರಾಮಿಗಳನ್ನು ನೀಡುತ್ತವೆ - 75 ವರ್ಷಗಳ ಯಶಸ್ಸಿಗೆ ಮತ್ತೊಂದು ಪರಿಪೂರ್ಣ ಅಡಿಪಾಯ.