Asianet Suvarna News Asianet Suvarna News

10 ಕೋಟಿ ರೂ ಕಾರಿನ ಬದಲು ಟೋಯೋಟಾ ಕ್ರ್ಯಾಮಿ ಹತ್ತಿದ ಇಶಾ ಅಂಬಾನಿ-ಪಿರಾಮಲ್!

ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಇತ್ತೀಚೆಗೆ ಜನಪ್ರಿಯ ಬಾಂಬೆ ಕ್ಯಾಂಟಿನ್‌ಗೆ ಡಿನ್ನರ್ ಡೇಟ್‌ಗೆ ತೆರಳಿದ್ದರು. ಈ ಶ್ರೀಮಂತ ಉದ್ಯಮಿ ದಂಪತಿಯನ್ನು ಕಾದುಕುಳಿತ ಪಾಪರಾಜಿಗಳಿಗೆ ಈ ಜೋಡಿ ಅಚ್ಚರಿ ನೀಡಿತ್ತು. ಕಾರಣ 10 ಕೋಟಿ ರೂಪಾಯಿ ರೋಲ್ಸ್ ರಾಯ್ಸ್ ಕಾರನ್ನು ಬಿಟ್ಟು ಟೋಯೋಟಾ ಕ್ಯಾಮ್ರಿ ಕಾರಿನಲ್ಲಿ ಹತ್ತಿ ತೆರಳಿದ್ದಾರೆ. ಇತ್ತ ರೋಲ್ಸ್ ರಾಯ್ಸ್ ಕಾರಿನ ಬಳಿ ಕಾದು ಕುಳಿತ ಪಾಪರಾಜಿಗಳು ನಿರಾಸೆಗೊಂಡಿದ್ದಾರೆ.
 

Isha Amabani Anand piramal use Toyota camry instead of RS 10 crore Rolls royce cullinan ckm
Author
First Published Aug 9, 2023, 3:50 PM IST

ಮುಂಬೈ(ಆ.09) ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ದಂಪತಿ ಭಾರತದ ಶ್ರೀಮಂತ ಉದ್ಯಮಿಗಳು. ಇವರು ಎಲ್ಲೆ ಹೋದರು ಪಾಪರಾಜಿಗಳು ಕಾದು ಕುಳಿತಿರುತ್ತಾರೆ. ಇವರ ಡ್ರೆಸ್, ವಾಚ್, ಹ್ಯಾಂಡ್ ಬ್ಯಾಗ್ ಸೇರಿದಂತೆ ಹಲವು ಪ್ರಶ್ನೆಗಳು ಸಾಮಾನ್ಯ. ಇತ್ತೀಚೆಗೆ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಮುಂಬೈನ ಲೋವರ್ ಪರೇಲ್‌ನಲ್ಲಿರುವ ಐಕಾನಿಕ್ ಬಾಂಬೆ ಕ್ಯಾಂಟಿನ್‌ಗೆ ತೆರಳಿದ್ದಾರೆ. ಡಿನ್ನರ್ ಡೇಟ್‌ಗೆ ತೆರಳಿದ ಈ ಜೋಡಿಯ ಫೋಟೋ, ಜೊತೆಗೊಂದಷ್ಟು ಪ್ರಶ್ನೆಗಳನ್ನು ಹಿಡಿದು ಪಾಪರಾಜಿಗಳು ತಯಾರಿ ನಿಂತಿದ್ದರು. ಆದರೆ ಬಾಂಬೆ ಕ್ಯಾಂಟೀನ್‌ನಲ್ಲಿ ಡಿನ್ನರ್ ಡೇಟ್ ಮುಗಿಸಿದ ಈ ಜೋಡಿ ತಾವು ಬಂದ 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬದಲು ಟೋಯೋಟಾ ಕ್ಯಾಮ್ರಿ ಸೆಡಾನ್ ಕಾರು ಹತ್ತಿ ತೆರಳಿದ ಘಟನೆ ನಡೆದಿದೆ.

ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಡಿನ್ನರ್ ಡೇಟ್‌ಗಾಗಿ ಬಾಂಬೆ ಕ್ಯಾಂಟೀನ್‌ಗೆ ತೆರಳಿದ್ದಾರೆ. ಈ ಜೋಡಿ ತಮ್ಮ 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನಲ್ಲಿ ಆಗಮಿಸಿದ್ದಾರೆ. ಡಿನ್ನರ್ ಡೇಟ್ ಮುಗಿಸಿದ ಈ ಜೋಡಿಗಾಗಿ ಪಾಪರಾಜಿಗಳು ಕಾಯುತ್ತಾ ನಿಂತಿದ್ದರು. ರೋಲ್ಸ್ ರಾಯ್ಸ್ ಕಾರಿನ ಬಳಿ ನಿಂತವರಿಗೆ ಈ ಜೋಡಿ ಶಾಕ್ ನೀಡಿದ್ದಾರೆ. ಕಾರಣ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಬಿಟ್ಟು ಟೋಯೋಟೋ ಕ್ಯಾಮ್ರಿ ಕಾರು ಹತ್ತು ತೆರಳಿದ್ದಾರೆ.

 

7.50 ಕೋಟಿ ರೂ ಫೆರಾರಿ SF90 ಕಾರಿನಲ್ಲಿ ಅಕಾಶ್ ಅಂಬಾನಿ ಜಾಲಿ ಡ್ರೈವ್!

10 ಕೋಟಿ ರೂಪಾಯಿ ಕಾರಿನ ಬದಲು 46 ಲಕ್ಷ ರೂಪಾಯಿ ಬೆಲೆಯ ಟೋಯೋಟಾ ಕ್ರ್ಯಾಮಿ ಕಾರಿನಲ್ಲಿ ತೆರಳಿದ್ದಾರೆ. ವಿಶೇಷ ಅಂದರೆ ಈ ಟೋಯೋಟಾ ಕ್ರ್ಯಾಮಿ ಕಾರಿಗೆ ಬೆಂಗಾವಲು ಪಡೆ ವಾಹನದ ಒಟ್ಟು ಬೆಲೆ 15 ಕೋಟಿ ರೂಪಾಯಿ.  ಟೋಯೋಟಾ ಕ್ರ್ಯಾಮಿ ಕಾರಿಗೆ ಬೆಂಗಾವಲು ವಾಹನವಾಗಿ ಮರ್ಸಿಡೀಸ್ ಬೆಂಜ್ AMG G63 SUV,ಮಹೀಂದ್ರ XUV ಸೇರಿದಂತೆ ಹಲವು ದುಬಾರಿ ವಾಹನಗಳನ್ನು ಬಳಸಲಾಗಿತ್ತು.

ರಿಲಯನ್ಸ್‌ ಕಂಪನಿ  ಪೈಕಿ ರೀಟೇಲ್‌ ಹಾಗೂ ಡಿಜಿಟಲ್‌ ಸೇವೆಯನ್ನು ಮಾತೃ ಕಂಪನಿಯಿಂದ ಬೇರ್ಪಡಿಸಲಾಗಿದೆ. ಅವಕ್ಕೆ ರಿಲಯನ್ಸ್‌ ರೀಟೇಲ್‌ ವೆಂಚ​ರ್‍ಸ್ ಹಾಗೂ ಜಿಯೋ ಪ್ಲಾಟ್‌ಫಾಮ್‌ರ್‍ ಎಂಬ ಹೆಸರಿಡಲಾಗಿದೆ.ರೀಟೇಲ್‌ ವ್ಯವಹಾರದ ಹೊಣೆಗಾರಿಕೆಯನ್ನು ಇಶಾ ನೋಡಿಕೊಳ್ಳುತ್ತಿದ್ದಾರೆ. 

 

Ambani cars ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ!

 ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್‌ಗೆ ಅವಳಿ ಮಕ್ಕಳಿದ್ದಾರೆ. ನವೆಂಬರ್ 19, 2022ರಂದು ಇಶಾ ಅಂಬಾನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.  ನ.19ರಂದು ಜನಿಸಿದ ಅವಳಿ ಮಕ್ಕಳಿಗೆ ಇಶಾ ಕೃಷ್ಣಾ ಹಾಗೂ ಆದ್ಯಾ ಎಂದು ಹೆಸರಿಟ್ಟಿದ್ದಾರೆ. ಇಶಾ ರಿಲಯನ್ಸ್‌ನ ರಿಟೆಲ್‌ ಗ್ರೂಫ್ಸ್‌ನ ಮುಖ್ಯಸ್ಥೆಯಾಗಿದ್ದು, ಉದ್ಯೋಗಿ ಆನಂದ ಪಿರಮಲ್‌ ಅವರನ್ನು 2018ರಲ್ಲಿ ವರಿಸಿದ್ದರು. ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಅಮೆರಿಕದಲ್ಲಿ ನೆಲೆಸಿದ್ದಾರೆ. 
 

Follow Us:
Download App:
  • android
  • ios