ನವೆದಹಲಿ(ಮಾ.17): ಜಾಗ್ವಾರ್ ಲ್ಯಾಂಡ್ ರೋವರ್ ಕಾರಿನೊಳಗಿನ ಕ್ಯಾಬಿನ್ ಶುದ್ಧವಾಯು ನೀಡಲಿದೆ. ಇದು ಪರೀಕ್ಷೆ ಮೂಲಕ ಧೃಡಪಟ್ಟಿದೆ.  ವಾಯು ಶುದ್ಧೀಕರಣ ತಂತ್ರಜ್ಞಾನವು ವೈರಸ್ ಮತ್ತು ಬ್ಯಾಕ್ಟೀರಿಯಾವನ್ನು ಶೇಕಡಾ 97 ರಷ್ಟು ಪ್ರತಿಬಂಧಿಸುವುದಾಗಿ  ಪ್ರಯೋಗಾಲಯ ಪರೀಕ್ಷೆಗಳಲ್ಲಿ ಖಚಿತಪಡಿಸಿದೆ.

ಭಾರತದಲ್ಲಿ ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ...

ಮೂಲಮಾದರಿಯ ತಾಪನ, ವಾತಾಯನ ಮತ್ತು ಹವಾನಿಯಂತ್ರಣ (ಊಗಿಂಅ) ವ್ಯವಸ್ಥೆಯು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳನ್ನು ತಡೆಯಲು ಪ್ಯಾನಾಸೋನಿಕ್ ನ್ಯಾನೊ™ ಎಕ್ಸ್**ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ಭವಿಷ್ಯದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಮಾದರಿಗಳ ಕ್ಯಾಬಿನ್‍ಗಳಿಗೆ ವಿಶಿಷ್ಟ ಗ್ರಾಹಕ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಭವಿಷ್ಯದ ಕಾರ್ಯತಂತ್ರದ: ಆಧುನಿಕ ಐಷಾರಾಮಿ, ಅನನ್ಯ ಗ್ರಾಹಕ ಅನುಭವಗಳು ಮತ್ತು ಸಕಾರಾತ್ಮಕ ಸಾಮಾಜಿಕ ಪ್ರಭಾವದ ಸುಸ್ಥಿರತೆ-ಸಮೃದ್ಧ ಪುನರ್ರಚನೆಯ  ವ್ಯಾಖ್ಯಾನದಂತೆ ಈ ಸಂಶೋಧನೆಯು ಉದ್ಭವಿಸಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಪ್ರಮುಖ ಮೈಕ್ರೋಬಯಾಲಜಿ ಮತ್ತು ವೈರಾಲಜಿ ಲ್ಯಾಬ್ ಆದ ಪರ್ಫೆಕ್ಟಸ್ ಬಯೋಮೆಡ್ ಲಿಮಿಟೆಡ್‍ನೊಂದಿಗೆ ಪಾಲುದಾರಿಕೆ ಹೊಂದಿದ್ದು, 30 ನಿಮಿಷಗಳ ಚಕ್ರದಲ್ಲಿ ವಾಹನಗಳ ವಾತಾವರಣ ವ್ಯವಸ್ಥೆಯನ್ನು ಮರು-ಪರಿಚಲನೆ ಕ್ರಮದಲ್ಲಿ ಅನುಕರಿಸಲು ವಿನ್ಯಾಸಗೊಳಿಸಲಾದ ವಿಶ್ವದ ಪ್ರಮುಖ ಪ್ರಯೋಗಾಲಯ ಆಧಾರಿತ ಮುಚ್ಚಿದ-ಕೊಠಡಿಯ ಪರೀಕ್ಷೆಯನ್ನು ನಡೆಸಿತು. ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಶೇಕಡಾ 97 ರಷ್ಟು ಪ್ರತಿಬಂಧಿಸುತ್ತದೆ ಎಂದು ಸ್ವತಂತ್ರ ಸಂಶೋಧನೆಯು ತೋರಿಸಿದೆ.

ಬೆಂಗಳೂರಿನಲ್ಲಿ ನೂತನ ಜಾಗ್ವಾರ್ ಲ್ಯಾಂಡ್‌ ರೋವರ್ ರೀಟೈಲರ್ ಘಟಕ ಉದ್ಘಾಟನೆ!

ಇದು ವೈರಲ್ ಪರೀಕ್ಷೆ ಮತ್ತು ಇಮ್ಯುನೊ ಪ್ರೊಫೈಲಿಂಗ್‍ನಲ್ಲಿ ಪರಿಣತಿ ಹೊಂದಿರುವ ಮತ್ತು ನವೀನ ಕರೋನಾ ವೈರಸ್ ವಿರುದ್ಧ ಪರೀಕ್ಷೆಗಳನ್ನು ಮಾಡಲು ಅನುಮತಿ ಹೊಂದಿರುವ ವಿಶ್ವದ ಪ್ರಯೋಗಾಲಯಗಳಲ್ಲಿ ಒಂದಾಗಿರುವ  ಜಾಗತಿಕ ಸಂಶೋಧನಾ ಸಂಸ್ಥೆಯಾದ ಟೆಕ್ಸ್ಸೆಲ್ ಸಹ ಪ್ಯಾನಸೋನಿಕ್ ನ ನವೀನ ನ್ಯಾನೊ™ ಎಕ್ಸ್ ತಂತ್ರಜ್ಞಾನವನ್ನು ನವೀನ ಕರೋನಾ ವೈರಸ್ (ಎಸ್‍ಎಆರ್‍ಎಸ್-ಕೋವಿ -2*) ನ ಮೇಲೆ ಪರೀಕ್ಷಿಸಿದೆ. ಎರಡು ಗಂಟೆಗಳ ಪ್ರಯೋಗಾಲಯ ಪರೀಕ್ಷೆ*** ಯ ಸಮಯದಲ್ಲಿ ಶೇಕಡಾ 99.995 ಕ್ಕಿಂತ ಹೆಚ್ಚು ವೈರಸ್ ಅನ್ನು ಪ್ರತಿಬಂಧಿಸಲಾಗಿದೆ ಎಂದು ಅದು ಕಂಡುಹಿಡಿದಿದೆ.

 ನಮ್ಮ ಗ್ರಾಹಕರ ಯೋಗಕ್ಷೇಮವು ನಮಗೆ ಅತ್ಯಂತ ಮಹತ್ವದ್ದಾಗಿದೆ - ಮತ್ತು ಈಗ, ಹಿಂದೆಂದಿಗಿಂತಲೂ ಹೆಚ್ಚಾಗಿ, ನಾವೆಲ್ಲರೂ, ನಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ಸಹಾಯ ಮಾಡುವ ತಾಂತ್ರಿಕ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ನಮ್ಮ ಪರಿಣಿತ ಎಂಜಿನಿಯರ್‍ಗಳು ಅಭಿವೃದ್ಧಿಪಡಿಸಿ ನಿಯೋಜಿಸಿದ ಸ್ವತಂತ್ರ ಸಂಶೋಧನೆಯು, ಹಾನಿಕಾರಕ ರೋಗಕಾರಕಗಳನ್ನು ಕಡಿಮೆ ಮಾಡಿ, ಕ್ಯಾಬಿನ್‍ನೊಳಗಿನ ಪ್ರಯಾಣಿಕರಿಗೆ ಸ್ವಚ್ಛ ಪರಿಸರವನ್ನು ಒದಗಿಸುತ್ತದೆ ಮತ್ತು ಮಾಲೀಕತ್ವದ ಅನುಭವದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡಲು ನಾವು ಕೆಲಸ ಮಾಡುತ್ತಿರುವ ಒಂದು ವಿಧಾನವಾಗಿದೆ  ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಮುಖ್ಯ ವೈದ್ಯಾಧಿಕಾರಿ ಡಾ. ಸ್ಟೀವ್ ಇಲ್ಲೆ ಹೇಳಿದ್ದಾರೆ.
 
ಸಕ್ರಿಯ ವಾಯು ಶುದ್ಧೀಕರಣವನ್ನು ಒದಗಿಸಲು ನ್ಯಾನೊ ಎಕ್ಸ್ ತಂತ್ರಜ್ಞಾನವು- ಅದರ ಹಿಂದಿನ ನ್ಯಾನೊ ಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿ – ಅತ್ಯಂತ ಸೂಕ್ಷ್ಮ ಗಾತ್ರದ ನೀರಿನ ಅಣುಗಳಿಂದ ಸುತ್ತುವರೆದಿರುವ ಟ್ರಿಲಿಯನ್ಗಟ್ಟಲೆ ಹೈಡ್ರಾಕ್ಸಿಲ್  ರಾಡಿಕಲ್ಗಳನ್ನು ರಚಿಸಲು ಹೆಚ್ಚಿನ ವೋಲ್ಟೇಜ್ ಅನ್ನು ಬಳಸುತ್ತದೆ. ಈ ಒಹೆಚ್ ರಾಡಿಕಲ್‍ಗಳು ವೈರಸ್ ಮತ್ತು ಬ್ಯಾಕ್ಟೀರಿಯಾ ಪ್ರೋಟೀನ್‍ಗಳ ಗುಣಲಕ್ಷಣಗಳನ್ನು ವಿಕೃತಗೊಳಿಸಿ, ಅವುಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಸ್ವಚ್ಛವಾದ ಗಾಳಿಯ ವಾತಾವರಣವನ್ನು ಸೃಷ್ಟಿಸಲು ಇದೇ ರೀತಿಯಲ್ಲಿ ಒಹೆಚ್ ರಾಡಿಕಲ್‍ಗಳು ಅಹಿತಕರ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ಅಲರ್ಜಿನ್‍ಗಳನ್ನು ತಡೆಯುತ್ತದೆ.

 ಜಾಗ್ವಾರ್ ಲ್ಯಾಂಡ್ ರೋವರ್‍ನ ಸಂಶೋಧನಾ ಎಂಜಿನಿಯರ್ ಅಲೆಕ್ಸಾಂಡರ್ ಓವನ್ ಹೀಗೆ ಹೇಳಿದರು: ``ಈ ತಂತ್ರಜ್ಞಾನವು ಪ್ರಕೃತಿಯ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಒಂದು ಉತ್ತಮ ಉದಾಹರಣೆಯಾಗಿದೆ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಈ ಕ್ಯಾಬಿನ್ ತಂತ್ರಜ್ಞಾನದ ಮುಂಚೂಣಿಯಲ್ಲಿರಿಸುತ್ತದೆ. ಹೈಡ್ರಾಕ್ಸಿಲ್ ರಾಡಿಕಲ್‍ಗಳು ರಸಾಯನಶಾಸ್ತ್ರದ ಪ್ರಮುಖ ನೈಸರ್ಗಿಕ ಆಕ್ಸಿಡೆಂಟ್ಗಳಲ್ಲಿ ಒಂದಾಗಿದೆ ಮತ್ತು ಸಹಸ್ರಾರು ವರ್ಷಗಳಿಂದ ಮಾಲಿನ್ಯಕಾರಕಗಳು ಮತ್ತು ಇತರ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವ ಮೂಲಕ ನಮ್ಮ ವಾತಾವರಣವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಿದೆ. ಈ ತಂತ್ರಜ್ಞಾನದ ಸೃಷ್ಟಿ ಮತ್ತು ನಮ್ಮ ಸುಧಾರಿತ ಸಂಶೋಧನೆಯು ಈ ವೈಜ್ಞಾನಿಕ ವಿದ್ಯಮಾನವನ್ನು ಭವಿಷ್ಯದ ವಾಹನ ಕ್ಯಾಬಿನ್‍ಗಳಲ್ಲಿ ನಿಯೋಜಿಸುವ ಮೊದಲ ಹೆಜ್ಜೆಯಾಗಿದೆ. '