ಮಳೆಗಾಲದ ಕಾರ್ ಕೇರ್‌ಗೆ ಮಾನ್ಸೂನ್ ಶಿಬಿರ ಪ್ರಕಟಿಸಿದ ಜಾಗ್ವಾರ್ ಲ್ಯಾಂಡ್ ರೋವರ್!
- ಪ್ರತಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಚೆಕಪ್
- ಉಚಿತ 32 ಪಾಯಿಂಟ್ ಎಲೆಕ್ಟ್ರಾನಿಕ್ ವೆಹಿಕಲ್ ಹೆಲ್ತ್ ಚೆಕ್ ಅಪ್
- 14 ರಿಂದ 18 ಜೂನ್ 2022 ರವರೆಗೆ ತಮ್ಮ ನಗರದಲ್ಲಿ ಶಿಬಿರ
ಬೆಂಗಳೂರು(ಜೂ.14): ದೇಶದ ಹಲವು ಭಾಗಗಳಲ್ಲಿ ಮಳೆಗಾಲ ಆರಂಭಗೊಂಡಿದೆ. ಇನ್ನೊಂದು ವಾರದಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಳೆಗಾಲದಲ್ಲಿ ವಾಹನಗಳ ನಿರ್ವಹಣೆ ಅತೀ ಅಗತ್ಯವಾಗಿದೆ. ನಿರ್ಲಕ್ಷ್ಯಿಸಿದರೆ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ. ಹೀಗಾಗಿ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಗ್ರಾಹಕರಿಗೆ ಮಾನ್ಸೂನ್ ಸೇವಾ ಶಿಬಿರ ಪ್ರಕಟಿಸಿದೆ.
ಜೂನ್ 14 ರಿಂದ 18 ರವರೆಗಿನ ವಾರ್ಷಿಕ ಮಾನ್ಸೂನ್ ಸೇವಾ ಶಿಬಿರವನ್ನು ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಆರಂಭಿಸಲಾಗಿದೆ. ಶಿಬಿರದಲ್ಲಿ, ಗ್ರಾಹಕರು ಕಾಂಪ್ಲಿಮೆಂಟರಿ ವೆಹಿಕಲ್ ಚೆಕ್-ಅಪ್ ಮತ್ತು ಬ್ರಾಂಡೆಡ್ ಸರಕುಗಳು, ಪರಿಕರಗಳು ಮತ್ತು ಮೌಲ್ಯವರ್ಧಿತ ಸೇವೆಗಳ ವಿಶೇಷ ಕೊಡುಗೆಗಳಿಂದ ಪ್ರಯೋಜನವನ್ನು ಪಡೆಯಬಹುದು. ಉತ್ತಮ ತರಬೇತಿ ಪಡೆದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ತಂತ್ರಜ್ಞರು ಎಲ್ಲಾ ವಾಹನಗಳ ಕಾಳಜಿಯನ್ನು ನಿರ್ವಹಿಸುತ್ತಾರೆ ಮತ್ತು ಅಗತ್ಯವಿರುವಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅಸಲಿ ಭಾಗಗಳ ಭರವಸೆಯನ್ನು ನೀಡುತ್ತಾರೆ.
Range Rover Sport ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ಸ್ ಬುಕಿಂಗ್ ಆರಂಭ!
ಮಾನ್ಸೂನ್ ಋತುವಿನಲ್ಲಿನ ಪ್ರತಿ ಪ್ರಯಾಣವೂ ಸುರಕ್ಷಿತ ಮತ್ತು ಸುಭದ್ರವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಶಿಬಿರವು ಕಾಂಪ್ಲಿಮೆಂಟರಿ 32-ಪಾಯಿಂಟ್ ಎಲೆಕ್ಟ್ರಾನಿಕ್ ವೆಹಿಕಲ್ ಹೆಲ್ತ್ ಚೆಕ್-ಅಪ್, ಬ್ರೇಕ್ ಮತ್ತು ವೈಪರ್ ಚೆಕ್, ಟೈರ್ ಮತ್ತು ಫ್ಲೂಯಿಡ್ ಲೆವೆಲ್ ಚೆಕ್, ಜೊತೆಗೆ ಸಮಗ್ರ ಬ್ಯಾಟರಿ ಹೆಲ್ತ್ ಚೆಕ್-ಅಪ್ ಅನ್ನು ನೀಡುತ್ತದೆ.
ನಮ್ಮ ಗ್ರಾಹಕರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಚಾಲನಾ ಅನುಭವದ ಜೊತೆಗೆ ಅವರ ವಾಹನಗಳಿಗೆ ಉತ್ತಮ ರಕ್ಷಣೆ ನೀಡುವ ಅತ್ಯುತ್ತಮವಾದ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಮಾನ್ಸೂನ್ ಸೇವಾ ಶಿಬಿರವನ್ನು ಎಲ್ಲಾ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ವಾಹನ ಮಾಲೀಕರ ಸಮಯೋಚಿತ ಅಗತ್ಯಗಳನ್ನು ಪೂರೈಸಲು, ಹಾಗೂ ಅವರಿಗೆ ಮಾನ್ಸೂನ್ ಸಿದ್ಧ ಕಾರುಗಳು, ಮನಸ್ಸಿನ ಶಾಂತಿ ಮತ್ತು ಎಲ್ಲಾ ಸಮಯದಲ್ಲೂ ತಡೆರಹಿತ ಚಾಲನಾ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದ್ದಾರೆ.
ಚಾಲಕರನ್ನು ಹೊಂದಿರುವ ಗ್ರಾಹಕರಿಗೆ, ಸೇವಾ ಶಿಬಿರವು ವಿಶೇಷವಾಗಿ ವ್ಯವಸ್ಥಿತಗೊಳಿಸಿದ ಚಾಲಕರ ತರಬೇತಿ ಕಾರ್ಯಕ್ರಮ* ವನ್ನು ಒಳಗೊಂಡಿದ್ದು, ಇದು ಮಾನ್ಸೂನ್ ಋತುವಿನಲ್ಲಿ ಚಾಲನೆ ಮತ್ತು ವಾಹನ ನಿರ್ವಹಣೆಯ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ.
Range Rover Car ಹೊಚ್ಚ ಹೊಸ ರೇಂಜ್ ರೋವರ್ SV ಕಾರಿನ ಬುಕಿಂಗ್ ಆರಂಭಿಸಿದ ಲ್ಯಾಂಡ್ ರೋವರ್!
ಈ ಸೇವೆಗಳನ್ನು ಪಡೆಯಲು, ಗ್ರಾಹಕರು 14 ರಿಂದ 18 ಜೂನ್ 2022 ರವರೆಗೆ ಬೆಳಿಗ್ಗೆ 9:30 ರಿಂದ ಸಂಜೆ 6:00 ರವರೆಗೆ ಹತ್ತಿರದ ಅಧಿಕೃತ ಚಿಲ್ಲರೆ ವ್ಯಾಪಾರಿಗಳೊಂದಿಗೆ ಭೇಟಿಯನ್ನು ನಿಗದಿಪಡಿಸಿಕೊಳ್ಳಬಹುದು.
ಜಾಗ್ವಾರ್ ಲ್ಯಾಂಡ್ ರೋವರ್ ರಿಟೇಲರ್ ನೆಟ್‍ವರ್ಕ್ ಭಾರತದಲ್ಲಿ
ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಭಾರತದ 21 ನಗರಗಳಲ್ಲಿ, ಅಂದರೆ ಅಹಮದಾಬಾದ್, ಬೆಂಗಳೂರು (3), ಭುವನೇಶ್ವರ್, ಚಂಡೀಗಢ, ಚೆನ್ನೈ (2), ಕೊಯಮತ್ತೂರು, ದೆಹಲಿ, ಗುರ್ಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿ, ಕರ್ನಾಲ್, ಲಕ್ನೋ, ಮುಂಬೈ (2), ನೋಯ್ಡಾ, ಪುಣೆ, ರಾಯಪುರ, ಸೂರತ್ ಮತ್ತು ವಿಜಯವಾಡ ಗಳಲ್ಲಿ 25 ಅಧಿಕೃತ ಮಳಿಗೆಗಳ ಮೂಲಕ ಲಭ್ಯವಿದೆ.